ಪಾಂಡಿಗದ್ದೆ ದ.ಕ ಜಿ. ಪ.ಸ.ಕಿ. ಪ್ರಾ. ಶಾಲೆಯಲ್ಲಿ ದತ್ತು ನಿಧಿ ಸ್ಥಾಪನೆ ಮತ್ತು ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮ

ಪಂಜ ಲಯನ್ಸ್ ಕ್ಲಬ್ ವತಿಯಿಂದ ಅ.2ರಂದು ಪಾಂಡಿಗದ್ದೆ ದ.ಕ ಜಿ. ಪ.ಸ.ಕಿ. ಪ್ರಾ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ ಅಂಗವಾಗಿ ದತ್ತು ನಿಧಿ ಸ್ಥಾಪನೆ ಮತ್ತು ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಾಂಡಿಗದ್ದೆ ಎಸ್.ಡಿ ಎಂ. ಸಿ ಅಧ್ಯಕ್ಷ ವಾಚಣ್ಣ...

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಆಯುಧ ಪೂಜೆ

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಆಯುಧ ಪೂಜೆ ನಡೆಯಿತು. ಪೂಜೆ ವಿಧಿ ವಿಧಾನ ಅರ್ಚಕ ಅಜಿತ್ ಭಟ್ ರವರ ನೇತೃತ್ವದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್,ಹಾಗೂ ಕಚೇರಿಯ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು, ಮತ್ತು ಸಿಬ್ಬಂದಿಗಳ ಕುಟುಂಬದವರು, ಸ್ಥಳೀಯರು ಉಪಸ್ಥಿತರಿದ್ದರು.
Ad Widget

ಬಾಳಿಲ: ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ವತಿಯಿಂದ 18ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ-ಮುಪ್ಪೆರ್ಯ ಇದರ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ.4 ರಿಂದ ಅ.5 ರವರೆಗೆ ಬಾಳಿಲ ವಿದ್ಯಾಬೋಧಿನೀ ಹಿ ಪ್ರಾ, ಶಾಲಾ ವಠಾರದಲ್ಲಿ ಜರಗಲಿದೆ. ಅ. 4 ರ ಬೆಳಿಗ್ಗೆ ಶಾರದಾ ದೇವಿಯ ವಿಗ್ರಹ ಆಗಮನ, ಶಾರದಾದೇವಿಯ ಪ್ರತಿಷ್ಠೆ, ಕಿರೀಟಧಾರಣೆ, ಶಾರದಾದೇವಿಗೆ ಚಿನ್ನದ ಕಾರಿಮಣಿ ಹಾಗೂ ತಾಳಿ ಸಮರ್ಪಣೆ...

ಸುಬ್ರಹ್ಮಣ್ಯ: ಎಸ್ ಎಸ್ ಪಿ ಯು ಕಾಲೇಜಿನಲ್ಲಿ 52ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶಾರದಾ ಪೂಜೆ

ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜಿನಲ್ಲಿ ಅ.2 ರಂದು ಶಿಕ್ಷಕ ರಕ್ಷಕ ಸಂಘದ ವತಿಯಿಂದ 52ನೇ ವರ್ಷ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶಾರದಾ ಪೂಜೆ ನಡೆಯಿತು. ಪೂಜಾ ವಿಧಾನ ಪೂರೈಸಿ ಮಧ್ಯಾಹ್ನ ಮಹಾ ಪೂಜೆಯ ನಂತರ ಪ್ರಸಾದ ವಿತರಣೆ ನೆರವೇರಿತು.ಈ ಸಂದರ್ಭದಲ್ಲಿ ಕಲಾವಿದ ಗಣೇಶ್ ಪರ್ವತಮುಖಿ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು. ಕಲಾವಿದ...

ಸಂಪಾಜೆ: ಪಯಸ್ವಿನಿ ಪ್ರಾ.ಕೃ.ಪ. ಸಹಕಾರ ಮುಖ್ಯ ಕಚೇರಿಯಲ್ಲಿ ಆಯುಧ ಪೂಜೆ

ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಮುಖ್ಯ ಕಚೇರಿಯಲ್ಲಿ ಗಣಪತಿ ಹವನ ಮತ್ತು ಆಯುಧ ಪೂಜೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷರು ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಮತ್ತು ಇತರ ಭಕ್ತಾದಿಗಳು ಉಪಸ್ಥಿತರಿದ್ದರು.

ಅನಾರೋಗ್ಯದಿಂದ ಬಳಲುತ್ತಿರುವ ಸಮೀಕ್ಷಾ ಮೋಟ್ನೂರು ಚಿಕಿತ್ಸೆಗೆ ಶಿಕ್ಷಕರಿಂದ ಧನ ಸಹಾಯ

ಗುತ್ತಿಗಾರು ಗ್ರಾಮದ ವಳಲಂಬೆಯ ಮೋಟ್ನೂರು ವಿಶ್ವನಾಥ ಹಾಗೂ ಹೇಮಾವತಿ ದಂಪತಿಗಳ ಮಗಳಾದ ಕುಮಾರಿ ಸಮೀಕ್ಷಾ ಮೋಟ್ನೂರು ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯ ಚಿಕಿತ್ಸೆಯ ನೆರವಿಗಾಗಿ ಶಿಕ್ಷಕಿಯರಾದ ಶ್ರೀಮತಿ ಬೊಳಿಯಮ್ಮ ಡಿ ಚಾಂತಾಳ, ಶ್ರೀಮತಿ ಪ್ರಮಿಳಾ ಪಿ ಎಸ್ ಮೆತ್ತಡ್ಕ, ಶ್ರೀಮತಿ ಸ್ನೇಹಲತಾ ಎಸ್.ಕೆ. ಮಣಿಯಾನ, ಶ್ರೀಮತಿ ಗೀತಾಲಕ್ಷಿ ಎ ಆಚಳ್ಳಿ, ಶ್ರೀಮತಿ ವನಜಾಕ್ಷಿ ಎಂ. ಮೂಕಮಲೆ ಇವರು...

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಶಾರದೋತ್ಸವ

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಸುಬ್ರಹ್ಮಣ್ಯ ಮತ್ತು ಅಂಗನವಾಡಿ ಕೇಂದ್ರ ದೇವರಗದ್ದೆ ಇದರ ಆಶ್ರಯದಲ್ಲಿ ಅ.3 ರಂದು 21ನೇ ವರ್ಷದ ಶಾರದೋತ್ಸವ ನಡೆಯಿತು. ಬೆಳಗ್ಗೆ ಮೆರವಣಿಗೆ ಮೂಲಕ ಮಾತೆಯನ್ನು ತಂದು ಪ್ರತಿಷ್ಠಾಪಿಸಲಾಯಿತು.ನಂತರ ಕುಕ್ಕೆಶ್ರೀ ಭಜನಾ ಮಂಡಳಿ ಸುಬ್ರಹ್ಮಣ್ಯ ಮತ್ತು ಸಾರ್ವಜನಿಕರಿಂದ ಭಜನೆ ನೆರವೇರಿಸಿ ಮಹಾಪೂಜೆ ನಡೆದು ಪ್ರಸಾದ ವಿತರಣೆ ನೆರವೇರಿತು.ಸಂಜೆ ಸ್ಥಳೀಯ ಪುಟಾಣಿಗಳಿಂದ ವಿವಿಧ...

ವಾಸಪ್ಪ ಮಾಸ್ತರ್ ಕುದ್ಕುಳಿ ನಿಧನ

ಆಲೆಟ್ಟಿ ಗ್ರಾಮದ ಬಡ್ಡಡ್ಕ ನಿವಾಸಿ ಕುದ್ಕು ಳಿ ಕುಟುಂಬದ ಹಿರಿಯ ವ್ಯಕ್ತಿ,ಶ್ರೀ ವಾಸಪ್ಪ ಮಾಸ್ತರ್ ಕುದ್ಕುಳಿ (95)ಅ. 3ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಡ್ಡಡ್ಕ ಇದರ ಸ್ಥಾಪನೆಯಲ್ಲಿ ಸ್ಥಾಪಕರಾಗಿದ್ದ ಬಡ್ಡಡ್ಕ ಅಪ್ಪಯ್ಯ ಗೌಡರೊಂದಿಗೆ ಶಾಲೆಗೆ ಆರಂಭಿಕ ಬುನಾದಿ ಹಾಕುವಲ್ಲಿ ಶ್ರಮಿಸಿ ಈ ಶಾಲೆಯಲ್ಲಿ ಸ್ಥಾಪಕ...

ಐನೆಕಿದು : ಸೇತುವೆ ಬಳಿ ದನದ ತಲೆ ಹಾಗೂ ತ್ಯಾಜ್ಯ ಪತ್ತೆ

ಐನೆಕಿದು ಗ್ರಾಮದ ಕೊಪ್ಪಳಗದ್ದೆ ಸೇತುವೆಯ ಕೆಳಗೆ ದನದ ತಲೆ ಹಾಗೂ ತ್ಯಾಜ್ಯ ಪತ್ತೆಯಾಗಿದ್ದು, ಈ ಹಿಂದೆ ಕೂಡ ಈ ರೀತಿ ಘಟನೆ ನಡೆದಿದೆ ಎಂದು ಆ ಭಾಗದ ಜನರು ತಿಳಿಸಿದ್ದಾರೆ.‌ಸ್ಥಳಕ್ಕೆ ಸುಬ್ರಹ್ಮಣ್ಯ ಪೋಲೀಸ್ ಠಾಣಾ ಎಸ್.ಐ ಮಂಜುನಾಥ್ ಅವರು ಭೇಟಿ ನೀಡಿದ್ದು, ಪೋಲೀಸ್ ಇಲಾಖೆ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಜನರು...

ಬೆಳ್ಳಾರೆ: ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯಲ್ಲಿ ಆಯುಧಪೂಜೆ

ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯಲ್ಲಿ ಅ.04ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಆಯುಧಪೂಜೆಯ ಅಂಗವಾಗಿ ಪೂರ್ವಾಹ್ನ ಗಣಹೋಮ ನೆರವೇರಿತು. ಈ ಸಂದರ್ಭದಲ್ಲಿ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯ ಮಾಲಕರಾದ ಗಗನ್ ನಾಲ್ಗುತ್ತು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!