- Tuesday
- August 18th, 2026
ರಾಯಲ್ ಫ್ರೆಂಡ್ಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ (ರಿ) ಇದರ ವಾರ್ಷಿಕ ಮಹಾ ಸಭೆಯು ಗೂನಡ್ಕದ ಕಛೇರಿಯಲ್ಲಿ ಅಧ್ಯಕ್ಷರಾದ ಸಾಜಿದ್ ಐ.ಜಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2024-25 ನೆಯ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಸಾಜಿದ್ ಐ. ಜಿಪ್ರಧಾನ ಕಾರ್ಯದರ್ಶಿಯಾಗಿ ಜಾಬಿ ಎಂ. ಬಿಕೋಶಾಧಿಕಾರಿಯಾಗಿ ಅಜರುದ್ದೀನ್ ಚೇರೂರುಉಪಾಧ್ಯಕ್ಷರಾಗಿ ಅಜೀಜ್ ಟಿ.ಬಿ ಕಾರ್ಯದರ್ಶಿಗಳಾಗಿಉಬೈಸ್...
ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಡಿ.12 ಗುರುವಾರದಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು.ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ...
ಗುತ್ತಿಗಾರು ಗ್ರಾಮದ ಮೊಗ್ರ ನಿವಾಸಿ ಗಿರಿಯಪ್ಪ ಅಜಿಲರವರು ಹೃದಯಘಾತದಿಂದ ಡಿ. 12ರಂದು ರಾತ್ರಿ ನಿಧನರಾದರು. ಅವಿವಾಹಿತರಾಗಿದ್ದ ಅವರಿಗೆ 36 ವರ್ಷ ವಯಸ್ಸಾಗಿತ್ತು. ಆರೋಗ್ಯದಿಂದಿದ್ದ ಅವರು ರಾತ್ರಿ ಊಟ ಮುಗಿಸಿ ಮಲಗುವ ಹೊತ್ತಿಗೆ ಮನೆಯಲ್ಲಿ ಹೃದಯಘಾತವಾಯಿತೆನ್ನಲಾಗಿದೆ. ತಕ್ಷಣ ಅವರನ್ನು ಕಾಣಿಯೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೇ ಚಿಕಿತ್ಸೆ ಫಲಿಸದೇ ಮೃತಪಟ್ಟರೆಂದು ತಿಳಿದುಬಂದಿದೆ. ಮೊಗ್ರ ಶ್ರೀ ಕನ್ನಡ...
ಪೆರಾಜೆ ಗ್ರಾಮದಲ್ಲಿ ದಿನಾಂಕ 08-05-2020ರಂದು ನಡೆದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗಳಿಬ್ಬರಿಗೆ ಮಡಿಕೇರಿಯ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ದಿನಾಂಕ 08-05-2020ರಂದು ಪೆರಾಜೆ ಗ್ರಾಮದ ಉತ್ತರಕುಮಾರ ಎಂಬಾತನೊಂದಿಗೆ ತಾರೀಣಿ ಮತ್ತು ಆಕೆಯ ಅಕ್ಕನ ಮಗ ಧರಣಿಕುಮಾರ್ ಎಂಬಿಬ್ಬರು ಜಗಳ ಮಾಡಿ...
ಕಲ್ಮಡ್ಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಆಯ್ಕೆಯಾದ ರಾಮಚಂದ್ರ ಕಾಚಿಲರಿಗೆ ಕಲ್ಮಡ್ಕ ಪ್ರಾ.ಕೃ.ಪ.ಸಹಕಾರಿ ಸಂಘದ ವತಿಯಿಂದ ಡಿ.12 ರಂದು ಸನ್ಮಾನಿಸಲಾಯಿತು. ಸಂಘದ ಆಡಳಿತ ಸಭೆಯಲ್ಲಿ ಮುಂದಿನ ಮೂರು ಶೈಕ್ಷಣಿಕ ವರ್ಷಗಳಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ರಾಮಚಂದ್ರ ಕಾಚಿಲ ಇವರನ್ನು ಸಭೆಯಲ್ಲಿ ಸರ್ವ ಸದಸ್ಯರ ಪರವಾಗಿ ಹಿರಿಯ ನಿರ್ದೇಶಕರುಗಳಾದ ಸುಬ್ರಾಯ ಓಣ್ಯಡ್ಕ ಹಾಗೂ ರಾಮಮೂರ್ತಿ...
ಅಲೆಟ್ಟಿ ಗ್ರಾಮದ ಬಡ್ಡಡ್ಕ - ತಿಮ್ಮನಮೂಲೆ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿಯವರ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ರೂ. 3.00 ಲಕ್ಷ ಅನುದಾನ ಬಿಡುಗಡೆ ಗೊಂಡು ಕಾಂಕ್ರಿಟಿಕರಣ ಗೊಂಡಿದ್ದು ರಸ್ತೆಯನ್ನು ಇಂದು ಉದ್ಘಾಟಿಸಲಾಯಿತು. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯ ತೇಜಕುಮಾರ್ ಬಡ್ಡಡ್ಕ ಉದ್ಘಾಟಿಸಿ ಶುಭಹಾರೈಸಿದರು. ಗ್ರಾಮ...
ಮುರುಳ್ಯ ಗ್ರಾಮದ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ಮತ್ತು ಮಹಾವಿಷ್ಣು ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕ್ಕಳ ಇಂದು ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಗುತ್ತಿಗೆದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಾಮಗಾರಿಯನ್ನು ಆದಷ್ಟು ಬೇಗ ಸಂಪೂರ್ಣಗೊಳಿಸಲು ಆದೇಶಿಸಿದರು. ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ...
ಕಲ್ಮಕಾರು ಗ್ರಾಮದ ವಿಶ್ವನಾಥ ಕೊಪ್ಪಡ್ಕ ಎಂಬುವವರು ಇಂದು(ಡಿ.12) ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದು, ಮೃತರಿಗೆ 58 ವರ್ಷ ವಯಸ್ಸಾಗಿತ್ತು.ಹೃದಯಾಘಾತಗೊಂಡ ಕೂಡಲೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದಾರೆನ್ನಲಾಗಿದ್ದು, ಮೃತರು ಪತ್ನಿ ಚಂದ್ರಾವತಿ, ಪುತ್ರ ಅವಿನಾಶ್, ಪುತ್ರಿ ಶ್ರೀಮತಿ ಯುಕ್ತಿ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿ ಚುನಾವಣೆಗೆ ದಿನ ನಿಗದಿಯಾಗಿದ್ದು ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಇದುವರೆಗೆ 9 ನಾಮಪತ್ರ ಸಲ್ಲಿಕೆಯಾಗಿದೆ.ಡಿ.14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಪಕ್ಷೇತರರಾಗಿ ವಿಕ್ರಂ ಪೈ, ಕಾಂಗ್ರೆಸ್ ಬೆಂಬಲಿತರಾಗಿ ಜಯಪ್ರಕಾಶ್ ನೆಕ್ರಪ್ಪಾಡಿ, ಕರುಣಾಕರ ಮಡ್ತಿಲ, ಮುಂಜುನಾಥ್ ಮಡ್ತಿಲ, ರಾಜೇಶ್ ಭಟ್ ಬಾಂಜಿಕೋಡಿ, ಅಶ್ವಥ್ ಜಬಳೆ, ಕೇಶವ ಉದ್ದಂಪಾಡಿ, ಚಂದ್ರಕುಮಾರೇಶನ್ ಬಾಂಜಿಕೋಡಿ, ಕಣ್ಣ ಪಾಟಾಳಿ...
ಬೇರೆ ಬೇರೆ ತಾಯಂದಿರ ಮಕ್ಕಳು ಇಂದು ಒಂದೇ ತಾಯಿಯ ಮಕ್ಕಳಾಗಿ ಸಮಾಜ ಗುರುತಿಸುವಂತ ಕಾರ್ಯ ಮಾಡಿದ್ದಾರೆ. ಹತ್ತು ವರ್ಷಗಳನ್ನು ಪೂರೈಸಿದ ಸಂಸ್ಥೆ 10 ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವುದು, ಬಡವರಿಗೆ ನೆರವಾಗಿರುವುದು ನಿಜವಾದ ದೇವರ ಪೂಜೆ ಮಾಡಿದಂತೆ. ನಿಮ್ಮ ಸಂಸ್ಥೆಗೆ ಸರಕಾರದ ಮಟ್ಟದಿಂದ ಸಿಗಬಹುದಾದ ಅನುದಾನಕ್ಕೆ ಪ್ರಯತ್ನ ಪಡುತ್ತೇನೆ. ಒಳ್ಳೆಯ ಕೆಲಸ ಮಾಡಿದಾಗ ಹೆಸರು ಶಾಶ್ವತವಾಗಿ ಉಳಿಯುತ್ತದೆ...
Loading posts...
All posts loaded
No more posts
