ಜು.31 : ಉಬರಡ್ಕದಲ್ಲಿ ಉಚಿತ ನೇತ್ರಾ ತಪಾಸಣಾ ಶಿಬಿರ

ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜು.31 ನೇ ಆದಿತ್ಯವಾರದಂದು ಪೂರ್ವಾಹ್ನ 9.00ರಿಂದ 1.00ರ ತನಕ ನಡೆಯುವ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಎಡಮಂಗಲ : ಸಹಕಾರಿ ಸಂಘದ ಸಿಬ್ಬಂದಿ ಕುಶಾಲಪ್ಪ ನಾಯ್ಕ ಬೀಡು ನಿವೃತ್ತಿ – ಸನ್ಮಾನ

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಿರಿಯ ಗುಮಾಸ್ತ ಹುದ್ದೆಯಲ್ಲಿದ್ದ ಕುಶಾಲಪ್ಪ ನಾಯ್ಕ ಬೀಡು ಇಂದು ಸೇವೆಯಿಂದ ನಿವೃತ್ತರಾದರು. ಇವರನ್ನು ಸಂಘದ ಪರವಾಗಿ ಗೌರವ ಪೂರಕವಾಗಿ ಬೀಳ್ಕೊಡಲಾಯಿತು. ಈ ಸಂದಂರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಮಕೃಷ್ಣರೈ ಮಾಲೆಂಗಿ, ಉಪಾಧ್ಯಕ್ಷರಾದ ಸುಮಾ ನೂಚಿಲ, ನಿರ್ದೇಶಕರಾದ ಪದ್ಮಯ್ಯ ನಾಯ್ಕ ಮುಳಿಯ, ಅವಿನಾಶ್ ದೇವರಮಜಲು, ತ್ಯಾಗರಾಜ್ ಬದ್ದೂಕು, ಪುರಂದರ ರೈ...
Ad Widget

ಪ್ರವೀಣ್ ಹತ್ಯೆಗೆ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡನೆ

ಯುವ ಬಿಜೆಪಿ ಮುಂದಾಳು ಪ್ರವೀಣ್ ನೆಟ್ಟಾರು ಹತ್ಯೆಯನ್ನು ಕ್ರೀಡಾ ಮತ್ತು ಕಲಾಪೋಷಕರಾದ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರವೀಣ್ ಹಂತಕರನ್ನು ಕೂಡಲೇ ಬಂಧಿಸಿ ನಡುರಸ್ತೆಯಲ್ಲೇ ಎನ್ ಕೌಂಟರ್ ಮಾಡಬೇಕು, ಅದಾಗಲೇ ‌ಮೃತನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವವರೆಗೆ ಪಕ್ಷ ಚಟುವಟಿಕೆಗಳಿಂದ ದೂರ ಇರಲು ನಿರ್ಧರಿಸಿದ ಅಡ್ತಲೆ ಬೂತ್ ಸಮಿತಿ

ರಾಜ್ಯದಲ್ಲಿ ನಮ್ಮದೇ ಪಕ್ಷದ ಸರಕಾರವಿದ್ದರೂ ನಿರಂತರವಾಗಿ ಹಿಂದೂ ಸಂಘಟನೆಗಳ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ನಮ್ಮ ತಾಲೂಕಿನ ಹಿಂದೂ ಸಂಘಟನೆ ಕಾರ್ಯಕರ್ತ ಮತ್ತು ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಪ್ರವೀಣ್ ನೆಟ್ಟಾರ್ ರವರ ಹತ್ಯೆ ಇದಕ್ಕೆ ಇನ್ನೊಂದು ಸೇರ್ಪಡೆ, ಇದುವರೆಗಿನ ಕೃತ್ಯ ನಡೆಸಿದ ಯಾವುದೇ ಹಂತಕರಿಗೂ ಕಠಿಣವಾದ ಶಿಕ್ಷೆ ಆಗಲೇ ಇಲ್ಲ. ಇದು ಬರೀ...

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಮುಂದೂಡಿಕೆ

ಜು. 31ರಂದು ದ್ವಾರಕಾ ಸಭಾ ಭವನದಲ್ಲಿ ನಡೆಸಲು ಉದ್ದೇಶಿಸಿರುವ ವಾರ್ಷಿಕ ಮಹಾಸಭೆ ಹಾಗೂ ಸಂಘದಿಂದ ಅನಾರೋಗ್ಯ ಪೀಡಿತರೀಗೆ ನೀಡುವ ಆರೋಗ್ಯನಿಧಿ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಹೇರಿಕೆಯಲ್ಲಿರುವ ಕಾರಣ ಮುಂದೂಡಲಾಗಿದೆ.ಸಂಘದ ಸದಸ್ಯರುಗಳು ಹಾಗೂ ಸಮುದಾಯ ಬಾಂಧವರು ಸಹಕರಿಸಬೇಕೆಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡುವಾಗ ಎಲ್ಲರಿಗೂ ಸಮಾನವಾಗಿ ಏಕಮಾತ್ರ ತೀರ್ಮಾನ ಮಾಡಬೇಕು-ಭರತ್ ಮುಂಡೋಡಿ

ಬ್ಲಾಕ್ ಕಾಂಗ್ರೆಸ್ ವತಿಯಿಂದ ಜು.30ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಧನಂಜಯ ಅಡ್ಪಂಗಾಯ ಮಾತನಾಡಿ, ಬೆಳ್ಳಾರೆಯು ಸುಳ್ಯ ತಾಲೂಕಿಗೆ ಇಂದು ಕಪ್ಪು ಚುಕ್ಕಿ ತಂದಿದೆ. ಧರ್ಮದ ಹೆಸರಿನಲ್ಲಿ, ರಾಜ್ಯ ಧರ್ಮದ ನೆಲೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ಚುನಾವಣಾ ಭಾಷಣಗಳು ಮತ್ತು ಪ್ರಚೋದನೆ ಭಾಷಣ ಬದಲಿಗೆ ದೇಶದ ಅಭಿವೃದ್ಧಿಯ ಭಾಷಣ ನಡೆದರೆ ಇಂತಹ ಕೊಲೆ...

ಜು.31 : ಅಂಬಟೆಡ್ಕದ ಕನ್ನಡ ಭವನದಲ್ಲಿ ನಡೆಯಬೇಕಾಗಿದ್ದ ವಿಚಾರಗೋಷ್ಠಿ ಮುಂದೂಡಿಕೆ

ಜು.31 : ಅಂಬಟೆಡ್ಕದ ಕನ್ನಡ ಭವನದಲ್ಲಿ ನಡೆಯಬೇಕಾಗಿದ್ದ ವಿಚಾರಗೋಷ್ಠಿ ಮುಂದೂಡಿಕೆ ದ. ಕ ಜಿಲ್ಲಾಧಿಕಾರಿಯರ ಆದೇಶದಂತೆ ದ. ಕ ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿರುವುದರಿಂದ ಜು.31 ರಂದು ಸುಳ್ಯದ ಅಂಬಟೆಡ್ಕ ಕನ್ನಡ ಭವನದಲ್ಲಿ ನಡೆಯಬೇಕಿದ್ದ 1837ರ ಅಮರ ಸುಳ್ಯ ಹೋರಾಟದ ಕುರಿತಾದ ವಿಚಾರಗೋಷ್ಠಿ ಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ದಿನಾಂಕ ವನ್ನು ತಿಳಿಸಲಾಗುವುದು. ಕಾರ್ಯಕ್ರಮದ ಸಂಚಾಲಕರು ಪ್ರಕಟಣೆಯಲ್ಲಿ...

ಪ್ರವೀಣ್ ಹತ್ಯೆ ಸಂಬಂಧಿಸಿದಂತೆ ಕೇರಳ ಮೂಲದ ವ್ಯಕ್ತಿ ಬಂಧನ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು. ಇದೀಗ ಕೇರಳ ಕಣ್ಣೂರಿನ ತಲಶ್ಯೇರಿ ಯಲ್ಲಿ ಕೋಳಿ ಫಾರ್ಮ್ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಕರೆತರುತ್ತಿದ್ದಾರೆ ಎಂದು ವರದಿಯಾಗಿದೆ. ತಲಶ್ಯೇರಿಯ ಪರಲ್ ನಿವಾಸಿ ಅಬೀದ್ ಬಂಧಿತ ವ್ಯಕ್ತಿ. ಎನ್.ಐ.ಎ ಗೆ ಪ್ರಕರಣ ವಹಿಸಿದ ನಂತರ ತನಿಖೆ ಇನ್ನಷ್ಟೂ ವೇಗ...

ಇಂದು (ಜು.30) ಸುಳ್ಯದಲ್ಲಿ ಕರೆಂಟಿಲ್ಲ

ಸುಳ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕಾವು,ಅಜ್ಜಾವರ, ಡಿಪೋ, ಕೇರ್ಪಳ, ಜಬಳೆ, ಕೇನ್ಯ, ಮಂಡೆಕೋಲು, ಶ್ರೀರಾಂಪೇಟೆ, ಸಂಪಾಜೆ, ಅರಂತೋಡು ಹಾಗೂ ಕೋಲ್ಚಾರು ಪೀಡರ್ ಗಳಲ್ಲಿ ದುರಸ್ತಿ ಕಾರ್ಯ ಹಾಗೂ ಟ್ರೀಕಟ್ಟಿಂಗ್ ಕಾರ್ಯ ಹಮ್ಮಿಕೊಂಡಿರುವುದರಿಂದ ಜು.30ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸುಳ್ಯ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಮಡಪ್ಪಾಡಿ: ಬೂತ್ ಸಮಿತಿ ಅಧ್ಯಕ್ಷ ಹುದ್ದೆಗೆ ಧನ್ಯಕುಮಾರ್ ದೇರುಮಜಲು ರಾಜೀನಾಮೆ

ರಾಜ್ಯದ್ಯಾಂತ ನಡೆಯುತ್ತಿರುವ ಹಿಂದೂ ಸಂಘಟನೆಯ ಸದಸ್ಯರ ಹತ್ಯೆ ಹಾಗೂ ಬೆಳ್ಳಾರೆ ಯಲ್ಲಿ ನಡೆದ ಪ್ರವೀಣ್ ನೆಟ್ಟಾರ್ ಕೊಲೆ ನಡೆದಿದ್ದರೂ ಪಕ್ಷಕ್ಕಿಂತ ಹಿಂದುತ್ವ ಮುಖ್ಯ ಇನ್ನೆಷ್ಟು ಹೆಣಗಳು ಬೇಕು ಸಾಮಾನ್ಯ ಕಾರ್ಯಕರ್ತರದ್ದು ಇಂದು ಪ್ರವೀಣ್ ನೆಟ್ಟಾರು ನಾಳೆ ನಾವು ಇಷ್ಟೇ ಜೀವನ, ಇಂದು ಪ್ರವೀಣ್ ಅಣ್ಣನಿಗೆ ಬಂದ ಪರಿಸ್ಥಿತಿ ನಮಗೆ ಬರುವುದು ಬೇಡ, ಕರ್ನಾಟಕ ಬಿಜೆಪಿಯ ಬೊಗಳೆ...
Loading posts...

All posts loaded

No more posts

error: Content is protected !!