ಕವನ : ಬದುಕಿನ ವ್ಯಥೆಗಳು – ಭರವಸೆಯ ಹೆಜ್ಜೆಗಳು…

ಬರೆಯಲಿ ನಾ ಹೇಗೆ ಬದುಕಿನ ಕಥೆಯ, ನನ್ನ ಬದುಕೇ ಒಂದು ಕಾದಂಬರಿಯಂತೆ ಕಣ್ಮುಂದೆ ನಿಂತಿರುವಾಗ…ವಿವರಿಸಲಿ ನಾ ಹೇಗೆ ಜೀವನದ ಪರೀಕ್ಷೆಗಳ, ಉತ್ತರಗಳೇ ಸಿಗದ ನೂರಾರು ಪ್ರಶ್ನೆಗಳು ನನ್ನ ಮನದೊಳಗೆ ಅತ್ತಿತ್ತ ಓಡಾಡುತ್ತಿರುವಾಗ…ತಿಳಿಸಲಿ ನಾ ಹೇಗೆ ಕನಸಿನ ಅನುಭವಗಳ, ನಾ ಕಂಡ ಕನಸುಗಳೇ ನನಸಾಗದಿರುವಾಗ…ಕಲಿಸಲಿ ನಾ ಹೇಗೆ ಕಷ್ಟ-ನೋವುಗಳಿಂದ ಹೊರಬರುವ ಪಾಠಗಳ, ನನ್ನ ಬದುಕಿನ ತುಂಬಾ ಕಷ್ಟ-ನೋವುಗಳೇ...

ಕನ್ನಡದ ಕಿಚ್ಚು ಹತ್ತಿಸಿದ ಕನ್ನಡ ಮೇಷ್ಟ್ರು

ಅವರ ನಿಜ ನಾಮಧೇಯ ಯಸ್. ವೆಂಕಟರಮಣ ಭಟ್. ಅವರನ್ನು ಎಲ್ಲರೂ ಕರೆಯುತ್ತಿದ್ದದ್ದು ಎಸ್.ವಿ. ಮೇಷ್ಟ್ರು ಎಂಬುದಾಗಿ. ನಾನು ಅಂದಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾರೆ (ಇಂದಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ) ಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ನಮಗೆ ಕನ್ನಡ ಕಲಿಸಿದ ನಮ್ಮ ಪ್ರೀತಿಯ ಎಸ್.ವಿ. ಮೇಷ್ಟ್ರು. ಅವರು ಕನ್ನಡದಲ್ಲಿ ಪಾಠ ಆರಂಭಿಸಿದರೆ ನಾವೆಲ್ಲರೂ...
Ad Widget

ಮಾಜಿ ಸಂಸದ ಪ್ರತಾಪಸಿಂಹ ಸುಳ್ಯಕ್ಕೆ ಆಗಮನ‌- ಮೊಸರು ಕುಡಿಕೆ ಉತ್ಸವದಲ್ಲಿ ಭಾಗಿ

ಸುಳ್ಯಕ್ಕೆ ಆಗಮಿಸಿದ ಮೈಸೂರು ಲೋಕ ಸಭಾಕ್ಷೇತ್ರದ ಮಾಜಿ ಸಂಸದರಾದ ಪ್ರತಾಪಸಿಂಹರನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಭಾರತಿ ಪುರುಷೋತ್ತಮ...

ದ.ಕ. ಜಿಲ್ಲಾ ಶಿಕ್ಷಕ ಪ್ರಶಸ್ತಿ ಪ್ರಕಟ

ಪ್ರೌಢಶಾಲಾ ವಿಭಾಗದಲ್ಲಿ ಸುಬ್ರಹ್ಮಣ್ಯದ ರಘು ಬಿಜೂರುಹಿರಿಯ ಪ್ರಾಥಮಿಕ ವಿಭಾಗದಲ್ಲಿ ಗಾಂಧಿನಗರ ಕೆಪಿಎಸ್‌ನ ಪದ್ಮನಾಭ ಅತ್ಯಾಡಿಕಿರಿಯ ಪ್ರಾಥಮಿಕ ವಿಭಾಗದಲ್ಲಿ ದೊಡ್ಡರಿ ಶಾಲೆಯ ಕೃಷ್ಣಾನಂತ ಶರಳಾಯರಿಗೆ ಪ್ರಶಸ್ತಿ 2024ನೇ ಶಿಕ್ಷಕ ದಿನಾಚರಣೆಯ ಸಂದರ್ಭ ಕೊಡಮಾಡುವ ಜಿಲ್ಲಾ ಶಿಕ್ಷಕ ಪ್ರಶಸ್ತಿಯ ಪಟ್ಟಿ ಪ್ರಕಟಗೊಂಡಿದ್ದು, ಪ್ರೌಢಶಾಲಾ ವಿಭಾಗದಲ್ಲಿ ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಪ್ರೌಢಶಾಲಾ ವಿಭಾಗದ ಶಿಕ್ಷಕ ರಘು ಬಿಜೂರು, ಹಿರಿಯ ಪ್ರಾಥಮಿಕ ವಿಭಾಗದಲ್ಲಿ...

ಮೋಟರ್ ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ ಇದರ ವತಿಯಿಂದ ಸ್ವ ಉದ್ಯೋಗ ಅಥವಾ ಉದ್ಯೋಗ ಮಾಡುವುದಾದರೆ ಮೋಟರ್ ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಯನ್ನು ಆಯೋಜಿಸಲಾಗಿದೆ. ದಿನಾಂಕ 09.09.24 ರಿಂದ 08.10.24ರ ವರೆಗೆ (30ದಿನ) ನಡೆಯುತ್ತದೆ.ವಸತಿ, ಊಟ, ತರಬೇತಿ ಉಚಿತವಾಗಿದ್ದು, 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ. ಭಾಗವಹಿಸಿಸುವುದಾದರೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು...

ಕೇಂದ್ರದ ನರೇಂದ್ರ ಮೋದಿ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆಗಳ ಅಭಿವೃದ್ದಿಗೆ 42 ಕೋಟಿ ರೂ. ಅನುದಾನ ಬಿಡುಗಡೆ: ಸಂಸದ ಕ್ಯಾ. ಚೌಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಟ್ಟು 42 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕ್ಯಾ.ಚೌಟ ಅವರು, ಕೇಂದ್ರ ಸರ್ಕಾರವು, ಕೇಂದ್ರ...

ಶಟ್ಲ್ ಬ್ಯಾಡ್ಮಿಂಟನ್ ನಲ್ಲಿ ಎಸ್‌ಎಸ್‌ಪಿಯು ಮತ್ತು ಕುಮಾರಸ್ವಾಮಿ ಚಾಂಪಿಯನ್ಸ್

ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನಡೆದ ಕಡಬ ತಾಲೂಕು ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಎಸ್‌ಎಸ್‌ಪಿಯು ಕಾಲೇಜು ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಬಾಲಕರ ವಿಭಾಗದಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನಿಯಾಯಿತು.ಬಾಲಕ ಮತ್ತು...

ಗಡಿಕಲ್ಲು ಬಳಿ ರಸ್ತೆ ಬದಿ ಕುಸಿತ – ಅಪಾಯದಲ್ಲಿ ಕಲ್ಮಕಾರು ಕೊಲ್ಲಮೊಗ್ರ ರಸ್ತೆ

ಕಲ್ಮಕಾರು ಕೊಲ್ಲಮೊಗ್ರ ರಸ್ತೆಯ ಗಡಿಕಲ್ಲು ಬಳಿ ರಸ್ತೆ ಬದಿ ಕುಸಿದಿದ್ದು ಅಪಾಯ ಆಹ್ವಾನಿಸುತ್ತಿದೆ. ಎರಡು ವರ್ಷಗಳಿಂದ ರಸ್ತೆ ಬದಿ ಕುಸಿಯಲು ಆರಂಭವಾಗಿದ್ದು, ಇಲಾಖೆ ಮೌನ ವಹಿಸಿದೆ. ಮಳೆ ಇನ್ನೂ ಕಡಿಮೆಯಾಗದಿದ್ದರೇ ಸಂಪರ್ಕ ಕಡಿತಗೊಳ್ಳುವ ಆತಂಕವಿದ್ದು ಸ್ಕೂಲ್ ಬಸ್ ಸೇರಿದಂತೆ ಘನ ವಾಹನ ಚಾಲಕರು ಎಚ್ಚರಿಕೆ ವಹಿಸುವುದು ಒಳಿತು.

ಕನ್ನಡ ಶಾಲೆಗಳ ಕಡೆಗೆ ಮಕ್ಕಳು ಬರಬೇಕಾದರೇ ಶಿಕ್ಷಕರ ಕೊರತೆ ಸರಿಯಾಗಬೇಕಿದೆ – ಪುರುಷೋತ್ತಮ ಬಿಳಿಮಲೆ

ಸುಳ್ಯ ತಾಲೂಕಿನ 12 ಶಾಲೆಗಳಲ್ಲಿ ಶೂನ್ಯ ಶಿಕ್ಷಕರು ಇದ್ದಾರೆ ಅದನ್ನು ಸರಕಾರದ ಗಮನಕ್ಕೆ ತರುವ ಕೆಲಸಗಳನ್ನು ಮಾಡುತ್ತೇನೆ. ಅಲ್ಲದೇ ಅತಿಥಿ ಶಿಕ್ಷಕರ ವೇತನದಲ್ಲಿ ಇದೀಗ ಸರಿಯಾಗಿ ವೇತನ ನಿರ್ದಿಷ್ಟ ದಿನದಂದು ಪಾವತಿಯಾಗದೇ ಇದೆ ಇದನ್ನು ಅಧಿಕಾರಿಗಳಲ್ಲಿ ಮಾತಾನಾಡಿ ಸರಿ ಪಡಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು. ಸರಕಾರಿ ಶಾಲೆಗಳಿಗೆ ಅನುದಾನ...

ಕನ್ನಡ ಭಾಷೆ ಕಲಿಸುವುದರಲ್ಲಿ ನಾವು ಶೇ 50 ರಷ್ಟು ಹಿಂದಿದ್ದೇವೆ – ಬಿಳಿಮಲೆ

ಸುಳ್ಯಕ್ಕೆ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆಯವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಜತೆ ಪತ್ರಕರ್ತರ ಜತೆ ಸಂವಾದ ನಡೆಸಿದರು. ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಕುರಿತಾಗಿ ಮಾತನಾಡಿದರು. ಕನ್ನಡವನ್ನು ಕಲಿಸುವ ಮಾದರಿಯಲ್ಲಿ ನಾವು ಶೇ.50ರಷ್ಟು ಹಿಂದಿದ್ದೇವೆ ಎಂದು ಹೇಳಿದರು.‌ ಅಲ್ಲದೇ ರಾಜ್ಯ ಸರಕಾರಗಳು ಅಂದಿನಿಂದ ಇಂದಿನವರೆಗೆ ಕನ್ನಡದ ಅಭಿವೃದ್ಧಿಗೆ ಬೇಕಾಗಿ ಅನೇಕ...
Loading posts...

All posts loaded

No more posts

error: Content is protected !!