ಅಗ್ನಿವೀರ್ ನಾಗಿ ಆಯ್ಕೆಯಾದ ಸೃಜನ್ ರೈ ಕೆರವರಿಗೆ ಸನ್ಮಾನ

ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕೊಡ್ಡೋಳು ಮನೆ ರಾಮಕೃಷ್ಣ ರೈ ಕೆ ಮತ್ತು ಗೀತಾ ಕೆ ಇವರ ಪುತ್ರ ಸೃಜನ್ ರೈ ಕೆ ಅವರು ಭಾರತೀಯ ಭೂ ಸೇನೆಯ ಅಗ್ನಿಪತ್ ನೇಮಕಾತಿಯಲ್ಲಿ ಅಗ್ನಿವೀರ್ ನಾಗಿ ಆಯ್ಕೆಯಾದ ಇವರ ಮನೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಸಂತ ನಡುಬೈಲು,...

ಸುಬ್ರಹ್ಮಣ್ಯ : ಜಿಲ್ಲಾ ಮಟ್ಟದ ವಾಲಿಬಾಲ್ – ಮಂಗಳೂರು ಬಾಲಕಿಯರ
ತಂಡ ಪೈನಲ್ ಗೆ ಆಯ್ಕೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದ ಎಸ್ ಎಸ್ ಪಿ ಯು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಲಕ- ಬಾಲಕಿಯರ  ಜಿಲ್ಲಾ ಮಟ್ಟದ ಪ.ಪೂ ಕಾಲೇಜು ವಾಲಿಬಾಲ್ ಪಂದ್ಯಾಟದ ಸೆಮಿಪೈನಲ್ ನಲ್ಲಿ  ಬಾಲಕಿಯರ ವಿಭಾಗದಲ್ಲಿ ಮಂಗಳೂರು ತಾಲೂಕು ತಂಡವು ಪೈನಲ್ ಪ್ರವೇಶಿಸಿದೆ. ಬಾಲಕಿಯ ವಿಭಾಗದಲ್ಲಿ ಎರಡನೇ  ಸೆಮಿಪೈನಲ್ ನಲ್ಲಿ ಬೆಳ್ತಂಗಡಿ ಮತ್ತು ಮೂಡಬಿದ್ರೆ ತಂಡವು ಪೈನಲ್ ಪ್ರವೇಶಕ್ಕಾಗಿ ಹಣಾಹಣೆ...
Ad Widget

ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿ ಇಶ್ಕೆ ಮದೀನಾ ಮೀಲಾದ್ ಗರ್ಲ್ಸ್ ಫೆಸ್ಟ್.

ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿಮೀಲಾದ್ ಸಮಿತಿ ವತಿಯಿಂದ 2023ನೇ ಸಾಲಿನ ಮೀಲಾದ್ ಹಬ್ಬದ ಪ್ರಯುಕ್ತ ವಿಧ್ಯಾರ್ಥಿ ವಿಧ್ಯಾರ್ಥಿನಿಯರ ಮೀಲಾದ್ ಫೆಸ್ಟ್ ಕಾರ್ಯಕ್ರಮವು ಸೆಪ್ಟೆಂಬರ್ 24 ಆದಿತ್ಯವಾರ ನೂರುಲ್ ಇಸ್ಲಾಂ ಮದರಸದಲ್ಲಿ ಜರುಗಿತು. ಸ್ಥಳೀಯ ಖತೀಬ್ ಬಹು ಹರ್ಷದ್ ಬಾಖವಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.ಕಾರ್ಯಕ್ರಮದಲ್ಲಿ ಸುಣ್ಣಮೂಲೆಯ ನೂರುಲ್ ಇಸ್ಲಾಂ ಮದರಸ ಮತ್ತು ಕನಕಮಜಲಿನ ಸಿರಾಜುಲ್ ಇಸ್ಲಾಂ ಮದರಸ...

ನೆರೆಯ ಗ್ರಾಮದ ಯುವಕನ ಚಿಕಿತ್ಸೆಗಾಗಿ ಮಿಡಿದ ಯುವಕರ ತಂಡಕ್ಕೆ ಕೈ ಜೋಡಿಸಿದ ಮಡಪ್ಪಾಡಿ ಗ್ರಾಮಸ್ಥರು

ಕೊಲ್ಲಮೊಗ್ರ ಗ್ರಾಮದ ಸಚಿತ್ ಶಿವಾಲ‌ ಎಂಬ ಯುವಕ‌ ಕಳೆದ ಎರಡು ವರುಷಗಳಿಂದ IGA Nephropathy ಎಂಬ Chronic Kidney Disease ಎಂಬ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಖಾಯಿಲೆ ಉಲ್ಬಣಗೊಂಡು ಸುಮಾರು 80% ಕಿಡ್ನಿ ನಿಷ್ಕ್ರಿಯಗೊಂಡಿರುತ್ತದೆ.ತನ್ನ‌ ತಂದೆಯ ಕಿಡ್ನಿ ಕಸಿ ಮಾಡಲು ಸುಮಾರು 15 ಲಕ್ಷಗಳಷ್ಟು ಹಣದ ಅವಶ್ಯಕತೆ ಇರುವುದನ್ನು ಗಮನಿಸಿದ ಚೈತನ್ಯ ಗೆಳೆಯರ...

“ವಿಶ್ವ ಫಾರ್ಮಸಿಸ್ಟರ ದಿನ- ಸಪ್ಟೆಂಬರ್ 25”

ಪ್ರತಿ ವರ್ಷ ಸಪ್ಟೆಂಬರ್ 25ರಂದು ವಿಶ್ವದಾದ್ಯಂತ ಫಾರ್ಮಸಿ‍ಸ್ಟ್ ಗಳು “ವಿಶ್ವ ಫಾರ್ಮಸಿಸ್ಟ್ ದಿನ” ಎಂದು ಆಚರಿಸಿರುತ್ತಾರೆ. 2009ರಲ್ಲಿ ಎಪ್‍ಐಪಿ ಅಂದರೆ ಇಂಟರ್‍ನ್ಯಾಷನಲ್ ಫಾರ್ಮಸುಟಿಕಲ್ ಪೆಡರೇಶನ್‍ನ ಆದೇಶದಂತೆ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವಾದ ‘ಫಾರ್ಮಸಿ’ ವಿಭಾಗದ ತಜ್ಞರುಗಳು ತಮ್ಮ ವೃತ್ತಿ ಜೀವನದ ಏಳು ಬೀಳುಗಳನ್ನು ವಿಮರ್ಶಿಸಿ ಕುಂದು ಕೊರತೆಗಳನ್ನು ಪರಾಮರ್ಷಿಸಿ ಮಗದೊಮ್ಮೆ...

ಸುಳ್ಯ : ಸರಕಾರಿ ಆಸ್ಪತ್ರೆಗೆ ಭೇಟಿ ಮಾಡಿ ಪರಿಶೀಲಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್, ಹೊಸ ಲ್ಯಾಬೊರೇಟರಿ ಕಟ್ಟಡ, ತುರ್ತು ಚಿಕಿತ್ಸೆ ಘಟಕ, ಮಕ್ಕಳ ಚಿಕಿತ್ಸಾ ವಿಭಾಗ, ಮಹಿಳಾ ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ವೀಕ್ಷಿಸಿ ಚಿಕಿತ್ಸೆ ಪಡೆಯುವವರ ಜೊತೆ ಮಾತನಾಡಿ...

ಕುಕ್ಕೆ: ಜಿಲ್ಲಾ ಮಟ್ಟದ ಪ.ಪೂ. ಕಾಲೇಜು ವಾಲಿಬಾಲ್ ಪಂದ್ಯಾಟ ಉದ್ಘಾಟನೆ

ಸುಬ್ರಹ್ಮಣ್ಯ: ಶಾಲಾ ಶಿಕ್ಷಣ ಇಲಾಖೆ ದ.ಕ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಸುಬ್ರಹ್ಮಣ್ಯ ದ ಎಸ್ ಎಸ್ ಪಿಯು ಕಾಲೇಜಿನ ಕ್ರೀಡಾಂಗಣದಲ್ಲಿ  ಮಂಗಳವಾರ   ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ನೆರವೇರಿತು. ಪಂದ್ಯಾಟ ವನ್ನು ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ ಉದ್ಘಾಟಿಸಿದರು. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ...

ಅಪಘಾತದಲ್ಲಿ ಗಾಯಗೊಂಡ ಶರತ್ ಅವರ ತುರ್ತು ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ

ಸುಳ್ಯ : ಸುಳ್ಯ ರೋಟರಿ ಶಾಲಾ ಮುಂಭಾಗ ಸೆ.23 ರಂದು ರಾತ್ರಿ ವೇಳೆ ಸ್ಕೂಟಿ ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ಉಬರಡ್ಕ ಗ್ರಾಮದ ಶರತ್ ಯಾದವ್ (ತಮ್ಮು) ಎಂಬವರಿಗೆ ಗಂಭೀರವಾಗಿ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ನಲ್ಲಿ ದಾಖಲಿಸಲಾಗಿದೆ. ಇವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು...

ಕುಕ್ಕೆ: ಗಣೇಶೋತ್ಸವದ ಸಾಂಸ್ಕೃತಿಕ ಸಂಜೆಯಲ್ಲಿ ರಂಜಿಸಿದ ಜನಪದೀಯ ವೈಭವ

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆದ 53ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಶ್ರೀ ದೇವಳದ ರಥಬೀದಿಯ ಕುಕ್ಕೆಶ್ರೀ ಕಲಾವೇದಿಕೆಯಲ್ಲಿ ಎಸ್‌ಎಸ್‌ಪಿಯು ಕಾಲೇಜಿನ ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳಿಂದ ಪ್ರದರ್ಶಿತವಾದ ಜನಪದೀಯ ನೃತ್ಯ ಸಿಂಚನ ಕಲಾಸಕ್ತರನ್ನು ರಂಜಿಸಿತು.ಯಾವುದೇ ಯಾವುದೇ ನುರಿತ ತರಬೇತುದಾರರಿಲ್ಲದೆ ವಿದ್ಯಾರ್ಥಿಗಳೇ ಆಸಕ್ತಿಯಿಂದ ಪ್ರದರ್ಶಿಸಿದ ಪ್ರತಿಭೆಯು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಜನತೆಯ ಮನಸೂರೆಗೊಂಡಿತು.ಸುಮಾರು...

ಬೇಕಾಗಿದ್ದಾರೆ

ಸುಳ್ಯ ತಾಲೂಕಿನ ಜನಪರ ವಾರಪತ್ರಿಕೆಯಾಗಿರುವ ಅಮರ ಸುಳ್ಯ ಸುದ್ದಿ , ಅಮರ ಸುದ್ದಿ ವೆಬ್ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ನಲ್ಲಿ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸಂಪರ್ಕಿಸಿ ಮೊ: 94817 41055
Loading posts...

All posts loaded

No more posts

error: Content is protected !!