- Monday
- August 17th, 2026
ರಾಜ್ಯದ್ಯಾಂತ ನಡೆಯುತ್ತಿರುವ ಹಿಂದೂ ಸಂಘಟನೆಯ ಸದಸ್ಯರ ಹತ್ಯೆ ಹಾಗೂ ಬೆಳ್ಳಾರೆ ಯಲ್ಲಿ ನಡೆದ ಪ್ರವೀಣ್ ನೆಟ್ಟಾರ್ ಕೊಲೆ ನಡೆದಿದ್ದರೂ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವ ಬಗ್ಗೆ ಅಸಮಾಧಾನ ಹೊಂದಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕೊಲ್ಲಮೊಗ್ರ ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉದಯ ಶಿವಾಲ ಅಮರ ಸುದ್ದಿಗೆ ತಿಳಿಸಿದ್ದಾರೆ.
ಬೆಳ್ಳಾರೆ: ನಳೀನ್ ಕುಮಾರ್ ಕಟೀಲ್, ಸಚಿವ ಎಸ್ ಅಂಗಾರ ಹಾಗೂ ಮತ್ತಿತರ ನಾಯಕರಿಗೆ ಹಿಂದೂ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ನಡೆಯಿತು. ಈರ್ ರಡ್ ದಿನ ಬತ್ ಪೋಪಾರ್. ಬಕ್ಕ ನರಕ ನಮ ಬರೋಡು ಎಂದು ಕಾರ್ಯಕರ್ತರು ಗಟ್ಟಿ ದನಿಯಲ್ಲಿ ಬೊಬ್ಬೆ ಹೊಡೆದರು. ಒಂದಷ್ಟು ಹೊತ್ತು ನೆಟ್ಟಾರು ಮನೆ ಬಳಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು. ಕಾರ್ಯಕರ್ತರ...
ಬೆಳ್ಳಾರೆ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಸ್ಕೆಚ್ ಹಾಕಿರುವ ಆರೋಪಿಗಳನ್ನು ಇಂದು ಸಂಜೆ ಕೋರ್ಟ್ ಗೆ ಹಾಜರು ಪಡಿಸಲು ಪುತ್ತೂರು ಕೋರ್ಟ್ ಗೆ ಕರೆದೊಯ್ಯಲಾಗಿದೆ. ತನಿಖಾ ದೃಷ್ಟಿಯಿಂದ ಪೊಲೀಸರು ಮಾಧ್ಯಮಕ್ಕೆ ಹೆಚ್ಚಿನ ಮಾಹಿತಿ ನೀಡಿಲ್ಲ.
ಬೆಳ್ಳಾರೆ: ಪ್ರವೀಣ್ ನೆಟ್ಟಾರು ಅವರ ಹತ್ಯೆಯ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಂಡಿದೆ. ಈಗಾಗಲೇ ಪ್ರಾಥಮಿಕ ತನಿಖೆ ಮುಗಿದಿದ್ದು ಕೃತ್ಯಕ್ಕೆ ಸಹಕರಿಸಿದವರನ್ನು ಬಂಧಿಸಲಾಗಿದೆ. ಈ ಜಾಲ ದೇಶಾದ್ಯಂತವೂ ಹಬ್ಬಿದ್ದು ನಮ್ಮ ಸರಕಾರ ಬರೀ ಹೇಳುವುದಲ್ಲ.ಅವರನ್ನು ಮಟ್ಟ ಹಾಕಿಯೇ ತೀರುತ್ತೇವೆ ಎಂದು ಸಿ.ಎಂ ಬಸವರಾಜ ಬೊಮ್ಮಾಯಿ ಹೇಳಿದರು.ನೆಟ್ಟಾರಿನ ಪ್ರವೀಣ್ ಅವರ ಮನೆಗೆ ಸಿಎಂ ಭೇಟಿ ನೀಡಿ ಮನೆಯವರಿಗೆ...
ಕೊಲೆ ಆರೋಪಿ ಶಫಿಕ್ ಬಂಧನವಾಗುತ್ತಲೆ ಆಕ್ರೋಶಗೊಂಡ ಗುತ್ತಿಗಾರಿನ ಹಿಂದೂ ಸಂಘಟನೆಗಳು ಆತ ಕೆಲಸ ಮಾಡುತ್ತಿದ್ದ ಅಡಿಕೆ ಅಂಗಡಿ ಸೇರಿದಂತೆ ಅನ್ಯ ಧರ್ಮೀಯರ ಎಲ್ಲಾ ಅಂಗಡಿಗಳನ್ನು ಹಾನಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 500 ಕ್ಕು ಮಿಕ್ಕಿ ಕಾರ್ಯಕರ್ತರು ಆಕ್ರೋಶಿತರಾಗಿ ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ.
ಗುತ್ತಿಗಾರಿನ ಅಬೂಬಕ್ಕರ್ ಬೆಳ್ಳಾರೆ ಮಾಲಕತ್ವದ ಪ್ರಗತಿ ಎಂಟರ್ ಪ್ರೈಸಸ್ ಅಡಿಕೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಶಫೀಕ್ ಬೆಳ್ಳಾರೆ ಕೊಲೆ ಆರೋಪದಲ್ಲಿ ಬಂದಿತರಾಗುತ್ತಿದ್ದಂತೆ ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸಂಘಟನೆ ಸದಸ್ಯರು ಸೇರಿ ಅಂಗಡಿಗೆ ಹಾನಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರವೀಣ್ ಪೂಜಾರಿ ಕೊಲೆ ಸಂಬಂಧಿಸಿದಂತೆ ಬೆಳ್ಳಾರೆಯಲ್ಲಿ ಜು.27ರಂದು ನಡೆದ ಲಾಠಿಚಾರ್ಜ್ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಇಬ್ಬರು ಕಾರ್ಯಕರ್ತರನ್ನು ಸಚಿವ ಎಸ್.ಅಂಗಾರ ಅವರು ಜು.27 ರಂದು ರಾತ್ರಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಗುತ್ತಿಗಾರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೊಲೆ ಆರೋಪಿ ಗುತ್ತಿಗಾರು ಪ್ರಗತಿ ಎಂಟರ್ ಪ್ರೈಸಸ್ ಉದ್ಯೋಗಿಯಾಗಿರುವ ಶಫೀಕ್ ಬೆಳ್ಳಾರೆ ಕೊಲೆ ಆರೋಪದಲ್ಲಿ ಬಂಧಿತನಾಗಿರುವುದು ಗುತ್ತಿಗಾರಿನ ಜನತೆಗೆ ತಿಳಿಯುತ್ತಿದ್ದಂತೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Loading posts...
All posts loaded
No more posts
