ಮುಕ್ಕೂರು : ಐದನೇ ವರ್ಷದ ಶ್ರೀ ಶಾರದೋತ್ಸವ

ಮುಕ್ಕೂರು-ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ 5 ನೇ ವರ್ಷದ ಶ್ರೀ ಶಾರದೋತ್ಸವ ಅ.25 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಿತು. ಪತಂಜಲಿ ಶಾಸ್ತ್ರೀ ಮುಕ್ಕೂರು ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಬೆಳಗ್ಗೆ ಶಾರದಾ ಪ್ರತಿಷ್ಟೆ, ಪೂಜೆ, ಗಣಹೋಮ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಮುಕ್ಕೂರು ವಠಾರದಿಂದ ಮೆರವಣಿಗೆ ಸಾಗಿ ಚೆನ್ನಾವರ ಗೌರಿ...

ಸಂಪಾಜೆ : ಆನೆ ದಾಳಿ- ಕೃಷಿ ನಷ್ಟ

ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಸರವು ರತ್ನವೇಣಿ ಭಟ್ ಅವರ ಕೃಷಿ ಜಾಗಕ್ಕೆ ಅ.24 ರಂದು ಕಾಡಾನೆ ದಾಳಿ ಮಾಡಿದ್ದು ಅಪಾರವಾದ ಕೃಷಿ ನಷ್ಟ ಗೊಂಡಿರುತ್ತದೆ. ಕೃಷಿ ಜಾಗದಲ್ಲಿ ತೆಂಗು, ಅಡಿಕೆ, ಬಾಳೆ ಕೃಷಿಯು ನಾಶಗೊಂಡಿರುತ್ತದೆ.
Ad Widget

ಅಡ್ಕಾರ್ ಶಾಲೆಯಲ್ಲಿ ಕ್ಯಾಂಪಸ್ ಫ್ರಂಟ್ ನಿಂದ ಸ್ವಚ್ಚತಾ ಕಾರ್ಯಕ್ರಮ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅಡ್ಕಾರ್ ಯುನಿಟ್ ವತಿಯಿಂದ ಅಡ್ಕಾರ್ ಸರ್ಕಾರಿ ಪ್ರಾಥಮಿಕ ಶಾಲೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಲಾಕ್ ಡೌನ್ ನಿಂದಾಗಿ ಶಾಲೆಗಳು ಮುಚ್ಚಿದ್ದರಿಂದ, ಶಾಲೆಯ ಪರಿಸರ ಕಾಡು ಗಿಡಗಳಿಂದ ಆವರಿಸಿತು. ಇದನ್ನು ಮನಗಂಡ ಕ್ಯಾಂಪಸ್ ಫ್ರಂಟ್ ಅಡ್ಕಾರ್ ಯುನಿಟ್ ನ ವಿದ್ಯಾರ್ಥಿಗಳು ಶಾಲೆಯ ಪರಿಸರವನ್ನು ಸ್ವಚ್ಚಗೊಳಿಸಿದರು.ಈ ಸಂಧರ್ಭದಲ್ಲಿ ಸಮಿತಿಯ ಸುಳ್ಯ...

ಸುಳ್ಯ ನಲಿಕೆ ಫ್ರೆಂಡ್ಸ್ ಮತ್ತು ಅಜಿಲ ಸೇವಾ ಸಮಾಜ ಸಂಘದ ವಾರ್ಷಿಕ ಸಭೆ

ಸುಳ್ಯ ನಲಿಕೆ ಫ್ರೆಂಡ್ಸ್ ಮತ್ತು ಅಜಿಲ ಸೇವಾ ಸಮಾಜ ಸಂಘದ ವಾರ್ಷಿಕ ಸಭೆಯು ಅ .24 ರಂದು ಅರಂಬೂರು ಮಾಕಾಂಬಿಕಾ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು . ತಾಲೂಕು ಅಜಿಲ ಸೇವಾ ಸಮಾಜ ಸಂಘದ ಅಧ್ಯಕ್ಷ ಜಯರಾಮ ಬೊಳಿಯಮಜಲು ರವರು ಅಧ್ಯಕ್ಷತೆ ವಹಿಸಿದ್ದರು . ವೇದಿಕೆಯಲ್ಲಿ ನಲಿಕೆ ಫ್ರೆಂಡ್ಸ್ ಅಧ್ಯಕ್ಷ ಶ್ರೀಧರ ಅಜಿಲ ಅಡ್ತಲೆ ,...

ಸುಳ್ಯ ಪೊಲೀಸ್ ಠಾಣೆಯಲ್ಲಿ ನವರಾತ್ರಿಯ ಅಂಗವಾಗಿ ಆಯುಧ ಪೂಜೆ

ಸುಳ್ಯ ಪೊಲೀಸ್ ಠಾಣೆಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಆಯುಧ ಪೂಜೆ ಕಾರ್ಯಕ್ರಮ ಇಂದು ನಡೆಯಿತು. ಪುರೋಹಿತ ಬ್ರಹ್ಮಶ್ರೀ ನಾಗರಾಜ ಭಟ್ ಪೂಜಾ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು. ಎಸ್ಐ ಹರೀಶ್ ಎಂ ಆರ್, ಕ್ರೈಂ ಎಸ್ಐ ರತನ್ ಕುಮಾರ್, ಪ್ರೊಬೆಷನರಿ ಎಸ್ಐ ಸಂದೀಪ್ ಶೆಟ್ಟಿ, ಎಎಸ್ಐ ಭಾಸ್ಕರ್ ಪ್ರಸಾದ್, ನ್ಯಾಯವಾದಿ ವೆಂಕಪ್ಪ ಗೌಡ, ಕೆವಿಜಿ ಆಯುರ್ವೇದ ಮೆಡಿಕಲ್...

ಗುತ್ತಿಗಾರು ಮೆಸ್ಕಾಂ ಕಛೇರಿಯಲ್ಲಿ ಆಯುಧಪೂಜೆ

ಗುತ್ತಿಗಾರು ಮೆಸ್ಕಾಂ ಕಛೇರಿಯಲ್ಲಿ ಆಯುಧಪೂಜೆ, ವಾಹನಪೂಜೆ ಅ.23 ರಂದು ನಡೆಯಿತು. ಈ ಸಂದರ್ಭದಲ್ಲಿ ಎಇಇ ಚಿದಾನಂದ ಕೆ., ಜೆ.ಇ. ಲೋಕೇಶ್ ಎಣ್ಣೆಮಜಲು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೇನ್ಯ: ಸ.ಕಿ.ಪ್ರಾ. ಶಾಲೆ ನೇಲ್ಯಡ್ಕದಲ್ಲಿ ಶ್ರಮದಾನ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕದಲ್ಲಿ ಅ. 24 ರಂದು ಶ್ರಮದಾನ ನಡೆಸಲಾಯಿತು.ಈ ಸಂಧರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯ ಗುರುಗಳು , ಪೋಷಕರು ಹಾಗೂ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು.

ಬೆಳ್ಳಾರೆ : ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಆಯುಧಪೂಜಾ ಕಾರ್ಯಕ್ರಮ

ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಅ.24 ರಂದು ಆಯುಧಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಶಾಂತಮೂರ್ತಿ ಕಿಲಂಗೋಡಿ ಮತ್ತು ರಮೇಶ್ ಮಠತ್ತಡ್ಕ, ಕಟ್ಟಡ ಮಾಲಕರಾದ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭವ್ಯ ನೇರ್ಪು- ಹರೀಶ್ ಪರಮಲೆ

ನಾಲ್ಕೂರು ಗ್ರಾಮದ ನೇರ್ಪು ದಿ.ಶೇಷಪ್ಪ ಗೌಡರ ಪುತ್ರಿ ಭವ್ಯಳ ವಿವಾಹವು ಏನೆಕಲ್ಲು ಗ್ರಾಮದ ಪರಮಲೆ ಚಿನ್ನಪ್ಪ ಗೌಡರ ಪುತ್ರ ಹರೀಶ್ ರೊಂದಿಗೆ ಅ.21 ರಂದು ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ( ಚಿತ್ರ : ಪ್ರಕೃತಿ ಗುತ್ತಿಗಾರು )

ಸುಳ್ಯ ನ್ಯಾಯಾಲಯದಲ್ಲಿ ಆಯುಧಪೂಜೆ

ಸುಳ್ಯ ನ್ಯಾಯಲಯದಲ್ಲಿ ದುರ್ಗಾ ಪೂಜೆ ಹಾಗು ಆಯುಧಪೂಜೆ ಇಂದು ನೆರವೇರಿತು. ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರು ಹಾಗೂ ನ್ಯಾಯವಾದಿ ರಾಮಚಂದ್ರ ಶ್ರೀಪಾದ ಹೆಗಡೆ ಅವರ ನೇತೃತ್ವದಲ್ಲಿ ಪೂಜಾ ವಿಧಿ ನೆರವೇರಿಸಿಲಾಯಿತು. ಈ ಸಂದರ್ಭ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎಂ. ಪುರುಷೋತ್ತಮ,ಕಿರಿಯ ನ್ಯಾಯಾಧೀಶರಾದ ಯಶವಂತ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ...
Loading posts...

All posts loaded

No more posts

error: Content is protected !!