ವಿಜ್ರಂಭಣೆಯಿಂದ ನಡೆದ ಮಡಪ್ಪಾಡಿ ಗಣೇಶೋತ್ಸವ

ಮಡಪ್ಪಾಡಿ ಯುವಕ ಮಂಡಲ, ಮಂಜುಶ್ರೀ ಯಕ್ಷಗಾನ ಕಲಾ ಸಂಘ, ಶ್ರೀರಾಮ ಭಜನಾ ಮಂಡಳಿ, ಉಜ್ವಲ ಮಹಿಳಾ ಮಂಡಲ ಹಾಗೂ ಸಮಸ್ತ ಭಕ್ತಾಭಿಮಾನಿಗಳ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಸೆ.19 ರಂದು ಮಡಪ್ಪಾಡಿ ಯಲ್ಲಿ ನಡೆಯಿತು. ಬೆಳಿಗ್ಗೆ ಗಣಪತಿ ಹವನದ ನಂತರ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಬಳಿಕ ಸ್ಥಳೀಯ ಭಜನಾ ತಂಡಗಳ...

ಸಂಕಷ್ಟದಲ್ಲಿರುವವರಿಗೆ ಸಹಾನುಭೂತಿ ಅನುಕಂಪ ಹಾಗೂ ಸ್ಪಂದಿಸುವುದೇ ನಿಜವಾದ ಜೀವನ : ಸುಬ್ರಹ್ಮಣ್ಯದಲ್ಲಿ ಮಾತನಾಡಿದ ಮಾಣಿಲ ಮೋಹನ್ ದಾಸ್ ಸ್ವಾಮೀಜಿ

ಸಮಾಜದಲ್ಲಿ ದೀನ ದಲಿತರ ಸೇವೆಯನ್ನು ಮಾಡಿಕೊಂಡು ನಯವಿನಯದಿಂದ ಎಲ್ಲರೊಂದಿಗೆ ಬೆರೆತು ಸರಳ ಹಾಗೂ ನಿರಾಡಂಬ ಜೀವನವನ್ನು ನಡೆಸುತ್ತಿರುವವರಲ್ಲಿ ಡಾlರವಿ ಕಕ್ಕೆ ಪದವು ಅವರು. ಯುವಶಕ್ತಿ ಸಮಾಜದಲ್ಲಿ ಹೇಗಿರಬೇಕು ಎಂಬುದಕ್ಕೆ ರವಿ ಅವರೇ ಮಾದರಿ. ದಕ್ಷಿಣ ಕನ್ನಡ ಹಾಗೂ ಇತರ ಭಾಗಗಳ ಶ್ರದ್ಧಾ ಕೇಂದ್ರಗಳಲ್ಲಿ ನಡೆಯುವಂತ ಜೀರ್ಣೋದ್ಧಾರ ಬ್ರಹ್ಮಕಲಶ ಸೇವೆಗಳಲ್ಲಿ ರವಿ ಕಕ್ಕೆ ಪದವುರವರ ಕೊಡುಗೆ ಇದ್ದೆ...
Ad Widget

ಬಾಂಜಿಕೋಡಿಯಲ್ಲಿ ಬೈಕ್ – ಕಾರು ಅಪಘಾತ : ಬೈಕ್ ಸವಾರನಿಗೆ ಗಾಯ- ಕಾರು ಚಾಲಕ ಆಸ್ಪತ್ರೆಯಿಂದ ಎಸ್ಕೇಪ್

ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಮುಂಜಾನೆ ಬೈಕ್ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಸುಳ್ಯ ಜಿ.ಎಲ್. ಆಚಾರ್ಯ ಉದ್ಯೋಗಿ, ಪ್ರಶಾಂತ್ ಮತ್ತು ಅವರ ಗರ್ಭಿಣಿ ಪತ್ನಿಯೊಂದಿಗೆ ಬೈಕ್ ನಲ್ಲಿ ಸುಳ್ಯಕ್ಕೆ ತಮ್ಮ ಎಂದಿನಂತೆ ಕೆಲಸಕ್ಕೆ ಬರುತಿದ್ದರು. ಬಾಂಜಿಕೋಡಿ ತಿರುವಿನಲ್ಲಿ ಎದುರಿನಿಂದ ಬಂದ ಕಾರು ಬೈಕ್ ಗೆ ಗುದ್ದಿದ ರಭಸಕ್ಕೆ...

ನಾಳೆ (ಸೆ.24) ರಾಷ್ಟ್ರೀಯ ಸೇವಾ ಯೋಜನಾ ದಿನ

ರಾಷ್ಟ್ರಾದ್ಯಂತ ಸೆಪ್ಟಂಬರ್ 24ನ್ನು ರಾಷ್ಟ್ರೀಯ ಸೇವಾ ಯೋಜನಾ ದಿನ ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಯನ್ನು ಮೂಡಿಸಲು ಮತ್ತು ಪರಿಪೂರ್ಣ ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದೊಂದಿಗೆ, ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಬಹುದೆಂದು ಡಾ| ರಾಧಾಕೃಷ್ಣನ್ ನೇತೃತ್ವದ ‘ವಿಶ್ವವಿದ್ಯಾನಿಲಯ ಅನುಧಾನ ಸಮಿತಿ’ ಭಾರತ ಸರ್ಕಾರಕ್ಕೆ ಅನುಮೋದನೆ ನೀಡಿತು. ಕಲಿಕೆ ಎನ್ನುವುದು ಕೇವಲ...


ನಾಲ್ಕೂರು : “ಸ್ವಚ್ಚತೆಯೇ ಸೇವೆ” ಆಂದೋಲನಕ್ಕೆ ವ್ಯಾಪಕ ಬೆಂಬಲ : ಮಾದರಿ ಕಾರ್ಯಕ್ಕೆ ಕೈ ಜೋಡಿಸಿದ ಜನತೆ

ಗುತ್ತಿಗಾರು ಗ್ರಾ.ಪಂ.ವ್ಯಾಪ್ತಿಯ ನಾಲ್ಕೂರು ಗ್ರಾಮದ ಹಾಲೆಮಜಲು ಶಾಲಾ ಬಳಿಯಿಂದ ಮರಕತ ದೇವಸ್ಥಾನದ ವರಗೆ ರಸ್ತೆಯ ಎರಡು ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ನೂರಾರು ಗ್ರಾಮಸ್ಥರು ಸೇರಿ ರಸ್ತೆ ಬದಿಯ ಕಾಡು ಕಡಿದು, ವಾಹನ ಸವಾರರು ಎಸೆದ ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಚತಾ ಸೇವೆಯಲ್ಲಿ ಭಾಗಿಯಾದರು. ಈ ಮಾದರಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಅಮರ ಸುದ್ದಿ ವರದಿಗಾರ ಉಲ್ಲಾಸ್ ಕಜ್ಜೋಡಿ ಅವರಿಗೆ ಸನ್ಮಾನ

ವಿಕಲಚೇತನರಾಗಿದ್ದರೂ ತನ್ನ ಬರಹಗಳ ಮೂಲಕ ಯುವ ಪತ್ರಕರ್ತನಾಗಿ ಹೊರಹೊಮ್ಮುತ್ತಿರುವ ಯುವ ಪ್ರತಿಭೆ ಅಮರ ಸುದ್ದಿ ವರದಿಗಾರ, ಹವ್ಯಾಸಿ ಬರಹಗಾರ ಉಲ್ಲಾಸ್ ಕಜ್ಜೋಡಿ ಅವರನ್ನು ಸೆ.22 ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ, ಸಹಾಯಧನ ಹಸ್ತಾಂತರಿಸಲಾಯಿತು.ಹರಿಹರ ಪಲ್ಲತ್ತಡ್ಕ ಗ್ರಾಮದ ಉಲ್ಲಾಸ್ ಕಜ್ಜೋಡಿ ಅವರ ಮನೆಗೆ ತೆರಳಿದ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ನ ಸದಸ್ಯರು ಅವರನ್ನು...

ಸೆಲ್ಕೋ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ
ಸುಳ್ಯ ಶಾಖೆಗೆ ಪ್ರಶಸ್ತಿ.

ಸೆಲ್ಕೋ ಸಂಸ್ಥೆಯ 2022-23 ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 15 ರಂದು ಚಿಕ್ಕಮಗಳೂರಿನ ಸಿಲ್ವರ್ ಸ್ಕೈ ರೆಸಾರ್ಟ್ ನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸುಳ್ಯ ಶಾಖೆಗೆ ಗ್ರಾಹಕ ಸೇವಾ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿದ್ದು, ಸೆಲ್ಕೋ ಸುಳ್ಯ ಶಾಖಾ ವ್ಯವಸ್ಥಾಪಕರಾದ ಆಶಿಕ್ ಬಸವನಪಾದೆ ಅವರು ಪ್ರಶಸ್ತಿಯನ್ನು ಪಡೆದುಕೊಂಡರು. ಈ ಪ್ರಶಸ್ತಿ ಗ್ರಾಹಕರಿಗೆ ಬ್ಯಾಂಕಿನ ಆರ್ಥಿಕ ಸಹಕಾರದೊಂದಿಗೆ...

ಹರಿಹರ ಪಲ್ಲತ್ತಡ್ಕ : ಸಂಭ್ರಮದಿಂದ ನಡೆದ 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತ್ತಡ್ಕ ಇದರ ಆಶ್ರಯದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಭಾಗಿತ್ವದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ಸೆ.18 ರಿಂದ ಸೆ.20 ರವರೆಗೆ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸಂಭ್ರಮದಿಂದ ನಡೆಯಿತು. ಸೆ.18 ರಂದು ಬೆಳಿಗ್ಗೆ ಗೌರಿ ಮೂರ್ತಿ ಪ್ರತಿಷ್ಠಾಪನೆ ನಂತರ ಗೌರಿ ಪೂಜೆ ನಡೆಯಿತು. ರಾತ್ರಿ ಶ್ರೀ ಗೌರಿ ದೇವಿಗೆ ಮಹಾಪೂಜೆ...

ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ತ್ರೋಬಾಲ್ ಪಂದ್ಯಾಟ- ಬಾಳಿಲ ಪ್ರಾಥಮಿಕ ಶಾಲಾ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅರಂತೋಡು ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 21/9/23ರಂದು ನಡೆದ ಸುಳ್ಯ ತಾಲೂಕು ಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲೆ ಬಾಲಕಿಯರ ವಿಭಾಗದಲ್ಲಿ ಪ್ರಥಮ ಹಾಗೂ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಜಿಲ್ಲಾ ಮಟ್ಟದ ಪಂದ್ಯಾಟವು ಏನೆಕಲ್ ನಲ್ಲಿ ನಡೆಯಲಿದ್ದು, ಈ ಪಂದ್ಯಾಟದಲ್ಲಿ ಬಾಲಕರ ಹಾಗೂ ಬಾಲಕಿಯರ...

ಸುಳ್ಯದ ಟಾಕ್ಸಿ ಕಾರು ಟಯರ್ ಬ್ಲಾಸ್ಟ್,ತಡೆಗೋಡೆಗೆ ಡಿಕ್ಕಿ!

ಸುಳ್ಯದ ಟ್ಯಾಕ್ಸಿ ಕಾರು ಕಲ್ಲುಗುಂಡಿಗೆ ತೆರಳಿ ಸುಳ್ಯಕ್ಕೆ ವಾಪಸ್ಸಾಗುವ ವೇಳೆ ಪೆರಾಜೆಯಲ್ಲಿ ಟಯರ್ ಬ್ಲಾಸ್ಟ್ ಆಗಿ ತಡೆಗೋಡೆಗೆ ಗುದ್ದಿದ ಘಟನೆ ಇದೀಗ ವರದಿಯಾಗಿದೆ. ನಂದ ಎಂದು ಬರೆದಿರುವ ಸುಳ್ಯ ಮೂಲದ ಟ್ಯಾಕ್ಸಿ ಕಾರು ಅಪಘಾತವಾಗಿದ್ದು, ಚಾಲಕನಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು, ಕಾರು ಜಖಂಗೊಂಡಿದೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!