ಡಿ.16-20; ಬಳ್ಪ ಶ್ರೀ ತ್ರಿಶೂಲಿನೀ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ರಥೋತ್ಸವ

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ.16 ರಿಂದ ಡಿ.20 ರವರೆಗೆ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಬ್ರಹ್ಮರಥೋತ್ಸವ ನೆರವೇರಲಿದೆ.ಡಿ.16 ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾರಂಗ ಪೂಜೆ, ಉತ್ಸವ ಬಲಿ, ಪಲ್ಲಕ್ಕಿ ಉತ್ಸವ, ವಸಂತಕಟ್ಟೆ ಪೂಜೆ, ಅಷ್ಟಾವಧಾನ ಸೇವೆ, ಮಂತ್ರಾಕ್ಷತೆ,...

ಬೈತಡ್ಕ : ಕಂಟೈನರ್ ಪಲ್ಟಿ – ಚಾಲಕ ಪಾರು

ಕಂಟೈನರ್ ವಾಹನದ ಬ್ರೇಕ್ ವೈಫಲ್ಯದಿಂದಾಗಿ, ಚಾಲಕನ‌ ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿಯಾದ ಘಟನೆ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಡಿ.15 ರಂದು ರಾತ್ರಿ ನಡೆದಿದೆ. ಮಂಗಳೂರಿನಿಂದ ಮೈಸೂರಿಗೆ ಕಡೆ ತೆರಳುತ್ತಿದ್ದ ಕಂಟೈನರ್ ಲಾರಿ ಬೈತಡ್ಕದ ತಿರುವಿನ ಇಳಿಜಾರಿನ ಬಳಿ ತಲುಪುತ್ತಿದ್ದಂತೆಯೆ ಬ್ರೇಕ್ ವೈಫಲ್ಯವಾದ ಪರಿಣಾಮ ರಸ್ತೆಯ ಎಡಭಾಗಕ್ಕೆ ಲಾರಿಯು ಪಲ್ಟಿಯಾಗಿದ್ದು, ಕಂಟೈನರ್ ನಲ್ಲಿ ಚಾಲಕ ಮಾತ್ರನಿದ್ದು,...
Ad Widget

ಹಲಾಲ್ ಪ್ರಮಾಣ ಪತ್ರ ನಿಷೇಧಿಸಿ ಮತ್ತು ಲವ್ ಜಿಹಾದ್ ವಿರೋಧಿ ಪೋಲಿಸ್ ದಳವನ್ನು ಸ್ಥಾಪಿಸಲು ಹಿಂದೂ ಜನಜಾಗೃತಿ ಸಮಿತಿ ಸರಕಾರಕ್ಕೆ ಮನವಿ

ರಾಜ್ಯದಲ್ಲಿ ಅನಧಿಕೃತವಾಗಿ ಧರ್ಮದ ಆಧಾರದ ಮೇಲೆ ಹಲಾಲ್ ಲೋಗೊ ಇರುವ ಪ್ರಮಾಣಪತ್ರವನ್ನು ಸಾರ್ವಜನಿಕರು ಉಪಯೋಗ ಮಾಡುವ ಉತ್ಪನ್ನಗಳ ಮೇಲೆ ಮುದ್ರಣ ಮಾಡಿ, ಸಾವಿರಾರು ಕೋಟಿ ರೂಪಾಯಿಗಳನ್ನು ಮತಾಂದ ಸಂಘಟನೆಗಳು ಸಂಗ್ರಹ ಮಾಡಿ, ದೇಶ ವಿರೋಧಿ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿವೆ. ಕೇಂದ್ರ ಸರಕಾರದ FSSAI ಅಧಿಕೃತ ಪ್ರಮಾಣಪತ್ರ ನೀಡುವ ಸಂಸ್ಥೆ ಇರುವಾಗಲೂ ಸಹ ಧರ್ಮದ ಆಧಾರದಲ್ಲಿ ಹಲಾಲ್...

ಹರಿಹರ ಪಲ್ಲತ್ತಡ್ಕ : ಡಿ.17 ರಿಂದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಧನುಪೂಜೆ

ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಡಿ.17ರಿಂದ ಜ.14 ರವರೆಗೆ ಪ್ರತೀ ದಿನ ಪ್ರಾತಃಕಾಲ 5:00 ಗಂಟೆಗೆ ಧನುಪೂಜೆ ನಡೆಯಲಿದ್ದು, 14-01-2023ನೇ ಶನಿವಾರ ಮಕರ ಸಂಕ್ರಮಣ ಬೆಳಿಗ್ಗೆ 4:00 ಗಂಟೆಯಿಂದ ಉದ್ಯಾಪನ ಪೂಜೆ, ಮದ್ಯಾಹ್ನ ವನಶಾಸ್ತವೇಶ್ವರನಿಗೆ ವಾರ್ಷಿಕ ಪೂಜೆ ಮತ್ತು ವನಭೋಜನ ಕಾರ್ಯಕ್ರಮ ನಡೆಯಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

ಕಂದಡ್ಕ : ಕಾರು ವ್ಯಾನ್ ಅಪಘಾತ

ಕಂದಡ್ಕ ಬಳಿ ಇಂದು ಬೆಳಿಗ್ಗೆ ಸುಳ್ಯದಿಂದ ಗುತ್ತಿಗಾರಿಗೆ ಬರುತ್ತಿದ್ದ ವ್ಯಾನ್ ಹಾಗೂ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ವಾಹನ ಅಲ್ಪಸ್ವಲ್ಪ ಜಖಂಗೊಂಡಿದ್ದು, ಕಾರು ಚಾಲಕ ಬೆಟ್ಟ ಮರಿಯಪ್ಪ ಎಂಬವರ ಕೈಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ಸಂಪಾಜೆ ಸಹಕಾರಿ ಸಂಘದ ಶತ ಸಂಭ್ರಮದ ಕ್ರೀಡಾಕೂಟದ ಆಮಂತ್ರಣ ಬಿಡುಗಡೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತ ಸಂಭ್ರಮದ ಕ್ರೀಡಾಕೂಟ ಜ.1, 2 ಹಾಗೂ 8 ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರು ಡಿ.15 ರಂದು ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್, ನಿರ್ದೇಶಕರುಗಳಾದ ಬಿ.ಎಸ್.ಯಮುನಾ, ಜಗದೀಶ್ ರೈ, ಎಚ್.ಎ.ಹಮೀದ್,...

ಕಾಯಕಲ್ಪಕ್ಕೆ ಕಾಯುತ್ತಿದೆ ಸರಕಾರಿ ಆಸ್ಪತ್ರೆಯ ರಸ್ತೆ

ಸುಳ್ಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿನಂಪ್ರತಿ ನೂರಾರು ರೋಗಿಗಳು ಭೇಟಿ ನೀಡುತ್ತಾರೆ. ಎಲ್ಲರಿಗೂ ಚಿಕಿತ್ಸೆ ನೀಡುವ ಈ ಆಸ್ಪತ್ರೆಯ ರಸ್ತೆಗೆ ಯಾರೂ ಚಿಕಿತ್ಸೆ ನೀಡುವವರಿಲ್ಲ ಎಂಬುದು ಖೇದಕರ ಸಂಗತಿ. ಹಲವು ವರ್ಷಗಳಿಂದ ಈ ಆಸ್ಪತ್ರೆಗೆ ತೆರಳುವ ರಸ್ತೆ ನಾದುರಸ್ತಿಯಲ್ಲಿದೆ. ಹಲವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಟೋ ರಿಕ್ಷಾ, ಕಾರು, ಅಂಬ್ಯುಲೆನ್ಸ್ ಗಳು ಈ ರಸ್ತೆಯನ್ನೇರಿ ಆಸ್ಪತ್ರೆಗೆ...

ಅಸ್ಸಾಂ ಪ್ಯಾರಾ ಮಿಲಿಟರಿ ಫೋರ್ಸ್ ಗೆ ರಕ್ಷಿತಾ ಮಡ್ತಿಲ ಆಯ್ಕೆ

ಐವರ್ನಾಡು ಗ್ರಾಮದ ರಕ್ಷಿತಾ ಎಂ.ಬಿ ಎಂಬುವವರು ಪ್ಯಾರಾ ಮಿಲಿಟರಿ ಫೋಸ್೯ ಆದ ಅಸ್ಸಾಂ ರೈಫಲ್ಸ್ ಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಧರ್ಮಸ್ಥಳದಲ್ಲಿ ವಾಸವಾಗಿರುವ ಭಾಸ್ಕರ ಗೌಡ ಮಡ್ತಿಲ ಮತ್ತು ಮಮತಾ ದಂಪತಿಗಳ ಪುತ್ರಿ. ರಕ್ಷಿತಾ ತನ್ನ ಐದನೇ ತರಗತಿವರೆಗಿನ ವಿದ್ಯಾಭ್ಯಾಸವನ್ನು ಐವರ್ನಾಡಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪಡೆದು, ನಂತರ ಕಾರ್ಕಳದ ಅತ್ತೂರು ಸೈಂಟ್ ಲಾರೆನ್ಸ್ ಹಿ.ಪ್ರಾ ಶಾಲೆಗಳಲ್ಲಿ...

ದೇವರಕಾನ : ಪ್ರತಿಭಾ ದಿನಾಚರಣೆ

ದೇವರಕಾನ : ಪ್ರತಿಭಾ ದಿನಾಚರಣೆಐವರ್ನಾಡು ದೇವರಕಾನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ಡಿ.15 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಚಿವರಾದ ಎಸ್. ಅಂಗಾರ,ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಐವರ್ನಾಡು ಗ್ರಾ.ಪಂ.ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ನವೀನ್ ಸಾರಕೆರೆ, ಗ್ರಾ.ಪಂ. ಸದಸ್ಯೆ ಶಶಿಕಲಾ ಕುಳ್ಳಂಪಾಡಿ ಸೇರಿದಂತೆ ಪ್ರಮುಖ...

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವಕ್ಕೆ ಚಾಲನೆ

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಇಂದಿನಿಂದ ಕ್ಷೇತ್ರದ ತಂತ್ರಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರೋತ್ಸವ ನಡೆಯಲಿರುವುದು. ಡಿ.15ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಆಚಾರ್ಯವರಣ, ಸ್ವಸ್ತಿ ಪುಣ್ಯಹ ವಾಚನ, ಮಹಾ ಗಣಪತಿ ಹೋಮ, ಚಂಡಿಕಾಯಾಗ ಪ್ರಾರಂಭ, ಹಸಿರು ಹೊರೆ ಕಾಣಿಕೆ ಸಮರ್ಪಣೆ, ಸುಹಾಸಿನಿ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ ,ಪ್ರಸಾದ ವಿತರಣೆ ಅನ್ನ...
Loading posts...

All posts loaded

No more posts

error: Content is protected !!