ನಾಲ್ಕೂರು : ವಿದೇಶದಿಂದ ಆಗಮಿಸಿ ತನ್ನ ಕರ್ತವ್ಯವನ್ನು ಮೆರೆದ ವಿನೋದ್ ಪಾಲ್ತಾಡು

ವಿದೇಶದಲ್ಲಿ ಉದ್ಯೋಗದಲ್ಲಿರುವ ನಾಲ್ಕೂರು ಗ್ರಾಮದ ನಡುಗಲ್ಲಿನ ವಿನೋದ್ ಪಾಲ್ತಾಡು ಎಂಬುವವರು ಮತದಾನ ಮಾಡುವ ಸಲುವಾಗಿ ತನ್ನ ಕೆಲಸಕ್ಕೆ ರಜಾ ಹಾಕಿ ಬಂದು ಮತದಾನ ಮಾಡಿ ತಮ್ಮ ಕರ್ತವ್ಯವನ್ನು ಮೆರೆದಿದ್ದಾರೆ.

ವಿದೇಶದಿಂದ ಆಗಮಿಸಿ ತನ್ನ ಕರ್ತವ್ಯವನ್ನು ಮೆರೆದ ದಿನಕರ್ ಕುಕ್ಕಾಜೆ

ಇಡೀ ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿ ಪಡಿಸಿ ಕರ್ನಾಟಕದ ಕೆಲ ಕ್ಷೇತ್ರಗಳು ಸೇರಿದಂತೆ ದಿನಾಂಕ 26-04-2024 ರಂದು ಮತದಾನ ನಡೆಯಿತು. ಈ ಮಹತ್ ಕಾರ್ಯದಲ್ಲಿ ಸುಳ್ಯದದಿನಕರ ಕುಕ್ಕಾಜೆ ಕಾನ ಎಂಬುವವರು ಶಾಂತಿನಗರ ಬೂತ್ ನಂಬರ್ 177 ರ ಮತದಾರರಾಗಿದ್ದು ಇವರು ದುಬೈಯ ಧೀರದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದು...
Ad Widget

ಬಾಳುಗೋಡು : ಪೂರ್ಣಗೊಂಡ ಮತದಾನ – 90% ಮತದಾನ

ನಿನ್ನೆ ಏ.26 ರಂದು ಲೋಕಸಭಾ ಚುನಾವಣೆ ನಡೆದಿದ್ದು, ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಎಲ್ಲೆಡೆ ಮತದಾನ ನಡೆಯಿತು.ಬಾಳುಗೋಡು ಗ್ರಾಮದ 233ನೇ ಬೂತ್ ನಲ್ಲಿ 522 ಪುರುಷ ಮತದಾರರು ಹಾಗೂ 516 ಮಹಿಳಾ ಮತದಾರರು ಮತದಾನ ಮಾಡಿದ್ದು, ಒಟ್ಟು 1038(90.89%) ಮತದಾರರು ಮತದಾನ ಮಾಡಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

ಹರಿಹರ ಪಲ್ಲತ್ತಡ್ಕ : ಪೂರ್ಣಗೊಂಡ ಮತದಾನ – 88% ಮತದಾನ

ನಿನ್ನೆ ಲೋಕಸಭಾ ಚುನಾವಣೆ ನಡೆದಿದ್ದು, ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಎಲ್ಲೆಡೆ ಮತದಾನ ನಡೆಯಿತು.ಹರಿಹರ ಪಲ್ಲತ್ತಡ್ಕದ ಪ್ರಾಥಮಿಕ ಶಾಲಾ ಮತಗಟ್ಟೆ ಸಂಖ್ಯೆ 118 ರಲ್ಲಿ 371 ಪುರುಷ ಮತದಾರರು ಹಾಗೂ 355 ಮಹಿಳಾ ಮತದಾರರು ಮತದಾನ ಮಾಡಿದ್ದು, ಒಟ್ಟು 726(88.32%) ಮತದಾರರು ಮತದಾನ ಮಾಡಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

ಮಂಡೆಕೋಲು : ಬ್ರಹ್ಮಕಲಶೋತ್ಸವಕ್ಕೆ ಚಾಲನೆ – ತಂತ್ರಿಗಳಿಗೆ ಪೂರ್ಣಕುಂಭದೊಂದಿಗೆ ಸ್ವಾಗತ

ಸುಳ್ಯ: ಇತಿಹಾಸ ಪ್ರಸಿದ್ಧ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿ ಬಂದಿದ್ದು ಶುಕ್ರವಾರ ಬ್ರಹ್ಮಕಲಶೋತ್ಸವದ ಆರಂಭದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಮುಂದಿನ ಸರ್ವ ಕಾರ್ಯಗಳಿಗೆ ಯಾವುದೇ ವಿಘ್ನಗಳು ಬಾಧಿಸದಂತೆ ಕಾರ್ಯಕ್ರಮದ ಯಶಸ್ಸಿಗಾಗಿ ದೇವತಾ ಪ್ರಾರ್ಥನೆ...

ಐವರ್ನಾಡು : ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ

ಐವರ್ನಾಡು ಗ್ರಾಮ ಬಾಂಜಿಕೋಡಿ ವಾರ್ಡ್ ಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅರ್ ಪೂಜಾರಿ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದರು.

ಸುಳ್ಯ : ತಾಲೂಕಿನಾದ್ಯಂತ ಶಾಂತಿಯುತ ಮತದಾನ – ಚಲಾವಣೆಯಾದ ಮತವೆಷ್ಟು ?

ಸುಳ್ಯ ತಾಲೂಕಿನಾದ್ಯಂತ ಇಂದು ನಡೆದ ಲೋಕಸಭಾ ಸಭಾ ಚುನಾವಣೆ ಶಾಂತಿಯುತವಾಗಿ ನಡೆಯಿತು. ಸುಳ್ಯದಲ್ಲಿ ಶೇ. 83 ಮತದಾನವಾಗಿದೆ. ಮಹಿಳೆಯರು 87565 ಹಾಗೂ 85789 ಪುರುಷರು ಮತ ಚಲಾವಣೆ ಮಾಡಿದ್ದಾರೆ.  ತಾಲೂಕಿನಲ್ಲಿ ಒಟ್ಟು 208853 ಮತದಾರರಿದ್ದು, 173354 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 83 ಫಲಿತಾಂಶ ಪ್ರಕಟವಾಗಿದೆ. ಮಹಿಳಾ ಮತದಾರರೇ ಹೆಚ್ಚು ಮತದಾನ ಮಾಡಿದ್ದಾರೆ.

ದುಗ್ಗಲಡ್ಕ ಮತ್ತು ಕೊಯಿಕುಳಿ ಬೂತ್ ಗೆ ಎನ್ ಜಯಪ್ರಕಾಶ್ ರೈ ಭೇಟಿ

ಸುಳ್ಯ ನಗರದ ದುಗ್ಗಲಡ್ಕ ಮತ್ತು ಕೊಯಿಕುಳಿ ಬೂತ್ ಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ವೀಕ್ಷಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ ಭೇಟಿ ನೀಡಿ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಬಾಳುಗೋಡು : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ರಿಂದ ಕಾರ್ಯಕರ್ತರ ಭೇಟಿ

ಬಾಳುಗೋಡು ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಶೈಲೇಶ್ ಕಟ್ಟೆಮನೆ, ಪಿ.ಸಿ ಜಯರಾಮ, ಚೇತನ್ ಕಜೆಗದ್ದೆ, ರಾಧಾಕೃಷ್ಣ ಕಟ್ಟೆಮನೆ ಮತ್ತಿತರರು ಉಪಸ್ಥಿತರಿದ್ದರು.

ಮಾವಿನಕಟ್ಟೆ: ನವ ವಧುವಿನಿಂದ ಮತ ಚಲಾವಣೆ

ಮಾವಿನಕಟ್ಟೆ 159 ನೇ ಬೂತ್ ನಲ್ಲಿ ನವ ವಧು ಪತಿಯೊಂದಿಗೆ ಆಗಮಿಸಿ ಮತದಾನ ಮಾಡಿದರು.  ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಕೃಷ್ಣಪ್ಪ ಗೌಡರ ಪುತ್ರಿ ರಶ್ಮಿಯ ವಿವಾಹ ಇಂದು ವಳಲಂಬೆ ದೇವಸ್ಥಾನದಲ್ಲಿ ನಡೆದಿದ್ದು ನವ ವಧು ತನ್ನ ಪತಿ ಚೇತನ್ ಕುಮಾರ್ ಜತೆ ಮತದಾನ ಕೇಂದ್ರಕ್ಕೆ ಆಗಮಿಸಿ ತನ್ನ ಹಕ್ಕು ಚಲಾಯಿಸಿದರು.‌ ಈ ಸಂದರ್ಭದಲ್ಲಿ ಬಿಜೆಪಿ ಯುವ...
Loading posts...

All posts loaded

No more posts

error: Content is protected !!