ಬೆಳ್ಳಾರೆಯಲ್ಲಿ ಬೃಹತ್ ಹಿಂದೂ ಸಂಗಮ ; ವೈಭವದ ಶೋಭಾಯಾತ್ರೆ

ಬೆಳ್ಳಾರೆ ಮಂಡಲದ ಬೆಳ್ಳಾರೆ ಪೆರುವಾಜೆ, ಕೊಡಿಯಾಲ ಗ್ರಾಮದ
ವತಿಯಿಂದ ಹಿಂದೂ ಸಮಾಜದ ಏಕತೆ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಹಾಗೂ ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸುವ ಉದ್ದೇಶದಿಂದ ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆಯು ಫೆ.1 ರಂದು ಬೆಳ್ಳಾರೆಯ ಮಾಸ್ತಿಕಟ್ಟೆಯಿಂದ ನಡೆಯಿತು.
ಶೋಭಾಯಾತ್ರೆಯ ಬಳಿಕ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಸಭಾ ಕಾರ್ಯಕ್ರಮ ಜರುಗಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಚಾಲಕ ಸುದೀಶ್ ರವರು ಪ್ರಧಾನ ಭಾಷಣ ಮಾಡಿದರು.
ವೇದಿಕೆಯಲ್ಲಿ ಬೆಳ್ಳಾರೆ ಮಂಡಲ ಹಿಂದೂ ಸಂಗಮ ಸಂಚಾಲಕ ಅರುಣಶಂಕರ ನೆಟ್ಟಾರು, ಪ್ರಗತಿಪರ ಕೃಷಿಕರಾದ ಲಕ್ಷ್ಮೀನಾರಾಯಣ ಶ್ಯಾನ್ಭೋಗ್, ನಾಟಿವೈಧ್ಯೆ ಭಾಗೀರಥಿ ಕೊಡಿಯಾಲ, ಕಲಾವಿದ ಐತ್ತ ಪಾಟಾಜೆ, ಶ್ರೀಮತಿ ರತ್ನಾವತಿ ನೆಟ್ಟಾರು, ನಿವೃತ್ತ ಯೋಧ ಕ್ಯಾ. ಸುಧಾನಂದ ಪೆರುವಾಜೆ, ಮುಕ್ಕೂರು ಹಾಲು‌ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಯಾಕರ ಆಳ್ವ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಡಾ. ನರಸಿಂಹ ಶರ್ಮ ಕಾನಾವು ಉಪಸ್ಥಿತರಿದ್ದರು‌.
ಶೈಲೇಶ್ ನೆಟ್ಟಾರು ಸ್ವಾಗತಿಸಿ, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು ಪ್ರಾಸ್ತಾವಿಕ ಮಾತನ್ನಾಡಿದರು. ಶಿವಪ್ರಸಾದ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಮೊದಲು ಕೃತಿಕಾ ತಂಡದಿಂದ ಸಮೂಹ ಗೀತೆ,ಅವನಿ ಕೋಡಿಬೈಲು ರವರಿಂದ ವಂದೇ ಮಾತರಂ ನೃತ್ಯ,ದೇವಿಕಾ ಪುತ್ತೂರು ರವರಿಂದ ಹರಿಕಥೆ ನಡೆಯಿತು.

ಸರ್ವಾಕರ್ಷಕ ಶೋಭಾಯಾತ್ರೆ : ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ವೇದಶ್ಲೋಕಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬೆಳ್ಳಾರೆ ಮುಖ್ಯರಸ್ತೆಯಲ್ಲಿ ಗೌರಿಪುರಂ ರಾಜರಾಜೇಶ್ವರಿ ದೇವಾಲಯದ ಸ್ಥಬ್ದ ಚಿತ್ರ,ಭಾರತ ಮಾತೆಯ ಭಾವಚಿತ್ರ,ವಿವಿಧ ವೇಷ ಭೂಷಣಗಳೊಂದಿಗೆ, ಸಿಂಗಾರಿ ಮೇಳದ ಚೆಂಡೆ ವಾದನದೊಂದಿಗೆ, ಮಕ್ಕಳ ಕುಣಿತ ಭಜನೆಯೊಂದಿಗೆ ವೈಭವದ ಶೋಭಾಯಾತ್ರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದವರೆಗೆ ನಡೆಯಿತು. ಆಕರ್ಷಕ ಸುಡುಮದ್ದಿನ ಪ್ರದರ್ಶನ ನಡೆಯಿತು. ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading