- Sunday
- August 30th, 2026
ಸುಳ್ಯದ ಸಂತ ಜೋಸೆಫ್ ಶಾಲೆಯಲ್ಲಿ ಪೋಷಕರ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗೆ, ಆಡಳಿತ ಮಂಡಳಿ ಯವರಿಗೆ, ಭೋದಕೇತರ ಸಿಬ್ಬಂದಿಗಳಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.ಪೋಷಕರ ಸಂಘದ ಅಧ್ಯಕ್ಷ ಜೆ ಕೆ ರೈ, ಗುರುಸ್ವಾಮಿ, ಗುರುಪ್ರಸಾದ ರೈ, ಧನ್ಯ, ಉಷಾ, ಶಿವಕುಮಾರ್, ಶೋಭಿತ, ವತ್ಸಲ, ವಿದ್ಯಾ, ಉದಯ, ಜೆನೆಟ್,...
ಕೇರಳದಲ್ಲಿ ಸರ ಕಳವುಗೈದು ಸುಳ್ಯದಲ್ಲಿ ಮಾರಾಟ ಮಾಡಿ ಇದೀಗ ಕೇರಳ ಪೋಲಿಸರ ಕೈಗೆ ಸಿಕ್ಕಿಬಿದ್ದು ಸುಳ್ಯಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದ ಬಗ್ಗೆ ವರದಿಯಾಗಿದೆ. ಘಟನೆಯ ವಿವರ :ಕೇರಳದಲ್ಲಿ ಚಿನ್ನದ ಸರವನ್ನು ಕಳವುಗೈದ ಕಳ್ಳರು ಸುಳ್ಯದ ಚಿನ್ನದ ಅಂಗಡಿಯೋಂದಕ್ಕೆ ಆಗಮಿಸಿ ನಾವುಸುಳ್ಯದ ಕಾಲೇಜೊಂದರಲ್ಲಿ ಓದುತ್ತಿದ್ದೇವೆ. ನಮ್ಮ ಬಳಿ ಫೀಸ್ ಕಟ್ಟುವುದಕ್ಕೂ ಹಣವಿಲ್ಲ. ದಯಮಾಡಿ ಸಹಾಯ ಮಾಡಿ...
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಮಹಾಸಭೆಯು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಇಂದು(ಸೆ.೪ರಂದು) ನಡೆಯಿತು. ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಉಪಾಧ್ಯಕ್ಷ ಶರೀಫ್ ಜಟ್ಟಿಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ್ ನೀರಬಿದಿರೆ ವರದಿ ವಾಚಿಸಿದರು. ಕೋಶಾಧಿಕಾರಿ ಜಯಶ್ರೀ ಕೊಯಿಂಗೋಡಿ ಲೆಕ್ಕಪತ್ರ ಮಂಡಿಸಿದರು. ಈ...
ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸುವಂತೆ ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗವು ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬಿಜೆಪಿ ಶಾಸಕರ ಮನವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಉತ್ತರಿಸುತ್ತಾ, ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಲು ರಾಜ್ಯ ಸರಕಾರಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಈ ವಿಷಯವನ್ನು ಸೌಜನ್ಯ ಪೋಷಕರಿಗೆ ನಾನು ತಿಳಿಸಿದ್ದೇನೆ. ಈಗಾಗಲೇ...
ಯುವಕನೋರ್ವ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೆ.4 ರಂದು ವರದಿಯಾಗಿದೆ. ಅಜ್ಜಾವರ ಗ್ರಾಮದ ಇಸ್ಮಾಯಿಲ್ ಎಂಬುವವರ ಪುತ್ರ ಅಬ್ದುಲ್ ಖಾದರ್ ಮೃತಪಟ್ಟ ದುರ್ದೈವಿ. ಕೆಲ ದಿನಗಳಿಂದ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸೆ.4ರಂದು ಸುಮಾರು 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಮೃತನಾದ ಯುವಕನ ಮೃತದೇಹವು ರಾತ್ರಿಯ ವೇಳೆಗೆ ಮನೆಗೆ ತರಲಾಗುವುದು ಎಂದು ತಿಳಿದುಬಂದಿದೆ.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವುಗಳ ಸಹಯೋಗದಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರದ ಗ್ರಾಮವಾರು ಮಾಹಿತಿ ಈ ಕೆಳಗಿನಂತಿದೆ . ಸಾರ್ವಜನಿಕರು ತಮ್ಮ ಸಾಕು ನಾಯಿಗಳನ್ನು ಲಸಿಕೆ ನಡೆಯುವ ಸ್ಥಳಕ್ಕೆ ಕರೆತಂದು ಲಸಿಕೆ ಹಾಕಿಸಿಕೊಳ್ಳುವುದು. ಲಸಿಕಾ ಕೇಂದ್ರ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಸಿಕೆ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ
ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕದಲ್ಲಿ ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಇವರ ಆಶ್ರಯದಲ್ಲಿ ಕೆ .ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರ ಸಹಯೋಗದೊಂದಿಗೆ ಸೆ.3 ರಂದು ಉಚಿತ ವೈದ್ಯಕೀಯ ಶಿಬಿರ ನಡೆಯಿತು.ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಹಿಂದಿನ ಕಾಲದ ಚಿಕಿತ್ಸೆಗೂ ಈಗಿನ ಕಾಲದ ಚಿಕಿತ್ಸೆಗೆ ಭಾರಿ...
2022-23 ನೇ ಸಾಲಿನಲ್ಲಿ ಗಮನಾರ್ಹ ಸಾಧನೆ ತೋರಿ ಯುವಕ ಮಂಡಲ ವಿಭಾಗದಲ್ಲಿ ಮರ್ಕಂಜ ಗ್ರಾಮದ ರೆಂಜಾಳದ ಶಾಸ್ತಾವು ಯುವಕ ಮಂಡಲ ಪ್ರಥಮ ಸ್ಥಾನ ಪಡೆದಿದೆ.ಯುವ ಸಂಯುಕ್ತ ಮಂಡಳಿ ಸುಳ್ಯ ಇದರ ವತಿಯಿಂದ ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ನಡೆದ ಜಾನಪದ ಸಾಂಸ್ಕೃತಿಕ ವೈಭವ "ನಲಿಪು 2023" ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ...
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಮೇನಾಲ ಶಾಲೆಗೆ ಹೆಚ್ಚುವರಿ ಕೊಣೆಗಳ ನಿರ್ಮಾನಕ್ಕೆ ಅನುದಾನ ಮತ್ತು ಶಾಲಾ ಆಸ್ತಿಯನ್ನು ಕಾಪಾಡುವ ದೃಷ್ಟಿಯಿಂದ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಕೋರಿ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಇವರಿಗೆ ಶಾಲೆಯ ಎಸ್‌ಡಿ ಎಂಸಿ ಅಧ್ಯಕ್ಷರಾದ ಶೌಕತ್ ಅಲಿ ಮೇನಾಲ ಮತ್ತು ವಿಷ್ಣು ಯುವಕ ಮಂಡಲ ಅಧ್ಯಕ್ಷರು ರಂಜಿತ್...
ಕೊಲ್ಲಮೊಗ್ರ ಗ್ರಾಮದ ಶಿವಾಲ ಚಿನ್ನಪ್ಪ ಎಸ್.ಆರ್. ಅವರ ಪುತ್ರ ಕೊಲ್ಲಮೊಗ್ರದಲ್ಲಿ ಗ್ರಾಮ ಒನ್ ಕೇಂದ್ರ ನಡೆಸುತ್ತಿರುವ ಸಚಿತ್ ಶಿವಾಲ ಎಂಬವರು ಸುಮಾರು ಎರಡು ವರುಷಗಳಿಂದ IGA nephropathy ಎಂಬ chronic kidney disease ನಿಂದ ಬಳಲುತ್ತಿದ್ದು ಈಗಾಗಲೇ 2 ಕಿಡ್ನಿಗಳು ಸುಮಾರು 80% ಅಷ್ಟು ನಿಷ್ಕ್ರಿಯಗೊಂಡಿದ್ದು, ಕೋಯಿಕ್ಕೋಡ್ ಅಸ್ಟೆರ್ ಮಿಮ್ಸ್ ಆಸ್ಪತ್ರೆಯಲ್ಲಿ ಡಯಲೆಸಿಸ್ ಪಡೆಯುತ್ತಿದ್ದಾರೆ. ಅತೀ...
Loading posts...
All posts loaded
No more posts
