ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ನಿವೃತ್ತಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಮೇ.30ರಂದು ನಿವೃತ್ತರಾಗಿದ್ದಾರೆ. ಕಳೆದ ೩೫ ವರ್ಷಗಳಿಂದ ಸರಕಾರಿ ಸೇವೆಯಲ್ಲಿದ್ದ ಇವರು ೩೩ ವರ್ಷಗಳಿಂದ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಾರ್ಯತತ್ಪರ ಅಧಿಕಾರಿಯಾಗಿದ್ದ ಇವರು ಕಳೆದ ಮೂರು ವರ್ಷಗಳಿಂದ ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ತನ್ನ ಸರಕಾರಿ ಸೇವೆಯನ್ನು ದ.ಕ ಜಿಲ್ಲೆಯಲ್ಲೇ ಆರಂಭಿಸಿ ದ.ಕ ಜಿಲ್ಲೆಯಲ್ಲೇ...

ಸುಳ್ಯ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಸುಳ್ಯ ಸರ್ಕಾರಿ ಬಸ್‌ ನಿಲ್ದಾಣದ ಬಳಿ ಅನಾಥ ಶವವೊಂದು ಇಂದು (ಮೇ31) ಬೆಳಗ್ಗೆ ಪತ್ತೆಯಾಗಿದೆ.ವ್ಯಕ್ತಿಯ ಗುರುತು ಪರಿಚಯ ಪತ್ತೆಯಾಗಿಲ್ಲ. ಅಚ್ಚು ಪ್ರಗತಿ ಅವರ ಆಂಬ್ಯುಲೆನ್ಸ್ ನಲ್ಲಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಇರಿಸಲಾಗಿದೆ. ವಾರಿಸುದಾರರು ಯಾರಾದರು ಇದ್ದರೆ ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Ad Widget

ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿಂಗಾರ ಶೆಟ್ಟಿ

ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಹಿರಿಯ ಸರ್ವೆಯರ್ ಸಿಂಗಾರ ಶೆಟ್ಟಿ ನೇಮಕಗೊಂಡಿದ್ದಾರೆ. ಸಂಘದ ಅಧ್ಯಕ್ಷರಾಗಿದ್ದ ತೀರ್ಥರಾಮ ಹೊಸೊಳಿಕೆಯವರು ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಸಿಂಗಾರ ಶೆಟ್ಟಿ ಯವರು ಪ್ರಭಾರ ಅಧ್ಯಕ್ಷರಾಗಿದ್ದರು. ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ತಾಲೂಕು ಸಮಿತಿಯಿಂದ ರಾಜ್ಯ ಸಮಿತಿಗೆ ವರದಿ ಸಲ್ಲಿಸಲಾಗಿತ್ತು. ಇನ್ನು 5...

ಕುಕ್ಕೆ ದೇವಸ್ಥಾನದ ಇಒ ಡಾ.ನಿಂಗಯ್ಯ ಅವರಿಗೆ ಗೌರವಾರ್ಪಣೆ

ಸಂಘ ಸಂಸ್ಥೆಗಳಿ0ದ ಅಭಿಮಾನಿಗಳಿಂದ ಸನ್ಮಾನಗಳ ಮಹಾಪೂರ: ಶುಭ ಹಾರೈಕೆಯ ಹೊನಲುಸುಬ್ರಹ್ಮಣ್ಯ: ತನ್ನ ೩೫ ವರ್ಷಗಳ ಸರಕಾರಿ ಸೇವೆಯಿಂದ ಸೇವಾ ನಿವೃತ್ತಿ ಹೊಂದಲಿರುವ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಮತ್ತು ಸಾರ್ವಜನಿಕ ಸನ್ಮಾನ ಸುಬ್ರಹ್ಮಣ್ಯದ ವಲ್ಲೀಶ ಸಭಾಂಗಣದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮದಲ್ಲಿ ಅನೇಕ ಸಂಘ ಸಂಸ್ಥೆಗಳು, ನೂರಾರು ಅಭಿಮಾನಿಗಳು...

ಅಯ್ಯನಕಟ್ಟೆಯಲ್ಲಿ ಶ್ರೀ ವಿದ್ಯಾ ಟ್ಯೂಷನ್ ಸೆಂಟರ್ ಶುಭಾರಂಭ

ಅಯ್ಯನಕಟ್ಟೆಯಲ್ಲಿ ಶ್ರೀ ವಿದ್ಯಾ ಟ್ಯೂಷನ್ ಸೆಂಟರ್ ಮೇ.30ರಂದು ಶುಭಾರಂಭಗೊಂಡಿತು. ಬೆಳ್ಳಾರೆ ಕೆಪಿಎಸ್ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀನಾಥ್ ರೈ ದೋಳ್ತೋಡಿ ದೀಪ ಬೆಳಗುವ ಮೂಲಕ ಟ್ಯೂಷನ್ ಸೆಂಟರ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಮಾಲಕರಾದ ಸಂಕಪ್ಪ ರೈ ಕಳಂಜ, ಕಳಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರವಿಪ್ರಸಾದ್ ರೈ ಕಳಂಜ, ಟ್ಯೂಷನ್ ಸೆಂಟರ್ ನ...

ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿಗೆ ಎರಡು ರ‌್ಯಾಂಕ್ – ಸಾಧನೆ ಮಾಡಿದ ರಾಮಕುಂಜದ ಸಿಂಧೂರ ಹಾಗೂ ಗುತ್ತಿಗಾರಿನ ಶ್ರಾವ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ 2022- 23ನೇ ಶೈಕ್ಷಣಿಕ ಅವಧಿಯ ಅಂತಿಮ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಹಾವಿದ್ಯಾಲಯದ ತೃತೀಯ ಬಿಬಿಎ ವಿದ್ಯಾರ್ಥಿನಿ ಸಿಂಧೂರ ಕೆ. ಐದನೇ ರ‌್ಯಾಂಕ್ ಹಾಗೂ ಅಂತಿಮ ಪದವಿ ವಿದ್ಯಾರ್ಥಿನಿ ಶ್ರಾವ್ಯ ಎಂ.ಎಂ. ಇವರು ಹತ್ತನೇ ರ‌್ಯಾಂಕ್ ಪಡೆದಿರುತ್ತಾರೆ.ಬಿ.ಬಿ.ಎಂ. ವಿದ್ಯಾರ್ಥಿನಿಯಾಗಿರುವ ಸಿಂಧೂರ ರಾಮಕುಂಜದ ನಿವಾಸಿ. ಶ್ರಾವ್ಯ ಎಂ.ಎಂ. ಅವರು ಗುತ್ತಿಗಾರು ಗ್ರಾಮದ...

ಗುತ್ತಿಗಾರು : ರಸ್ತೆ ಬದಿ ಕಸ ಎಸೆದವರಿಗೆ ದಂಡ ವಿಧಿಸಿದ ಪಂಚಾಯತ್‌ – ಮೆಚ್ಚುಗೆ ವ್ಯಕ್ತಪಡಿಸಿದ ಜನತೆ

ಗುತ್ತಿಗಾರು : ಸ್ವಚ್ಛತೆಗಾಗಿ ಎಷ್ಟೆ ಜನ ಜಾಗೃತಿ ಮೂಡಿಸಿದರೂ ಕ್ಯಾರೆ ಅನ್ನದೇ ಕಸ ಎಸೆಯುವವರಿಗೆ ಗ್ರಾಮ ಪಂಚಾಯತ್ ದಂಡ ಪ್ರಯೋಗ ಮಾಡಿದೆ. ಎರಡು ದಿನದ ಹಿಂದೆ ಗುತ್ತಿಗಾರು-ಬಳ್ಪ ರಸ್ತೆಯ ಚತ್ರಪ್ಪಾಡಿ ಬಳಿ ಜೀಪಿನಲ್ಲಿ ಕಸ  ತಂದು ಹಾಕಲಾಗಿತ್ತು. ಕಸ ಎಸೆದರನ್ನು ದಾಖಲೆ ಸಮೇತ ಪತ್ತೆ ಮಾಡಿ ಗ್ರಾ.ಪಂ. ರೂ. 1000 ದಂಡ ವಿಧಿಸಿ, ಕಸ ಎಸೆದವರಿಂದಲೇ...

ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಗೆಲುವಿನ ವಿಶ್ವಾಸ : ಆಯನೂರು ಮಂಜುನಾಥ ಹಾಗೂ ಡಾ| ಮಂಜುನಾಥ

ಸುಳ್ಯ: ವಿಧಾನ ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಈ ಬಾರಿ ಗೆಲುವಿನ ವಿಶ್ವಾಸ ಇದೆ ಎಂದು ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಹಾಗೂ ಡಾ.ಕೆ.ಕೆ.ಮಂಜುನಾಥ್ ಹೇಳಿದ್ದಾರೆ. ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ 42...

ಕುರುಂಜಿಗುಡ್ಡೆ: ಪಿಕಪ್ ವಾಹನ ಪಲ್ಟಿ : ವಾಹನದಲ್ಲಿದ್ದವರಿಗೆ ಗಾಯ !

ಸುಳ್ಯದ ಕುರುಂಜಿಗುಡ್ಡೆಯಲ್ಲಿ ಪಿಕಪ್ ವಾಹನ ವೊಂದು ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದವರಿಗೆ ಗಾಯವಾಗಿದೆ. ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.

ನರ್ಸರಿ ಶಿಕ್ಷಕಿ ತರಬೇತಿ ಪಡೆಯಲು ಈಶ ವಿದ್ಯಾಲಯದಲ್ಲಿ ಸುವರ್ಣಾವಕಾಶ

ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಯೋಜನೆಯಡಿ ಕೇಂದ್ರ ಯೋಜನಾ ಆಯೋಗದ ಮುಖಾಂತರ ಭಾರತ್ ಸೇವಕ್ ಸಮಾಜ್ BSS ಸುಮಾರು ೫೦೦ಕ್ಕಿಂತಲೂ ಹೆಚ್ಚು ಅಲ್ಪಾವಧಿಯ ವೃತ್ತಿಪರ ಕೋರ್ಸ್ಗಳನ್ನು ನಡೆಸುತ್ತಿದ್ದು ಅದರಲ್ಲಿ DMED  ಕೋರ್ಸ್ ಒಂದಾಗಿದೆ.ಈ ತರಬೇತಿಯು ಒಂದು ವರ್ಷ ಅವಧಿಯದ್ದಾಗಿದೆ.ಪಿಯುಸಿ ಮತ್ತು ಇನ್ನಿತರ ಅರ್ಹತೆಯನ್ನು ಪಡೆದಂತಹ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಈ ಶಿಕ್ಷಕಿ ತರಬೇತಿಯನ್ನು ಪಡೆಯಬಹುದಾಗಿದೆ....
Loading posts...

All posts loaded

No more posts

error: Content is protected !!