ನಾಳೆ(ಮೇ.08) ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ

ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ ನಡೆಸಿದ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ನಾಳೆ ಬೆಳಿಗ್ಗೆ 10.00 ಗಂಟೆಗೆ ಪ್ರಕಟಗೊಳ್ಳಲಿದೆ ಎಂದು ಮಂಡಳಿ ಮಾಹಿತಿ ನೀಡಿದೆ. ಈ ಬಾರಿ 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು 11.00 ಗಂಟೆಯಿಂದ...

ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ : ಡಾ|| ಚೂಂತಾರು

ಗಾಂಧಿ ಜಯಂತಿಯ ಅಂಗವಾಗಿ ಇಂದು ಬೆಳ್ಳಾರೆ ಗೃಹ ರಕ್ಷಕ ದಳದ ಕಚೇರಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗಾಂಧೀಜಿಯವರ ತ್ಯಾಗ, ಸೇವೆ ಮತ್ತು ಬಲಿದಾನವನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ "ಗಾಂಧೀಜಿಯವರು ಹಾಕಿ ಕೊಟ್ಟ ತ್ಯಾಗ, ಅಹಿಂಸೆ ಮತ್ತು ತತ್ವದ ಹಾದಿಯಲ್ಲಿ ನಡೆದು,...
Ad Widget

ಮಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

ಮಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಸುಳ್ಯದ ಯುವ ನಾಯಕರಾದ ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಮುಳಿಯ ಕೇಶವ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ಜತೆಗಿದ್ದರು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಬಂಧನ – ಇಂದು ಮಧ್ಯಾಹ್ನ ಸಿಗಲಿದೆ ಸಂಪೂರ್ಣ ವಿವರ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಬಂಧನವಾಗಿರುವುದಾಗಿ ತಿಳಿದು ಬಂದಿದೆ. ದ.ಕ ಜಿಲ್ಲಾ ಪೊಲಿಸರು ಬಂಧಿಸಿರುವುದಾಗಿ ತಿಳಿದು ಬಂದಿದ್ದು ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಆ.10 ರಂದು ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ 6 ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಡೆದಿತ್ತು. ಈ ಬಗ್ಗೆ ಇಂದು ಮಧ್ಯಾಹ್ನ 12.30 ಕ್ಕೆ...

ನಾವು ಬರೀ ಹೇಳುವುದಿಲ್ಲ!! ಸೂಕ್ತ ವ್ಯವಸ್ಥೆ ಖಂಡಿತಾ ಆಗುತ್ತದೆ – ಸಿಎಂ ಬೊಮ್ಮಾಯಿ

ಬೆಳ್ಳಾರೆ: ಪ್ರವೀಣ್ ನೆಟ್ಟಾರು ಅವರ ಹತ್ಯೆಯ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಂಡಿದೆ. ಈಗಾಗಲೇ ಪ್ರಾಥಮಿಕ ತನಿಖೆ ಮುಗಿದಿದ್ದು ಕೃತ್ಯಕ್ಕೆ ಸಹಕರಿಸಿದವರನ್ನು ಬಂಧಿಸಲಾಗಿದೆ. ಈ ಜಾಲ ದೇಶಾದ್ಯಂತವೂ ಹಬ್ಬಿದ್ದು ನಮ್ಮ ಸರಕಾರ ಬರೀ ಹೇಳುವುದಲ್ಲ.ಅವರನ್ನು ಮಟ್ಟ ಹಾಕಿಯೇ ತೀರುತ್ತೇವೆ ಎಂದು ಸಿ.ಎಂ ಬಸವರಾಜ ಬೊಮ್ಮಾಯಿ ಹೇಳಿದರು.ನೆಟ್ಟಾರಿನ ಪ್ರವೀಣ್ ಅವರ ಮನೆಗೆ ಸಿಎಂ ಭೇಟಿ ನೀಡಿ ಮನೆಯವರಿಗೆ...

ಮಡಿಕೇರಿ –ಮಂಗಳೂರು ರಸ್ತೆ ಸಂಚಾರಕ್ಕೆ ತಡೆ – ಸಂಪಾಜೆ ಗೇಟ್ ನಲ್ಲಿ ಟ್ರಾಫಿಕ್ ಜಾಮ್

ಮಡಿಕೇರಿ-ಮಂಗಳೂರು ಮುಖ್ಯ ರಸ್ತೆ ಮಡಿಕೇರಿ ಡಿಸಿ ಕಛೇರಿ ಬಳಿ ತಡೆಗೋಡೆ ಕುಸಿತದ ಭೀತಿಯಿಂದ ಪರ್ಯಾಯವಾಗಿ ತಾಳತ್ತನಮನೆ ರಸ್ತೆ ಬಳಸಲು ಸೂಚನೆ ನೀಡಲಾಗಿತ್ತು. ಇದೀಗ ಆ ರಸ್ತೆಯಲ್ಲಿ ಕೂಡ ಭೂಕುಸಿದ ಸಾಧ್ಯತೆ ಹಿನ್ನೆಲೆಯಲ್ಲಿ ಮಡಿಕೇರಿ ಪೊಲೀಸರು ತಾಳತ್ತಮನೆ ಸಮೀಪ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ್ದಾರೆ. ಎರಡನೇ ಮೊಣ್ಣಂಗೇರಿ ರಾಮಕೊಲ್ಲಿ ಬಳಿ ಜಲಸ್ಪೋಟ ಉಂಟಾಗಿದ್ದು ಮಣ್ಣು ಮಿಶ್ರಿತ...

ಜು.12 : ಜಿಲ್ಲಾ ಪ್ರವಾಸದ ಅಂಗವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಇಂದು ಸುಳ್ಯಕ್ಕೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎರಡು ದಿನ 4 ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ. ಜು 12 ಹಾಗೂ ಜು 13 ರಂದು ಪ್ರವಾಸ ಮಾಡಲಿದ್ದಾರೆ. ಅತಿವೃಷ್ಠಿಯಿಂದಾದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.ಜು 12 ರಂದು ಕೊಡಗು ಜಿಲ್ಲೆ ಭೇಟಿ ನೀಡಿದ ನಂತರ ಅಪರಾಹ್ನ 3 ಗಂಟೆಗೆ ಸುಳ್ಯ ತಾಲೂಕಿಗೆ ಆಗಮಿಸಲಿದ್ದಾರೆ. ನಂತರ ಉಪ್ಪಿನಂಗಡಿ, ಬಂಟ್ವಾಳ,...

ರಾಜ್ಯಮಟ್ಟದ ಜಾವೆಲಿನ್ ಎಸೆತದಲ್ಲಿ ಇಂಜಿನಿಯರ್ ಮಣಿಕಂಠನ್ ಪ್ರಥಮ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ.30 ರಿಂದ ಜೂ.1 ರ ವರೆಗೆ ಜರುಗಿದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ಮಣಿಕಂಠನ್ ರವರು ಪ್ರಥಮ ಸ್ಥಾನ...

ಯೋಗಾಸನದಲ್ಲಿ ನೋಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ

ಯೋಗಾಸನದಲ್ಲಿ ನೋಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ ಹೆಸರು ಮಾಡಿದ್ದಾರೆ. ಬದ್ದ ಪದ್ಮಾಸನದಲ್ಲಿ 1ಗಂಟೆ 02 ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಪ್ರಗತಿ ವಿದ್ಯಾ ಸಂಸ್ಥೆ (ರಿ.) ಕಾಣಿಯೂರಿನಲ್ಲಿ6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ತಂಟೆಪ್ಪಾಡಿ ಶ್ರೀ ವಿಶ್ವನಾಥ ಗೌಡ...

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ: ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದ ಪ್ರದೀಪ್ ಟಿ ರಾಜ್ಯಕ್ಕೆ ದ್ವಿತೀಯ ಸ್ಥಾನಿ

ಪ್ರದೀಪ್ ಟಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಿಂದ 86 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15 ಡಿಸ್ಟಿಂಕ್ಷನ್,38 ಪ್ರಥಮ ದರ್ಜೆ, 11 ದ್ವಿತೀಯ ದರ್ಜೆಯೊಂದಿಗೆ 71 ಮಂದಿ ಉತ್ತೀರ್ಣರಾಗಿ ಶೇಕಡಾ 82.6 ಫಲಿತಾಂಶ ದಾಖಲಾಗಿದೆ. ಪ್ರದೀಪ್ ಟಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಬಾಳಿಲ ತೋಟ ಮನೆ...
Loading posts...

All posts loaded

No more posts

error: Content is protected !!