- Tuesday
- August 18th, 2026
ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟರವರು ಮೊದಲ ಸುತ್ತಿನಿಂದಲೇ ಅಂತರ ಕಾಯ್ದುಕೊಂಡು ಬಂದಿದ್ದು ಇದೀಗ ತಮ್ಮ ಅಂತರವನ್ನು ಪ್ರತಿಸ್ಪರ್ಧಿ ಪದ್ಮರಾಜ್ ವಿರುದ್ಧ ಐವತ್ತು ಸಾವಿರ ಹೆಚ್ಚಿಸಿಕೊಂಡಿದ್ದು ಗೆಲುವಿನ ನಗೆ ಬೀರುವುದು ನಿಚ್ಚಳವಾಗಿದೆ.
ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದ ಘಟನೆ ಬಿಳಿನೆಲೆ ಗ್ರಾಮದ ಕೈಕಂಬ ಬಾಲಡ್ಕದಲ್ಲಿ ನಿನ್ನೆ ಸಂಜೆ ಜೂನ್ (3ರಂದು) ಸಂಭವಿಸಿದೆ. ಬಿಳಿನೆಲೆ ಗ್ರಾಮದ ಕೈಕಂಬ ಬಾಲಡ್ಕ ಯಶೋಧರರವರ ಮನೆಗೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ಮನೆಯ ಕಿಟಕಿ, ಸ್ವಿಚ್ ಬೋರ್ಡ್, ಹಾಗೂ ಮನೆಯ ಗೋಡೆಗೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.
ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಪಂಬೆತ್ತಾಡಿ ಗ್ರಾಮ ನೆಕ್ರಕಜೆ ರವಿ ಪ್ರಸಾದ್ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ನಡೆದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮೈಸೂರು ವಿಶ್ವವಿದ್ಯಾನಿಲಯಕ್ಕೆ ಡಾ.ಸಿ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಗೀತಾ ಜಿ. ಗುಡ್ಡೆಮನೆ ಅವರು ಮಂಡಿಸಿದ "Performance of Female Kabaddi Players in Relation to Selected Psychological and Psychomotor Variables" ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು. ದೈಹಿಕ ಶಿಕ್ಷಣ ವಿಷಯದಲ್ಲಿ ಇವರು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿಹೆಚ್.ಡಿ ಪದವಿ ನೀಡಿದೆ. ಇವರು...
ಇಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು ಮತ ಎಣಿಕೆ ಆರಂಭಗೊಂಡಿದೆ. ದ.ಕ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಮುನ್ನಡೆ ಸಾಧಿಸಿದ್ದಾರೆ. ಇದೀಗ 9000 ಮತಗಳ ಮುನ್ನಡೆ ಯಲ್ಲಿದ್ದಾರೆ.
ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಪಂಬೆತ್ತಾಡಿ ಗ್ರಾಮ ಗಣೇಶ್ ಜೋಯಿಸ ಎಂಬ ಅವರ ತೋಟದಲ್ಲಿ ಸುಮಾರು 300 ಅಡಿಕೆ ಮರ ಮುರಿದು ಬಿದ್ದು ನಾಶವಾಗಿದೆ ಎಂದು ತಿಳಿದುಬಂದಿದೆ.
ಸೌಜನ್ಯ ಹೋರಾಟ ಸಮಿತಿ ಉಬರಡ್ಕ ಇದರ ವತಿಯಿಂದ ರವಿರಾಜ್ ಕಂಬಳಿಮೂಲೆ, ಶುಭಕರ ನಾಯಕ್, ರಾಜೇಶ್ ಭಟ್, ಜನಾರ್ಧನ ಪೂಜಾರಿ, ಪ್ರಕಾಶ್, ಪುರುಷೋತ್ತಮ, ಸತೀಶ್, ಜಯಪ್ರಕಾಶ್, ಲೊಕೇಶ್ ಇವರು ಸೇರಿ ಹಣ ಸಂಗ್ರಹಿಸಿ ಸ.ಹಿ.ಪ್ರಾ ಶಾಲೆ ಉಬರಡ್ಕ ಮಿತ್ತೂರು ಇಲ್ಲಿಯ ವಿದ್ಯಾರ್ಥಿಗಳಿಗೆ 370 ಬರೆಯುವ ಪುಸ್ತಕವನ್ನು ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಹೇಮಾವತಿಯವರ ಮುಖಾಂತರ ಜೂ.3 ರಂದು ಹಸ್ತಾಂತರಿಸಿದ್ದಾರೆ....
75 ವಸಂತದಲ್ಲಿರುವ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಹಾಗೂ 60 ವರ್ಷ ತುಂಬಿದ ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಕ್ಕೆಟ್ಟಿ ಯವರಿಗೆ ಸುಳ್ಯ ಪ್ರೆಸ್ ಕ್ಲಬ್ ವತಿಯಿದ ಗೌರವಾರ್ಪಣೆ ಜೂ.3ರಂದು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗಂಗಾಧರ್ ಮಟ್ಟಿ – ಶ್ರೀಮತಿ ಚಿತ್ರಾ ಮಟ್ಟಿ ಹಾಗೂ...
ಸುಳ್ಯ: ವಿಧಾನ ಪರಿಷತ್ ಚುನಾವಣೆ ಇಂದು ಮುಂಜಾನೆ 8 ಗಂಟೆಯಿಂದ ಪ್ರಾರಂಭವಾಗಿದ್ದು ಮುಂಜಾನೆಯಿಂದಲೇ ಪದವೀಧರರು ಸರತಿ ಸಾಲಿನಲ್ಲಿ ಆಗಮಿಸಿ ಮತಚಲಾವಣೆ ಮಾಡುತ್ತಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ ಸರತಿ ಸಾಲು ಕಾಣಿಸುತ್ತಿಲ್ಲವಾದರೂ ಮತಚಲಾವಣೆ ಯಶಸ್ವಿಯಾಗಿ ನಡೆಯುತ್ತಿದೆ.
ಕಡಬ ತಾಲೂಕಿನ ಕೊಂಬಾರು ಸ.ಉ.ಹಿ.ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ, ಶಿಕ್ಷಣ ಕ್ಷೇತ್ರದಲ್ಲಿ 34 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿರುವ ಚಿದಾನಂದ ಗೌಡರವರು ಮೇ.31ರಂದು ನಿವೃತ್ತರಾದರು. ಕಡಬ ತಾಲೂಕಿನ ಕೊಂಬಾರು ಗ್ರಾಮದ ಶ್ರೀಯುತ ಶಿವಣ್ಣ ಗೌಡ ಹಾಗೂ ಶ್ರೀಮತಿ ವೆಂಕಮ್ಮ ದಂಪತಿಗಳ ಪುತ್ರನಾಗಿ ದಿನಾಂಕ 01.06.1964 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಕೊಂಬಾರು ಇಲ್ಲಿ...
Loading posts...
All posts loaded
No more posts
