- Monday
- September 14th, 2026
ಸುಬ್ರಹ್ಮಣ್ಯ ಆಗಸ್ಟ್ 04 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುಬ್ರಹ್ಮಣ್ಯ ಠಾಣೆಯ ವತಿಯಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಷನಲ್ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಇತ್ತೀಚೆಗೆ ಪೊಲೀಸ್ ಇಲಾಖೆಗೆ ಸೇರುವ ಅಭ್ಯರ್ಥಿಗಳಿಗಾಗಿ ಮಾದರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಿದ್ದರು. ರಾಜ್ಯದ ವಿವಿದೆಡೆಗಳಿಂದ ಸುಮಾರು 300ಕ್ಕೂ ಮಿಕ್ಕಿ ಆಸಕ್ತ ಅಭ್ಯರ್ಥಿಗಳು ಮಾದರಿ ಪೊಲೀಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು....
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಗ್ರಾಮ ಸಭೆಯು ಆ.03 ರಂದು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಸಭೆಯ ನೊಡೆಲ್ ಅಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಪೂವಯ್ಯ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪಿ.ಡಿ.ಒ ಚೆನ್ನಪ್ಪ ನಾಯ್ಕ ಉಪಸ್ಥಿತರಿದ್ದರು. ಮೆಸ್ಕಾಂ ನ ಚಿದಾನಂದ, ಶಿಕ್ಷಣ ಇಲಾಖೆಯ ಕುಶಾಲಪ್ಪ ತುಂಬತ್ತಾಜೆ, ಅರಣ್ಯ ಇಲಾಖೆಯ ಅಪೂರ್ವ ಅಚ್ರಪ್ಪಾಡಿ, ಗ್ರಾಮ ಲೆಕ್ಕಾಧಿಕಾರಿ ಮಧು ಕೆ.ಬಿ, ಮಹಿಳಾ ಮತ್ತು...
ಮಾವಿನಕಟ್ಟೆ, ಗುತ್ತಿಗಾರು, ಹರಿಹರ ಪಳ್ಳತ್ತಡ್ಕ ಪರಿಸರದಲ್ಲಿ ಆಗಸ್ಟ್ 03 ಸೋಮವಾರದಂದು ಒಂದು ಜೊತೆ ಚಿನ್ನದ ಕಿವಿಯೋಲೆ ಕಳೆದು ಹೋಗಿದ್ದು, ಸಿಕ್ಕಿದವರು ದಯವಿಟ್ಟು 7022463156, 9448310236 ಸಂಪರ್ಕಿಸಿ ಕಿವಿಯೋಲೆಯನ್ನು ಹಿಂತಿರುಗಿಸಬೇಕೆಂದು ಕಿವಿಯೋಲೆ ಕಳೆದುಕೊಂಡವರು ವಿನಂತಿಸಿಕೊಂಡಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)
ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಹಿಂದೂಸ್ಥಾನ್ ಸುಳ್ಯ ಸೆಂಟರ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಮರಿಯಂ ಅಬಯ ಪರ್ದಾ ಮಳಿಗೆ ಆ.5 ರಂದು ಶುಭಾರಂಭ ಕಾಣಲಿದೆ. ಮಳಿಗೆಯಲ್ಲಿ ಸಾಂಪ್ರದಾಯಿಕ ಶೈಲಿಯ ಪರ್ದಾಗಳು, ಹಿಜಾಬ್, ಶಾಲುಗಳು, ದೇಶಿ, ವಿದೇಶಿ ಶೈಲಿಯ ಮತ್ತು ಅತ್ಯಾಧುನಿಕ ಮೊಡೆಲ್ ಗಳ ಪರ್ದಾ, ಹಿಜಾಬ್ ಭಾರೀ ರಿಯಾಯಿತಿಯ ದರದಲ್ಲಿ ದೊರೆಯುತ್ತದೆ. ಮಳಿಗೆ ಗ್ರಾಹಕರ...
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಸುಬ್ರಹ್ಮಣ್ಯ ಉಪ ವಿಭಾಗದ ಹಾಗೂ ಶಾಖೆಯ ಸೀನಿಯರ್ ಮೆಕ್ಯಾನಿಕ್ ಪಾಲಾಕ್ಷರವರು ಜುಲೈ 31ರಂದು ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಪಾಲಾಕ್ಷ ದಂಪತಿಗಳನ್ನು ಗೌರವಿಸಲಾಯಿತು. ಸನ್ಮಾನ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷ ವಿಶ್ವನಾಥ ನಡುತೋಟ ಅವರು ಮಾತನಾಡುತ್ತಾ "ಸೇವೆಗಳಲ್ಲಿ ಆರೋಗ್ಯ ಸೇವೆ ಎಷ್ಟು ಮುಖ್ಯವೋ...
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 04 ಆಗಸ್ಟ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 04) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
ಸುಳ್ಯ: ಎಲಿಮಲೆ ಮುಖ್ಯಪೇಟೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಬೃಹತ್ ಮರದ ರೆಂಬೆಗಳು ಮುರಿದು ಬೀಳಲು ಆರಂಭವಾಗಿದ್ದು, ಸಮೀಪದ ಅಂಗಡಿಗಳು ಹಾಗೂ ಮರದ ಕೆಳಗೆ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗುವ ಆತಂಕ ಎದುರಾಗಿತ್ತು. ಅಲ್ಲದೆ, ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಇದೇ ಮರದ ಕೆಳಗೆ ನಿಲ್ಲಬೇಕಾಗಿದ್ದರಿಂದ ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. https://amarasuddi.com/2026/06/09/elimale-36/ ಈ...
ಕಂದಡ್ಕ ಪರಿಸರದಲ್ಲಿ ಕಳೆದೊಂದು ವಾರದಿಂದ ಬೀಡು ಬಿಟ್ಟ ಆನೆಗಳ ಹಿಂಡು ಈ ಭಾಗದಲ್ಲಿ ನಿರಂತರ ಕೃಷಿ ತೋಟಗಳಿಗೆ ದಾಳಿ ನಡೆಸಿ ಹಾನಿ ಮಾಡುತ್ತಿದೆ. ಹೇಮಂತ್ ಕಂದಡ್ಕ, ಅಜಯ್ ಕೃಷ್ಣ ಕಂದಡ್ಕ, ನೀರಬಿದಿರೆ, ಮದಕ ಭಾಗದ ಹಲವು ಕೃಷಿ ತೋಟಗಳಿಗೆ ಆನೆಗಳ ಹಿಂಡು ದಾಳಿ ನಡೆಸಿ ಕೃಷಿ ಹಾನಿ ಮಾಡುತ್ತಿದೆ. ಈ ಭಾಗದ ನಿವಾಸಿಗಳು ಭಯದಲ್ಲಿ ಬದುಕುವಂತಾಗಿದೆ....
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ವಿದ್ಯಾರ್ಥಿ ಸಂಘದ ರಚನೆ ಮತ್ತು ಪ್ರತಿಜ್ಞಾ ಸ್ವೀಕಾರ ವಿಧಿ ಹಾಗೂ 2021-22 ಸಾಲಿನ ವಿದ್ಯಾರ್ಥಿಗಳಿಗೆ ಬಿಳ್ಕೊಡಿಗೆ ಸಮಾರಂಭ ಕಾರ್ಯಕ್ರಮವು ಆ. 3ರಂದು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಸಭಾಧ್ಯಕ್ಷತೆ...
ಆ. 31ರಂದು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು, ಸುಳ್ಯ ಇದರ ವತಿಯಿಂದ ಬೆಂಗಳೂರಿನ ಕೆ.ವಿ.ಜಿ. ಸಹ ಸಂಸ್ಥೆ ಎನ್.ಎಸ್.ವಿ.ಕೆ. ಕಾಲೇಜಿನಲ್ಲಿ ನಡೆಸಿದ ImpleVista IT India Pvt. Ltd. ಕಂಪೆನಿಯ ಸಂದರ್ಶನದಲ್ಲಿ 2026ನೇ ಸಾಲಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಅನನ್ಯ ನಾಮಧಾರ್ ಹೆಚ್.ಆರ್., ಜಯಮಾಲ ಎಂ.ಬಿ., ಕಾರ್ತಿಕ ಕೆ.ಹೆಚ್., ಮಂಜನಾಥ್ ಕೆ., ಪ್ರತೀಕ್ಷ...
Loading posts...
All posts loaded
No more posts
