- Friday
- August 28th, 2026
ಕಾಲಚಕ್ರದ ಆಟವ ಅರಿತವರಾರು, ಬದುಕ ಪಯಣದಿ ಏಳು-ಬೀಳುಗಳ ಕಾಣದವರಾರು...? ಏಳು-ಬೀಳುಗಳ ಈ ಹಾದಿಯಲ್ಲಿ ಬಂದಂತಹ ಕಷ್ಟಗಳೆಷ್ಟೋ, ನೋವುಗಳೆಷ್ಟೋ ಲೆಕ್ಕವಿರಿಸಿದವರಾರು...? ಲೆಕ್ಕವಿಲ್ಲದಷ್ಟು ಕಷ್ಟಗಳ ಕಟ್ಟಿಟ್ಟು, ನೋವುಗಳ ಬಚ್ಚಿಟ್ಟು ಮುನ್ನಡೆದು ಬದುಕಿನಲ್ಲಿ ಮೇಲೇರಿದಾಗ ನಮ್ಮವರು ಎಂದು ಬಂದವರೆಷ್ಟೋ, ಕೆಳಗುರುಳಿದಾಗ ತುಳಿದು ನಡೆದವರೆಷ್ಟೋ...? ಮೇಲೇರಿದಾಗ ಜೊತೆ ನಡೆದು ಬಂದವರು, ಕೆಳಗುರುಳಿದಾಗ ತುಳಿದು ಸಾಗಿದವರ ಮಧ್ಯೆ ಕಾಲ ಕಸವಾಯಿತು ಈ ಬದುಕು......
ಮಡಪ್ಪಾಡಿ ಗ್ರಾಮದ ಕೊಲ್ಲಮೊಗ್ರ ಭಾಗದ ಜಾಲುಮನೆ - ಅಂಬೆಕಲ್ಲು- ಗೋಳ್ಯಾಡಿ ಸಂಪರ್ಕಿಸುವ ರಸ್ತೆಯನ್ನು ಹಲವು ಫಲಾನುಭವಿಗಳು ಶ್ರಮದಾನದ ಮೂಲಕ ದುರಸ್ತಿಗೊಳಿದರು.
ಸುಳ್ಯದಲ್ಲಿ ಸಿಡಿಪಿಒ ಆಗಿದ್ದು ಹಿರಿಯ ಸಹಾಯಕ ನಿರ್ದೇಶಕರಾಗಿ ಪದೋನ್ನತಿಗೊಂಡ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆಯವರಿಗೆ ಬೀಳ್ಕೊಡುಗೆ ಸಮಾರಂಭ ಜು.15 ರಂದು ಸುಳ್ಯದ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು. ಸಿಡಿಪಿಒ ಶ್ರೀಮತಿ ಶೈಲಜಾ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್. ರವರು ಶ್ರೀಮತಿ ರಶ್ಮಿಯವರನ್ನು ಸನ್ಮಾನಿಸಿದರು.ರಶ್ಮಿಯವರ ಪತಿ...
ರಾತ್ರಿ ವೇಳೆ ಮನೆಯಲ್ಲಿ ಮನೆಯವರು ಇಲ್ಲದ ಸಂದರ್ಭದಲ್ಲಿ ಬಾಗಿಲು ಮುರಿದು ಚಿನ್ನಾಭರಣ ಕಳವುಗೈದಿರುವ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆಯ ಬುಡ್ಲೆಗುತ್ತುವಿನಲ್ಲಿ ಜು.16ರಂದು ರಾತ್ರಿ ಸಂಭವಿಸಿದೆ.ಯುರೇಶ್ ಬುಡ್ಡೆಗುತ್ತು ಅವರ ಸಂಬಂಧಿಯೊಬ್ಬರು ಜು.16ರಂದು ಅಪರಾಹ್ನ ನಿಧನರಾಗಿದ್ದು, ಯುರೇಶರವರು ಮನೆಯ ಬಾಗಿಲು ಹಾಕಿ ಅಲ್ಲೇ ಸ್ವಲ್ಪ ದೂರದಲ್ಲಿರುವ ಮನೆಗೆ ಅಂತ್ಯಕ್ರಿಯೆ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಹಿಂಬದಿ ಬಾಗಿಲು ಮುರಿದ...
ಮಡಪ್ಪಾಡಿ ಶೀರಡ್ಕ ಸಂಪರ್ಕ ರಸ್ತೆಯು ಕೆಸರುಮಯವಾಗಿ ಸಂಚಾರಕ್ಕೆ ಕಷ್ಟಸಾಧ್ಯವಾಗಿತ್ತು. ಶೀರಡ್ಕ ಭಾಗದ ರಸ್ತೆಯ ಫಲಾನುಭವಿಗಳು ಶ್ರಮದಾನ ಹಾಗೂ ತಮ್ಮ ಸ್ವಂತ ಖರ್ಚಿನಲ್ಲಿ ಚರಳು ಹಾಕಿ ದುರಸ್ತಿಗೊಳಿಸಿದರು. ಶ್ರಮದಾನದಲ್ಲಿ ಮಾಧವ ಎಸ್,ತಾರಾನಾಥ ಎಸ್,ರಚನ್ ಎಸ್,ರಂಜಿತ್ ಎಸ್,ರಕ್ಷಿತ್ ಎಸ್,ದುಷ್ಯಂತ್ ಎಸ್,ಸುಮಂತ್ ಎಸ್,ಕಿರಣ್ ಎಸ್,ವಿನೋದ್ ಎಸ್,ವೇಣುಗೋಪಾಲ್ ಎಸ್,ಲೋಕಪ್ಪ ಎಸ್,ಅಜಿತ್ ಎಸ್,ತಾರಾನಾಥ ಚಿದ್ಗಲ್,ಸಚಿನ್ ಬಿ,ಲೋಹಿತ್ ಬಿ,ಸುಧೀನ್ ಬಿ,ವಸಂತ ಬಿ,ಕುಶಾಲಪ್ಪ ಎ,ಕುಶನ್ ಎ,ಹಿಮಕರ...
ಬರಹ : ಮುರಲೀ ಮೋಹನ್ ಚೂಂತಾರು ಉಷ್ಣವಲಯದ ದೇಶಗಳಲ್ಲಿ, ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮತ್ತು ಗಂಟು ಗಂಟುಗಳನ್ನು ಕಾಡುವ ಇನ್ನೊಂದು ಖಾಯಿಲೆ ಎಂದರೆ ಚಿಕುನ್‍ಗುನ್ಯಾ ಜ್ವರ. ಡೆಂಘೀ ಜ್ವರವನ್ನು ಹರಡುವ ಏಡಿಸ್ ಎಜೆಪ್ಟಿ ಮತ್ತು ಏಡಿಸ್ ಆಲ್ಬೋಪಿಕ್ಟಸ್ ಎಂಬ ಸೊಳ್ಳೆಗಳೇ ಚಿಕುನ್ ಗುನ್ಯಾರೋಗವನ್ನೂ ಹರಡುತ್ತವೆ. ‘ಚಿಕುನ್ ಗುನ್ಯಾ’ ಎಂಬ ವೈರಸ್‍ನ ಸೋಂಕಿನಿಂದ ಬರುವ ಈ ಜ್ವರ,...
ಸುಳ್ಯದ ಬೊಳುಬೈಲಿನಲ್ಲಿರುವ ಪೀಸ್ ಸ್ಕೂಲ್ ನಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲವನ್ನು ಜು.13 ರಂದು ರಚಿಸಲಾಯಿತು.ಶಾಲಾ ವಿದ್ಯಾರ್ಥಿ ನಾಯಕನಾಗಿ ಫವಾಜ್ (೭ನೇ ತರಗತಿ) ಹಾಗೂ ಉಪ ನಾಯಕನಾಗಿ ಮುಹಮ್ಮದ್ ಜೈಶ್ (೬ನೇ ತರಗತಿ) ರನ್ನು ನೇಮಿಸಲಾಯಿತು. ಕ್ರೀಡಾ ನಾಯಕನಾಗಿ ಮುಹಮ್ಮದ್ ರಬಿ (೭ನೇ ತರಗತಿ), ಕ್ರೀಡಾ ಉಪನಾಯಕನಾಗಿ ಅಬ್ದುಲ್ ಶಮ್ನಾನ್ (೬ನೇ ತರಗತಿ), ಸಾಂಸ್ಕೃತಿಕ ನಾಯಕಿಯಾಗಿ ಮರ್ಯಮ್...
ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ಇದರ 2022-23ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಜೀವ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜುಲೈ 14 ಶುಕ್ರವಾರದಂದು ಕಾಲೇಜು ದೃಶ್ಯ ಶ್ರವಣ ಕೊಠಡಿಯಲ್ಲಿ ನಡೆಯಿತು.ಸಾಂಪ್ರದಾಯಿಕ ಶೈಲಿಯಲ್ಲಿ ತುಳಸಿ ಗಿಡದ ಮುಂದೆ ದೀಪ ಉರಿಸುವ ಮೂಲಕ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ....
ವಿವೇಕ್ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ ಅಜ್ಜಾವರದಲ್ಲಿ ಜು.15ರಂದು ಪೋಷಕರ ಸಭೆ ಹಾಗೂ ಮಾಹಿತಿ ಕಾರ್ಯಗಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕರಾದ ಹಸೈನಾರ್ ಹಾಜಿ ಗೋರಡ್ಕ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಹಾಗೂ ರೋಟರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಅಚ್ಚುತ ಅಟ್ಲೂರು ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಬಗ್ಗೆ ಮಾಹಿತಿಯನ್ನು ನೀಡಿದರು. ...
ಬುದ್ದಿಮಾಂದ್ಯ ಯುವತಿಯ ಮೇಲೆ ತನ್ನ ಸಹೋದರನೋರ್ವ ಅತ್ಯಾಚಾರವೆಸಗಿ ಗರ್ಭವತಿಯನ್ನಾಗಿ ಮಾಡಿದ ಘಟನೆಯೊಂದು ಸುಳ್ಯ ತಾಲೂಕಿನ ಮುಪ್ಪೇರ್ಯ ಗ್ರಾಮದಿಂದ ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಯುವತಿಯ ತಾಯಿ ನೀಡಿದ ದೂರಿನಂತೆ ಅತ್ಯಾಚಾರವೆಸಗಿದ ಆರೋಪಿ ಸಹೋದರನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಮುಪ್ಪೇರ್ಯ ಗ್ರಾಮದ ಬುದ್ದಿಮಾಂದ್ಯ ಯುವತಿಯೊಬ್ಬಳು ಗರ್ಭವತಿಯಾಗಿದ್ದು, ವಿಚಾರಣೆ ಸಂದರ್ಭ ಸಹೋದರನೇ ಈ ಕೃತ್ಯಕ್ಕೆ ಕಾರಣ ಎಂಬ ವಿಷಯ...
Loading posts...
All posts loaded
No more posts
