ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಫೆ.15 ಹಾಗೂ 16ರಂದು “ಮಹಾ ಶಿವರಾತ್ರಿ ಉತ್ಸವ” ಹಾಗೂ “ಅಹೋರಾತ್ರಿ ಭಜನಾ ಸೇವೆ”

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಫೆ.15 ಆದಿತ್ಯವಾರ ಹಾಗೂ ಫೆ.16 ಸೋಮವಾರದಂದು “ಮಹಾ ಶಿವರಾತ್ರಿ ಉತ್ಸವ” ಹಾಗೂ “ಆಹೋರಾತ್ರಿ ಭಜನಾ ಸೇವೆ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ, ಶ್ರೀ ರಂಗಪೂಜೆ, ನಾಲ್ಕು ಯಾಮಗಳಲ್ಲಿ ಶಿವ ಕಲ್ಪೋಕ್ತ ಪೂಜೆ” ನಡೆಯಲಿದ್ದು, ಫೆ.15 ರಂದು ಬೆಳಿಗ್ಗೆ 6:00 ಗಂಟೆಗೆ ದೀಪಾರಾಧನೆಯೊಂದಿಗೆ ಅಹೋರಾತ್ರಿ ಭಜನಾ ಸೇವೆ ಪ್ರಾರಂಭ, ಬೆಳಿಗ್ಗೆ 8:00 ಗಂಟೆಗೆ ಶ್ರೀ ಬಸವೇಶ್ವರ ದೇವರಿಗೆ ಬೆಳಗ್ಗಿನ ಮಹಾಪೂಜೆ, ಪ್ರಸಾದ ವಿತರಣೆ, ಮದ್ಯಾಹ್ನ 12:30ಕ್ಕೆ ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ಸಹಿತ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6:30ರಿಂದ ರುದ್ರಾಭಿಷೇಕ ಸಹಿತ ಶಿವಕಲ್ಪೋಕ್ತ ಪೂಜೆ, ರಾತ್ರಿ 8:00 ಗಂಟೆಗೆ ರಂಗಪೂಜೆ ಸಹಿತ ರಾತ್ರಿಯ ಮಹಾಪೂಜೆ, ರಾತ್ರಿ 10:30ರಿಂದ ರುದ್ರಾಭಿಷೇಕ ಸಹಿತ ಶಿವಕಲ್ಪೋಕ್ತ ಪೂಜೆ ಹಾಗೂ ರಾತ್ರಿ 1:00 ಗಂಟೆಯಿಂದ ರುದ್ರಾಭಿಷೇಕ ಸಹಿತ ಶಿವಕಲ್ಪೋಕ್ತ ಪೂಜೆ ನಡೆಯಲಿದೆ.
ಫೆ.16 ರಂದು ಪ್ರಾತಃಕಾಲ 4:00 ಗಂಟೆಯಿಂದ ರುದ್ರಾಭಿಷೇಕ ಸಹಿತ ಶಿವಕಲ್ಪೋಕ್ತ ಪೂಜೆ ಹಾಗೂ ಪ್ರಾತಃಕಾಲ 6:00 ಗಂಟೆಯಿಂದ ಮಹಾಪೂಜೆ ಭಜನಾ ಮಂಗಳೋತ್ಸವ ನೆರವೇರಲಿದೆ ಎಂದು ಶ್ರೀದೇವಳದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading