- Thursday
- August 13th, 2026
ಕಡಬ ತಾಲೂಕು ಯೇನೆಕಲ್ ಗ್ರಾಮದ ಮಲ್ಲಾರ - ಕಡಂಬಿಲ - ಕಜ್ಜೋಡಿ ರಸ್ತೆಗೆ ರಾಜ್ಯಸಭಾ ಸಂಸತ್ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ರ ಪ್ರದೇಶಾಭಿವೃದ್ಧಿ ನಿಧಿಯಿಂದ 4 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ತಾ.ಪಂ.ಮಾಜಿ ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮನೋಹರ ನಾಳ, ರಾಮಯ್ಯ ಮಾದನಮನೆ, ಗಂಗಾಧರ...
ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಜನವರಿ 18ರಂದು ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಕೂಸಪ್ಪ ಗೌಡ,ಅಧ್ಯಕ್ಷರು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೃಷ್ಣ ಕುಂಪದವು, ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು....
ಸುಬ್ರಹ್ಮಣ್ಯ, ಜ.17 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಸೋಮವಾರ ಬೇಟಿ ನೀಡಿ ಶ್ರೀ ದೇವರ ದರುಶನ ಪಡೆದರು. ಈ ಸಂದರ್ಭದಲ್ಲಿ ಸಚಿವರನ್ನು ಸಚಿವ ಎಸ್.ಅಂಗಾರ ಅವರು ದೇವಳದ ವತಿಯಿಂದ ಸ್ವಾಗತಿಸಿದರು. ಸಚಿವ ಸಿ.ಸಿ. ಪಾಟೀಲ್ ದೇವಸ್ಥಾನದ ಆಡಳಿತ ಕಛೇರಿ ಸಭಾಂಗಣದಲ್ಲಿ ದೇವಸ್ಥಾನದ ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಉಪಸ್ಥಿತಿಯಲ್ಲಿ...
ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ 5ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಸಪ್ತಾಹ ನಡೆದು ಜ.21ರಂದು ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ಜರುಗಲಿದೆ. ಸಂಜೆ 5.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಸಭಾಧ್ಯಕ್ಷತೆಯನ್ನು ಸಾರ್ವಜನಿಕ ದೇವತಾರಾಧನ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಗೌರವಾಧ್ಯಕ್ಷರಾದ ಯು.ರಾಧಾಕೃಷ್ಣ ರಾವ್ ಉಡುವೆಕೋಡಿ...
ದೂರ ಇನ್ನು ದೂರ ಹೊರಟೆ ನಾನು ಎಲ್ಲ ತೊರೆದು…ಭಾರ ಬದುಕು ಭಾರ ವಿಧಿಯ ಆಟ ತುಂಬಾ ಕ್ರೂರ…ಸಾವು - ನೋವ ನಡುವೆ ಬದುಕು ತುಂಬಾ ಘೋರ…ಮನದ ಒಳಗೆ ಸುಟ್ಟು ಹೋದ ನೆನಪೇ ಭಾರ, ಆ ನೆನಪೇ ಭಾರ… ಕಳೆದು ಹೋದ ಖುಷಿಯ ಕ್ಷಣವು ಮರಳಿ ಎಂದೂ ಬಾರದು, ನನ್ನ ನೋವನೆಂದೂ ಮರೆಸದು…ಬೀಸಿ ಬರುವ ಅಲೆಯ ಎದುರು...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜ.16 ರಂದು ಆರಂಭಗೊಂಡಿದ್ದು ಜ.21 ಶುಕ್ರವಾರದ ತನಕ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ದೇವಸ್ಥಾನದಲ್ಲಿ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಉಳ್ಳಾಕುಲು ದೈವದ ಭಂಡಾರ ಬರುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 12.00ಕ್ಕೆ ಶ್ರೀ ದೇವರಿಗೆ...
ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ 5ನೇ ವಾರ್ಷಿಕೋತ್ಸವದ ಅಂಗವಾಗಿ ರಾಮಾಯಣ ಸಪ್ತಾಹ ಕಾರ್ಯಕ್ರಮ ಜ. 17ರಂದು ಉದ್ಘಾಟನೆಯಾಯಿತು. ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು ದೀಪ ಬೆಳಗಿಸಿ ಸಪ್ತಾಹವನ್ನು ಉದ್ಘಾಟಿಸಿದರು. ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಗೌರವಾಧ್ಯಕ್ಷ ಯು. ರಾಧಾಕೃಷ್ಣ ರಾವ್ ಉಡುವೆಕೋಡಿಯವರು ಅಧ್ಯಕ್ಷತೆ...
ಯುವ ವಕೀಲರಾದಪ್ರದೀಪ್ ಕುಮಾರ್ ಕೆ ಎಲ್ ರವರ ಕಾನೂನು ಸಲಹಾ ಕಛೇರಿ ಇಂದು ಗುತ್ತಿಗಾರಿನ ಪ್ರಶಾಂತ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.ಆಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಚಿದಾನಂದ ಕೆ ವಿ ಉದ್ಘಾಟಿಸಿದರು. ಗುತ್ತಿಗಾರು ರಬ್ಬರ್ ಬೆಳೆಗಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷ...
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿ ಹೊಂದಿರುವ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಚಂದ್ರ ಕೋಲ್ಚಾರ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜ.16ರಂದು ಸಂಘದ ಸಭಾಂಗಣದಲ್ಲಿ ನಡೆದ ನಿರ್ದೇಶಕರ...
Loading posts...
All posts loaded
No more posts
