- Thursday
- May 7th, 2026
ಪುತ್ತೂರು ಕಡೆಯಿಂದ ಸುಳ್ಯದ ಕಡೆಗೆ ಬರುತ್ತಿದ್ದ ಬೈಕ್ ಗೆ ದನ ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿ ಹೊಡೆದು ಇಬ್ಬರು ಯುವಕರು ಗಾಯಗೊಂಡ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ. ಬೈಕ್ ನಲ್ಲಿದ್ದ ಅರಂತೋಡು ಗ್ರಾಮದ ಪಿಂಡಿಮನೆ ಸಂತೋಷ್ ಮತ್ತು ಪ್ರವೀಣ್ ಎಂಬವರು ಗಾಯಗೊಂಡವರು. ಪ್ರವೀಣ್ ಎಂಬವರಿಗೆ ಗಂಭೀರ ಗಾಯಗೊಂಡಿದ್ದು, ಸಂತೋಷ್ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ....
ದುಷ್ಯಂತ್ ಶೀರಡ್ಕ ಮಾಲೀಕತ್ವದ ಎಸ್.ಬಿ.ಗ್ರೂಪ್ಸ್ ಆನ್ಲೈನ್ ಸೇವೆಗಳು ಮತ್ತು ಡಿಜಿಟಲ್ ಪ್ರಿಂಟಿಂಗ್ ನ.21 ರಂದು ಗುತ್ತಿಗಾರಿನ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ. ಇಲ್ಲಿ ಜನರಿಗೆ ಅಗತ್ಯವಿರುವ ಎಲ್ಲಾ ತರಹದ ಸರ್ಕಾರಿ ಹಾಗೂ ಸರ್ಕಾರೇತರ ಆನ್ಲೈನ್ ಸೇವೆಗಳು ಮತ್ತು ಡಿಜಿಟಲ್ ಪ್ರಿಂಟಿಂಗ್ ಕೆಲಸಗಳನ್ನು ಶೀಘ್ರ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.
ಅಖಿಲ ಭಾರತ ರೈತರ ಸಂಘರ್ಷ ಸಮನ್ವಯ ಸಮಿತಿ, ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಲಿತ ಕಾರ್ಮಿಕ ಹಾಗೂ ಜನ ವಿರೋಧಿ ಮಸೂದೆಗಳನ್ನು ಆಗ್ರಹಿಸಿ ಭಾರತೀಯ ಕೃಷಿ ಪರಂಪರೆ ಹಾಗೂ ಸಂಪತ್ತನ್ನು ಉಳಿಸುವಂತೆ ಒತ್ತಾಯಿಸಿ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ...
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ನ.18ರಂದು 2021-22 ನೇ ಸಾಲಿನ ನಮ್ಮ ಗ್ರಾಮ ನಮ್ಮ ಯೋಜನೆಯ ವಿಶೇಷ ಗ್ರಾಮಸಭೆಯ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿಯವರಾದ ಸುರೇಶ್ ವಹಿಸಿದ್ದರು.ಈ ಸಂಧರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಎ. ಸ್ವಾಗತಿಸಿ ವಂದಿಸಿದರು . ತಾಲೂಕು ಪಂಚಾಯತು ಸದಸ್ಯರಾದ ಉದಯ ಕೊಪ್ಪಡ್ಕಹಾಗೂ ನಿಕಟಪೂರ್ವ ಗ್ರಾ.ಪಂ....
ನ. 29ರಂದು ಗುತ್ತಿಗಾರಿನಲ್ಲಿ "ಬಿ. ಎಂ. ಎಸ್. ಕಪ್" ಮುಕ್ತ ಕ್ರಿಕೆಟ್ ಪಂದ್ಯಾಟ, ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸುಳ್ಯ ತಾಲೂಕು ಆಟೋ ಚಾಲಕರ ಸಂಘ, ಬಿ. ಎಂ.ಎಸ್. ಗುತ್ತಿಗಾರು ಘಟಕದ ನೇತೃತ್ವದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳ ಜನತೆ ಪ್ರತೀದಿನ ಆತಂಕದ ವಾತಾವರಣದಲ್ಲಿ ಜೀವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಸ್ತೂರಿ ರಂಗನ್ ಸಮಿತಿಯು ನೀಡಿದ ವರದಿಯಿಂದ ಇದು ದೃಢಪಟ್ಟಿದೆ. ಆದ್ದರಿಂದ ದಿನಾಂಕ 27/11/2020 ನೇ ಶುಕ್ರವಾರ ಸಮಯ ಬೆಳಗ್ಗೆ 10:30 ಕ್ಕೆ ಸುಳ್ಯ ತಾಲೂಕು ಕಛೇರಿ ಎದುರು ಕಸ್ತೂರಿ ರಂಗನ್ ವರದಿ ವಿರುದ್ಧ ಸುಳ್ಯ ತಾಲೂಕಿನ ಬಾಧಿತ ಗ್ರಾಮಗಳ ಗ್ರಾಮಸ್ಥರಿಂದ...
ಇತಿಹಾಸ ಪ್ರಸಿದ್ಧ ಕೋಟಿ-ಚೆನ್ನಯರ ಆರಾಧ್ಯ ದೇವರು ಶತಮಾನದಿಂದ ತುಳುನಾಡ ಭಕ್ತರಿಂದ ಆರಾಧಿಸುತ್ತಾ ಬಂದಿರುವ ಎಣ್ಮೂರು ಗ್ರಾಮದ ಹೇಮಳ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಶೀಘ್ರದಲ್ಲಿ ನಡೆಯಲಿದ್ದು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ನಾಗಬ್ರಹ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶೋಭಾ ಕರಂದ್ಲಾಜೆ ಅವರು...
ಕೊರೋನಾದಿಂದಾಗಿ ಕಳೆದ 8 ತಿಂಗಳಿನಿಂದ ಕಾಲೇಜುಗಳು ಮುಚ್ಚಿದ್ದವು. ಆದರೆ ಇಂದಿನಿಂದ ಕಾಲೇಜುಗಳು ಪುನರಾರಂಭಗೊಂಡಿವೆ. ಸರ್ಕಾರ ಕಾಲೇಜುಗಳನ್ನು ಆರಂಭಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸೋಂಕು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಷ್ಟೇ ಅಲ್ಲದೇ ಪ್ರತೀ ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿ ನೆಗೆಟಿವ್ ವರದಿ ಬಂದವರಿಗೆ ಮಾತ್ರ ಕಾಲೇಜಿಗೆ ಬರಲು ಅವಕಾಶ ನೀಡಲಾಗಿದೆ....
ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ. ನಿ. ಇದರ ನೆಟ್ಟಣ ಶಾಖಾ ಸಲಹಾ ಸಮಿತಿ ಸಭೆಯು ನ. 17ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಟ್ಟಣ ಶಾಖೆಯಲ್ಲಿ ಸಲಹಾ ಸಮಿತಿ ಅಧ್ಯಕ್ಷ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವು ವಹಿಸಿದ್ದರು. ಸಭೆಯಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ಆಲಂಕಾರು ಅಧ್ಯಕ್ಷ ರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ ,...
ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ಎಂಎ ದಕ್ಷಿಣ ಕನ್ನಡ ಜಿಲ್ಲಾ ಎಲೆಕ್ಷನ್ ಡೈಯರಕ್ಟರೇಟ್ ರಾಗಿ ಏಳು ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಸಮಿತಿಯ ಚೇರ್ಮನ್ ಆಗಿ ಅಸ್ಸಯ್ಯದ್ ಸಾದಾತ್ ತಂಙಳ್ ಕರವೇಲು , ಬೆಳ್ಳಾರೆ ಜೋನಲ್ ಸಮಿತಿಯಿಂದ ಚೀಫ್ ಡೈರೆಕ್ಟರ್ ಆಗಿ ಅಬ್ದುಲ್ಲಾ ಅಹ್ಸನಿ ಮಾಡನ್ನೂರು ಡೈರೆಕ್ಟರ್ ಆಗಿ ಹಸೈನಾರ್ ಜಯನಗರ ಆಯ್ಕೆಯಾಗಿದ್ದಾರೆ. ನವಂಬರ್ 17ರಂದು ಉಪ್ಪಿನಂಗಡಿಯ ನೆಕ್ಕಿಲಾಡಿ...
Loading posts...
All posts loaded
No more posts
