Ad Widget

ಏಕ ಕಾಲದಲ್ಲಿ ಮೊಬೈಲ್‌ ಗಳಿಗೆ ಎಮರ್ಜೆನ್ಸಿ ಅಲರ್ಟ್ ಪ್ರಾಯೋಗಿಕ ಪರೀಕ್ಷೆ.

ದೇಶದೆಲ್ಲೆಡೆ ಇಂದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ವತಿಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟೆಮ್ ಮೂಲಕ ಕಳುಹಿಸಲಾದ ಎಮರ್ಜೆನ್ಸಿ ಅಲರ್ಟ್ ಮೆಸೆಜ್ ಎಲ್ಲರ ಮೊಬೈಲ್ ಗಳಲ್ಲು ರಿಂಗಣಿಸಿದ್ದು ದೇಶದಲ್ಲಿ ಮೊದಲ ಬಾರಿಗೆ ಈ ಪ್ರಯೋಗವನ್ನು ನಡೆಸಲಾಗಿದೆ . ಇದು ಇಂದು ಸುಮಾರು 11:45 ಕ್ಕೆ ಆಗ್ಲಾ ಭಾಷೆಯಲ್ಲಿ ಮತ್ತು 11:58 ಗಂಟೆಗೆ ಅಯಾ ರಾಜ್ಯಗಳ ಭಾಷೆಯಲ್ಲಿ...

“ಅಮರ ಸುಳ್ಯ ಸುದ್ದಿ” ದೀಪಾವಳಿ ವಿಶೇಷಾಂಕಕ್ಕೆ ಮಕ್ಕಳ ಫೋಟೋ ಸ್ಪರ್ಧೆ ಹಾಗೂ ಲೇಖನಗಳಿಗೆ ಆಹ್ವಾನ

ಸುಳ್ಯದ ಅಮರ ಸುಳ್ಯ ಸುದ್ದಿ ವಾರಪತ್ರಿಕೆ 6 ನೇ ಬಾರಿಗೆ ದೀಪಾವಳಿ ವಿಶೇಷಾಂಕ ಹೊರ ತರಲು ತಯಾರಿ ಆರಂಭಗೊಂಡಿದೆ. ಮುದ್ದು ಮಕ್ಕಳ ಫೋಟೋ ಸ್ಪರ್ಧೆ , ವಿವಿಧ ಅಂಕಣಗಳು, ಕಥೆ,ಕವನ ಗಳಿಗೆ ಆಹ್ವಾನ ನೀಡಲಾಗಿದೆ. ಆಸಕ್ತ ಬರಹಗಾರರು ಕಥೆ, ಕವನ ಲೇಖನಗಳನ್ನು ಅಕ್ಟೋಬರ್ 15 ರ ಒಳಗೆ ಕಳಿಸಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9449387044ಕಳುಹಿಸಬೇಕಾದ ವಿಳಾಸ...
Ad Widget

ಯುವ ಬ್ರಿಗೇಡ್ ಕಾರ್ಯಕರ್ತ ಹಾಗೂ ಜೈನ ಮುನಿಗಳ ಹತ್ಯೆ ಮಾಡಿದವರಿಗೆ ಕಠಿಣ ಕಾನೂನು ಕ್ರಮಕ್ಕೆ ರಾಜ್ಯಪಾಲರಿಗೆ ಸುಳ್ಯ ಯುವ ಬ್ರಿಗೇಡ್ ಮನವಿ

ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ಹತ್ಯೆ ಮತ್ತು ಚಿಕ್ಕೋಡಿಯ ಜೈನ ಮುನಿಗಳ ಹತ್ಯೆ ಖಂಡಿಸಿರುವ ಸುಳ್ಯದ ಯುವ ಬ್ರಿಗೇಡ್, ಸೂಕ್ತ ರೀತಿಯ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಮನೀಶ್ ಗೂನಡ್ಕ,...

ಸರ್ಕಾರಿ ಶಾಲೆಯಲ್ಲೂ ಸ್ಮಾರ್ಟ್ ಕ್ಲಾಸ್ – ಜಿಲ್ಲೆಯ 200 ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಮುಂದಾಗಿರುವ ಸೆಲ್ಕೋ ಸಂಸ್ಥೆ

ಸೆಲ್ಕೋ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ "ಇ-ಶಾಲಾ"ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೇವಲ ಖಾಸಗಿ ಶಾಲೆಗಳ ಮಕ್ಕಳಿಗಷ್ಟೇ ಸೀಮಿತವಾಗಿದ್ದ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಇನ್ನು ಮುಂದೆ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೂ ಲಭ್ಯವಾಗಲಿದೆ. ಹೌದು,ಮೆಂಡಾ ಫೌಂಡೇಶನ್ ಸಹಯೋಗದಲ್ಲಿ ಸೆಲ್ಕೋ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಹಿಂದುಳಿದ...

ಮಂಜುಶ್ರೀ ಕೆದಂಬಾಡಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪುತ್ತೂರು ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ಮಂಜುಶ್ರೀ ಕೆದಂಬಾಡಿ ೫೯೧ ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಈಕೆ ಉಬರಡ್ಕ ಮಿತ್ತೂರು ಗ್ರಾಮದ ಕೆದಂಬಾಡಿ ತೀರ್ಥರಾಮ ಹಾಗೂ ಸಂಧ್ಯಾ ದಂಪತಿಗಳ ಪುತ್ರಿ.

ಯುವಸ್ಪೂರ್ತಿ ಸಂಘ ಪುತ್ಯ ಪೆರಾಜೆ (ಕರಂಟಡ್ಕ) ಇದರ ವತಿಯಿಂದ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

ಸ.ಕಿ.ಪ್ರಾ.ಶಾಲೆ ಪುತ್ಯ ಪೆರಾಜೆ ಶಾಲಾ ವಠಾರದಲ್ಲಿ ಯುವಸ್ಪೂರ್ತಿ ಸಂಘ ಪುತ್ಯ ಪೆರಾಜೆ (ಕರಂಟಡ್ಕ) ಇದರ ವತಿಯಿಂದ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆ.18 ರಂದು ನಡೆಯಿತು. ಕಾರ್ಯಕ್ರವನ್ನು ಪರಮೇಶ್ವರ ಪೆರಂಗಜೆ ಉದ್ಘಾಟಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಹಾಗೂ ಜಾರುಕಂಬ ಸ್ಪರ್ಧೆ ನಡೆಸಲಾಯಿತು. ಸಭಾ...

ನಿಂತಿಕಲ್ಲು: ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ &ಫರ್ನಿಚರ್ ಸಂಸ್ಥೆಯ “ಲಕ್ಕೀ ಡ್ರಾ” ಯೋಜನೆಯ ಪ್ರಥಮ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ & ಫರ್ನಿಚರ್ಸ್ ಸಂಸ್ಥೆಯ ವಿನೂತನ "ಲಕ್ಕೀ ಡ್ರಾ" ಯೋಜನೆಯ ಪ್ರಥಮ ಡ್ರಾ ಇತ್ತೀಚೆಗೆ ನಡೆದಿದ್ದು, ಇದರ ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಡ್ರಾ ದ ಬಹುಮಾನ ಫ್ಲೈವುಡ್ ಗೋಡ್ರೇಜ್ ತ್ರಿಷಾ ಸುಬ್ರಹ್ಮಣ್ಯ ಇವರಿಗೆ ಲಭಿಸಿದ್ದು, ವಿಜೇತರಿಗೆ ಸಂಸ್ಥೆಯ ಮಾಲಕರಾದ ಪ್ರಕಾಶ್ ಮಾಣಿಬೈಲು...

ಶ್ರದ್ಧಾ-ಭಕ್ತಿಯ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.12ರಿಂದ ಫೆ.16ರ ತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಫೆ.12ರಂದು ಬೆಳಗ್ಗೆ ಉಗ್ರಾಣ ಮುಹೂರ್ತ ನಡೆದು ಸಂಜೆ ತಂತ್ರಿಗಳ ಆಗಮನ, ಸ್ವಾಗತ, ಪ್ರಾರ್ಥನೆ, ದೀಪಾರಾಧನೆ, ರಾತ್ರಿ ಧ್ವಜಾರೋಹಣ ನಡೆಯಿತು. ಬಳಿಕ...

ಬೆಳ್ಳಾರೆ: ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಶ್ರೀ ದೇವರ ದರ್ಶನ ಬಲಿ, ರಾತ್ರಿ ಅಗ್ನಿಗುಳಿಗ ದೈವದ ನೇಮೋತ್ಸವ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರುಗುತ್ತಿದ್ದು, ಇಂದು(ಫೆ.16) ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ದೇವಸ್ಥಾನದಲ್ಲಿ ಪೂರ್ವಾಹ್ನ ಕವಾಟೋದ್ಘಾಟನೆ, ತೈಲಾಭ್ಯಂಜನ, ಉಷಾಃಪೂಜೆ, ಆರಾಟು ಬಲಿ ನಡೆದು ಶ್ರೀ ದೇವರ ಅವಭೃಥ ಸ್ನಾನ ನಡೆಯಿತು. ಬಳಿಕ ದರ್ಶನ...

ಫೆ.12-ಫೆ.18: ಎಡಮಂಗಲ ಜಾತ್ರೋತ್ಸವ- ಶ್ರೀ ದೇವರ ಬಲಿ ಉತ್ಸವ, ಮಹಾರಥೋತ್ಸವ

ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.12ರಂದು ಆರಂಭಗೊಂಡಿದ್ದು, ಫೆ.15 ಮಂಗಳವಾರದಂದು ಬೆಳಗ್ಗೆ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ಬಲಿಯೊಂದಿಗೆ ಕೋಲಾಟ...
Loading posts...

All posts loaded

No more posts

error: Content is protected !!