Ad Widget

ಸುಬ್ರಹ್ಮಣ್ಯ : ಫೆ.08ರಂದು “ತಾಲೂಕು ಭಜನೋತ್ಸವ – 2026” ; ಆಯ್ದ ಭಜನಾ ತಂಡಗಳಿಂದ ‘ಭಜನಾ ಸಂಕೀರ್ತನೆ’ ಹಾಗೂ ಭಜನಾ ಮಂಡಳಿಗಳಿಂದ ‘ಕುಣಿತ ಭಜನೆ’ ; ಸಮಾರೋಪ ಸಮಾರಂಭದಲ್ಲಿ 1 ಸಾವಿರಕ್ಕೂ ಅಧಿಕ ಭಜಕರಿಂದ ಏಕಕಾಲದಲ್ಲಿ ‘ಕುಣಿತ ಭಜನಾ ಪ್ರದರ್ಶನ’

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್(ರಿ.) ಸುಳ್ಯ ತಾಲೂಕು, ತಾಲೂಕು ಭಜನೋತ್ಸವ-2026ರ ಸಮಿತಿ ಸುಬ್ರಹ್ಮಣ್ಯ ವಲಯ ಹಾಗೂ ಸ್ಥಳೀಯ ಎಲ್ಲಾ ಸಂಘ-ಸಂಸ್ಥೆಗಳ ಮತ್ತು ಭಜಕರ ಸಹಯೋಗದಲ್ಲಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಶ್ರೀಮತಿ ಹೇಮಾವತಿ.ವಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ...

ಬೆಳ್ಳಾರೆ : ಪಳ್ಳಿಮಜಲು ಮಸೀದಿಯಲ್ಲಿ ಲೈಲತುಲ್ ಬರಾಅ:

ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯಲ್ಲಿ ರಮಾಲಾನ್ ತಿಂಗಳಿಗಿಂತ ಹದಿನೈದು ದಿನ ಮುನ್ನ ಆಗಮಿಸುವ ಲೈಲತುಲ್ ಬರಾಅ:(ಶಬೇ ಬರಾಅತ್)ರಾತ್ರಿಯನ್ನು ವರ್ಷಂಪ್ರತಿಯಂತೆ ಅರೆಬಿಕ್ ತಿಂಗಳ ಶಅಬಾನ್ 15(ಫೆ 2)ರಂದು ಮುಸ್ಸಂಜೆ ನಡೆಸಲಾಯಿತು. ಮಗ್ರಿಬ್ ನಮಾಝಿನ ನಂತರ ದೀರ್ಘಾಯುಷ್ಯ ಲಭಿಸಲು, ಆಹಾರದಲ್ಲಿ ವಿಶಾಲತೆ ಲಭಿಸಲು, ಸರ್ವ ಆಪತ್ತು, ವಿಪತ್ತುಗಳಿಂದ ರಕ್ಷಣೆ ಹೊಂದಲುಕ್ರಮವಾಗಿ ಮೂರು ಯಾಸೀನ್ ಸೂರತುಗಳನ್ನು ಪಠಿಸಲಾಯಿತು....
Ad Widget

“ಧಾರ್ಮಿಕ ಆಚರಣೆಯು  ಸಂಘ ಮತ್ತು ಸಮುದಾಯವನ್ನು ಶ್ರೀಮಂತಗೊಳಿಸುತ್ತದೆ” : ಗಣೇಶ್ ಪಾರಕಟ್ಟ ; ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ

“ಧಾರ್ಮಿಕ ಆಚರಣೆಗಳು ಸಂಘ ಮತ್ತು ಸಮುದಾಯಗಳನ್ನು ಶ್ರೀಮಂತ ಗೊಳಿಸುತ್ತವೆ,  ಸೇವೆಯೆ ಸಂಘಗಳ ಕರ್ತವ್ಯ ಹಾಗೂ ಮುಖ್ಯ ದ್ಯೇಯವಾಗರಲಿ” ಎಂದು ಕ್ಯಾoಪ್ಕೋ ನಿರ್ದೇಶಕ ಗಣೇಶ್ ಪಾರಕಟ್ಟ ಹೇಳಿದರು. ಅವರು ಫೆಬ್ರವರಿ 1 ರಂದು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಸುಳ್ಯದ ಕೇರ್ಪಳ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಸಾರ್ವಜನಿಕ ಶ್ರೀ...

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಇತಿಹಾಸ ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವವು ಫೆ.08, 9 ಹಾಗೂ 10 ರಂದು ನಡೆಯಲಿದ್ದು, ಫೆ.02 ರಂದು ಗೊನೆಮುಹೂರ್ತ ನಡೆಯಿತು.ದೇವಸ್ಥಾನದ ಅರ್ಚಕರಾದ ರಾಮಚಂದ್ರ ಪಿ.ಜಿ.ಪೂಜಾ ಕಾರ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ವೈದಿಕ ಮುಖ್ಯಸ್ಥರಾದ ರಾಜಾರಾಮ ರಾವ್ ಉದ್ದಂಪಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಜೇಶ್‌ ಭಟ್‌ ಬಾಂಜಿಕೋಡಿ, ಸದಸ್ಯರಾದ ಶಿವರಾಮ ನೆಕ್ರೆಪ್ಪಾಡಿ, ಮುರಳೀಧರ ಕೊಚ್ಚಿ,...

ಹರಿಹರ ಪಳ್ಳತಡ್ಕ : ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಸಂಪನ್ನ

ಹರಿಹರ ಪಳ್ಳತ್ತಡ್ಕ ಗ್ರಾಮದ ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಜ.31 ರಂದು ಶ್ರೀ ಗುಳಿಗರಾಜ ದೈವದ ವಾರ್ಷಿಕ ನೇಮೋತ್ಸವವು ನಡೆಯಿತು.ಬೆಳಿಗ್ಗೆ ಗಣಹೋಮ, ಭಂಡಾರ ಹೊರಡುವುದು, ಶಿವಪೂಜೆ, ಬ್ರಹ್ಮ ರಾಕ್ಷಸ ಪೂಜೆ ಹಾಗೂ ಕಲಶ ಪೂಜೆ ನಡೆದು ಮದ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು.ನಂತರ ಸಂಜೆ ದೀಪಾರಾಧನೆ, ಮಹಾತಂಬಿಲ ಹಾಗೂ ಅನ್ನಸಂತರ್ಪಣೆ ನಡೆದು ರಾತ್ರಿ ಯಕ್ಷಮಣಿ ಗಿರೀಶ್...

ಪಂಜ : ಯಕ್ಷಗಾನ ಪದರ್ಶನ – ಸನ್ಮಾನ

ಯಕ್ಷ ಮಿತ್ರರು ಪಂಜ ಇದರ ಆಶ್ರಯದಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಇದರ ಸಹಯೋಗದೊಂದಿಗೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ದ್ವಜಾರೋಹನದ ಅಂಗವಾಗಿ  ಸಶಿಹಿತ್ಲು ಶ್ರೀ ಭಗವತೀ ಪ್ರಸಾದಿತ ಯಕ್ಷಗಾನ ಮಂಡಳಿ ಸಶಿಹಿತ್ಲು ಮಂಗಳೂರು ಇವರಿಂದ ಬಂಟಮಲೆ ಭಾರ್ಗವಿ ಎಂಬ ತುಳು ಯಕ್ಷಗಾನ ಪದರ್ಶನಗೊಂಡಿತು. ಈ  ಸಂದರ್ಭದಲ್ಲಿ ಪಂಜ ಶ್ರೀ...

ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಫೆ.15 ಹಾಗೂ 16ರಂದು “ಮಹಾ ಶಿವರಾತ್ರಿ ಉತ್ಸವ” ಹಾಗೂ “ಅಹೋರಾತ್ರಿ ಭಜನಾ ಸೇವೆ”

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಫೆ.15 ಆದಿತ್ಯವಾರ ಹಾಗೂ ಫೆ.16 ಸೋಮವಾರದಂದು “ಮಹಾ ಶಿವರಾತ್ರಿ ಉತ್ಸವ” ಹಾಗೂ “ಆಹೋರಾತ್ರಿ ಭಜನಾ ಸೇವೆ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ, ಶ್ರೀ ರಂಗಪೂಜೆ, ನಾಲ್ಕು ಯಾಮಗಳಲ್ಲಿ ಶಿವ ಕಲ್ಪೋಕ್ತ ಪೂಜೆ” ನಡೆಯಲಿದ್ದು, ಫೆ.15 ರಂದು ಬೆಳಿಗ್ಗೆ 6:00 ಗಂಟೆಗೆ ದೀಪಾರಾಧನೆಯೊಂದಿಗೆ ಅಹೋರಾತ್ರಿ ಭಜನಾ...

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೈ.ಎಸ್ ಹರಗಿ ಅಧಿಕಾರ ಸ್ವೀಕಾರ

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಯಮನೂರಪ್ಪ ಸಿದ್ಧಪ್ಪ ಹರಗಿ(ವೈ.ಎಸ್ ಹರಗಿ) ರವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಮೂಲತಃ ಮೈಸೂರು ಜಿಲ್ಲೆಯವರಾದ ಇವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರು ಸುಳ್ಯಕ್ಕೆ ವರ್ಗಾವಣೆಗೊಂಡಿದ್ದಾರೆ.

ಬೆಳ್ಳಾರೆಯಲ್ಲಿ ಬೃಹತ್ ಹಿಂದೂ ಸಂಗಮ ; ವೈಭವದ ಶೋಭಾಯಾತ್ರೆ

ಬೆಳ್ಳಾರೆ ಮಂಡಲದ ಬೆಳ್ಳಾರೆ ಪೆರುವಾಜೆ, ಕೊಡಿಯಾಲ ಗ್ರಾಮದವತಿಯಿಂದ ಹಿಂದೂ ಸಮಾಜದ ಏಕತೆ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಹಾಗೂ ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸುವ ಉದ್ದೇಶದಿಂದ ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆಯು ಫೆ.1 ರಂದು ಬೆಳ್ಳಾರೆಯ ಮಾಸ್ತಿಕಟ್ಟೆಯಿಂದ ನಡೆಯಿತು.ಶೋಭಾಯಾತ್ರೆಯ ಬಳಿಕ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಸಭಾ ಕಾರ್ಯಕ್ರಮ ಜರುಗಿತು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:02-02- 2026 ಸೋಮವಾರ*01,🐏ಮೇಷ ರಾಶಿ🐏*🌻,ಪ್ರಮುಖ ಕಾರ್ಯಕ್ರಮಗಳು ಮುಂದೂಡಲ್ಪಡುತ್ತವೆ. ಕಠಿಣ ಪರಿಶ್ರಮದಿಂದ ನೀವು ದೂರ ಪ್ರಯಾಣ ಮಾಡಬೇಕಾಗುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಮಿತ್ರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗುತ್ತದೆ,ಪರಿಹಾರ:-ಶ್ರೀ ಗುರುವಿನ ಆಂಜನೇಯನ ದರ್ಶನ ಮಾಡಿ,*02,🐂ವೃಷಭ ರಾಶಿ🐂*🌻,ಪ್ರಯಾಣದಲ್ಲಿ ರಸ್ತೆ ಅಡಚಣೆ ಉಂಟಾಗುತ್ತವೆ. ಕೈಗೊಂಡ ಕೆಲಸಗಳಲ್ಲಿ ಆತುರ ಒಳ್ಳೆಯದಲ್ಲ. ಪ್ರತಿಸ್ಪರ್ಧಿಗಳಿಂದ ಹಣಕಾಸಿನ ಒತ್ತಡ...
Loading posts...

All posts loaded

No more posts

error: Content is protected !!