- Thursday
- September 17th, 2026
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.12 ರಂದು ಸಾಮೂಹಿಕ ಶನಿಪೂಜೆ ಹಾಗೂ ಬಲಿವಾಡು ಕೂಟ ನಡೆಯಿತು. ಶ್ರೀ ಪಂಚಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ಮತ್ತು ಸದಸ್ಯರು ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಸುಳ್ಯ: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸುಳ್ಯದ ಕೆ.ಪಿ.ಎಸ್. ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14ರ ವಯೋಮಾನದ ಬಾಲಕರ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಅಕ್ಷರ್ ಅವರು ಟ್ರೆಡಿಷನಲ್ ಸಿಂಗಲ್ಸ್, ಆರ್ಟಿಸ್ಟಿಕ್ ಡಬಲ್ಸ್ ಹಾಗೂ...
ಗುತ್ತಿಗಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಪ್ರಗತಿಬಂಧು–ಸ್ವಸಹಾಯ ಸಂಘಗಳ ಒಕ್ಕೂಟ, ಗುತ್ತಿಗಾರು ವಲಯದ ಆಶ್ರಯದಲ್ಲಿ ವಿವಿಧ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆ.20ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಗುತ್ತಿಗಾರು, ವಳಲಂಬೆ, ಕಮಿಲ–ಮೊಗ್ರ–ಬಳ್ಳಕ್ಕ, ಮಾವಿನಕಟ್ಟಿ, ದೇವ, ನಡುಗಲ್ಲು, ಹಾಲೆಮಜಲು, ಮೆಟ್ಟಿನಡ್ಕ, ಕಂದ್ರಪ್ಪಾಡಿ ಹಾಗೂ ಮಡಪ್ಪಾಡಿ ಪ್ರಗತಿಬಂಧು–ಸ್ವಸಹಾಯ...
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.12ರಂದು ಸಾಮೂಹಿಕ ಶನಿಪೂಜೆ, ಶ್ರಾವಣ ಶನಿವಾರ ಹಾಗೂ ಬಲಿವಾಡು ಕೂಟ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ಹಾಗೂ ಸಮಿತಿ ಸದಸ್ಯರು, ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 12 ಸೆಪ್ಟೆಂಬರ್ 2026ವಾರ : ಶನಿವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಸೆಪ್ಟೆಂಬರ್ 12) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
https://youtu.be/LCqh0FxeQM0?si=WnDQRs3h5HkeN-t1 ಸುಳ್ಯದಲ್ಲಿ ನಿನ್ನೆ ನಡೆದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾದ ಕಾಲ್ನಡಿಗೆ ಜಾಥಾ ಹಾಗೂ ದಫ್ ಪ್ರದರ್ಶನದ ಯಶಸ್ವಿ ಹಾಗೂ ಶಾಂತಿಯುತ ಮೆರವಣಿಗೆಯನ್ನು ಸಹಿಸದೆ, ಬಿಜೆಪಿ ಮಂಡಲ ಪ್ರಮುಖ ವಿನಯಕುಮಾರ್ ಕಂದಡ್ಕ ಅವರು ನೀಡಿರುವ ಹೇಳಿಕೆಯು ಸಂಪೂರ್ಣ ರಾಜಕೀಯ ಪ್ರೇರಿತ ಹಾಗೂ ದುರುದ್ದೇಶಪೂರಿತ ಎಂದು ಎಸ್.ಡಿ.ಪಿ.ಐ. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ...
ಡಿಸಿಸಿ ಅಧ್ಯಕ್ಷರಾಗಿ 9 ವರ್ಷ ಕಾರ್ಯ ನಿರ್ವಹಿಸಿದ ಹರೀಶ್ ಕುಮಾರ್ ರವರಿಗೆ ಬೀಳ್ಕೊಡುಗೆ, ಮತ್ತು ಹೊಸ ಡಿಸಿಸಿ ಅಧ್ಯಕ್ಷರಾಗಿ ಏಐಸಿಸಿಯಿಂದ ನಿಯುಕ್ತಿಗೊಂಡಿರುವ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಸ್ವಾಗತ ಸಮಾರಂಭದ ಸ್ನೇಹ ಕೂಟ ಮಂಗಳೂರು ಬೆಂದೂರ್ ವೆಲ್‌ನಲ್ಲಿರುವ ಸೈಂಟ್ ಸೆಬಾಶ್ಚಿಯನ್ ಹಾಲ್‌ನಲ್ಲಿ ಜರಗಿತು. ಸಮಾರಂಭದಲ್ಲಿ ಭಾಗವಹಿಸಿದ್ದ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ....
ಸುಬ್ರಹ್ಮಣ್ಯ: ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸುಬ್ರಹ್ಮಣ್ಯ ಇವರ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ 14 ವರ್ಷ ವಯೋಮಾನದ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅತ್ಯುತ್ತಮ...
ನಿನ್ನೆ ಸೆಪ್ಟೆಂಬರ್ 11ರಂದು ಪ್ರವಾದಿಯವರ ಜನ್ಮದಿನದ ಅಂಗವಾಗಿ ಕಾಲ್ನಡಿಗೆ ಜಾಥಾ ಹಾಗೂ ದಫ್ ಪ್ರದರ್ಶನ ಸುಳ್ಯದಲ್ಲಿ ನಡೆದಿದ್ದು ಕೇವಲ 500ರಷ್ಟಿದ್ದ ಜನರ ಪ್ರದರ್ಶನಕ್ಕೆ ಮುಖ್ಯ ರಸ್ತೆ ಇಡೀ ಬ್ಲಾಕ್ ಮಾಡಿರುವುದು ಅಕ್ಷಮ್ಯವಾಗಿದೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಖಂಡಿಸಿದ್ದಾರೆ.4ಗಂಟೆಗೆ ನಿಗದಿಯಾಗಿದ್ದ ಮೆರವಣಿಗೆಯು 7.30ರ ತನಕವು ಮುಂದುವರಿದಿದ್ದು ಮುಖ್ಯರಸ್ತೆಯನ್ನು ಪೂರ್ತಿ ದಪ್...
ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ "ಮುನಿಸು ತರವೇ ಮುಗುದೆ" ಖ್ಯಾತಿಯ ಸುಳ್ಯದ ಖ್ಯಾತ ಕವಿ, ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ ಸುಬ್ರಾಯ ಚೊಕ್ಕಾಡಿಯವರಿಗೆ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮವು ಸೆ.11ರಂದು ರಂದು ನಡೆಯಿತು. ಪ್ರಜಾಧ್ವನಿ ಕರ್ನಾಟಕ ತಂಡವು ಶ್ರೀಯುತ ಚೊಕ್ಕಾಡಿಯವರ ಸ್ವಗೃಹಕ್ಕೆ ಭೇಟಿ ನೀಡಿ ಅವರನ್ನು ಹಾಗೂ ಅವರ ಧರ್ಮಪತ್ನಿಯವರನ್ನು ಸನ್ಮಾನಿಸಿತು. ಪ್ರಜಾಧ್ವನಿ...
Loading posts...
All posts loaded
No more posts
