ಸುಳ್ಯ ಸರಕಾರಿ ಬಸ್ಸು ನಿಲ್ದಾಣದ ಬಳಿಯಲ್ಲಿ ಪಾದಚಾರಿಗೆ ಕಾರು ಡಿಕ್ಕಿ – ವ್ಯಕ್ತಿ ಮೃತ್ಯು

ಸುಳ್ಯ ಸರಕಾರಿ ಬಸ್ಸು ನಿಲ್ದಾಣದ ಬಳಿಯಲ್ಲಿ ಜಟ್ಟಿಪಳ್ಳ ಮೂಲದ ಗೋಪಾಲ ಎಂಬುವವರಿಗೆ ಕೇರಳ ಮೂಲದ ಕಾರು ಡಿಕ್ಕಿ ಹೊಡೆದು ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ . ಈ ಘಟನೆಯು ಸುಮಾರು ಮುಂಜಾನೆ 6:30ರ ಸುಮಾರಿಗೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಮೃತದೇಹವನ್ನು ಸುಳ್ಯ ಪ್ರಗತಿ ಆ್ಯಂಬುಲೆನ್ಸ್ ಚಾಲಕ ಮಾಲಕರಾದ ಅಚ್ಚು ಪ್ರಗತಿರವರು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ...

ಕಣೆಮರಡ್ಕ : ವಿಜೃಂಭಣೆಯಿಂದ ನಡೆದ ವಿಷ್ಣುಮೂರ್ತಿ ದೈವದ ನಡಾವಳಿ

ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಸಂಬಂಧಪಟ್ಟ ಕಣೆಮರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಂಗಳವಾರ ವಿಷ್ಣುಮೂರ್ತಿ ದೈವದ ನಡಾವಳಿ ಕಾರ್ಯಕ್ರಮ ನಡೆಯಿತು. ನವೀಕರಣಗೊಂಡ ದೈವಸ್ಥಾನದಲ್ಲಿ ಸೋಮವಾರ ಪ್ರತಿಷ್ಠಾ ಕಾರ್ಯಕ್ರಮ ನಡೆದ ಬಳಿಕ ದೈವದ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ಮಂಗಳವಾರ ಬೆಳಗ್ಗೆ ವಿಷ್ಣುಮೂರ್ತಿ ದೈವದ ನಡಾವಳಿ ಕಾರ್ಯಕ್ರಮ ನಡೆದಾಗ ಸಾವಿರಾರು ಭಕ್ತಾದಿಗಳು ಕಣ್ತುಂಬಿಕೊಂಡರು. ಮಧ್ಯಾಹ್ನ...
Ad Widget

ಪೈಕ : ಕುಡಿಯುವ ನೀರಿಗೆ ಸಂಕಷ್ಟ – ಸ್ಥಳೀಯರಿಂದ ಮನೆಮನೆಗೆ ನೀರು ಸರಬರಾಜು

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೈಕ ನಿವಾಸಿಗಳಾದ ಕೊರಪೋಳು ಮತ್ತು ಭಾರತಿ ಅವರ ಕುಟುಂಬ ಕುಡಿಯಲು ನೀರಿನ ಅಭಾವ ಉಂಟಾಗಿದ್ದು ದೂರದಿಂದ ನೀರನ್ನು ಹೊತ್ತು ತರುವಂತ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಹಲವು ಭಾರಿ ಮನವಿ ಮಾಡಿದ್ದರೂ ನೀರಿನ ವ್ಯವಸ್ಥೆ ಮಾಡಿಲ್ಲ ಎಂದಿದ್ದಾರೆ. ಸ್ಥಳೀಯರಾದ ಸಿದ್ದಾರ್ಥ ವಳಲಂಬೆ ಅವರ ಮನೆಯವರಿಂದ ಜೀಪಿನ ಮುಖಾಂತರ...

ಸುಳ್ಯದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಇಕ್ಬಾಲ್ ಎಲಿಮಲೆ ಮತ್ತು ತಂಡ.

ಮಂಗಳೂರು ಭಾಗದ ಕಾಂಗ್ರೆಸ್‌ನ ತತ್ವಾದರ್ಶಗಳಿಂದ ಪ್ರೇರಿತರಾದ ಜೆಡಿಎಸ್ ಪಕ್ಷದ ಕಾರ್ಯಕರ್ತರು, ನಾಯಕರು ಸೇರಿದಂತೆ 42 ಕ್ಕೂ ಹೆಚ್ಚು ಜನರು ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಸೇರ್ಪಡೆ ನೆತೃತ್ವವನ್ನು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ , ನಗರ ಪಂಚಾಯತ್ ಸದಸ್ಯರಾದ ಕೆ ಎಸ್ ಉಮ್ಮರ್ ಸೇರಿದಂತೆ ಪ್ರಮುಖ ನಾಯಕರು ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಸೇರ್ಪಡೆ...

ಮಂಗಳೂರಿಗೆ ಆಗಮಿಸಿದ ಪ್ರಧಾನಿಯನ್ನು ಸ್ವಾಗತಿಸಿದ  ದಿ.ಪ್ರವೀಣ್ ನೆಟ್ಟಾರ್ ರವರ ತಾಯಿ

ಲೋಕಸಭೆ ಚುನಾವಣೆ 2024 ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸರುವ ಪ್ರಧಾನಿ ನರೇಂದ್ರ ಮೋದಿ ಅವರು ಎ.14 ಸಂಜೆ   ಮಂಗಳೂರಿನ ಏರ್ ಪೋರ್ಟ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರೊಂದಿಗೆ ಸ್ವಾಗತಿಸುವ ಸಾಲಿನಲ್ಲಿ ಹುತಾತ್ಮ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರ್ ರವರ ತಾಯಿಗೆ ಅವಕಾಶವನ್ನು ನೀಡಲಾಗಿತ್ತು. ಸಾಮಾನ್ಯ ಕಾರ್ಯಕರ್ತನ ತಾಯಿಯನ್ನು ಪ್ರಧಾನಿಯವರನ್ನು ಭೇಟಿಯಾಗಿಸಲು ಅವಕಾಶ ದೊರೆಯಿತು.

ಗಾಂಧಿನಗರ : ಮಸೀದಿ ಎದುರು ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಡಿಕ್ಕಿ

ಗಾಂಧಿನಗರ ಮಸೀದಿ ಎದುರು ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಡಿಕ್ಕಿಯಾಗಿ ಜಖಂಗೊಂಡ ಘಟನೆ ಇಂದು ಮಂಜಾನೆ ನಡೆದಿದೆ. ಗಾಂಧಿನಗರದ ಪಯಸ್ವಿನಿ ಪೆಟ್ರೋಲ್ ಪಂಪ್ ಮಾಲಕರು ಕಾರನ್ನು ಮಸೀದಿ ಎದುರು ನಿಲ್ಲಿಸಿದ್ದರು. ಬೆಳಿಗ್ಗೆ ಸುಮಾರ 5.30 ರ ವೇಳೆಗೆ ಕಾರಿಗೆ ಕಂಟೈನರ್ ಡಿಕ್ಕಿ ಹೊಡೆದಿದೆ.‌ ಸುಳ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ.‌

ಗಾಂಧಿನಗರ : ಮಸೀದಿ ಎದುರು ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಡಿಕ್ಕಿ

ಗಾಂಧಿನಗರ ಮಸೀದಿ ಎದುರು ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಡಿಕ್ಕಿಯಾಗಿ ಜಖಂಗೊಂಡ ಘಟನೆ ಇಂದು ಮಂಜಾನೆ ನಡೆದಿದೆ. ಗಾಂಧಿನಗರದ ಪಯಸ್ವಿನಿ ಪೆಟ್ರೋಲ್ ಪಂಪ್ ಮಾಲಕರು ಕಾರನ್ನು ಮಸೀದಿ ಎದುರು ನಿಲ್ಲಿಸಿದ್ದರು. ಬೆಳಿಗ್ಗೆ ಸುಮಾರ 5.30 ರ ವೇಳೆಗೆ ಕಾರಿಗೆ ಕಂಟೈನರ್ ಡಿಕ್ಕಿ ಹೊಡೆದಿದೆ.‌ ಸುಳ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ.‌

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ 108 ಆಂಬ್ಯುಲೆನ್ಸ್‌ ಗೆ ಯುವ ಉದ್ಯಮಿ ಪ್ರಶಾಂತ್ ರೈ ಮರುವಂಜ ದಂಪತಿಗಳಿಂದ ಟೈಯರ್ ಕೊಡುಗೆ

ತುರ್ತು ಸಂದರ್ಭದಲ್ಲಿ ಅಮೂಲ್ಯ ಜೀವ ಉಳಿಸಬೇಕಾದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ 108 ಆಂಬ್ಯುಲೆನ್ಸ್‌ ಟೈಯರ್‌ ಯಾವ ಸಂದರ್ಭದಲ್ಲಿ 'ಪಂಕ್ಚರ್‌' ಆಗುತ್ತದೆ ಎಂಬುದು ಸ್ವತಃ ಡ್ರೈವರ್‌ಗೂ ಗೊತ್ತಿಲ್ಲ! ಇದಕ್ಕೆ ಕಾರಣ ಟೈಯರ್‌ ಸಂಪೂರ್ಣ ಸವೆದು ಹೋಗಿರುವುದು. ಹಲವು ತಿಂಗಳಿಂದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ 108 ಆಂಬ್ಯುಲೆನ್ಸ್‌ ಟೈಯರ್‌ಗಳು ಸಂಪೂರ್ಣ ಸವೆದುಹೋಗಿರುವ ಹಿನ್ನೆಲೆಯಲ್ಲಿ ಈ...

ಸಂಪನ್ನಗೊಂಡ ಕಣೆಮರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪ್ರತಿಷ್ಠಾ ಕಾರ್ಯಕ್ರಮ

ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಸಂಬಂಧಪಟ್ಟ ಕಣೆಮರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪ್ರತಿಷ್ಠಾ ಕಾರ್ಯಕ್ರಮ ಸೋಮವಾರ ನಡೆಯಿತು. ಪ್ರಾತಃಕಾಲ 6 ಕ್ಕೆ ಸರ್ವ ವಿಘ್ನಗಳ ಪರಿಹಾರಕ್ಕಾಗಿ ಗಣಪತಿ ಹವನ ಹಾಗೂ ಕಲಶ ಪೂಜೆ ನಡೆಯಿತು. ನಂತರ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.ಬಳಿಕ ವೃಷಭ...

ಮಂಡೆಕೋಲು : ಮನೆಯೊಳಗೆ ಕುಸಿದು ಬಿದ್ದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ !!

ಮಂಡೆಕೋಲು ಗ್ರಾಮದ ಕುತ್ಯಾಡಿ ಎಂಬಲ್ಲಿ ಯುವಕನೋರ್ವ ಕುಸಿದುಬಿದ್ದು ತಲೆಗೆ ಏಟು ತಗುಲಿ ಮೃತಪಟ್ಟ ರೀತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಇದೀಗ ವರದಿಯಾಗಿದೆ. ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದು,ತನಿಖೆ‌ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಹೆಚ್ವಿನ ತನಿಖೆಗಾಗಿ ವಿಧಿವಿಜ್ಞಾನ ಇಲಾಖೆಯ ತಂಡ ಆಗಮಿಸಲಿದೆ ಎನ್ನಲಾಗಿದೆ. ಮೃತಪಟ್ಟ ಯುವಕನನ್ನು ಸಚಿನ್ ಎಂದು ಹೇಳಲಾಗುತ್ತಿದ್ದು ಈತನು ಪೈಟಿಂಗ್ ವೃತ್ತಿಯನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು...
Loading posts...

All posts loaded

No more posts

error: Content is protected !!