ಗುತ್ತಿಗಾರು : ಬೃಹತ್ ರಕ್ತದಾನ ಶಿಬಿರ – ರಕ್ತ ದಾನಿಗಳಿಗೆ ಸನ್ಮಾನ ಮತ್ತು  ಗೌರವ ಸಮರ್ಪಣೆ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ಇದರ ವತಿಯಿಂದ ಗ್ರಾಮ ಪಂಚಾಯತ್ ಗುತ್ತಿಗಾರು, ಅರೋಗ್ಯ ಕೇಂದ್ರ ಗುತ್ತಿಗಾರು, ಜಿಲ್ಲಾ ಮತ್ತು ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸುಳ್ಯ ಅಮರ ಸಂಜೀವಿನಿ ಗ್ರಾಮದ ಮಟ್ಟದ ಒಕ್ಕೂಟ ಗುತ್ತಿಗಾರು, ಲಯನ್ಸ್ ಕ್ಲಬ್ ಗುತ್ತಿಗಾರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ, ರಕ್ತದಾನಿಗಳಿಗೆ ಸನ್ಮಾನ...

ಎನ್.ಪಿ.ಎಸ್. ನೌಕರರ ಸಂಘ ರಾಜ್ಯ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ ಎನ್.ಪಿ.ಎಸ್. ನೌಕರರ ಸಂಘ ಬೆಂಗಳೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಆ.17ರಂದು‌ ಬೆಂಗಳೂರಿನಲ್ಲಿ ನಡೆದ ನಮ್ಮಭಿಮಾನ ಅಭಿನಂದನಾ ಸಮಾರಂಭದಲ್ಲಿ ನಡೆಯಿತು.ರಾಜ್ಯ ಘಟಕದ ಗೌರವಾಧ್ಯಕ್ಷ ರಾಗಿ ರಮೇಶ್ ಸಂಗಾ, ರಾಜ್ಯಾಧ್ಯಕ್ಷರಾಗಿ ನಾಗನಗೌಡ‌ ಎಂ.ಎ., ಉಪಾಧ್ಯಕ್ಷರುಗಳಾಗಿ ನಾರಾಯಣಸ್ವಾಮಿ, ಪೃಥ್ವಿ ಕುಮಾರ್ ಟಿ., ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಚಂದ್ರಶೇಖರ ಎಂ.ಆರ್. ಆಯ್ಕೆಯಾದರು.
Ad Widget

ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇದರ ನೂತನ ಪದಾಧಿಕಾರಿಗಳ ಆಯ್ಕೆ -ಅಧ್ಯಕ್ಷರಾಗಿ ದೀಕ್ಷಿತ್ ಶೆಟ್ಟಿಮಜಲು,  ಕಾರ್ಯದರ್ಶಿಯಾಗಿ ಶೇಷಪ್ಪ ಶೆಟ್ಟಿಮಜಲು

ಮಡಪ್ಪಾಡಿ ಗ್ರಾಮದ ಶೆಟ್ಟಿಮಜಲು ಚೈತನ್ಯ ಗೆಳೆಯರ ಬಳಗದ  ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ದೀಕ್ಷಿತ್ ಶೆಟ್ಟಿಮಜಲು, ಕಾರ್ಯದರ್ಶಿಯಾಗಿ ಶೇಷಪ್ಪ ಶೆಟ್ಟಿಮಜಲು ಆಯ್ಕೆಯಾದರು.

ಎನ್.ಪಿ.ಎಸ್. ನೌಕರರ ಸಂಘ : ರಾಜ್ಯ ಉಪಾಧ್ಯಕ್ಷರಾಗಿ ಪೃಥ್ವಿಕುಮಾರ್ ಟಿ. ಆಯ್ಕೆ

ಕರ್ನಾಟಕ ರಾಜ್ಯ ಎನ್.ಪಿ.ಎಸ್. ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪೃಥ್ವಿ ಕುಮಾರ್ ಟಿ. ಆಯ್ಕೆಯಾಗಿದ್ದಾರೆ. ಆ.17ರಂದು‌ ಬೆಂಗಳೂರಿನಲ್ಲಿ ನಡೆದ ನಮ್ಮಭಿಮಾನದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪೃಥ್ವಿಕುಮಾರ್ ರವರು ಸರಕಾರಿ‌ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ

ಸುಬ್ರಹ್ಮಣ್ಯ : ನದಿ ಪೂಜನ ಕಾರ್ಯಕ್ರಮ

ಸನಾತನ ಕಾಲದಿಂದಲೂ ಆದ್ಯಾತ್ಮಿಕ ನೆಲೆಯಲ್ಲಿ ಪರಿಸರ ಸಂರಕ್ಷಣೆ ಮಾಡಿಕೊಂಡು ಬಂದಿರುವ ನಮ್ಮ ನೆಲ-ಜಲದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ವತಿಯಿಂದ ಆ.20 ರಂದು ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದ ಬಳಿ ನದಿ ಪೂಜನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ, ಪ್ರಮುಖರಾದ...

ವೇದಾವತಿ ಕೆದಂಬಾಡಿ ನಿಧನ

ಮೆಸ್ಕಾಂನ ನಿವೃತ್ತ ಅಧಿಕಾರಿ ಕೆದಂಬಾಡಿ ಚಂದ್ರಶೇಖರ್ ರವರ ಧರ್ಮಪತ್ನಿ ವೇದಾವತಿ ಯುವರು ಇಂದು ( ಆ.21) ಮುಂಜಾನೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಇಂಗ್ಲೆಂಡ್ ನಲ್ಲಿ ನೆಲೆಸಿರುವ ತೇಜಸ್ವಿ, ಮಂಗಳೂರಿನಲ್ಲಿ ನರರೋಗ ತಜ್ಞರಾಗಿರುವ ಡಾ.ರಕ್ಷಿತ್ ಕೆದಂಬಾಡಿ, ಅಮೇರಿಕಾದಲ್ಲಿ ನೆಲೆಸಿರುವ ಮಗಳು ಸೌರಭ ರನ್ನು ಅಗಲಿದ್ದಾರೆ.ಮೃತರು ಅಂತ್ಯಕ್ರಿಯೆ ನಾಳೆ ಸುಳ್ಯದ ವಿಮುಕ್ತಿ ಧಾಮದಲ್ಲಿ...

ಸುಬ್ರಹ್ಮಣ್ಯ : ಕೆ.ಎಸ್.ಎಸ್.ಕಾಲೇಜು ಪದವಿ ಫಲಿತಾಂಶ – ಬಿಕಾಂ ವಿಭಾಗ ಶೇ.94, ಮನು ಕೆ. ಗೆ 99.38% ಅಂಕ ಹಾಗೂ ಬಿಬಿಎ ಶೇ.100 ಫಲಿತಾಂಶ,ಪ್ರಿಯಾ 96% ಅಂಕ 

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ 2023-24 ನೇ ಸಾಲಿನ ವಾಣಿಜ್ಯ ಪದವಿಯ 6ನೇ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 102 ವಿದ್ಯಾರ್ಥಿಗಳು ಹಾಜರಾಗಿದ್ದು, 96 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇಕಡ 94 ಫಲಿತಾಂಶವನ್ನು ಪಡೆದಿರುತ್ತದೆ. ಕು. ಮನು ಕೆ 99.38 ಶೇಕಡಾವನ್ನು ಪಡೆದಿರುತ್ತಾಳೆ. ವಾಣಿಜ್ಯ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 01...

ರಾಜ್ಯಪಾಲರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಹಿನ್ನೆಲೆ ಕಲ್ಲುಗುಂಡಿಯಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಪಾದಯಾತ್ರೆಯ ಮೂಲಕ ಪ್ರತಿಭಟನಾ ಸಭೆ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುತ್ತಿರುವ ರಾಜ್ಯಪಾಲರ ವಿರುದ್ಧ ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಪಾದಯಾತ್ರೆಯು ಕಲ್ಲುಗುಂಡಿಯ ಮುಖ್ಯ ಪೇಟೆಯಲ್ಲಿ (ಆ 20)ರಂದು...

ನಿಧನ : ಪರಮೇಶ್ವರಿ ನಡುತೋಟ

ಸುಬ್ರಹ್ಮಣ್ಯ ಸಮೀಪದ ಕೈಕಂಬ ನಡುತೋಟ ದಿವಂಗತ ಬೊಳಿಯಣ್ಣ ಗೌಡ ಅವರ ಧರ್ಮಪತ್ನಿ ಪರಮೇಶ್ವರಿ ಅವರು ವಯೋಸಹಜವಾಗಿ ಸೋಮವಾರ ರಾತ್ರಿ ನಿಧನ ಹೊಂದಿದರು. ಮೃತರಿಗೆ 99 ವರ್ಷ ವಯಸ್ಸಾಗಿತ್ತು.ಮೃತರು ಬಂಧು-ಮಿತ್ರರು ಹಾಗೂ ನಡುತೋಟ ಕುಟುಂಬಸ್ಥರನ್ನು ಅಗಲಿದ್ದಾರೆ.

ಕವನ : ಹೆಸರಿಗಷ್ಟೇ ಮನುಷ್ಯ ಎಂದೆನಿಸಿಕೊಂಡರೆ ಸಾಕೇ…!?

ಹೆಸರಿಗಷ್ಟೇ ಮನುಷ್ಯ ಎಂದೆನಿಸಿಕೊಂಡರೆ ಸಾಕೇ..? ಮನುಷ್ಯತ್ವವ ಮರೆತು ಬದುಕಿದರೆ ಆ ಬದುಕಿಗೆ ಅರ್ಥವಾದರೂ ಉಂಟೇ…!?ಜೀವನಪರ್ಯಂತ ಬರೀ ಹಣ, ಆಸ್ತಿ-ಅಂತಸ್ತನ್ನು ಗಳಿಸಿಕೊಂಡರೆ ಸಾಕೇ..? ನಾವು ಸತ್ತ ನಂತರವೂ ನಮ್ಮ ಹೆಸರನ್ನು ಉಳಿಸುವ ಮಾನವೀಯ ಮೌಲ್ಯಗಳಿಗಿಂತ ದೊಡ್ಡ ಆಸ್ತಿ ಬೇಕೇ…!?ಸಮಾಜದಲ್ಲಿ ಎಲ್ಲರೆದುರು ತಲೆ ಎತ್ತಿ ಬದುಕಬೇಕು ಎಂದುಕೊಂಡರಷ್ಟೇ ಸಾಕೇ..? ಹಿರಿಯರೆದುರು ತಲೆ ತಗ್ಗಿಸಿ, ಕಿರಿಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ಗುಣವಿಲ್ಲದಿದ್ದರೆ...
Loading posts...

All posts loaded

No more posts

error: Content is protected !!