ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ ಐ.ಆರ್.ಸಿ.ಎಂ.ಡಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪುತ್ತೂರು ಮತ್ತು ಸುಳ್ಯದ ವಿದ್ಯಾರ್ಥಿಗಳು 12 ಪ್ರಶಸ್ತಿಗಳೊಂದಿಗೆ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಇವರೆಲ್ಲರೂ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.ಪ್ರಶಸ್ತಿಗಳ ವಿವರ:ಕು|ತನಯ(ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ) ಮತ್ತು ಮಾ|ವಿವಾನ್(ರೋಟರಿ ನರ್ಸರಿ ಮತ್ತು ಆಂಗ್ಲ ಮಾಧ್ಯಮ ಶಾಲೆ ಸುಳ್ಯ) ಇವರು ಮಾನಸಿಕ ಅಂಕಗಣಿತದ ತನ್ನ ಅಸಾಧಾರಣ ಕೌಶಲ್ಯಗಳನ್ನು...

ಕೆವಿಜಿ ಪಾಲಿಟೆಕ್ನಿಕ್ : ರಾಷ್ಟ್ರೀಯ ಮತದಾರರ ದಿನಾಚರಣೆ

ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಚಂದ್ರಶೇಖರ ಎಂ ಎನ್ , ದೇವರಾಜ್ ಜಿ.ಕೆ, ಸತ್ಯನಾರಾಯಣ ಪ್ರಸಾದ್, ಯತೀಶ ಕೆ.ಎನ್, ರಮಾದೇವಿ, ರವಿಶಂಕರ ಹೊಳ್ಳ, ಕಛೇರಿ ಅಧೀಕ್ಷಕ ಶಿವರಾಮ ಕೇರ್ಪಳ, ಪರೀಕ್ಷಾ ವಿಭಾಗದ ಅಧೀಕ್ಷಕ ಬಾಲಕ್ರಷ್ಣ ಮರಸಂಕ ತಮ್ಮ ತಮ್ಮ ವಿಭಾಗದ ವಿದ್ಯಾರ್ಥಿಗಳಿಗೆ ಮತ್ತು...
Ad Widget

ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ.ನಿ AVSS ಸುಳ್ಯ ಶಾಖೆಯ ವತಿಯಿಂದ ‘ಸಂವಿಧಾನ ಜಾರಿ ದಿನಾಚರಣೆ’

ಸಂವಿಧಾನ ಜಾರಿ ದಿನಾಚರಣೆ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ.ನಿ AVSS ಸುಳ್ಯ ಶಾಖೆಯ ವತಿಯಿಂದ ನಡೆಯಿತು.ಅಂಬೇಡ್ಕರ್ ಭಾವಚಿತ್ರಕ್ಕೆ ಕ್ಯಾಂಡಲ್ ಬೆಳಗಿಸಿ ಮತ್ತು ಹಾರಾರ್ಪಣೆಯನ್ನು ಮಾಜಿ ಅಕ್ರಮ ಸಕ್ರಮ ಸಮಿತಿ ಸುಳ್ಯ ತಾಲೂಕು ಸದಸ್ಯರಾದ ಬಾಲಪ್ಪ ಕಳಂಜ ಮಾಡಿದರು. ಭಾರತ ಸಂವಿಧಾನ ಪ್ರಸ್ತಾವನೆ ಯನ್ನು ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ ಪಲ್ಲತ್ತಡ್ಕ ವಾಚಿಸಿದರು....

ಚಂದನ ಸಾಹಿತ್ಯ ವೇದಿಕೆಯಿಂದ ಗಣರಾಜ್ಯೋತ್ಸವ ಕವಿಗೋಷ್ಠಿ- ಕೃತಿ ಬಿಡುಗಡೆ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸರಕಾರಿ ಬಸ್ ನಿಲ್ದಾಣ ಬಳಿ ಇರುವ ಶಾರದಾ ವಿದ್ಯಾಲಯದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಗಣರಾಜ್ಯೋತ್ಸವ ಕವಿಗೋಷ್ಠಿ - ಕೃತಿ ಬಿಡುಗಡೆ ಕಾರ್ಯಕ್ರಮವು ಜರುಗಿತು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ, ಚಿತ್ರನಿರ್ದೇಶಕ, ಜ್ಯೋತಿಷಿಯಾದ ಎಚ್. ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು. ಶಾರದಾ ಕಾಲೇಜ್ ನ ಶಾರದಾ ಮೇಡಂ...

ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಜನವರಿ 26ರಂದು ಕಾಲೇಜಿನ ಆವರಣದಲ್ಲಿ ನೆರವೇರಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಡಾ ಉಜ್ವಲ್ ಯು ಜೆ ಭಾಗವಹಿಸಿ ಧ್ವಜಾರಣವನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ ,ಎಂಬಿಎ ವಿಭಾಗದ ಮುಖ್ಯಸ್ಥರಾದ ಶ್ರೀ...

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭ

ಇಂದು ಸಂಜೆ ಜಾತ್ರೋತ್ಸವಕ್ಕೆ ವೈಭವದ ಹಸಿರುವಾಣಿ ಸಮರ್ಪಣೆ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಇಂದು ಆರಂಭಗೊಂಡಿದ್ದು, ಜ. 29ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಇಂದು(ಜ. 26) ಬೆಳಿಗ್ಗೆ ಕಳಂಜ...

ಅಜ್ಜಾವರ; ಮೇದಿನಡ್ಕದಲ್ಲಿ ಗಣರಾಜ್ಯೋತ್ಸವ ಆಚರಣೆ

ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ನಡೆಯಿತು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕಿರಣ್ ಕುಮಾರ್ ಮುಡೂರು ಧ್ವಜಾರೋಹಣ ನೆರವೇರಿಸಿದರು ಮಾತನಾಡಿದರು, ಈ ಸಂದರ್ಭದಲ್ಲಿ ಸುಳ್ಯ ಎನ್.ಎಂ.ಸಿ ಅತಿಥಿ ಶಿಕ್ಷಕಿ ಶ್ರೀಮತಿ ಬಿಂದು ರವರು ಉಪಸ್ಥಿತರಿದ್ದರು, ಸ್ಥಳೀಯರಾದ ದಯಾಳ್ ಮೇದಿನಡ್ಕ, ಅಂಗನವಾಡಿ ಕಾರ್ಯಕರ್ತೆ ಶಿವಪಾಕ್ಯ , ವಿಘ್ನೇಶ್ವರ, ಸತ್ಯಶೀಲನ್, ಭಾಸ್ಕರ ಸೆಲ್ವಂ ರತ್ನಂ, ಹಾಗೂ...

ಸುಳ್ಯ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಮತ್ತು ಸಂವಿಧಾನ ದೀಕ್ಷೆ

ಸುಳ್ಯ,ಜ 26: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮತ್ತು ಸಂವಿಧಾನ ಧೀಕ್ಷೆ ಕಾರ್ಯಕ್ರಮವೂ ಗಾಂಧಿನಗರದಲ್ಲಿ ನಡೆಯಿತು.ನಾವೂರು ಬೂತ್ ಅಧ್ಯಕ್ಷ ಅಝೀಝ್ ರವರು ಧ್ವಜಾರೋಹಣಗೈದರು,ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ರವರು ಸಂದೇಶ ಭಾಷಣ ಮಾಡಿದರು...

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ, ಭಾರತ್ ಸ್ಕೌಟ್ಸ್- ಗೈಡ್ಸ್ ಉದ್ಘಾಟನಾ ಸಮಾರಂಭ

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉದ್ಘಾಟನಾ ಸಮಾರಂಭ ನಡೆಯಿತು.ಧ್ವಜಾರೋಹಣ ವನ್ನು ಶಾಲಾ ಸಂಚಾಲಕ ಜಾಕೆ ಸದಾನಂದ ನೆರವೇರಿಸಿ, ಬಳಿಕ ಸ್ಕೌಟ್ಸ್- ಗೈಡ್ಸ್ ನ್ನು ದೀಪಬೆಳಗಿಸಿ ಉದ್ಘಾಟಿಸಿದರು.ಶಿಕ್ಷಕ ಕುಮಾರ್ ಲಮಾಣಿ ಗಣರಾಜ್ಯೋತ್ಸವ ಮತ್ತು ಸ್ಕೌಟ್ಸ್ ಗೈಡ್ಸ್ ಬಗ್ಗೆ ಮಾತನಾಡಿದರು.ವೇದಿಕೆಯನ್ನು ಮುಖ್ಯ ಶಿಕ್ಷಕಿ ಜಯಲತಾ ಕೆ.ಆರ್...

ಸುಳ್ಯ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ೭೫ನೇ ಗಣರಾಜ್ಯೋತ್ಸವ ಕಾರ‍್ಯಕ್ರಮವನ್ನು ಆಚರಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀ ಉದಯಶಂಕರ ಹೆಚ್ ಧ್ವಜಾರೋಹಣ ಗೈದರು. ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ರವರು ಗಣರಾಜ್ಯೋತ್ಸವದ ಕುರಿತಾಗಿ ಮಾತನಾಡಿ ಶುಭ ಹಾರೈಸಿದರು. ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!