ಇಂದಿನ(ಸೆಪ್ಟೆಂಬರ್ 16) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ಧಾರಣೆಯಲ್ಲಿ ಸ್ವಲ್ಪ ಇಳಿಕೆ ; ಅಡಿಕೆ, ಕಾಳುಮೆಣಸು ಹಾಗೂ ಕೊಬ್ಬರಿ ದರ ಯಥಾಸ್ಥಿತಿ..! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 16 ಸೆಪ್ಟೆಂಬರ್ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಸೆಪ್ಟೆಂಬರ್ 16) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ದ್ವಾದಶ ರಾಶಿಗಳ ದಿನಭವಿಷ್ಯ – ದಿನಾಂಕ :16-09-2026 ಬುಧವಾರ

01)🐏ಮೇಷ ರಾಶಿ🐏📃,ಹಠಾತ್ ಪ್ರಯಾಣಗಳಿರುತ್ತವೆ. ದೇವಸ್ಥಾನಕ್ಕೆ ಭೇಟಿನೀಡುತ್ತೀರಿ. ಹೊರಗಿನ ಜವಾಬ್ದಾರಿಗಳು ಕಿರಿ ಕಿರಿಗೊಳಿಸುತ್ತವೆ.ಆದಾಯಕ್ಕಿಂತ, ಖರ್ಚು ಹೆಚ್ಚಿರುತ್ತದೆ.ಹಠಾತ್ ಪ್ರಯಾಣದ ಸೂಚನೆಗಳಿವೆ. ವ್ಯವಹಾರಗಳಲ್ಲಿ ಪಾಲುದಾರರ ವರ್ತನೆಯುಕಿರಿಕಿರಿಯುಂಟುಮಾಡುತ್ತದೆ,ಗಮನಿಸಿ:-ಉದ್ಯೋಗದ ಬಗ್ಗೆ ಚಿಂತೆ ಹೆಚ್ಚಾಗುತ್ತದೆ,ಪರಿಹಾರ:-ಮನೆದೇವರ ಪ್ರಾರ್ಥನೆ ಮಾಡಿ, 02)🐂ವೃಷಭ ರಾಶಿ🐂📃,ಪ್ರಮುಖ ವಿಷಯಗಳಲ್ಲಿ ಆತ್ಮೀಯರಿಂದ ಸಲಹೆ ಪಡೆಯುತ್ತೀರಿ. ಸಮಾಜದ ಪ್ರಮುಖ ವ್ಯಕ್ತಿಗಳ ಪರಿಚಯ ಹೆಚ್ಚಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಸುಗಮವಾಗಿ ಸಾಗುತ್ತವೆ.ವಾಹನಅನುಕೂಲತೆ ಉಂಟಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ...
Ad Widget

ಸೆ.16 ; ತೊಡಿಕಾನಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭ

ತೊಡಿಕಾನ ಭಾಗದ ಪ್ರಯಾಣಿಕರ ಹಲವು ವರ್ಷಗಳ ಬೇಡಿಕೆಗೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಸ್ಪಂದಿಸಿದ್ದು ಸೆ.16 ರಂದು ಬೆಳಗ್ಗೆ 7.30ಕ್ಕೆ ಸುಳ್ಯದಿಂದ ಬಸ್ ಗೆ ಚಾಲನೆ ನೀಡಲಾಗುವುದು, ತೊಡಿಕಾನದಲ್ಲಿ 8 ಗಂಟೆಗೆ ಸ್ವಾಗತ ಕಾರ್ಯಕ್ರಮ ನಡೆಯಲಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಹಾಗೂ ತಾಲೂಕು ಅಧ್ಯಕ್ಷ ಶಾಹುಲ್‌ ಹಮೀದ್ ಕುತ್ತಮೊಟ್ಟೆ ತಿಳಿಸಿದ್ದಾರೆ.

ಕೋಟೆಮುಂಡುಗಾರಿನಲ್ಲಿ 35ನೇ ವರ್ಷದ ಗಣೇಶೋತ್ಸವ – ವೈಭವದ ಶೋಭಾಯಾತ್ರೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ವತಿಯಿಂದ ಯುವಕ ಮಂಡಲ ಕಳಂಜ ಕೋಟೆಮುಂಡುಗಾರು ಬಳಿ 35ನೇ ವರ್ಷದ ಶ್ರೀ ಗಣೇಶೋತ್ಸವ ಸೆ.14 ರಂದು ನಡೆಯಿತು.‌ ಸಂಜೆ ವೈಭವದ ಶೋಭಾಯಾತ್ರೆ ನಡೆದು ಮೂರ್ತಿ ಜಲಸ್ತಂಭನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಸೆ.14 ರಂದು ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ ನಡೆದ ಬಳಿಕ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇದರ...

ಟ್ರಾಫಿಕ್ ಅವ್ಯವಸ್ಥೆ ಕುರಿತು ವಿನಯ್ ಕುಮಾರ್ ಕಂದಡ್ಕ ಹೇಳಿಕೆಯನ್ನು ಸಮರ್ಥಿಸಿದ ಸುಬೋಧ್ ಶೆಟ್ಟಿ ಮೇನಾಲ

ಸುಳ್ಯ : ಸುಳ್ಯ ತಾಲೂಕು ಮಿಲಾದ್ ಸಮಿತಿಯವರು ವಿನಯ್ ಕುಮಾರ್ ಕಂದಡ್ಕ ಅವರ ಹೇಳಿಕೆಯ ಕುರಿತು ನಡೆಸಿದ ಪತ್ರಿಕಾಗೋಷ್ಠಿಯನ್ನು ಗಮನಿಸಿದಾಗ ಗಲಿಬಿಲಿಯಾಯಿತು. ಕಂದಡ್ಕ ಅವರು ನೀಡಿರುವ ಪತ್ರಿಕಾ ಹೇಳಿಕೆಯನ್ನು ಮೂರು–ನಾಲ್ಕು ಬಾರಿ ಓದಿದರೂ, ಅದರಲ್ಲಿ ಅಸಹಜವಾದ ಅಥವಾ ಕೋಮು ಸೌಹಾರ್ದಕ್ಕೆ ಧಕ್ಕೆ ತಂದು ಅಶಾಂತಿ ಉಂಟುಮಾಡುವಂತಹ ಯಾವುದೇ ಅಂಶ ಕಂಡುಬಂದಿಲ್ಲ ಎಂದು ಬಿಜೆಪಿ ಸುಳ್ಯ ಮಂಡಲದ...

ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಸುಲಭ ಕಂತು ಯೋಜನೆ : ₹1 ಲಕ್ಷ ಮೌಲ್ಯದ ಬಹುಮಾನ ಗೆದ್ದ ಚೇತನ್ ಅರಂತೋಡು

ಸುಳ್ಯ : ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿರುವ ಸುಲಭ ಕಂತು ಯೋಜನೆಯ ಎರಡನೇ ಆವೃತ್ತಿಯ ಬಂಪರ್ ಬಹುಮಾನ ಯೋಜನೆಯ ಮೊದಲನೇ ಡ್ರಾ ಸೆ.15ರಂದು ಸುಳ್ಯದ ಅಂಬೆಟಡ್ಕದಲ್ಲಿರುವ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ನಡೆಯಿತು. ಡ್ರಾದಲ್ಲಿ ಕಾರ್ಡ್ ಸಂಖ್ಯೆ 5570ರ ಚೇತನ್ ಅರಂತೋಡು ಅವರು ₹1 ಲಕ್ಷ ಮೌಲ್ಯದ ಗೃಹೋಪಯೋಗಿ ಇಲೆಕ್ಟ್ರಾನಿಕ್ ಸಾಮಗ್ರಿಗಳ ಬಹುಮಾನವನ್ನು...

ಮಾಸ್ ಅಧ್ಯಕ್ಷ ಸೀತಾರಾಮ ರೈ ಸವಣೂರು ರವರಿಂದ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭೇಟಿ – ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರಿಗೆ ಸ್ಪೆಷಲ್ ಪ್ಯಾಕೇಜ್ ಘೋಷಿಸುವಂತೆ ಮನವಿ

ಮಂಗಳೂರು ಅಡಿಕೆ ಸಹಕಾರಿ ಸಂಘ(ಮಾಸ್) ಅಧ್ಯಕ್ಷರಾದ ಸವಣೂರು ಸೀತಾರಾಮ ರೈ ಯವರು ಕರ್ನಾಟಕ ಅರೋಗ್ಯ, ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯು.ಟಿ. ಖಾದರ್ ರವರನ್ನು ಭೇಟಿಯಾಗಿ 18ನೇ ತಾರೀಕಿಗೆ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರ ಸಹಾಯಕ್ಕೆ ಸರ್ಕಾರ ವಿಶೇಷ ಆರ್ಥಿಕ...

ಮೆ| ಮುಳಿಯ ಕೃಷ್ಣ ಭಟ್ ಜ್ಯುವೆಲ್ಲರ್ಸ್‌ನಲ್ಲಿ ಗಣೇಶ ಚತುರ್ಥಿ ವಿಶೇಷ ಕೊಡುಗೆ | ಆಭರಣ ಖರೀದಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ

ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಸುಳ್ಯದ ಪ್ರತಿಷ್ಠಿತ ಮೆ| ಮುಳಿಯ ಕೃಷ್ಣ ಭಟ್ ಜ್ಯುವೆಲ್ಲರ್ಸ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡಲಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ವಿವಿಧ ವಿನ್ಯಾಸಗಳ ಚಿನ್ನಾಭರಣ ಹಾಗೂ ಇತರ ಆಭರಣಗಳನ್ನು ಖರೀದಿಸಿದರು. ಹಬ್ಬದ ಸಂಭ್ರಮದ ನಡುವೆ ತಮ್ಮ...

ಪಂಜ : ಶಿವ ಸ್ಮರಣೆ ಅಂಗವಾಗಿ ಸೆ.18 ರಂದು ದೇವರಿಗೆ ಶತರುದ್ರಾಭಿಷೇಕ

ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.07 ರಿಂದ ನಿರಂತರವಾಗಿ ಭಕ್ತಾಧಿಗಳಿಂದ ನಡೆಯುತ್ತಿರುವ ಶಿವ ಸ್ಮರಣೆ ಕಾರ್ಯಕ್ರಮ ಸೆ.18 ರಂದು 12 ನೇ ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಂದು ದೇವರಿಗೆ ಶತರುದ್ರಾಭಿಷೇಕ ಸೇವೆ ನಡೆಯಲಿದೆ. ಸೀಮೆಯ ಭಕ್ತರ ಒಳಿತಿಗಾಗಿ ಹಾಗೂ ಸಾನಿಧ್ಯ ವೃದ್ಧಿಗಾಗಿ ಹಾಗೂ ಸಾವಿರ ಸೀಮೆಯ ಭಕ್ತರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಸತತ 12 ದಿನಗಳ ಕಾಲ...

ವಿನಯ್ ಕಂದಡ್ಕ ಹೇಳಿಕೆಗೆ ತಾಲೂಕು ಮೀಲಾದ್ ಸಮಿತಿ ತೀವ್ರ ಖಂಡನೆ | ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸುವಂತೆ ಆಗ್ರಹ

ಸೆ.11ರಂದು ಸುಳ್ಯ ನಗರದಲ್ಲಿ ತಾಲೂಕು ಮೀಲಾದ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಈದ್ ಮಿಲಾದ್ ಮೆರವಣಿಗೆ ಕುರಿತು ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕಂದಡ ನೀಡಿರುವ ಹೇಳಿಕೆಯನ್ನು ತಾಲೂಕು ಮೀಲಾದ್ ಸಮಿತಿ ತೀವ್ರವಾಗಿ ಖಂಡಿಸಿದೆ ಎಂದು ಮಿಲಾದ್ ಸಮಿತಿ ಪದಾಧಿಕಾರಿಗಳು ಹೇಳಿದರು. ಸೆ.15ರಂದು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು...
Loading posts...

All posts loaded

No more posts

error: Content is protected !!