ಬ್ರಿಜೇಶ್ ಚೌಟರಿಂದ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪ ನಮನ

ಮಂಗಳೂರು ಬಾವುಟಗುಡ್ಡೆ ಬಳಿಯಿರುವ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ರವರು ಏ.09ರಂದು ಪುಷ್ಪ ನಮನ ಸಲ್ಲಿಸಿದರು. 1837 ರಲ್ಲಿ ಬ್ರಿಟಿಷರ ವಿರುದ್ಧ ಸಮರ ಸಾರಿದ ರಾಮಯ್ಯ ಗೌಡರ ಬಲಿದಾನ  ನಮಗೆಲ್ಲ ಆದರ್ಶವೆಂದು ಬ್ರಿಜೇಶ್ ಚೌಟ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ರಾದ ವೇದವ್ಯಾಸ ಕಾಮತ್, ಅಶ್ವಥ್ ನಾರಾಯಣ್ ಗೌಡ, ಯತೀಶ್...

ಜಿಲ್ಲಾ ಕಾಂಗ್ರೆಸ್ ನ ವಿವಿಧ ಸಮಿತಿಗೆ ಉಸ್ತುವಾರಿ ನೇಮಕ

ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಘಟಕದ ಉಸ್ತುವಾರಿಯಾಗಿ ಜಯಪ್ರಕಾಶ್ ರೈ ರವರನ್ನು ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಸ್ತುವಾರಿಯಾಗಿ ಕಿರಣ್ ಬುಡ್ಲೆಗುತ್ತು ರವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ರವರು ಆಯ್ಕೆ ಮಾಡಿರುತ್ತಾರೆ.
Ad Widget

ಬೆಳ್ಳಾರೆಯಲ್ಲಿ ಸಾರ್ವಜನಿಕ ರುದ್ರಭೂಮಿ ನಿರ್ಮಿಸಲು ಜನರ ಆಗ್ರಹ – ಸರಕಾರದಿಂದ ಮಂಜೂರಾದ 30 ಲಕ್ಷ ಅನುದಾನಕ್ಕೆ ಅಡ್ಡಗಾಲು – ಲಕ್ಷಾಂತರ ಹಣ ದುರುಪಯೋಗ ಆಗಿದೆಯೇ?

ಸುಳ್ಯ ತಾಲೂಕಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಪೇಟೆಗಳಲ್ಲಿ ಬೆಳ್ಳಾರೆಯೂ ಒಂದು. ಇಲ್ಲಿ ವ್ಯವಸ್ಥಿತ ರುದ್ರಭೂಮಿ ಮರೀಚಿಕೆಯಾಗಿಯೇ ಉಳಿದಿದ್ದು, ಆಡಳಿತ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಕಂದಾಯ ಇಲಾಖೆಯು ಸುಮಾರು 84 ಸೆಂಟ್ಸ್ ಜಾಗ ಮಂಜೂರು ಗೊಳಿಸಿದ್ದು ಇದರ ಅಭಿವೃದ್ಧಿಗಾಗಿ ಈಗಾಗಲೇ ಲಕ್ಷಾಂತರ ಹಣ ವ್ಯಯಿಸಲಾಗಿದೆ. ಲಕ್ಷಾಂತರ ಖರ್ಚು ಮಾಡಿ ಅವೈಜ್ಞಾನಿಕ ರೀತಿಯಲ್ಲಿ...

ಸುಳ್ಯ ಸಿಎ ಬ್ಯಾಂಕ್ ಮುಂಭಾಗ ಮಲಗಿದ್ದ ಅಪರಿಚಿತ ವ್ಯಕ್ತಿ ಸಾವು , ಮೃತದೇಹ ಆಸ್ಪತ್ರೆಗೆ ರವಾನೆ.

ಸುಳ್ಯ ಸಿ ಎ ಬ್ಯಾಂಕ್ ಮುಂಭಾಗ ಮಲಗಿದ್ದ ಅಪರಿಚಿತ ವ್ಯಕ್ತಿ ಒಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಮೃತ ದೇಹವನ್ನು ಪ್ರಗತಿ ಅಂಬ್ಯುಲೆನ್ಸ್‌ನಲ್ಲಿ ಅಚ್ಚು ಪ್ರಗತಿಯವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ಮೃತಪಟ್ಟ ವ್ಯಕ್ತಿಯ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದ್ದು ಇದೀಗ ಪೋಲೀಸ್ ಇಲಾಖೆಯು ವ್ಯಕ್ತಿಯ ಮಾಹಿತಿ ಕಲೆಹಾಕಲು ಪ್ರಾರಂಭಿಸಿರುವುದಾಗಿ ತಿಳಿದುಬಂದಿದೆ.

ಮರ್ಕಂಜ: ಗಣಿಗಾರಿಕೆ ವಿರುದ್ಧ ಮತ್ತೆ ಸಿಡಿದೆದ್ದ ಗ್ರಾಮಸ್ಥರು, ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ!

ತಾಲೂಕು ಕಛೇರಿ ಮುಂಭಾಗ ಸೇರಿದ ಗ್ರಾಮಸ್ಥರು, ತಹಶೀಲ್ದಾರರಿಗೆ ಮನವಿ ಸಲ್ಲಿಕೆ ಮರ್ಕಂಜ : ಅಳವುಪಾರೆಯ ಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಯದಿದ್ದಲ್ಲಿ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದೀಗ ತಾಲೂಕು ಕಛೇರಿ ಮುಂಭಾಗ  ಗ್ರಾಮಸ್ಥರು ಸೇರಿದ್ದಾರೆ. ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಸ. ನಂಬ್ರ ೧೭೩/೧ಬಿ೨ಎಪಿಂ ರ ಸರಕಾರಿ...

ಮಂಗಳೂರಿನಲ್ಲಿ ರೈಲಿನಡಿಗೆ ಬಿದ್ದು ಆಚಳ್ಳಿ ಯುವಕ ಮೃತ್ಯು!

ಮಂಗಳೂರಿನಲ್ಲಿ ರೈಲಿನಡಿಗೆ ಬಿದ್ದು ಗುತ್ತಿಗಾರು ಗ್ರಾಮದ ಆಚಳ್ಳಿ  ಯುವಕನೋರ್ವ ಮೃತಪಟ್ಟ ಘಟನೆ  ಎ. 07 ರಂದು ನಡೆದಿದೆ.ಗುತ್ತಿಗಾರು ಗ್ರಾಮದ ಆಚಳ್ಳಿ ಹಂದಿಪಾರೆ ನಿವಾಸಿ ಸುಪ್ರೀತ್ ನಾಯ್ಕ ರವರು ಮೃತಪಟ್ಟ ದುರ್ದೈವಿ. ತನ್ನ ತಾಯಿ ಹಾಗೂ ಅಕ್ಕನೊಂದಿಗೆ ಮಂಗಳೂರಿನಲ್ಲಿ ನೆಲೆಸಿರುವ ಈತ ಎ.6 ರಂದು ರಾತ್ರಿ ವೇಳೆ ಮನೆಯಿಂದ ಹೋಟೆಲ್ ಗೆಂದು ಬಂದಿದ್ದ, ಸ್ವಲ್ಪ ಹೊತ್ತಿನ ಬಳಿಕ...

ಐವರ್ನಾಡು :  ಕಾಂಗ್ರೆಸ್ ಗ್ರಾಮ ಸಮಿತಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಮಂಗಳೂರು ಲೋಕಸಭಾ ಚುನಾವಣೆ, ಬ್ಲಾಕ್ ಕಾಂಗ್ರೆಸ್ ಸುಳ್ಯ ಇದರ  ಐವರ್ನಾಡು  ಗ್ರಾಮ ಸಮಿತಿಯ ಪೂರ್ವಭಾವಿ ಸಭೆ ಇಂದು ಐವರ್ನಾಡಿನ ಎನ್.ಎಂ.ಬಾಲಕೃಷ್ಣ ಗೌಡ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ ಜಯರಾಂ , ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿಗಳಾದ ಶ್ರೀ ಎಂ. ವೆಂಕಪ್ಪ ಗೌಡ, ದ.ಕ ಜಿಲ್ಲಾ...

ಜೋಡುಪಾಲ : ಖಾಸಗಿ ಬಸ್ಸು ಪಲ್ಟಿ

ಬೆಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಗೌರಿಶಂಕರ್ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಇಂದು ಬೆಳಿಗ್ಗೆ ಜೋಡುಪಾಲ ಬಳಿ ನಡೆದಿದೆ. ಹಲವು ಸಣ್ಣ ಪುಟ್ಟ ಜನರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ

ಪರಿವಾರಕಾನ ಹೋಟೆಲ್ ಉಡುಪಿ ಗಾರ್ಡನ್ ಮುಂಬಾಗಲ್ಲಿ ಗುಡ್ಡಕ್ಕೆ ಬೆಂಕಿ , ಆಗ್ನಿಶಾಮಕ ದಳ ಆಗಮನ.

ಸುಳ್ಯ ಪರಿವಾರಕಾನದ ಬಳಿಯಲ್ಲಿ ರಿಕ್ಷಾ ಗ್ಯಾರೆಜ್ ಹಿಂಬಾಗದಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಇದೀಗ ವರದಿಯಾಗಿದೆ . ಸ್ಥಳಕ್ಕೆ ಅಗ್ನಿ ಶಾಮಕದಳ ಆಗಮಿಸಿದ್ದು ಅಗ್ನಿಶಾಮಕ ದಳದವರ ಜೊತೆಗೆ ಪ್ರಗತಿ ಆಂಬುಲೆನ್ಸ್ ಚಾಲಕ ಅಚ್ಚು ಬೆಂಕಿ ನಂದಿಸಲು ಸಹಕರಿಸುತ್ತಿದ್ದಾರೆ ಎಂದು ಸ್ಥಳೀಯರಿಂದ ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ 146.01 ಕೋಟಿ ರೂ – ಆದಾಯದಲ್ಲಿ ರಾಜ್ಯಕ್ಕೆ ನಂಬರ್ ವನ್

ಸುಬ್ರಹ್ಮಣ್ಯ: ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 146.01 ಕೋಟಿ ರೂ ಆದಾಯ ಗಳಿಸಿದೆ. 2023 ಎಪ್ರೀಲ್‌ನಿಂದ 2024 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ನಂಬರ್ ದೇವಳವಾಗಿ...
Loading posts...

All posts loaded

No more posts

error: Content is protected !!