- Friday
- May 8th, 2026
ಗ್ರಾಮ ಪಂಚಾಯತ್ ಚುನಾವಣೆಯ ಮತದಾನ ಬಗೆಗಿನ ಕ್ಷಣಕ್ಷಣದ ಮಾಹಿತಿಯನ್ನು ಸಿಬ್ಬಂದಿಗಳು ವೆಬ್ಸೈಟ್ ಅಪ್ ಲೋಡ್ ಮಾಡಬೇಕಾಗಿರುವುದರಿಂದ ನೆಟ್ವರ್ಕ್ ಸಮಸ್ಯೆ ಹಲವಾರು ಪಂಚಾಯತ್ ಸಿಬ್ಬಂದಿಗಳನ್ನು ಕಾಡಲಾರಂಭಿಸಿದೆ. ಪ್ರತಿ ಬೂತ್ ಮಟ್ಟದಲ್ಲಿ ಮತದಾನ ಪ್ರಕ್ರಿಯೆಯ ಪರ್ಸಂಟೇಜ್ ನ್ನು ಪ್ರತಿ 2 ಗಂಟೆಗೊಮ್ಮೆ ರಾಜ್ಯ ಚುನಾವಣಾ ಆಯೋಗದ ವೆಬ್ ಸೈಟ್ ಗೆ ಅಪ್ ಡೇಟ್ ಮಾಡಬೇಕಾಗುತ್ತದೆ. ಇದೀಗ ನೆಟ್ವರ್ಕ್ ಸಮಸ್ಯೆಯಿಂದ...
ನಾಲ್ಕೂರು ಗ್ರಾಮದ ನಡುಗಲ್ಲು ಬಿಜೆಪಿ ಭದ್ರ ಕೋಟೆಗೆ ಶಾಸಕ ಎಸ್. ಅಂಗಾರ ಭೇಟಿ ಕಾರ್ಯಕರ್ತರ ಜತೆ ಮಾತನಾಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ವಿಜಯಕುಮಾರ್ ಚಾರ್ಮತ, ಹರೀಶ್ ಕೊಯಿಲ,ಪ್ರಮೀಳಾ ಎರ್ದಡ್ಕ ಕೋಡಿಬೈಲ್, ಲೀಲಾವತಿ ಅಂಜೇರಿ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ನವೀನ್ ಬಾಳುಗೋಡು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಎಡಮಂಗಲ ಗ್ರಾ.ಪಂ.ನ ಮತದಾನವು ಎಣ್ಮೂರು ಹಿ.ಪ್ರಾ. ಶಾಲೆಯ ಮತಕೇಂದ್ರದಲ್ಲಿ ನಡೆಯುತ್ತಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ರವರು ಜಾಲ್ಸೂರು ಗ್ರಾಮ ಪಂಚಾಯತ್ ಚುನಾವಣೆಯ ನಾಲ್ಕನೇ ವಾರ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತದಾನ ಕೇಂದ್ರದಲ್ಲಿ ಏಜೆಂಟರ ಬಳಿ ಹೆಚ್ಚು ಜನ ಕುಳಿತುಕೊಳ್ಳಲು ಅವಕಾಶ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಮತದಾರರು ಚುನಾವಣಾ ಕೇಂದ್ರದ ಒಳಗಡೆ ಏಜೆಂಟರ ಬಳಿ ಹೋಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು....
ಬಾಳಿಲ ಗ್ರಾ.ಪಂ.ನ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಒಟ್ಟು 5 ಮತಕೇಂದ್ರಗಳಲ್ಲಿ ಮತದಾರರು ಮತದಾನದಲ್ಲಿ ನಿರತರಾಗಿರುವ ದೃಶ್ಯ ಕಂಡುಬಂದಿತು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಪಾಲಿಸಲಾಗಿತ್ತು.
ಜಾಲ್ಸೂರು ಗ್ರಾಮ ಪಂಚಾಯತ್ ಚುನಾವಣೆಯ ಎರಡನೇ ವಾರ್ಡ್ ಮತಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟೇಶ ನಡುಬೆಟ್ಟು, ತಿಲಕ ಎನ್ ಪಿ ಗೀತಾ ಚಂದ್ರಹಾಸ ಮತ್ತು ಬೆಂಬಲಿಗರೊಂದಿಗೆ ಮತಯಾಚಿಸಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕೆಪಿಸಿಸಿ ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಗಳಾದ ಶ್ರೀ ಹೆಚ್. ಎಂ ನಂದಕುಮಾರ್ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಕೆಪಿಸಿಸಿ ಉಸ್ತುವಾರಿಗಳು ಶ್ರೀ ಕೃಷ್ಣಪ್ಪ ಜಿ ಯವರು ಸುಳ್ಯ ಬ್ಲಾಕ್ ವ್ಯಾಪ್ತಿಯ ಎಲ್ಲಾ 25 ಗ್ರಾಮ ಪಂಚಾಯತ್ ಗಳಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮತಯಾಚನೆ ನಡೆಸಿದರು. ಈ ಸಂದರ್ಭ ಕಾರ್ಯಕರ್ತರನ್ನು...
ಸಂಪಾಜೆ ಗ್ರಾಮ ಪಂಚಾಯತ್ ದರ್ಖಾಸ್ ,ಪೇರಡ್ಕ 3ನೇ ವಾರ್ಡ್ ನಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ,ವಿರಾಜಪೇಟೆ ಉಸ್ತುವಾರಿ ಟಿ.ಎಂ ಶಹೀದ್ ಮತಯಾಚನೆ ನಡೆಸಿದರು.
Loading posts...
All posts loaded
No more posts
