- Thursday
- August 6th, 2026
ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯಾಧ್ಯಕ್ಷರ ಅಧೀಕೃತ ಭೇಟಿ ಕಾರ್ಯಕ್ರಮವನ್ನು ಎ.25ರಂದು ಸಂಚಯ ನಿವಾಸ ಚೂಂತಾರು ಇಲ್ಲಿ ಹಮ್ಮಿಕೊಳ್ಳಲಾಯಿತು. ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ವಲಯ 15ರ ವಲಯಾಧ್ಯಕ್ಷರಾದ ಜೆ.ಎಪ್.ಎಪ್ ಸಂತೋಷ್ ಶೆಟ್ಟಿ ಘಟಕವನ್ನುದ್ದೇಶಿಸಿ ಪ್ರಶಂಸೆ ವ್ಯಕ್ತಪಡಿಸುತ್ತಾ, ವಲಯದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು....
✍️ ಸುಶ್ಮಿತಾ ಉಗ್ರಾಣಿಮನೆ ಕರಾವಳಿ ಭಾಗದ ಬೇರೆಲ್ಲೂ ಕಾಣ ಸಿಗದ ಹಳೆಯ ಸಂಪ್ರದಾಯಗಳನ್ನು ಪ್ರತಿನಿಧಿಸಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ನೇಮೋತ್ಸವದಲ್ಲಿ ನಡೆಯುವ ಅತ್ಯಂತ ಅಪರೂಪದ ಆಚರಣೆಯೇ "ಉಳ್ಳಾಕುಲು ದೈವದ " ಅಡ್ಡಣಪೆಟ್ಟು . ಹೌದು, ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿವಿಧ ಆಯಾಮಗಳ...
ಸನಾತನ ಧರ್ಮದ ಆಳ ಎಷ್ಟಿದೇ ಎನ್ನುವುದಕ್ಕೆ ನಿಡ್ವಾಳವೇ ಒಳ್ಳೆಯ ನಿದರ್ಶನ ಎಂದು ದೇಗುಲದ ವಾಸ್ತುಶಿಲ್ಪಿ ಎಸ್.ಎಂ. ಪ್ರಸಾದ್ ಮುನಿಯಂಗಳ ಹೇಳಿದರು. ಅವರು ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಏ.25 ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಹಲವು ವರ್ಷಗಳ ಕಾಲ ಚೊಕ್ಕಾಡಿಯಲ್ಲಿ ರಾಮನಾಗಿ...
ಬೆಂಗಳೂರು : ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆ.ಯು.ಡ.ಬ್ಲ್ಯೂ.ಜೆ )ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿಯ ಅಂಕ ಪಟ್ಟಿಯ ನಕಲನ್ನು ಶಾಲಾ/ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಿಸಿರಬೇಕು. ಸಂಘದ ಸದಸ್ಯರ ಆಧಾರ್ ಮತ್ತು ವಿದ್ಯಾರ್ಥಿಯ ಆಧಾರ್ ಜೆರಾಕ್ಸ್ ಮತ್ತು ಸಂಘದ ಐಡಿ ಕಾರ್ಡ್(ಕಡ್ಡಾಯ) ಜೆರಾಕ್ಸ್ ಹಾಗೂ ವಿದ್ಯಾರ್ಥಿಯ...
ಯುವ ಕಾಂಗ್ರೆಸ್ ಸಮಿತಿ ಸುಳ್ಯ ಬ್ಲಾಕ್, ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ, ಯುವ ಕಾಂಗ್ರೆಸ್ ಸಮಿತಿ ಸುಳ್ಯ ವಿಧಾನಸಭಾ ಕ್ಷೇತ್ರ, ಇಂಟಕ್ ಸ್ನೇಹ ಸಂಗಮ ರಿಕ್ಷಾ ಯೂನಿಯನ್ ಸುಳ್ಯ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ಸಿನ ಎಲ್ಲಾ ಘಟಕಗಳ ಸಹಯೋಗದೊಂದಿಗೆ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹಾಗೂ ಎಲ್.ಪಿ.ಜಿ ಮತ್ತು ಸಿ.ಎನ್.ಜಿ ಗ್ಯಾಸ್ ಪೂರೈಕೆ ವ್ಯತ್ಯಯ...
ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀ ದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ದಿನನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದು, ಈ ವಾರ ಏ.20 ಸೋಮವಾರದಿಂದ ಏ.25 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್...
ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಹಳೆಮನೆ ಅಕ್ಕಮ್ಮ ಅವರು ಅಲ್ಪ ಕಾಲದ ಅಸೌಖ್ಯದಿಂದ ಏ.24ರಂದು ಬೆಳ್ಳಿಗೆ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮೃತರ ಪುತ್ರರಾದ ಕುಞಣ್ಣ ಗೌಡ, ಸುಂದರ, ಗಂಗಾಧರ ಹಾಗೂ ಪುತ್ರಿ ಪುತ್ರಿಯರಾದ ಸುಶೀಲ, ಯಶೋಧ, ನಾಗವೇಣಿ, ಜಯಂತಿ ಹಾಗೂ ಸೊಸೆಯಂದಿರು ಹಾಗೂ ಅಳಿಯಂದಿರು ಹಾಗೂ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ನಾರ್ಕೋಡು - ಆಲೆಟ್ಟಿ - ಬಡ್ಡಡ್ಕ ಲೋಕೋಪಯೋಗಿ ರಸ್ತೆಯು ಕರ್ನಾಟಕ ಕೇರಳ ಅಂತರಾಜ್ಯ ಸಂಪರ್ಕ ರಸ್ತೆಯಾಗಿದ್ದು, ಅಗಲ ಕಿರಿದಾಗಿ, ಹೊಂಡ ಗುಂಡಿಗಳಿಂದ ಜನ ಸಂಚಾರಕ್ಕೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸುವಂತೆ ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ ಕಳೆದ ವರ್ಷ ಮನವಿ ಮಾಡಿದ್ದರು. ಎ.23ರಂದು ಸತ್ಯಕುಮಾರ್ ಆಡಿಂಜಾ ನೇತೃತ್ವದಲ್ಲಿ...
ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪಿನಂಗಡಿ ಪಡ್ಡಯೂರ್ ಡಾ| ಬಿ.ಆರ್ ಅಂಬೇಡ್ಕರ್ ರೆಸಿಡೆನ್ಸಿಯಲ್ ಶಾಲೆಯ ವಿದ್ಯಾರ್ಥಿನಿ ಕು.ಪೂರ್ವಿ 578 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ತೊಡಿಕಾನ ಗ್ರಾಮದ ಹಾಸ್ಪರೆ ಸತೀಶ್ ಹಾಗೂ ಶ್ರೀಮತಿ ಭಾಗೀರಥಿ ದಂಪತಿಗಳ ಪುತ್ರಿ.
ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ರಕ್ಷಕ ಶಿಕ್ಷಕ ಸಂಘದ ಜಂಟಿ ಆಶ್ರಯದಲ್ಲಿ ಪೋಷಕರಿಗಾಗಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ರಾಜೇಂದ್ರ ಭಟ್ ಕೆ.ಜೆ.ಸಿ.ಐ ರಾಷ್ಟ್ರೀಯ ಮಟ್ಟದ ತರಬೇತುದಾರರು ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕರು ಪೋಷಕರಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರದ ಬಗ್ಗೆ ಮಾಹಿತಿಯನ್ನು ನೀಡಿದರು....
Loading posts...
All posts loaded
No more posts
