- Sunday
- August 30th, 2026
ಸುಳ್ಯ ತಾ. ಬ್ರಾಹ್ಮಣ ಸಂಘದ ಮಹಾಸಭೆಯು ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ಮಾ .26 ರಂದು ಸಂಘದ ಅಧ್ಯಕ್ಷ ಪಾಲೆಪ್ಪಾಡಿ ಡಾ|ಬಾಲಸುಬ್ರಹ್ಮಣ್ಯ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿದ್ಯಾರ್ಥಿ ನಿಲಯ ಹಾಗೂ ಸಭಾಭವನದ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆ ನಡೆದು ಈ ಕುರಿತು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಕೃಷ್ಣ ರಾವ್ ನಾವೂರು ವರದಿ,...
ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಚುನಾವಣೆ ಎನ್ನುವುದು ಹಬ್ಬವಿದ್ದಂತೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ಪ್ರಭುಗಳನ್ನು ಆಯ್ಕೆ ಮಾಡುವ ವಿಶಿಷ್ಟ ಅವಕಾಶ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರಿಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಅತ್ಯಂತ ಮಹತ್ವದ ಮತ್ತು ಪಾವಿತ್ರ್ಯತೆ ಇರುತ್ತದೆ. ಈ ಕಾರಣದಿಂದ ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಲು ಆಡಳಿತ ಯಂತ್ರ ಶ್ರಮಿಸುತ್ತದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ...
ಅಯೋದ್ಯ ಕರಸೇವೆಯಲ್ಲಿ ಭಾಗವಹಿಸಿದ ಸಂಘದ ಹಿರಿಯ ಕಾರ್ಯಕರ್ತರಾದ ಮಾವಿನಗೊಡ್ಲು ಗಂಗಾಧರ ರವರು ಮಾ.26 ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ರೋಹಿಣಿ, ಪುತ್ರರಾದ ಶನ್ವಿತ್ ಮತ್ತು ಶೃಜನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಇವರು ಆನ್ಲೈನ್ ನಲ್ಲಿ ನಡೆಸಿದ 15ನೇ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ -2024ರಲ್ಲಿ 12ವರ್ಷದ ಒಳಗಿನ ವಯೋಮಿತಿ ವಿಭಾಗದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ಕೇಂದ್ರ ಇದರ ವಿದ್ಯಾರ್ಥಿಗಳಾದ ಹವಿಕ್ಷಾ ಎಸ್. ಆರ್ ಮತ್ತು ಜಿಶಾ. ಕೆ....
ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ತದನಂತರ ಹೊಸಳಿಗಮ್ಮ ದೈವದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ .ಅದರೊಂದಿಗೆ ದೇವರ ಆಶೀರ್ವಾದ ಬೇಡಲು ಧರ್ಮಸ್ಥಳ .ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು,...
ಚುನಾವಣಾ ಸಂದರ್ಭದಲ್ಲಿ ರೈತರು ಕೋವಿ ಠೇವಣಾತಿ ಇಡುವುದನ್ನು ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ ಕೋವಿ ಪರವಾನಗಿದಾರ ರೈತರ ಹಕ್ಕೊತ್ತಾಯ ಸಭೆ ಮಾ.26ರಂದು ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ಕೃಷಿಕ ಯಂ ವೆಂಕಪ್ಪ ಗೌಡ ಮಾತನಾಡಿ ಬೆಳೆ ರಕ್ಷಣೆಗೆಂದು ನೀಡಿರುವ ಕೋವಿಗಳನ್ನು ಚುನಾವಣಾ ಸಂದರ್ಭದಲ್ಲಿ ಎರಡು ತಿಂಗಳಿಗೂ ಹೆಚ್ಚು ಸಮಯ ಡಿಪಾಸಿಟ್ ಇಡುವುದರಿಂದಕೃಷಿಕರಿಗೆ ಸಮಸ್ಯೆ...
ಕುಕ್ಕೆ ಸುಬ್ರಹ್ಮಣ್ಯ ಮಾ.26: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾರ್ಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ 24*7 ವೈದ್ಯಕೀಯ ಸೇವೆ ಸೌಲಭ್ಯವಾಗುವಂತೆ ಮಾಡಬೇಕೆಂದು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಕರ್ನಾಟಕ ಸರ್ಕಾರ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಮಾರ್ಚ್ 26ರಂದು ಮನವಿ ನೀಡಲಾಯಿತು.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ನೀಡಲಾಗಿದ್ದು ಮಾನವಿ ಸ್ವೀಕರಿಸಿದ...
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆಯವರಿಗೆ ಸನ್ಮಾನ ಕಾರ್ಯಕ್ರಮವು ಮಾ.26 ರಂದು ಸಂಘದ ಸಭಾಭವನದಲ್ಲಿ ನಡೆಯಿತು. ಮಾ.31 ರಂದು ಸ್ವಯಂ ನಿವೃತ್ತಿಗೊಳ್ಳಲ್ಲಿರುವ ಇವರಿಗೆ ಸಾರ್ವಜನಿಕ ಬೀಳ್ಕೊಡುಗೆ ಮಾಡಲಾಯಿತು. ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ ರವರು ಮಾತನಾಡಿ ಸ್ವಯಂ ನಿವೃತ್ತಿಗೊಳ್ಳಲಿರುವ ರವಿಪ್ರಸಾದ್ ರವರು ಗ್ರಾಮದ ಎಲ್ಲಾ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಂಘದಿಂದ...
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಯಮಂಡಲ ಮಹಿಳಾ ಮೋರ್ಚಾದ ಸಭೆಯು ಈ ದಿನ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಮಹಿಳಾ ಮೋರ್ಚದ ಜಿಲ್ಲಾಧ್ಯಕ್ಷೆ ಡಾ. ಮಂಗಳ , ಮಹಿಳಾ ಪ್ರಮುಖರಾದ ಶ್ರೀಮತಿ ಕಸ್ತೂರಿ ಪಂಜ, ಶ್ರೀಮತಿ ಧನಲಕ್ಷ್ಮಿ ಗಟ್ಟಿ, ಮಂಡಲ ಪ್ರಭಾರಿ ಯಶಸ್ವಿನಿ, ಜಿಲ್ಲಾ ಉಪಾಧ್ಯಕ್ಷ ಗುಣವತಿ ಕೊಲ್ಲಂತಡ್ಕ, ಜಾಹ್ನವಿ ಕಾಂಚೊಡು, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿ ಗ್ರಾಮದಲ್ಲೂ...
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕ್ಕೆ ಆಗಮಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ದೇವರ ದರ್ಶನ ಪಡೆದರು. ಸುಬ್ರಹ್ಮಣ್ಯ ಕ್ಕೆ ಬಂದು ದೇವರಿಗೆ ಪೂಜೆ ಸಲ್ಲಿಸಿ, ಹೊಸೋಳಿಗಮ್ಮನ ದರ್ಶನ ಪಡೆದರು. ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ದೇವಸ್ಥಾನದ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭ ಕಡಬ ಬ್ಲಾಕ್ ನ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಧನಂಜಯ ಅಡ್ಪಂಗಾಯ, ಕೃಷ್ಣಪ್ಪ, ಮಾದವ...
Loading posts...
All posts loaded
No more posts
