ಹರಿಹರ ಪಲ್ಲತ್ತಡ್ಕ : ಸೆ.15 ರಂದು ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಶಿಬಿರ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ಸೆ.15 ಶುಕ್ರವಾರದಂದು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಶಿಬಿರ ನಡೆಯಲಿದ್ದು, ಪೂರ್ವಾಹ್ನ 10:30 ರಿಂದ 11:00 ರವರೆಗೆ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್...

ಸಜ್ಜನ ಪ್ರತಿಷ್ಠಾನ ತಂಡಕ್ಕೆ ಗುಲ್ಬರ್ಗಾದಲ್ಲಿ ಸನ್ಮಾನ

ರಾಜ್ಯದಾದ್ಯಂತ ಕವಿಗೋಷ್ಠಿ, ಉಚಿತ ತರಬೇತಿ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಬದ್ಧತೆಯನ್ನು ಮೆರೆಯುತ್ತಿರುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ( ನೋಂ) ತಂಡದ ಸದಸ್ಯರಿಗೆ ಸೆ.2ರಂದು ಗುಲ್ಬರ್ಗದ ಸೇಡಂನ ಕರ್ನಾಟಕ ಭವನದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ( ನೋಂ) ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ತಂಡದ ಸದಸ್ಯರಾದ ಅಯ್ಯುಬ್ ಗೂನಡ್ಕ ಮತ್ತು ಮಂಜುನಾಥ ಹಿರಿಯೂರವರನ್ನು ಗುಲ್ಬರ್ಗ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ...
Ad Widget

ಸವಣೂರು ಕೆ. ಸೀತಾರಾಮ ರೈಯವರ ಆದರ್ಶ ಸಹಕಾರ ಸಂಘದಿಂದ ವಿದ್ಯಾನಿಧಿ ಸಹಾಯಧನ ವಿತರಣೆ

ಪುತ್ತೂರಿನ ದರ್ಜೆಯಲ್ಲಿ ಕೇಂದ್ರ ಕಚೇರಿ ಹೊಂದಿರುವಆದರ್ಶ ವಿವಿಧೋದ್ದೇಶ ಸಹಕಾರ ಸಂಘದಿಂದ ವಿದ್ಯಾನಿಧಿ – ಸಹಾಯಧನ ವಿತರಣಾ ಸಮಾರಂಭ ಸೆ. 9ರಂದು ಸಂಘದ ವಾರ್ಷಿಕ ಮಹಾಸಭೆಯ ಬಳಿಕ ಮಧ್ಯಾಹ್ನ ನಡೆಯಿತು. ಕಾರ್ಯಕ್ರಮವನ್ನು ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಎಂ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರೋಟರಿ ಡಿಸ್ಟ್ರಿಕ್ಟ್ 3181ರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿ ವಹಿಸಿದ್ದರು....

ದ.ಕ.ಸಂಪಾಜೆ ವಲಯ ಕಾಂಗ್ರೆಸ್ ನಿಯೋಗದಿಂದ ಸಚಿವರಾದ ಜಮೀರ್ ಅಹ್ಮದ್ ಖಾನ್ ಭೇಟಿ, ಸಂಪಾಜೆ ಗ್ರಾಮಕ್ಕೆ 50 ಲಕ್ಷ ರೂ.ಗಳ ಅನುದಾನಕ್ಕಾಗಿ ಮನವಿ

ಕರ್ನಾಟಕ ಸರ್ಕಾರದ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರನ್ನು ದ.ಕ.ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ಅವರ ನೇತೃತ್ವದ ನಿಯೋಗವು ಇತ್ತೀಚೆಗೆ ಬೆಂಗಳೂರಿನ ಕೆ.ಪಿ.ಸಿ.ಸಿ.ಕಚೇರಿಯಲ್ಲಿ ಭೇಟಿ ಮಾಡಿ ಸಂಪಾಜೆ ಗ್ರಾಮದ ಅಭಿವೃದ್ಧಿಗಾಗಿ 50 ಲಕ್ಷ ರೂ.ಗಳ ಅನುದಾನವನ್ನು ಒದಗಿಸುವಂತೆ ಮನವಿಯನ್ನು ಮಾಡಿತ್ತು, ಇದೀಗ ಮನವಿಗೆ ಸ್ಪಂದಿಸಿದ...

ಸೆ.16 : ವಿ.ಹೆಚ್.ಪಿ ಭಜರಂಗದಳ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ನೇತೃತ್ವದಲ್ಲಿ 10ನೇ ವರ್ಷದ ಮೊಸರು ಕುಡಿಕೆ ಉತ್ಸವ

https://youtu.be/SjMaqg-bZy4?si=_v1QZ72QSGLoWxI6 ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ೧೦ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಶೋಭಯಾತ್ರೆ ಜರುಗಲಿದೆ ಎಂದು ಭಜರಂಗದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ ತಿಳಿಸಿದರು.ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನಾಚನೆಯ ಅಂಗವಾಗಿ 10 ನೇ ವರ್ಷದ ಸುಳ್ಯ...

ಸುಳ್ಯ ಠಾಣೆ ಹೆಡ್ ಕಾನ್ ಸ್ಟೇಬಲ್ ಬಾಲಕೃಷ್ಣ ಗೌಡ ಕೊಯಿಕುಳಿ ನಿಧನ.

ದುಗ್ಗಲಡ್ಕದ ಕುಂಬೆತ್ತಿಬನ ನಿವಾಸಿ ಪುತ್ತೂರು ಡಿ ವೈ ಎಸ್ ಪಿ ಕಚೇರಿಯಲ್ಲಿ ಒಒಡಿಯಲ್ಲಿ ಕರ್ತವ್ಯ ನಿರ್ವಹಿಸಿ ತಮ್ಮ ಮಾತೃ ಠಾಣೆ ಸುಳ್ಯ ಠಾಣೆಯಲ್ಲಿ ನಿನ್ನೆ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ್ದ ಬಾಲಕೃಷ್ಣ ಗೌಡ ಕೊಯಿಕುಳಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಅಸ್ವಸ್ಥರಾದ ಅವರನ್ನು ಮನೆಯವರು ಸುಳ್ಯ...

ಸುಬ್ರಹ್ಮಣ್ಯ: ಕೆ.ಎಸ್.ಎಸ್ ಕಾಲೇಜಿನಲ್ಲಿ “ಹಿಂದಿ” ಸಂಘ ಉದ್ಘಾಟನೆ

ಕುಕ್ಕೆ ಶ್ರೀ ಸುಬ್ರ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದ ಹಿಂದಿ ವಿಭಾಗದ ವತಿಯಿಂದ “ಹಿಂದಿ” ಸಂಘದ ಉದ್ಘಾಟನಾ ಸಮಾರಂಭ ಸೆ.8 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಕೆ ವಹಿಸಿದ್ದು ಉದ್ಘಾಟನೆಯನ್ನು ಪ್ರೊ. ರಾಮಕೃಷ್ಣ ಕೆ. ಎಸ್. ವಿಭಾಗಾಧ್ಯಾಕ್ಷರು, ಹಿಂದಿ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ, ಇವರು ನೆರವೇರಿಸಿ ಬಳಿಕ ಹಿಂದಿ...

ದಿ.ಮನೋರಮ ಭೀಮಗುಳಿಯವರಿಗೆ ನುಡಿನಮನ

ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಯವರ ಮಾತೃಶ್ರೀ ಮನೋರಮ ಭೀಮಗುಳಿಯವರಿಗೆ ನುಡಿನಮನ ಹಾಗೂ ವೈಕುಂಟ ಸಮಾರಾಧನೆ ಕಾರ್ಯಕ್ರಮ ಸೆ. 7 ರಂದು ಹರಿಹರಪಲ್ಲತ್ತಡ್ಕದ ಭೀಮಗುಳಿಯಲ್ಲಿ ನೆರವೇರಿತು. ಕೆಪಿಸಿಸಿ ರಾಜ್ಯ ಪ್ರ.ಕಾರ್ಯದರ್ಶಿ ಭರತ್ ಮುಂಡೋಡಿ ನುಡಿ ನಮನ ಸಲ್ಲಿಸಿ ಅವರ ಗುಣಗಾನ ಮಾಡಿದರು.  ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ....

ಸುಳ್ಯ : ಮುಖ್ಯರಸ್ತೆ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಸಚಿವರಾದ ಝಮೀರ್ ಅಹಮದ್ ಖಾನ್ ಗೆ ಮನವಿ

ಗಾಂಧಿನಗರ ಮಸೀದಿ ಮುಂಭಾಗದಿಂದ ನಾವೂರು ಜಟ್ಟಿಪಳ್ಳಕ್ಕೆ ಹೊಗುವ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸಲು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಸಚಿವರಾದ ಝಮೀರ್ ಅಹಮದ್ ಖಾನ್ ಅವರಲ್ಲಿ ಮನವಿ ಮಾಡಲಾಯಿತು

“ಅಮರ ಸುಳ್ಯ ಸುದ್ದಿ” ದೀಪಾವಳಿ ವಿಶೇಷಾಂಕಕ್ಕೆ ಮಕ್ಕಳ ಫೋಟೋ ಸ್ಪರ್ಧೆ ಹಾಗೂ ಲೇಖನಗಳಿಗೆ ಆಹ್ವಾನ

ಸುಳ್ಯದ ಅಮರ ಸುಳ್ಯ ಸುದ್ದಿ ವಾರಪತ್ರಿಕೆ 6 ನೇ ಬಾರಿಗೆ ದೀಪಾವಳಿ ವಿಶೇಷಾಂಕ ಹೊರ ತರಲು ತಯಾರಿ ಆರಂಭಗೊಂಡಿದೆ. ಮುದ್ದು ಮಕ್ಕಳ ಫೋಟೋ ಸ್ಪರ್ಧೆ , ವಿವಿಧ ಅಂಕಣಗಳು, ಕಥೆ,ಕವನ ಗಳಿಗೆ ಆಹ್ವಾನ ನೀಡಲಾಗಿದೆ. ಆಸಕ್ತ ಬರಹಗಾರರು ಕಥೆ, ಕವನ ಲೇಖನಗಳನ್ನು ಅಕ್ಟೋಬರ್ 15 ರ ಒಳಗೆ ಕಳಿಸಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9449387044ಕಳುಹಿಸಬೇಕಾದ ವಿಳಾಸ...
Loading posts...

All posts loaded

No more posts

error: Content is protected !!