ಡಿ.10 ; ನೆಲ್ಲೂರು ಕೆಮ್ರಾಜೆ ಸೊಸೈಟಿಯಲ್ಲಿ ತಾಳೆ, ಕಾಳುಮೆಣಸು ಕೃಷಿ ಹಾಗೂ ಎಲೆ ಚುಕ್ಕಿ ರೋಗದ ಬಗ್ಗೆ ಮಾಹಿತಿ ಕಾರ್ಯಕ್ರಮ

ತೋಟಗಾರಿಕೆ ಇಲಾಖೆ, ಸುಳ್ಯ ಇದರ ವತಿಯಿಂದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ತಾಳೆ ಮತ್ತು ಕಾಳುಮೆಣಸು ಬೇಸಾಯ ಹಾಗೂ ಅಡಿಕೆ ಎಲೆ ಚುಕ್ಕೆ ರೋಗ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಡಿ.10 ರಂದು ಸಹಕಾರ ಸಂಘದ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ...

ಡಿ.11 ರಂದು ಸರಕಾರಿ ನೌಕರರ ಸಂಘದ ವತಿಯಿಂದ ಕ್ರೀಡಾಕೂಟ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಸುಳ್ಯ ಇದರ ವತಿಯಿಂದ ಸರಕಾರಿ ನೌಕರರ ಕ್ರೀಡಾಕೂಟ ಡಿ.11 ರಂದು ರಂದು ಜೂನಿಯರ್ ಕಾಲೇಜ್ ನ ಮೈದಾನದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ. ಮಹಾದೇವ್ ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್. ಎನ್ ಆಗಮಿಸಲಿದ್ದಾರೆ....
Ad Widget

ಎಲಿಮಲೆ : ಸಮಾಜಸೇವೆಗಾಗಿ ಚಂದ್ರಶೇಖರ ಕಡೋಡಿಯವರಿಗೆ ಸನ್ಮಾನ

ಗುತ್ತಿಗಾರಿನಲ್ಲಿ ಎಲಿಮಲೆಯಲ್ಲಿ ಡಿ.4 ರಂದು ನಡೆದ ರಕ್ತದಾನ ಶಿಬಿರದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ನೇತೃತ್ವದಲ್ಲಿ ಮಾಡುತ್ತಿರುವ ಸಮಾಜಸೇವೆಯನ್ನು ಪರಿಗಣಿಸಿ ಚಂದ್ರಶೇಖರ ಕಡೋಡಿಯವರನ್ನು ಸನ್ಮಾನಿಸಲಾಯಿತು. ತಾಲೂಕು ವೈಧ್ಯಾಧಿಕಾರಿ ಡಾ. ನಂದಕುಮಾರ್ ಸನ್ಮಾನ ನೆರವೇರಿಸಿದರು. ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಸುಲೋಚನಾ ದೇವ, ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಡಾ. ಅಶೋಕ್,ಸಿ ಎಚ್ ಓ...

ಡಿ.6,7:ಬೆಳ್ಳಿಪ್ಪಾಡಿ ಶ್ರೀ ಉಳ್ಳಾಕುಲು ಧೂಮಾವತಿ ದೈವದ ನೇಮೋತ್ಸವ

ಬೆಳ್ಳಿಪ್ಪಾಡಿ-ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ನಡುಬೆಟ್ಟು ಶ್ರೀ ಉಳ್ಳಾಕುಲು ಧೂಮಾವತಿ ದೈವಸ್ಥಾನದಲ್ಲಿ ಡಿ. 6 ಮತ್ತು 7 ರಂದು ಕಾಲಾವಾಧಿ ನೇಮೋತ್ಸವವು ನಡೆಯಿತು. ಈ ಸಂದರ್ಭದಲ್ಲಿ ನಾಲ್ಕು ವರ್ಗ ಊರ ಸಮಸ್ತರು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಆಗಮಿಸಿ ಶ್ರೀ ದೈವದ ಪ್ರಸಾದ ಸ್ವೀಕರಿಸಿ ನಂತರ ಅನ್ನಸಂತರ್ಪಣೆ ನಡೆಯಿತು.

ಪ.ಜಾತಿ & ಪ.ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನ

2021-22 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ / ಸ್ನಾತಕೋತ್ತರ ಪದವಿ / ಮೆಡಿಕಲ್ / ಇಂಜಿನಿಯರಿಂಗ್ ಇತರೆ ಕೋರ್ಸುಗಳಲ್ಲಿ ಶೇಕಡಾ 60% ಹೆಚ್ಚು ಅಂಕಗಳಿಸಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಲು ಅಂತರ್ಜಾದಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಯನ್ನು ಸಲ್ಲಿಸಿದ ನಂತರ...

ಸುಳ್ಯ : ಕುಂಭಕ್ಕೋಡು ಶುಭಕರ ರಾವ್ ರಸ್ತೆ ಉದ್ಘಾಟನೆ

ಸುಳ್ಯ ಒಡಬಾಯಿ ವಿನು ನಗರಕ್ಕೆ ತೆರಳುವ ರಸ್ತೆ ಕಾಂಕ್ರೀಟೀಕರಣಗೊಂಡು ಕುಂಭಕ್ಕೋಡು ಶುಭಕರ ರಾವ್ ರಸ್ತೆ ( ಕೆ.ಎಸ್.ರಾವ್ ರಸ್ತೆ) ಇತ್ತೀಚೆಗೆ ಶುಭಾರಂಭಗೊಂಡಿತು. ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ರಸ್ತೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮುಖ್ಯಾಧಿಕಾರಿ ಸುಧಾಕರ ಎಚ್., ನ.ಪಂ.ಸದಸ್ಯ ಬುದ್ಧ ನಾಯ್ಕ್, ರಮೇಶ್ ಕಾಮತ್ ಕುಂಭಕ್ಕೋಡು, ಶಶಿಕಲಾ ಶುಭಕರ...

ಎಲಿಮಲೆ : ಬೃಹತ್ ರಕ್ತದಾನ ಶಿಬಿರ – 62 ಮಂದಿ ರಕ್ತದಾನ

ಮಾವಿನಕಟ್ಟೆ ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್, ಗ್ರಾಮ ಪಂಚಾಯತ್ ದೇವಚಳ್ಳ, ಆರೋಗ್ಯ ಉಪಕೇಂದ್ರ ಎಲಿಮಲೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರೋಟರಿ ಕ್ಯಾಂಸ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ, ರಕ್ತವರ್ಗೀಕರಣ ಹಾಗೂ ಮಾಹಿತಿ ಶಿಬಿರ ಹಾಗೂ 100 ಬಾರಿಗೆ ರಕ್ತದಾನ ಮಾಡುತ್ತಿರುವ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ ಕಾರ್ಯಕ್ರಮ...

ಸುಳ್ಯ : ಶೈನ್ ಬ್ರೈಟ್ ಮೆನ್ಸ್ ಫ್ಯಾಶನ್ ಹೌಸ್ ಶುಭಾರಂಭ

ಸುಳ್ಯದ ರಥಬೀದಿಯಲ್ಲಿರುವ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಶೈಲು ಆರಂಬೂರು ಮಾಲಕತ್ವದ ನೂತನ ಮೆನ್ಸ್ ಫ್ಯಾಶನ್ ಮಳಿಗೆ ಶೈನ್ ಬ್ರೈಟ್ ನ.28 ರಂದುಶುಭಾರಂಭಗೊಂಡಿತು. ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಇಲ್ಲಿ ಹುಡುಗರ ಹೊಸ ವಿನ್ಯಾಸದ ಬ್ರಾಂಡೆಡ್ ಕಂಪೆನಿಯ ಉಡುಪುಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

ಎ ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ‘ಶಾಂತಿನಗರ ಕ್ಷೇತ್ರದೊಡೆಯನೇ’ ಕನ್ನಡ ಫ್ಯೂಷನ್ ಸಾಂಗ್‌ನ ಪೋಸ್ಟರ್ ಬಿಡುಗಡೆ

ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ.ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಇನ್ನೊಂದು ಕನ್ನಡ ಫ್ಯೂಷನ್ ಸಾಂಗ್ 'ಶಾಂತಿನಗರ ಕ್ಷೇತ್ರದೊಡೆಯನೇ' ಪದ್ಯದ ಸಾಹಿತ್ಯವನ್ನು ಚಿದು ಪಾಂಗಲ್ಪಾಡಿ ಬರೆದಿದ್ದು, ತೇಜಸ್ವಿನಿ ಕುಕ್ಕಿಲ ಇವರು ಹಾಡಿದ್ದಾರೆ. ಪ್ರಸಾದ್ ಸ್ಟುಡಿಯೋದ ಚಂದ್ರಶೇಖರ್ ಶೆಟ್ಟಿ ಮತ್ತು ಅಶ್ವಥ್ ಛಾಯಾಗ್ರಹಣ, ಹಿತೇಶ್ ಪಮ್ಮನಮಜಲು ಸಂಕಲನ, ಕೀರ್ತಿರಾಜ್ ಕೆ ಸಂಗೀತ ಮತ್ತು ಪದ್ಯದ...

ಡಿ.15 -16 : ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ. 15 ಮತ್ತು 16ರಂದು ಕ್ಷೇತ್ರದ ತಂತ್ರಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರೋತ್ಸವ ನಡೆಯಲಿರುವುದು. ಡಿ.15ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಆಚಾರ್ಯವರಣ, ಸ್ವಸ್ತಿ ಪುಣ್ಯಹ ವಾಚನ, ಮಹಾ ಗಣಪತಿ ಹೋಮ, ಚಂಡಿಕಾಯಾಗ ಪ್ರಾರಂಭ, ಹಸಿರು ಹೊರೆ ಕಾಣಿಕೆ ಸಮರ್ಪಣೆ, ಸುಹಾಸಿನಿ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ...
Loading posts...

All posts loaded

No more posts

error: Content is protected !!