ಪಡ್ಪಿನಂಗಡಿ : ಸನ್ಮಾನ ಮತ್ತು ಮಾಹಿತಿ ಕಾರ್ಯಕ್ರಮ

ಕಲ್ಮಡ್ಕ ಮತ್ತು ಪಂಬೆತ್ತಾಡಿ ಸ್ತ್ರೀಶಕ್ತಿ ಗುಂಪುಗಳ ಗೊಂಚಲು ಸಮಿತಿ ಮತ್ತು ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ನಿವೃತ್ತರಿಗೆ ಸನ್ಮಾನ, ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮ ಪಡ್ಪಿನಂಗಡಿಯ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ತ್ರೀಶಕ್ತಿ ಗುಂಪುಗಳ ಗೊಂಚಲು ಸಮಿತಿ ಅಧ್ಯಕ್ಷೆ ಸುಜನಿ ಪಟ್ಟಾಜೆ ವಹಿಸಿದ್ದರು. ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್...

ಪಂಜದಲ್ಲಿ ಹೋಟೆಲ್ ದಿಶಾಂತ್ ಶುಭಾರಂಭ

ಪಂಜದ ಮುಖ್ಯ ರಸ್ತೆ ಬಳಿ ರಾಘವೇಂದ್ರ ಕಾಣಿಯೂರು ಮಾಲಕತ್ವದ ಹೋಟೆಲ್ ದಿಶಾಂತ್ ಅ. 17ರಂದು ಶುಭಾರಂಭಗೊಂಡಿತು. ಇಲ್ಲಿ ಶುಚಿರುಚಿಯಾದ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳು ಮತ್ತು ಫಾಸ್ಟ್ ಪುಡ್ ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.
Ad Widget

ಪಂಜ : ‘ಕಾರ್ ಸ್ಪಾ’ ವಾಷಿಂಗ್ ಸೆಂಟರ್ ಶುಭಾರಂಭ

ಪಂಜ ಮುಖ್ಯ ರಸ್ತೆಯಲ್ಲಿರುವ ಶೆಟ್ಟಿ ಕಾಂಪ್ಲೆಕ್ಸ್ ನಲ್ಲಿ ಅಭಿಲಾಷ್ ಕಟ್ಟ ಮಾಲಕತ್ವದ 'ಕಾರ್ ಸ್ಪಾ' ವಾಷಿಂಗ್ ಸೆಂಟರ್ ಅ.18ರಂದು ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಬಳ್ಪ ಶ್ರೀ ತ್ರಿಶೂಲಿನೀ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಉತ್ಸವ ಸಮಿತಿ ಅಧ್ಯಕ್ಷರಾದ ಸದಾನಂದ ರೈ ಅರ್ಗುಡಿ ನೆರವೇರಿಸಿದರು. ಈ ಸಂದರ್ಭದಲ್ಲಿ ಶೆಟ್ಟಿ ಕಾಂಪ್ಲೆಕ್ಸ್ ನ ಮಾಲಕರಾದ ರವೀಂದ್ರನಾಥ್ ಶೆಟ್ಟಿ, ಬಳ್ಪ ಗ್ರಾಮ...

ಸುಳ್ಯ ತಾಲೂಕು ವಿಕಲಚೇತನರ ಪರಿಶೀಲನಾ ಸಭೆ

ಸುಳ್ಯ ತಾಲೂಕು ವಿಕಲಚೇತನರ ಎಂ ಆರ್ ಡಬ್ಲ್ಯೂ ಹಾಗೂ ವಿ ಆರ್ ಡಬ್ಲ್ಯೂ ಪರಿಶೀಲನಾ ಸಭೆ ಅಕ್ಟೋಬರ್ 17ರಂದು ಸುಳ್ಯ ತಾ ಪಂ ಸಭಾಭವನದಲ್ಲಿ ನಡೆಯಿತು.ದ ಕ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಯಮುನಾ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆ ಯಲ್ಲಿ ಸಿಡಿಪಿಒ ರಶ್ಮಿ, ಯು.ಆರ್.ಡಬ್ಲ್ಯೂ ಚಂದ್ರಶೇಖರ, ನಗರ ಪಂಚಾಯತ್ ಯು.ಆರ್.ಡಬ್ಲ್ಯೂ. ಪ್ರವೀಣ್ ನಾಯಕ್ ಸುಳ್ಯ, ತಾ ಪಂ...

ಪಂಜ:ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಸಹಕಾರ ಭಾರತಿ ದ.ಕ.ಜಿಲ್ಲೆ ಇವುಗಳ ಸಹಯೋಗದೊಂದಿಗೆ ‘ಉದ್ಯೋಗ ನೈಪುಣ್ಯ ತರಬೇತಿ’ ಯು ಸಮಾರೋಪ ಸಮಾರಂಭ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅ.17ರಂದು ನಡೆಯಿತು.ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯಪ್ರತಾಪ್ ಸಿಂಹ ನಾಯಕ್, ರಾಷ್ಟ್ರೀಯ ಸ್ವಯಂ ಸೇವಕ...

ಅಕ್ಟೋಬರ್ 29(ರಬೀಉಲ್ ಅವ್ವಲ್ 12): ಅಕ್ಟೋಬರ್ 18 ಭಾನುವಾರ ರಬೀಉಲ್ ಅವ್ವಲ್ ತಿಂಗಳು ಪ್ರಾರಂಭ

ಮುಸಲ್ಮಾನ ಬಾಂಧವರ ಪೈಗಂಬರ್ ಮುಹಮ್ಮದ್ ಸ.ಅ.ರವರ ಜನ್ಮ ದಿನದ ಆಚರಣೆಯ ರಬೀಉಲ್ ಅವ್ವಲ್ ತಿಂಗಳ ಚಂದ್ರದರ್ಶನ ವಾಗಿದ್ದು, ಭಾನುವಾರ (ಅ. 18) ರಬೀಉಲ್ ಅವ್ವಲ್ ಚಾಂದ್ 1 ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಗಳು ಘೋಷಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 29 (ರಬೀಉಲ್ ಅವ್ವಲ್ 12) ರ ಮೀಲಾದುನ್ನಬಿ (ಈದ್ ಮಿಲಾದ್)ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ...

ಕಸ್ತೂರಿರಂಗನ್ ವರದಿ ಅವೈಜ್ಞಾನಿಕ : ಸರಕಾರ ಜನರ ಅಭಿಪ್ರಾಯ ಪಡೆಯಬೇಕು – ರೈತರ ಉಳಿವಿಗಾಗಿ ಜನಾಂದೋಲನದ ಎಚ್ಚರಿಕೆ ನೀಡಿದ ಮಲೆನಾಡು ಜಂಟಿ ಕ್ರಿಯಾ ಸಮಿತಿ

ಕಸ್ತೂರಿರಂಗನ್ ವರದಿ ಜಾರಿಗೂ ಮೊದಲು ರೈತರ, ಜನರ ಅಭಿಪ್ರಾಯ ವನ್ನು ಸರಕಾರಗಳು ಪಡೆಯಬೇಕು. ಒಂದು ವೇಳೆ ಅಭಿಪ್ರಾಯ ಪಡೆಯದೇ ಜಾರಿಗೊಂಡರೆ ಮಲೆನಾಡು ಜಂಟಿ ಕ್ರಿಯಾ ಸಮಿತಿ ಜನಾಂದೋಲನ ಕೈಗೊಂಡು ಹೋರಾಟ ನಡೆಸಲಿದೆ ಎಂದು ಮಲೆನಾಡು ಜಂಟಿ ಕ್ರಿಯಾಯ ಸಂಚಾಲಕ ಪ್ರದೀಪ್ ಕೆ.ಎಲ್. ಹಾಗೂ ಅಶೋಕ್ ಎಡಮಲೆ ತಿಳಿಸಿದ್ದಾರೆ. ಅ.17 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ...

ಗಾಂಧಿನಗರ : ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮೇಲುಸ್ತುವಾರಿ ಸಮಿತಿ ಸಭೆ

ಗಾಂಧಿನಗರ ಸುಳ್ಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮೇಲುಸ್ತುವಾರಿ ಸಮಿತಿ ಸಭೆ ಗಾಂಧಿನಗರ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಸಕ ಅಂಗಾರ ವಹಿಸಿದ್ದರು. ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ.,ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ನಾಯಕ್ ಸುಳ್ಯ,ಶಾಲಾ ಸಮಿತಿಯ ಹಿರಿಯ ಸಲಹೆಗಾರರು ಎಂ ವೆಂಕಪ್ಪ ಗೌಡ, ಎನ್...

ಕಲ್ಮಕಾರು : ಯುವಕ ಆತ್ಮಹತ್ಯೆ

ಕಲ್ಮಕಾರು ಗ್ರಾಮದ ಪಡ್ಪು ವಸಂತ ರವರ ಪುತ್ರ ಲೋಹಿತ್ (24) ಇಂದು ಮಧ್ಯಾಹ್ನ ಮನೆಯ ಸಮೀಪದ ಮಾವಿನಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತ ಲೋಹಿತ್ ತಂದೆ,ಹಾಗೂ ತಂಗಿಯನ್ನು ಅಗಲಿದ್ದಾರೆ.

ಲಕ್ಷ್ಮೀ ಪಟಾಕಿ ಸುಡುವುದು ಸರಿಯೇ?! – ದೇವರ ಚಿತ್ರವಿರುವ ಪಟಾಕಿಗಳನ್ನು ಖರೀದಿಸದಿರೋಣ, ಸುಡದಿರೋಣ

ಯಾವ್ದೋ ಒಂದು ಮದುವೆ ಕಾಗದದಲ್ಲಿ ಅಚ್ಚಾಗುವ ದೇವರ ಭಾವಚಿತ್ರವನ್ನು ಕತ್ತರಿಸಿಟ್ಟು ಪೂಜಿಸುವಷ್ಟು ದೇವರ ಮೇಲೆ ನಂಬಿಕೆಯಿಟ್ಟಿರುವ ನಾವು. ಒಂದೊಮ್ಮೆ ದೇವರ ಭಾವಚಿತ್ರಕ್ಕೆ ಗೊತ್ತಿಲ್ಲದೆ ತುಳಿದರೂ ಮುಂದೇನು ಅನಾಹುತವಾದಿತೆಂದು ನೂರೊಂದು ಬಾರಿ ದೇವರನ್ನು ಜಪಿಸುವ ನಾವು. ಲಕ್ಷ್ಮೀ ದೇವಿಯ ಭಾವಚಿತ್ರವನ್ನು ಸುಟ್ಟು ಸಂಭ್ರಮಿಸುವುದು ಸಾಧುವೇ..?ದೀಪಾವಳಿ ಎಂದಾಕ್ಷಣ ನಮಗೆ ತಕ್ಷಣ ನಮಗೆಪಟಾಕಿಗಳೇ! ಅದೂ ಹಬ್ಬದ ಸಂಭ್ರಮದ ತೀವ್ರತೆಯನ್ನು ಅಳತೆ...
Loading posts...

All posts loaded

No more posts

error: Content is protected !!