- Tuesday
- April 28th, 2026
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ.) ಮಂಗಳೂರು ಇದರ ವತಿಯಿಂದ ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯ ನಂತೂರು ಮಂಗಳೂರು ಇಲ್ಲಿ ದಿನಾಂಕ ೨೯/೦೧/೨೦೨೬ ಗುರುವಾರ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಡಾ| ಮುರಲೀ ಮೋಹನ ಚೂಂತಾರು ಇವರು ಮಕ್ಕಳಿಗೆ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಟೂತ್‍ಬ್ರಷ್, ಟೂತ್ ಪೇಸ್ಟಗಳ ಬಗ್ಗೆ...
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಇದರ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಫೆ.14 ಮತ್ತು 15 ರಂದು ಎರಡು ದಿನಗಳ ಕಾಲ ಸಂಜೆ 5:45 ರಿಂದ ರಾತ್ರಿ 9:15 ರವರೆಗೆ “ರಂಗಸಂಭ್ರಮ 2026” ವೈವಿಧ್ಯಮಯ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿದೆ. ಮಾಜಿ ಸಚಿವರಾದ ಎಸ್.ಅಂಗಾರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಭರತನಾಟ್ಯ ಕಲಾವಿದೆಯಾಗಿರುವ...
ಸುಬ್ರಹ್ಮಣ್ಯ ಜನವರಿ 29 : ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಯು ಗುರುವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಭೆಯನ್ನು ಉದ್ದೇಶಿಸಿ ಕಾರ್ಪೊರೇಟ್ ಕಚೇರಿಯ ಮೆಸ್ಕಾಂ ಅಧೀಕ್ಷಕರಾದ ಇಂಜಿನಿಯರ್ ಕೃಷ್ಣರಾಜ್ ಅವರು ಮಾತನಾಡುತ್ತಾ “ಗ್ರಾಮೀಣ ಮಟ್ಟದ ಮೆಸ್ಕಾಂ ಗ್ರಾಹಕರ ವಿದ್ಯುತ್...
ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ "ಕಾನೂನು ಅರಿವು" ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಕುಮಾರ್ ಕೊಡ್ತುಗುಳಿ ಅಧ್ಯಕ್ಷರು ವಕೀಲರ ಸಂಘ ಸುಳ್ಯ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೀನ್ ವ್ಯೂ ವಿದ್ಯಾ ಸಂಸ್ಥೆ ಅಧ್ಯಕ್ಷ...
ಬೆಳ್ಳಾರೆ ಗ್ರಾಮ ಪಂಚಾಯತಿನ ಅಧೀನಕ್ಕೆ ಒಳಪಟ್ಟ ಹಸಿಮೀನು ಮಾರುಕಟ್ಟೆಯ ಬಹಿರಂಗ ಹರಾಜು ಜ.29 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಈ ಬಾರಿ ಈ ಬಹಿರಂಗ ಹರಾಜಿನಲ್ಲಿ ಹಸಿಮೀನು ಮಾರುಕಟ್ಟೆಯನ್ನು ಒಂದು ವರ್ಷದ ಅವಧಿಗೆ 8.69 ಲಕ್ಷಕ್ಕೆ ಅಯ್ಯೂಬ್ ತಂಬಿನಮಕ್ಕಿ ಎಂಬವರು ಪಡೆದುಕೊಂಡರು.ಈ ಬಹಿರಂಗ ಹರಾಜಿನ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್.ರೈ, ಸದಸ್ಯರಾದ ಎನ್.ಎಸ್.ಡಿ ವಿಠಲ್ದಾಸ್,...
ದೇವಚಳ್ಳ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಆಶ್ರಯ ಕಾಲೋನಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲಾಯಿತು.ಲೋಹಿತ್ ಶ್ರೀ ಕಟೀಲ್ ದೀಪ ಬೆಳಗಿಸಿದರು. ಅಂಗನವಾಡಿ ಸಹಾಯಕಿ ಪುಷ್ಪಾವತಿ ಪುರುಷೋತ್ತಮ ರಿಬ್ಬನ್ ತುಂಡರಿಸಿ, ಶಶಿಧರ್ ಮಾವಿನಕಟ್ಟೆ ತೆಂಗಿನಕಾಯಿ ಒಡೆದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯರಾದ ರಾಜೇಶ್ವರಿ ಮಾವಿನಕಟ್ಟೆ, ದುರ್ಗಾದಾಸ್ ಮೆತ್ತಡ್ಕ, ಅಲ್ಲದೇ ರಸ್ತೆಯ ಪಲಾನುಭವಿಗಳು ಉಪಸ್ಥಿತರಿದ್ದರು
ಕೊಡಗು ಸಂಪಾಜೆ ಪೆಟ್ರೋಲ್ ಬಂಕಿನ ಸಮೀಪದಲ್ಲಿ ರಿಕ್ಷಾದ ಹಿಂದಕ್ಕೆ ಕಾರು ಗುದ್ದಿದ ಪರಿಣಾಮ ರಿಕ್ಷಾ ಪಲ್ಟಿಯಾಗಿದ್ದು, ಇದೇ ಸಂದರ್ಭದಲ್ಲಿ ಎದುರಿನಿಂದ ಬಂದ ಟಿಪ್ಪರ್ ಲಾರಿ ಹತ್ತಿ ರಿಕ್ಷಾ ಸವಾರ ಮೃತಪಟ್ಟ ಘಟನೆ ಇಂದು ನಡೆದಿದೆ. ರಿಕ್ಷಾದಲ್ಲಿದ್ದ ಪ್ರಯಾಣಿಕ ಮಹಿಳೆ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರು ನಿಲ್ಲಿಸದೇ ಪರಾರಿಯಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ರಿಕ್ಷಾ ಚಾಲಕ...
ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯಲ್ಲಿ ವಾರ್ಷಿಕ ದ್ಸಿಕ್ರ್ ಹಲ್ಕಾ ಕಾರ್ಯಕ್ರಮ ಜ 28 ರಂದು ರಾತ್ರಿ ನಡೆಯಿತು.ಆರಂಭದಲ್ಲಿ ಮಂಕೂಸ್ ಮೌಲೀದ್ ಪಾರಾಯಣ ನಡೆಯಿತು.ನಂತರ ದ್ಸಿಕ್ರ್ ಹಲ್ಕಾ ನಡೆಯಿತು.ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯ ಖತೀಬ್ ಮುಹಮ್ಮದ್ ರಫೀಖ್ ಬಾಹಸನಿ ಸಾಂದರ್ಭಿಕ ಭಾಷಣಗೈದರು.ಪಳ್ಳಿಮಜಲು ಮಸೀದಿಯ ಗೌರವಾಧ್ಯಕ್ಷರಾದ ಬಹು ಹಸನ್ ಸಖಾಫಿ ಬೆಳ್ಳಾರೆ ದು:ಆ ನೆರವೇರಿಸಿದರು.ಕರಿಂಬಿಲ ಮದರಸದ...
ಮಡಪ್ಪಾಡಿ ಗ್ರಾಮದ ಶೀರಡ್ಕ ಶ್ರೀ ಉಳ್ಳಾಕುಲು ಮತ್ತು ಮಲೆಭೂತಗಳ ದೈವಸ್ಥಾನದಲ್ಲಿ ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವವು ಫೆ.01ನೇ ಆದಿತ್ಯವಾರದಿಂದ ಫೆ.04ನೇ ಬುಧವಾರದವರೆಗೆ ನಡೆಯಲಿದ್ದು, ಫೆ.01ರಂದು ಬೆಳಿಗ್ಗೆ 7:00 ಗಂಟೆಗೆ ಗಣಹೋಮ, 8:00 ಗಂಟೆಗೆ ನಾಗತಂಬಿಲ, 9:00 ಗಂಟೆಗೆ ವನದುರ್ಗಾಪೂಜೆ, 9:30ಗೆ ಉಪಹಾರ, 10:00 ಗಂಟೆಗೆ ಚಾವಡಿಯಲ್ಲಿ ಪ್ರತಿಷ್ಠಾ ಮಹೋತ್ಸವ...
ಸುಳ್ಯದ ಎಲ್.ಡಿ ಬ್ಯಾಂಕ್‌ನ ವಾಣಿಜ್ಯ ಕಟ್ಟಡಕ್ಕೆ ತಪ್ಪು ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಅವರಿಗೆ ಮೆಸ್ಕಾಂ ದಂಡ ಪಾವತಿಸಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗಿ ಮೆಸ್ಕಾಂ ಇಂಜಿನಿಯರ್ ವರ್ತನೆಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಹಾಗೂ ಈ ಕುರಿತು ಸದಸ್ಯರಿಗೆ ಸ್ಪಷ್ಟ ಮಾಹಿತಿ ದೊರೆಯದೇ ಇದ್ದಾಗ ಮುಂದಿನ ಸಭೆಗೆ ದಾಖಲೆ ಸಹಿತ ವರದಿ ...
Loading posts...
All posts loaded
No more posts
