- Saturday
- August 15th, 2026
ಪುತ್ತೂರು: ಓರ್ವ ರಾಯಭಾರಿಯಾಗಿ, ಅಧ್ಯಾಪಕನಾಗಿ, ರಾಜನೀತಿ ನಿಪುಣನಾಗಿ, ಎಲ್ಲರಿಗೂ ಅಚ್ಚುಮೆಚ್ಚಿನವರಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರು ಗುರುತಿಸಿಕೊಂಡಿದ್ದರು. ವಿದ್ಯಾರ್ಥಿಗಳ ಹೃದಯವನ್ನು ತಟ್ಟುವಲ್ಲಿ ಅವರು ನಿಸ್ಸೀಮರಾಗಿದ್ದರು ಮಾತ್ರವಲ್ಲ ಜಗತ್ತು ಕಂಡ ಅತೀ ಶ್ರೇಷ್ಟ ತತ್ವಶಾಸ್ತçಜ್ಞರವರಲ್ಲಿ ಡಾ.ರಾಧಾಕೃಷ್ಣನ್‌ರವರೂ ಕೂಡ ಓರ್ವರಾಗಿದ್ದರು ಎಂದು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಂ ಪೂಜಾರಿರವರು ಹೇಳಿದರು.ಸೆ.೫ ರಂದು ಸಂಪ್ಯದಲ್ಲಿ ಅಕ್ಷಯ...
ದೇಶವನ್ನು ಮುನ್ನಡೆಸಲು ಉತ್ತಮ ಪ್ರಜೆಗಳು ಅಗತ್ಯ. ಪ್ರಜೆಗಳು ದೊರೆಯಬೇಕಿದ್ದರೆ ಅವರಿಗೆ ಉತ್ತಮ ಶಿಕ್ಷಣ ಅಗತ್ಯ. ಅದೇ ಉತ್ತಮ ಶಿಕ್ಷಣ ದೊರೆಯಬೇಕಾದರೆ ಉತ್ತಮ ಶಿಕ್ಷಕರು ಅಗತ್ಯವೆಂಬಂತೆ ಇಲ್ಲಿ ನಾನೊಬ್ಬ ಶಿಕ್ಷಕನಾಗಿ ಹೇಳುವುದಾದರೆ ಇಪ್ಪತ್ತು ವರ್ಷದ ಹಿಂದೆ ನಾನು ಶಾಲೆಗೆ ಹೋಗುವ ಸನ್ನಿವೇಶದ ಕೆಲವೊಂದು ತುಣುಕುಗಳು ಗರಿಗೆದರುತ್ತೀವೆ. ನನ್ನ ಶಾಲಾ ದಿನದಲ್ಲಿ ಕಲಿಕೆಗೆ ಪೂರಕವಾದ ವ್ಯವಸ್ಥೆಯೂ ಇರಲಿಲ್ಲ. ಅಲ್ಲದೆ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶದೊಂದಿಗೆ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024 -25 ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ದಿನಾಂಕ 05.08.2024 ರಂದು ಹಮ್ಮಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ದಿನೇಶ ಪಿ ಟಿ. ವಹಿಸಿದರು, ಉದ್ಘಾಟಕರಾಗಿ ನಿವೃತ್ತ ಪ್ರಾಂಶುಪಾಲ ಎಂ .ಬಿ ಅಶೋಕ್ ಕುಮಾರ್ ಅವರು...
ಪ್ರತಿಯೊಬ್ಬ ಸಾಧಕನ ಜೀವನದ ಗುರಿ ಗುರು ಹಾಕಿಕೊಟ್ಟ ಮಾರ್ಗದ ಮೇಲೆಯೇ ನಡೆಯುತ್ತದೆ. ಗುರುವಿನ ಸಹಾಯವಿಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ ಎಂದು ಬೆಳ್ಳಾರೆ ಅಜಪಿಲ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಬಿ ಸುಬ್ರಹ್ಮಣ್ಯ ಜೋಶಿ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ಅಜಪಿಲ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಆಡಳಿತದಲ್ಲಿ ನಡೆಸಲ್ಪಡುತ್ತಿರುವ...
ವಿಕ್ರಮ ಯುವಕ ಮಂಡಲ(ರಿ.) ಬಾರ್ಪಣೆ ಇದರ ಆಶ್ರಯದಲ್ಲಿ ಮಿತ್ರ ಭಜನಾ ಮಂಡಳಿ(ರಿ.) ಬಾರ್ಪಣೆ, ಮಿತ್ರ ಕಲಾ ವೇದಿಕೆ ಬಾರ್ಪಣೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ಎ’ ಒಕ್ಕೂಟ ಆಲೆಟ್ಟಿ ಇವುಗಳ ಸಹಕಾರದೊಂದಿಗೆ ಸೆ.07 ರಂದು 20ನೇ ವರ್ಷದ ಶ್ರೀ ಗಣೇಶ ಚತುರ್ಥಿಯು ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿವಿಧ ಕ್ರೀಡಾ ಸ್ಪರ್ಧೆ,...
ಎಲಿಮಲೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಮರ್ಕಂಜದ ಬಳ್ಳಕ್ಕ ದೇವಪ್ಪ ಮಾಸ್ಟರ್ ಗೆ ಶಿಕ್ಷಕರ ದಿನಾಚರಣೆಯಂದು ಗೌರವ ಸಲ್ಲಿಸಲಾಯಿತು. ಶಿಕ್ಷಕರ ಮನೆಗೆ ತೆರಳಿದ ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ರಾಮಕೃಷ್ಣ ಅಂಬೆಕಲ್ಲು, ಕೇಶವ ಕಾಯರ, ಶೀಲಾವತಿ ರಾಮಕೃಷ್ಣ, ಧರ್ಮಪಾಲ ಮೆದು ಅವರು ದಂಪತಿಗಳಿಗೆ ಸನ್ಮಾನಿಸಿದರು.
ಕಲ್ಲು ಕಲ್ಲೆಂದರೆ ಕಲ್ಲಲ್ಲಿಹುದೇ ದೈವ|ಕಲ್ಲಲ್ಲಿ ಕಲೆಯ ನಿಲ್ಲಿಸಿದ ಗುರುವಿನಸೊಲ್ಲಲ್ಲೇ ದೈವ ಸರ್ವಜ್ಞ || ಮಗದೊಮ್ಮೆ ಶಿಕ್ಷಕರ ದಿನಾಚರಣೆ ಬಂದಿದೆ. ಮತ್ತದೇ ಹಾರ, ತುರಾಯಿ, ಬಿರುದು ಬಾವಲಿಗಳು ಒಂದಷ್ಟು ಶಿಕ್ಷಕರನ್ನು ವೇದಿಕೆಗೆ ಕರೆತಂದು ಹೊಗಳಿ ಹೊನ್ನಶೂಲಕ್ಕೆ ಏರಿಸಿ ಸನ್ಮಾನ ಮಾಡುವುದು ಸಂಪ್ರದಾಯವಾಗಿ ಬಿಟ್ಟಿದೆ. ಮರುದಿನದಿಂದ ಮತ್ತದೇ ರಾಗ, ಮತ್ತದೇ ಹಾಡು. ಶಿಕ್ಷಕರನ್ನು ಕೈ ಕಾಲು ಬಾಯಿ ಕಟ್ಟಿ...
ವರಮಹಾಲಕ್ಷ್ಮೀ ಪೂಜಾ ಸಮಿತಿ ಮೇನಾಲ ಇದರ ನೂತನ ಸಮಿತಿ ರಚನೆ ಯಾಗಿದ್ದು ಅಧ್ಯಕ್ಷರಾಗಿ ಬೇಬಿ ಸುಕುಮಾರ್ ಕಲ್ಲಗುಡ್ಡೆ ಆಯ್ಕೆಯಾಗಿದ್ದಾರೆ. ಸಮಿತಿಯ ಕಾರ್ಯದರ್ಶಿಯಾಗಿ ಅನೀತಾ ಸತೀಶ್ ಪೂಜಾರಿ ಹಾಗೂ ಖಜಾಂಜಿಯಾಗಿ ದಿವ್ಯ ಚೇತನ್ ಆಮೇಮನೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ರಾಗಿ ನಳಿನಿ ಸತ್ಯನಾರಾಯಣ ಹಾಗು ಶೋಭಾ ರಾಮಚಂದ್ರ ಜತೆ ಕಾರ್ಯದರ್ಶಿಯಾಗಿ ಗೀತಾ ಸೀತಾರಾಮ ಬೀನಡ್ಕ ಹಾಗೂ ದೇವಕಿ ಗುರುವಪ್ಪ...
ಗೂನಡ್ಕದ ಶಾಲಾ ಬಳಿ ಖಾಸಗಿ ಬಸ್ ಹಾಗೂ ಓಮಿನಿ ಮುಖಾಮುಖಿ ಢಿಕ್ಕಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ಕಾಸರಗೋಡಿನಿಂದ ಬೆಂಗಳೂರಿಗೆ ಹೊರಟ ಕೊಹಿನೂರ್ ಖಾಸಗಿ ಬಸ್ ಗೆ ಓಮಿನಿ ಢಿಕ್ಕಿಯಾಗಿದೆ. ಓಮಿನಿಯಲ್ಲಿದ್ದ ಬೆಳ್ಳಾರೆಯ ಮೂವರಿಗೆ ಗಾಯಗಳಾಗಿವೆ. ಅಪಘಾತದ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ತಾಜುದ್ದೀನ್ ಟರ್ಲಿ ಗಾಯಾಳುಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
https://youtu.be/S0EXVgHO9cc?si=WlvVNp64ZuBY3our ಸುಳ್ಯ : ವಿಶ್ವಹಿಂದು ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಜೃಂಭಣೆಯ ಮೊಸರು ಕುಡಿಕೆ ಉತ್ಸವ ನಡೆಯಿತು. ಸುಳ್ಯದ ರಸ್ತೆಯುದ್ದಕ್ಕೂ ಶೋಭಾಯಾತ್ರೆ ನಡೆದು ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಮೊಸರು ಕುಡಿಕೆ ಉತ್ಸವ ಸಂಪನ್ನಗೊಂಡಿತು. ಮೊಸರು ಕುಡಿಕೆ ಉತ್ಸವದಲ್ಲಿ ಹಿಂದು ಯುವಕರಿಂದ ಮಾನವ ಪಿರಮಿಡ್ ನಿರ್ಮಿಸಿ ಸುಳ್ಯದ 17...
Loading posts...
All posts loaded
No more posts
