ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಓಣಂ ಆಚರಣೆ

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸೆ.10ರಂದು ಓಣಂ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಪ್ರಾಂಶುಪಾಲ ಅರುಣ್ ಕುಮಾರ್ ದೀಪ ಪ್ರಜ್ವಲಿಸಿ ಓಣಂ ಆಚರಣೆಯ ಮಹತ್ವವನ್ನು ತಿಳಿಸಿದರು. 9ನೇ ತರಗತಿಯ ವಿದ್ಯಾರ್ಥಿನಿಯರ ತಿರುವಾದ್ದಿರಾ ನೃತ್ಯವು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು. ಕೆವಿಜಿ ಪ್ಲೇಹೋಂ ನಿಂದ ಹತ್ತನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಶಿಕ್ಷಕೇತರ...

ಬೆಳ್ಳಾರೆ : ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ವಾರ್ಷಿಕ ಮಹಾಸಭೆ

ಕುಲಾಲ ಸುಧಾರಕ ಸೇವಾ ಸಂಘದ ವಾರ್ಷಿಕ ಮಹಾಸಭೆ ಸೆ.11ರಂದು ಬೆಳ್ಳಾರೆ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು. ಸಭಾ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶೈಲೇಶ್ ನೆಟ್ಟಾರುರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಣಿ ಕುಲಾಲ ಸಂಘದ ಗೌರವಾಧ್ಯಕ್ಷ ಶ್ರೀರಾಮಚಂದ್ರ ಮಾಸ್ಟರ್, ಗಣೇಶ ನಗರ ಮತ್ತು ಹಾರಾಡಿ ಸ.ಹಿ.ಪ್ರಾ.ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸುಭಾಲತ ಉಪಸ್ಥಿತರಿದ್ದರು.ಅತ್ಯಧಿಕ ಅಂಕ ಪಡೆದ...
Ad Widget

ಜೆಸೀಐ ಸುಳ್ಯ ಸಿಟಿ ವತಿಯಿಂದ ಹಸಿರೇ ಉಸಿರು ಗಿಡ ನೆಡುವ ಕಾರ್ಯಕ್ರಮ

ಸಪ್ತಹದ ನಾಲ್ಕನೇ ದಿನದ ಕಾರ್ಯಕ್ರಮ ಹಸಿರೇ ಉಸಿರು ಗಿಡ ನೆಡುವ ಕಾರ್ಯಕ್ರಮವು ಜೆ ಸಿ ಐ ಸುಳ್ಯ ಸಿಟಿ ವತಿಯಿಂದ ಬಲ್ಲಡ್ಕದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಸಿಟಿ ಉಪಾಧ್ಯಕ್ಷರಾದ ಅಶ್ವತ್ ಅಡ್ಕಾರ್ ವಹಿಸಿದರು. ಅಭಿಜ್ಞಾ ಬೊಮ್ಮೆಟ್ಟಿ ಕಾರ್ಯಕ್ರಮವನ್ನು ಗಿಡ ನೆಡುವುದರೊಂದಿಗೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ಪ್ರಮೀಳಾ ಮನಮೋಹನ್ ಅಧ್ಯಾಪಕರಾದ...

ಜಯನಗರ : ಉಚಿತ ಆರೋಗ್ಯ ತಪಾಸಣಾ ಶಿಬಿರ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರೋಟರಾಕ್ಟ್ ಕ್ಲಬ್ ಸುಳ್ಯವಿಕ್ರಮ ಯುವಕ ಮಂಡಲ ಜಯನಗರ,ಹಳೆಗೇಟು ಮಿಲಿಟರಿ ಗೌಂಡ್ ನಿವಾಸಿಗಳು ಇವರ ಸಹಯೋಗದೊಂದಿಗೆ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮಿಲಿಟರಿ ಗೌಂಡ್ ಪರಿಸರದಲ್ಲಿ ಸೆ. 11ರಂದು ನಡೆಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ...

ಸುಳ್ಯ ಜೇಸಿಐ ವತಿಯಿಂದ ಮಾಹಿತಿ ಕಾರ್ಯಾಗಾರ

ಬಿ. ಸಿ. ಯಂ ಹಾಸ್ಟೆಲ್, ಕುರುಂಜಿಭಾಗ್ ಸುಳ್ಯ ಇಲ್ಲಿನ ವಿಧ್ಯಾರ್ಥಿನಿಯರಿಗಾಗಿ ಸೆ. 11 ರಂದು 'ನಾಯಕತ್ವ & ಹದಿಹರೆಯದ ಮಕ್ಕಳ ಸಮಸ್ಯೆ ಗಳು ಹಾಗೂ ಪರಿಹಾರದ ಬಗ್ಗೆ ಮಾಹಿತಿ ಕಾರ್ಯಾಗಾರ ಜೇಸಿಐ ಸುಳ್ಯ ಪಯಸ್ವಿನಿಯ ಜೇಸಿಐ ಸಪ್ತಾಹ, ನಮಸ್ತೆ ಇದರ ಅಂಗವಾಗಿ ಹಮ್ಮಿಕೊಳ್ಳಲಾಯಿತು.ಮೇಲಿನ ಜಂಟಿ ತರಬೇತಿಯನ್ನು ಜೇಸಿಐ ವಲಯ 15ರ ವಲಯ ತರಬೇತುದಾರರಾದ ಜೇಸಿ ಪ್ರದೀಪ್...

ಅಡ್ಕಾರು: ಅಯ್ಯಪ್ಪ ಮಂದಿರದ ಪರಿಸರದಲ್ಲಿ ಸ್ವಚ್ಛತಾ ಕಾರ್ಯ

ಜಾಲ್ಲೂರು ಗ್ರಾಮದ ಅಡ್ಕಾರು ಅಯ್ಯಪ್ಪ ಮಂದಿರದ ಪರಿಸರದಲ್ಲಿ ಸ್ವಚ್ಛತಾ ಕಾರ್ಯವು ಸೆ.11ರಂದು ಜರುಗಿತು. ಸ್ಥಳೀಯರು ಸೇರಿ ಅಯ್ಯಪ್ಪ ಮಂದಿರದ ಸುತ್ತಮುತ್ತಲಿನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಅಡ್ಕಾರು, ಪ್ರ. ಕಾರ್ಯದರ್ಶಿ ಮನು ಪದವು, ಚಂದ್ರಶೇಖರ ಅಡ್ಕಾರು, ವಾಸುನಾಯ್ಕ, ಕಿರಣ ಬೆಳ್ಳಿಪ್ಪಾಡಿ, ಹರೀಶ ಕೋನಡ್ಕಪದವು, ಹರೀಶ್ ಕಲ್ಲಡ್ಕ, ಕರುಣಾಕರ...

ಎನ್ನೆಂಸಿಯಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 2022-23 ನೇ ಸಾಲಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವು ಸೆಪ್ಟೆಂಬರ್ 1ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ, ಇದರ ಜತೆ ಕಾರ್ಯದರ್ಶಿ ಕೆ ವಿ ಹೇಮನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳು ಬಾಹ್ಯ ಆಕರ್ಷಣೆಗೆ ಒಳಗಾಗದೇ ಜೀವನದಲ್ಲಿ...

ಬಾಳಿಲ : ರಾಷ್ಟ್ರೀಯ ಪೌಷ್ಠಿಕಾಹಾರ ಸಪ್ತಾಹ

ಬಾಳಿಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ ,ಉಪಕೇಂದ್ರ ಮುಪ್ಪೇರ್ಯ ,ಮಂಜುಶ್ರೀ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಬಾಳಿಲ ಮುಪ್ಪೇರ್ಯ ಇವುಗಳ ಆಶ್ರಯದಲ್ಲಿ ಹೆಣ್ಣು ಶಿಶು ಪ್ರದರ್ಶನ ,ರಾಷ್ಟ್ರೀಯ ಪೌಷ್ಠಿಕಾಹಾರ ಸಪ್ತಾಹ ,ಪೋಷಣ್ ಅಭಿಯಾನ ಯೋಜನೆ, ಮಾತೃವಂದನಾ,ಸ್ತ್ರೀ ಶಕ್ತಿ ಗೊಂಚಲು ಸಭೆ...

ಪಯಸ್ವಿನಿ ಯುವಕ ಸಂಘ (ರಿ) ವತಿಯಿಂದ ಕಾಲುಸೇತುವೆ ನಿರ್ಮಾಣ

ಕೆಲವು ತಿಂಗಳ ಹಿಂದ ವಿಪರೀತ ಮಳೆಯಿಂದಾಗಿ ದ.ಕ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ಯು.ಪಿ.ರವೀಂದ್ರ ಇವರ ಮನೆಗೆ ಭೀಕರ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ಹಾನಿಯಾಗಿದ್ದು, ದಿನ ಬಳಕೆಗೆ ಉಪಯೋಗ ಮಾಡುವಂತಹ ಕಟ್ಟಿಗೆ ಸಾಮಾಗ್ರಿಗಳು ಮತ್ತು ಇತರ ಸಾಮಾಗ್ರಿಗಳು ನೀರು ಪಾಲಾಗಿರುತ್ತದೆ. ಸದರಿ ಮನೆಯವರಿಗೆ ದಿ. ಎನ್.ಎಸ್.ದೇವಿಪ್ರಸಾದ್ ಇವರ ಮನೆಗೆ ತೆರಳುವ ರಸ್ತೆಯ ಹತ್ತಿರ...

ವಳಲಂಬೆಯ ಯುವಕ ಬೋವಿಕಾನದಲ್ಲಿ ಆತ್ಮಹತ್ಯೆ

ವಳಲಂಬೆಯ ಯುವಕನೋರ್ವ ಬೋವಿಕಾನದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ವರದಿಯಾಗಿದೆ. ಕಾಸರಗೋಡಿನಲ್ಲಿ ಉದ್ಯೋಗಿಯಾಗಿದ್ದ ಜೈಸನ್ ಕಳೆದ ಶನಿವಾರದಿಂದ ಯಾರಿಗೂ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದರು. ನಿನ್ನೆ ರಾತ್ರಿ ಬೊವಿಕಾನದ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಇವರು ವಳಲಂಬೆಯಲ್ಲಿ ನೆಲೆಸಿರುವ ಥೋಮಸ್ ಎಂಬವರ ಪುತ್ರ. ಮೃತರು ತಾಯಿ, ಸಹೋದರಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!