- Thursday
- May 7th, 2026
Haneef haji Abdual karim Abdual Khadar Kunzambu ಮುಹಿಯ್ಯುದ್ದೀನ್ ಜುಮಾ ಮಸೀದಿ ಕುಂಬರ್ಚೋಡು ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನ.20 ರಂದು ಕುಂಬರ್ಚೋಡು ಮದರಸ ಸಭಾಂಗಣದಲ್ಲಿ ನಡೆಯಿತು. ದುವಾ ಹಾಗೂ ಉದ್ಘಾಟನೆಯನ್ನು ಆಶ್ರಫ್ ಮುಸ್ಲಿಯಾರ್ ನೇರವೆರಿಸಿದರು.ವೇದಿಕೆಯಲ್ಲಿ ಸೈದಾಲಿ ಹಾಜಿ, ಅಹಮದ್ ಹಾಜಿ, ಅಬುಬಕ್ಕರ್, ಅಬ್ದುಲ್ ಕರಿಮ್ ಬಿ ಎಮ್ ಉಪಸ್ಥಿತರಿದ್ದರು....
ರಿಕ್ಷಾದಿಂದ ಬಿದ್ದು ಗಂಭೀರ ಗಾಯಗೊಂಡ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ವರದಿಯಾಗಿದೆ. ದುಗಲಡ್ಕದ ನೀರಬಿದಿರೆ (ಕೊಯಿಕುಳಿ ಶಾಲಾ ಬಳಿ) ನಾರಾಯಣ ಎಂಬವರ ಪತ್ನಿ ಲಲಿತ (40) ಸಂಬಂಧಿಕರಾದ ನಾಗೇಶ ಎಂಬವರ ರಿಕ್ಷಾದಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಆರ್ತಾಜೆ ಸಮೀಪ ರಿಕ್ಷಾದಿಂದ ರಸ್ತೆಗೆ ಬಿದ್ದರೆಂದೂ ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗದೇ ಅವರು...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಪಿ. ನೇಮಕಗೊಂಡಿದ್ದಾರೆ. ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಗೆ ಒಂಭತ್ತು ಜನ ಸದಸ್ಯರುಗಳನ್ನು ಆಯ್ಕೆಗೊಳಿಸಿ, ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ನ. 20 ರಂದು ದೇವಸ್ಥಾನದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಈ ಆಯ್ಕೆ ನಡೆಯಿತು. ದೇವಾಲಯದ...
ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಚಾರ್ವಕ ಕಳೆದ ಒಂದೂವರೆ ವರ್ಷದಿಂದ ರಾಜ್ಯಾದ್ಯಂತ ಅತ್ಯುತ್ತಮ ಕಲಾಪ್ರದರ್ಶನ ನೀಡುತ್ತಿದ್ದು 50ಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರ ಮನೆ ಮಾತಾಗಿದೆ. ಕೋವಿಡ್ ಮಹಾಮಾರಿಯಿಂದಾಗಿ ಕೆಲವು ತಿಂಗಳಿನಿಂದ ಕಲಾವಿದರಿಗೆ ರಜೆ ನೀಡಲಾಗಿದ್ದು ಇದೀಗ ಕಾರ್ಯಕ್ರಮ ನೀಡಲು ಸಿದ್ಧವಾಗಿದೆ. ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದ ಜೊತೆಗೆ ಮಹಿಳಾ ಸಿಂಗಾರಿ ಮೇಳ ಬೇಕು ಎಂಬ...
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2019-20 ನೇ ಶೈಕ್ಷಣಿಕ ವರ್ಷದಲ್ಲಿ ಕಾರ್ಯನಿರ್ವಹಿಸಿದ ಸುಮಾರು 3000 ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು ಯಾರೂ ಅವರ ಗೋಜಿಗೆ ಹೋಗದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿವರ್ಷ ಕಾಲೇಜಿನ ಶೈಕ್ಷಣಿಕ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಪ್ರಾಂಶುಪಾಲರ , ಖಾಯಂ ಉಪನ್ಯಾಸಕರ ಮತ್ತು ಸಂಬಂಧಪಟ್ಟ ಅಧಿಕಾರಿ ವರ್ಗದ ಜೊತೆಗೆ ಹೆಗಲಿಗೆ ಹೆಗಲು...
ಅಕ್ರಮ ಸಕ್ರಮದಡಿ ಜಾಗ ಮಂಜೂರಾತಿ ಮತ್ತು ಸರಕಾರದ ವೈಯಕ್ತಿಕ ಯೋಜನೆಗಳ ಅನುಷ್ಠಾನದ ಸಭೆ, ಮನೆ-ಮನೆ ಆಸರೆ ವಿವಿಧ ಯೋಜನೆಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಇಂದು ಗುತ್ತಿಗಾರು ಪ.ವರ್ಗದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕಿನ ಶಾಸಕರು ಹಾಗೂ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಎಸ್.ಅಂಗಾರ ವಹಿಸಿ, ಅಕ್ರಮ ಸಕ್ರಮ ಯೋಜನೆಯ ಕಡತ ವಿಲೇವಾರಿಯ ಬಗ್ಗೆ...
ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶೋತ್ಸವ ಸಮಿತಿಯ ವಿಶೇಷ ಸಭೆ ನ. 19ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ನಡೆಯಿತು. ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಬೇರಿಕೆ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಗೌಡ ಕುಯಿಂತೋಡು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು...
ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನಾಗೇಶ್ ನೆಕ್ರಾಜೆ, ಕಾರ್ಯದರ್ಶಿಯಾಗಿ ಕುಮಾರ ಪುರ್ಲುಪ್ಪಾಡಿ, ಸದಸ್ಯರಾಗಿ ಸದಸ್ಯರಾಗಿ ನಾಗೇಶ್ ಪಿ. ಪೂಜಾರಿಮನೆ, ಬಿ.ಶೂರಪ್ಪ ಗೌಡ ಬಾಲಾಡಿ, ದೇರಪ್ಪ ಗೌಡ ಹೊಸಮನೆ, ಶ್ರೀಮತಿ ಚಿತ್ರಲೇಖ, ಶ್ರೀಮತಿ ವಾಣಿಶ್ರೀ ಮುತ್ಲಾಜೆಡ್ಕ, ಅಚ್ಚುತ ಪಿ. ಪೀಕಟೆಮಜಲು, ಅರ್ಚಕ...
ರಾಷ್ಟ್ರೀಯ ಗಂಥಾಲಯ ಸಪ್ತಾಹದ ಅಂಗವಾಗಿ ಇಲಾಖಾ ವತಿಯಿಂದ ನೀಡುವ ಗ್ರಂಥಾಲಯ ಸಿಬ್ಬಂದಿ ಸೇವಾ ಪುರಸ್ಕಾರಕ್ಕೆ ದೇವಚಳ್ಳ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿರಾಮ್ ಕಣೆಮರಡ್ಕ ಭಾಜನರಾಗಿದ್ದರು . ಇವರಿಗೆ ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಇವರು ಮಂಡೆಕೋಲು ಗ್ರಾಮದ ಉಪ ಅಂಚೆ ಪಾಲಕ ಸೀತಾರಾಮ ಕಣೆಮರಡ್ಕ ಇವರ ಪತ್ನಿ.
ಅಮರ ಸುಳ್ಯ ಸುದ್ದಿ ಪತ್ರಿಕೆಯ ವತಿಯಿಂದ ವರ್ಷಂಪ್ರತಿ ದೀಪಾವಳಿ ವಿಶೇಷಾಂಕ ಹೊರತರುತ್ತಿದ್ದು ಈ ಬಾರಿ ನಾಲ್ಕನೆಯ ಯಶಸ್ವಿ ಸಂಚಿಕೆ ಮಾರುಕಟ್ಟೆಗೆ ಬಿಡುಗಡೆ ಗೊಂಡಿರುತ್ತದೆ. ಈ ವಿಶೇಷಾಂಕದ ಆಕರ್ಷಣೀಯ ಭಾಗದಲ್ಲಿ ಒಂದಾಗಿರುವ ಮುದ್ದು ಕಂದ ಫೋಟೋ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಕ್ಕಳ ಫೋಟೋಗಳು ಬಂದಿದ್ದು ಅದರಲ್ಲಿ ಆಯ್ಕೆದಾರರ ಮನಮುಟ್ಟುವಲ್ಲಿ ಮೂವರು ಮಕ್ಕಳ...
Loading posts...
All posts loaded
No more posts
