ಮಲ್ಲಾರ ರಾಮಚಂದ್ರ ಗೌಡ ನಿಧನ

ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಮಲ್ಲಾರ ರಾಮಚಂದ್ರ ಗೌಡರು(59) ಮಾ.೪ ರಂದು ನಿಧನರಾದರು.ಇವರು ಕೆಲ ದಿನಗಳಿಂದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಾ.೪ರಂದು ನಿಧನರಾದರು. ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಅಜ್ಜಾವರ : ನೇಣು ಬಿಗಿದು ಮಹಿಳೆ ಆತ್ಮಹತ್ಯೆ

ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಅಜ್ಜಾವರ ಗ್ರಾಮದ ಪಡ್ಡಂಬೈಲು ಸಮೀಪದ ನಾಂಗುಳಿ ಎಂಬಲ್ಲಿ ನಡೆದಿದೆ. ಶರತ್ ಎಂಬವರ ಪತ್ನಿ ಮಲ್ಲಿಕಾ (26) ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಮಲ್ಲಿಕಾರವರು ಕೆ.ವಿ.ಜಿ. ಆಯುರ್ವೇದಿಕ್ ನಲ್ಲಿ ಉದ್ಯೋಗಿಯಾಗಿದ್ದರು. ಇಂದು ರಜೆ ಹಿನ್ನಲೆ ಮಲ್ಲಿಕಾ ಮನೆಯಲ್ಲಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಕೊಂಡು...
Ad Widget

ಕಲ್ಲಪಳ್ಳಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಜಗದೀಶ್ ಪಿ.ಬಿ ನಿಧನ

ಕಲ್ಲಪಳ್ಳಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಜಗದೀಶ್ ಪಿ.ಬಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ಅಲ್ಪಕಾಲದ ಅನಾರೋಗ್ಯದಿಂದ ಬಳಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು. ಮೃತರು ತಾಯಿ,ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಎಲ್ಲರೊಂದಿಗೆ ಆತ್ಮೀಯರಾಗಿದ್ದ ಇವರು ನಾಟಿ ವೈದ್ಯರಾಗಿಯೂ...

ಬಾಲಕಿ ಮೋಟ್ನೂರು ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ಮೋಟ್ನೂರು ದಿ. ವೀರಪ್ಪ ಗೌಡರ ಧರ್ಮಪತ್ನಿ ಬಾಲಕಿ ಮೋಟ್ನೂರು ಜ.2 ರಂದು ನಿಧನರಾದರು. ಮೃತರು ಪುತ್ರಿಯರಾದ ಮೀನಾಕ್ಷಿ ಕಡ್ಲಾರು, ಜಯ, ಇಂದಿರಾ , ರೇವತಿ, ಪುತ್ರ ಶಿವಪ್ರಸಾದ್, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಅರಂತೋಡು : ಈಶ್ವರಿ ಕೇನಾಜೆ ನಿಧನ

ಆರಂತೋಡು ಗ್ರಾಮದ ಕೋಡಂಕೇರಿ ಲಿಂಗಪ್ಪ ಗೌಡ ಕೇನಾಜೆ ಯವರ ಧರ್ಮಪತ್ನಿ ಶ್ರೀಮತಿ ಈಶ್ವರಿ (57)ಯವರು ಇಂದು ನಿಧನರಾದರು. ಮೃತರು ಪತಿ, ಮಕ್ಕಳಾದ ಪವನ್ ಕೋಡಂಕೇರಿ, ಕಿಶೋರ್ ಕೋಡಂಕೇರಿ ಹಾಗೂ ಮಗಳು ವಿಜಯಲಕ್ಷ್ಮಿ ಯವರನ್ನು ಅಗಲಿದ್ದಾರೆ.

ಕಮಲ ಕೆದಿಲ ನಿಧನ

ಐನೆಕಿದು ಗ್ರಾಮದ ಕೆದಿಲ ದಿ.ತಮ್ಮಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಕಮಲರವರು ಡಿ.1ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ನವೀನ್ ಕೆದಿಲ, ಶಶಿಧರ ಕೆದಿಲ,ಪುತ್ರಿಯರಾದ ಹರಿಣಿ, ಪ್ರೇಮಾ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಆಗಲಿದ್ದಾರೆ.

ಕೊಡಿಯಾಲ: ಅಂಗಾರ ಕಲ್ಲಗದ್ದೆ ನಿಧನ

ಕೊಡಿಯಾಲ ಗ್ರಾಮದ ಕಲ್ಲಗದ್ದೆ ನಿವಾಸಿ ಅಂಗಾರ ರವರು ಅಸೌಖ್ಯದಿಂದ ಅ.15ರಂದು ನಿಧನರಾದರು. ಅವರಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಯಮುನಾ, ಮಗಳು ದೀಪಿಕಾ ಮತ್ತು ಮಗ ಶ್ರೇಯಸ್ಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಳಂಜ: ಸುನಂದಾ ಪಟ್ಟೆ ನಿಧನ

ಕಳಂಜ ಗ್ರಾಮದ ಪಟ್ಟೆ ಶಿವಪ್ಪ ಪೂಜಾರಿಯವರ ಪತ್ನಿ ಶ್ರೀಮತಿ ಸುನಂದಾ ಪಟ್ಟೆಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತಿ ಶಿವಪ್ಪ ಪೂಜಾರಿ, ಪುತ್ರರಾದ ಭಾಸ್ಕರ, ಸದಾನಂದ, ಪ್ರಶಾಂತ್ ಹಾಗೂ ಪುತ್ರಿಯರಾದ ಅರುಣಾ ಪೈಚಾರು, ಉಮಾವತಿ ಮಾಡಾವು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ದೇವಚಳ್ಳ ಗ್ರಾ.ಪಂ. ಮಾಜಿ ಸದಸ್ಯ ಮೋಹನ ಗೌಡ ಮುಂಡೋಡಿ ನಿಧನ

ದೇವಚಳ್ಳ ಗ್ರಾಮದ ಮುಂಡೋಡಿ ನಿವಾಸಿ,‌ ಗ್ರಾ.ಪಂ ಮಾಜಿ ಸದಸ್ಯರಾದ ಮೋಹನ ಗೌಡ‌ ಮುಂಡೋಡಿಯವರು ಅಲ್ಪಕಾಲದ ಅಸೌಖ್ಯದಿಂದ ಮೇ 23 ರಂದು ನಿಧನರಾದರು. ಇವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಐವರ್ನಾಡು: ಉದಯಕುಮಾರ್ ಹಸಿರುತೋಟ ನಿಧನ

ಐವರ್ನಾಡು ಗ್ರಾಮದ ದಿ.ಕೃಷ್ಣ ಅಂಗಿತ್ತಾಯ ಅವರ ಪುತ್ರ ಉದಯಕುಮಾರ ಭಟ್ ಹಸಿರುತೋಟ (51 ವ) ರವರು ಎ.22ರಂದು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ತಾಯಿ ಶ್ರೀಮತಿ ಶಾರದಾ, ಪತ್ನಿ ಶ್ರೀಮತಿ ಅಮೃತಲತಾ ಹಾಗೂ ಪುತ್ರರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!