ಸುಳ್ಯ : ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್, ಕೋಳಿ ಅಂಕ, ಅಕ್ರಮ ಮರಳು ದಂದೆ ಸೇರಿದಂತೆ ಅಕ್ರಮಗಳಿಗೆ ಕಡಿವಾಣ – ಉಪ ನಿರೀಕ್ಷಕ ಸಂತೋಷ್ ಬಿ.ಪಿ.

ಸುಳ್ಯ ಪೊಲೀಸ್‌ ಠಾಣೆಗೆ ನೂತನ ಉಪನಿರೀಕ್ಷಕರಾಗಿ ಸಂತೋಷ್ ರವರು ಸೆ. 5ರಂದು ಅಧಿಕಾರ ಸ್ವೀಕರಿಸಿದ್ದು, ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಸುಳ್ಯದಲ್ಲಿ ಸಮಗ್ರ ಮಾಹಿತಿ ತಿಳಿದೇ ಸುಳ್ಯಕ್ಕೆ ಬಂದಿದ್ದು ಎಲ್ಲಾ ಅಕ್ರಮಗಳಿಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು. ಸುಳ್ಯದ ಮುಖ್ಯ ಪೇಟೆಯಲ್ಲಿ ಬಹಳ ವರ್ಷಗಳಿಂದ ಸವಾಲಾಗಿರುವ ಟ್ರಾಫಿಕ್ ಸಮಸ್ಯೆಗಳಿಗೆ ಇತ್ಯರ್ಥ ಮಾಡಲಾಗುವುದು. ಅದಕ್ಕಾಗಿ ಓರ್ವ ಸಿಬ್ಬಂದಿಯನ್ನು ಬಳಸಿಕೊಂಡು...

ಸದೃಢ ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅನನ್ಯ: ಡಾ|ಉಜ್ವಲ್ ಯು.ಜೆ

ಸುಶಿಕ್ಷಿತ ಮತ್ತು ಸುದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅನನ್ಯ. ಪ್ರಗತಿಯುತ್ತ ಸಾಗುತ್ತಿರುವ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ)ಕಮಿಟಿ “ಬಿ” ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಉಜ್ವಲ್.ಯು.ಜೆ ಹೇಳಿದರು. ಅವರು ದಿನಾಂಕ 5.09.2024ರಂದು ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ”ಬಿ”ಇದರ ಆಶ್ರಯದಲ್ಲಿ ನಡೆದ...
Ad Widget

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯಅಂತಿಮ ವರ್ಷದ ಪದವಿ ಫಲಿತಾಂಶ ಪ್ರಕಟ – ಶೇ.90 ಫಲಿತಾಂಶ ದಾಖಲು

ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಜುಲೈ –ಆಗೋಸ್ಟ್-2024ರಲ್ಲಿ ನಡೆಸಿದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಕೆ.ವಿ.ಜಿಆಯುರ್ವೇದ ವೈದ್ಯಕೀಯ ಕಾಲೇಜಿಗೆ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 41 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತೀರ್ಣರಾಗಿದ್ದಾರೆ.ಅಂತಿಮ ವರ್ಷದ ಬಿ.ಎ.ಎಂ.ಎಸ್ ಪದವಿ ವಿಭಾಗದ ೫೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದು, ಅಂಜನಾವಿ. ಪಿ., ಅಧೀನಾ ಪಿ.,...

ಸುಳ್ಯ ಎನ್ನೆoಪಿಯುಸಿಯಲ್ಲಿ  ಶಿಕ್ಷಕರ ದಿನಾಚರಣೆ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ತಜ್ಞರಾಗಿ, ರಾಷ್ಟ್ರಪತಿಯಾಗಿ ಈ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದವರು.ನಾವು ನಮ್ಮ ಬದುಕಿಗೆ ದಾರಿ ತೋರಿದ ಎಲ್ಲಾ ಶಿಕ್ಷಕರನ್ನು ನೆನಪಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಲ್ಲದೆ ಶಿಕ್ಷಕರಿಲ್ಲ. ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಲ್ಲ ಎಂದು ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಪ್ರಾoಶುಪಾಲರಾದ ಮಿಥಾಲಿ ಪಿ ರೈ  ಹೇಳಿದರು. ಅವರು ಸಂಸ್ಥೆಯಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಅಧ್ಯಕ್ಷತೆ...

ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರ್ಸ್ ನಲ್ಲಿ ನೂತನ ಆಭರಣ ಸ್ಕೀಂ ಗೋಲ್ಡ್ ನಿಧಿ ಉದ್ಘಾಟನೆ

ಸುಳ್ಯದ ಪ್ರತಿಷ್ಠಿತ ಸ್ವರ್ಣಾಭರಣ ಸಂಸ್ಥೆ ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರ್ಸ್ ನವರ ನೂತನ ಆಭರಣ ಸ್ಕೀಂ ಗೋಲ್ಡ್ ನಿಧಿ ಯ ಉದ್ಘಾಟನೆ ಇಂದು ಸಂಸ್ಥೆಯ ಮಳಿಗೆಯಲ್ಲಿ ನಡೆಯಿತು. ಕೆಎಸ್ಎ ಕಾಮತ್ & ಸನ್ಸ್ ಮಾಲಕರು, ಉದ್ಯಮಿ ಸುಧಾಕರ ಕಾಮತ್ ಮತ್ತು ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್ ಎ ರಾಮಚಂದ್ರ ದೀಪ ಬೆಳಗಿಸುವ ಮೂಲಕ ಉದ್ಘಾಟನೆ...

ಯೋಗೀಶ್ ಹಿರಿಯಡ್ಕ – ಸೌಮ್ಯ

ದೇವಚಳ್ಳ ಗ್ರಾಮದ ದೇವ ಹಿರಿಯಡ್ಕ ಮನೆ ಶ್ರೀಮತಿ ಪುಷ್ಪಾವತಿ ಮತ್ತು ಬಾಲಕೃಷ್ಣ ಗೌಡರ ಪುತ್ರ ಯೋಗೀಶ್ ರವರ ವಿವಾಹವು ಕಡಬ ತಾಲೂಕು ಕೊಯಿಲ ಗ್ರಾಮದ ಬುಡಲ್ಲೂರು ಖಂಡಿಗ ಮನೆ ಶ್ರೀಮತಿ ಸರೋಜಿನಿ ಮತ್ತು ತನಿಯಪ್ಪ ಗೌಡರ ಪುತ್ರಿ ಸೌಮ್ಯ ರೊಂಂದಿಗೆ ಸೆ.05 ರಂದು ಗುತ್ತಿಗಾರಿನ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.

ಸುಬ್ರಹ್ಮಣ್ಯ ರೋಟರಿ ಕ್ಲಬ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇವುಗಳ ವತಿಯಿಂದ ಹಿರಿಯ ನಿವೃತ್ತ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ

ಶಿಕ್ಷಕರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಇವುಗಳ ವತಿಯಿಂದ ಇಂದು ಐದು ಹಿರಿಯ ನಿವೃತ್ತ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು. ವಿದ್ವಾನ್ ಕೇಶವ ಭಟ್, ರಾಮ ಶರ್ಮಾ, ದೊಡ್ಡಣ್ಣ ಗೌಡ, ಪುಂಗವ ಗೌಡ ಹಾಗೂ ಸುಬ್ರಾಯ ಗೌಡ ಇವರುಗಳನ್ನು ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು. ಈ...

ಕಸಾಪ ವತಿಯಿಂದ ಶಿಕ್ಷಕ ದಿನಾಚರಣೆಯಂದು ಶಿಕ್ಷಕ ಸಾಹಿತಿಗಳಿಗೆ ಸನ್ಮಾನ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ ಶಿಕ್ಷಕ ಸಾಹಿತಿಗಳನ್ನು ಇಂದು ಗೌರವಿಸಲಾಯಿತು.ಸಾಹಿತ್ಯ ರಂಗದಲ್ಲಿ ಹೆಸರು ಮಾಡಿರುವ ನಿವೃತ್ತ ಶಿಕ್ಷಕರನ್ನು ಗುರುತಿಸಿ ಅವರನ್ನು ಗೌರವಿಸುವ ಪರಂಪರೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ವರ್ಷದಿಂದ ಆರಂಭಿಸಿದೆ.ಇಂದು ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ಶ್ರೀಮತಿ ಜಯಮ್ಮ ಚೆಟ್ಟಿಮಾಡ ಹಾಗೂ ಶ್ರೀಮತಿ...

ಕಲ್ಲುಗುಂಡಿಯಲ್ಲಿ ಹೋಟೆಲ್ ಸಮುದ್ರ ಶುಭಾರಂಭ

ಕಲ್ಲುಗುಂಡಿಯ ಮೀನು ಮಾರ್ಕೆಟ್ ಸಮೀಪ ಹೋಟೆಲ್ ಸಮುದ್ರ ಸೆ.05 ರಂದು ಶುಭಾರಂಭಗೊಂಡಿತು. ಇಲ್ಲಿ ಬಾಳೆಎಲೆ ಸಸ್ಯಹಾರ ಊಟ, ಮೀನಿನ ಊಟ ಹಾಗೂ ಉಪಹಾರ ಲಭ್ಯವಿದೆ ಎಂದು ಮಾಲಕರಾದ ಜಯಂತ ಹರ್ಲಡ್ಕ ತಿಳಿಸಿದ್ದಾರೆ.

ಗಣೇಶೋತ್ಸವ ಆಚರಣೆಗೆ ಹೊಸ ನಿಯಮ : ಸರ್ಕಾರದ ಹಿಂದೂ ವಿರೋಧಿ ಧೋರಣೆಗೆ ವೆಂಕಟ್ ವಳಲಂಬೆ ಖಂಡನೆ

ಸಾಮಾಜಿಕ ಚಳುವಳಿ,ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯನ್ನು ತುಂಬಿದ್ದ ಗಣೇಶೋತ್ಸವ ಆಚರಣೆಗೆ  ಸರ್ಕಾರ ಹೊಸ ನಿಯಮಗಳನ್ನು ತರುವ ಮೂಲಕ ಬಹುಸಂಖ್ಯಾತ ರ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ದೇವರ ಪ್ರಸಾದ ಗಳಿಗೆ FSSAI ಪರವಾನಗಿ ಪಡೆದಿರುವ ವ್ಯಕ್ತಿ, ಸಂಸ್ಥೆಗಳಿಂದ ತಯಾರಿಸುವಂತೆ ಅಲ್ಲದೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅತಿಥಿಗಳು, ಚಾಲಕರ ಸಂಪೂರ್ಣ ಮಾಹಿತಿ...
Loading posts...

All posts loaded

No more posts

error: Content is protected !!