ವೈಭವದ ಮೆರವಣಿಗೆಯೊಂದಿಗೆ ಕುಕ್ಕೆಗೆ ಆಗಮಿಸಿದ ಬೆಳ್ಳಿರಥ

ಸುಬ್ರಹ್ಮಣ್ಯ ನವಂಬರ್ 5 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯದ ಡಾ.ಕುರುಂಜಿ ರೇಣುಕಾ ಪ್ರಸಾದ್ ಹಾಗೂ ಮನೆಯವರು ಕೊಡುಗೆಯಾಗಿ ನೀಡಿದ ಎರಡು ಕೋಟಿ ರೂಪಾಯಿ ವೆಚ್ಚದ ಬೆಳ್ಳಿ ರಥವು ಇಂದು ಬುಧವಾರ ಸಂಜೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಿದೆ. ರಥದೊಂದಿಗೆ ಬಂದಿರುವ ಕುರುಂಜಿ ಡಾ.ರೇಣುಕಾ ಪ್ರಸಾದ್ ರವರು ಹಾಗೂ ಮನೆಯವರು, ರಥಶಿಲ್ಪಿಗಳು, ಸುಳ್ಯ...

ಹಳೆಗೇಟು : ಬೆಳ್ಳಿರಥ ಮೆರವಣಿಗೆ – ಶಿವಾಜಿ ಗೆಳೆಯರ ಬಳಗದ ವತಿಯಿಂದ ತಂಪು ಪಾನೀಯ ವಿತರಣೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ| ರೇಣುಕಾ ಪ್ರಸಾದ್.ಕೆ.ವಿ ಹಾಗೂ ಮನೆಯವರಿಂದ ಸಮರ್ಪಣೆಯಾಗಲಿರುವ ಬೆಳ್ಳಿರಥ ಮೆರವಣಿಗೆಯಲ್ಲಿ ರಥವನ್ನು ಸ್ವಾಗತಿಸಲಾಯಿತುನಂತರ ಶಿವಾಜಿ ಗೆಳೆಯರ ಬಳಗದ ವತಿಯಿಂದ ಎಲ್ಲರಿಗೂ ತಂಪು ಪಾನೀಯ ವಿತರಣೆ ನಡೆಸಲಾಯಿತು.ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದ ವತಿಯಿಂದ ಸಿಹಿತಿಂಡಿ ವಿತರಣೆ ನಡೆಯಿತು. ಸ್ಥಳೀಯ ವರ್ತಕರು, ಸಮಿತಿಯ ಸದಸ್ಯರು, ಯುವ ಮಿತ್ರರು ಸಾರ್ವಜನಿಕರು  ಪಾನೀಯ ವಿತರಣೆಗೆ ಸಹಕರಿಸಿದರು.
Ad Widget

ಬೆಳ್ಳಾರೆ ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪ್ರಯೋಜಿತ ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಸದಸ್ಯರಿಂದ ಹಾಗೂ ಜ್ಞಾನದೀಪ ಶಿಕ್ಷಣ ತರಬೇತಿಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ಬೆಳ್ಳಾರೆ ಸಾರ್ವಜನಿಕ ಗ್ರಂಥಲಾಯದ ಗ್ರಂಥಪಾಲಕಿ ಬೆಳ್ಳಾರೆ ಸಾರ್ವಜನಿಕ ಗ್ರಂಥಾಲಯ ಬಳಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಗಗನ್ ಎಂ ಎಸ್, ರೋಟರಿ ಕ್ಲಬ್ ಬೆಳ್ಳಾರೆ...

ಹರಿಹರ ಪಳ್ಳತ್ತಡ್ಕ : ಸಚಿನ್ ಕ್ರೀಡಾ ಸಂಘದ ವತಿಯಿಂದ “ಪಂಚಸಪ್ತತಿ ಸ್ವಚ್ಛತಾ ಅಭಿಯಾನ”ದ ಅಂಗವಾಗಿ ಬಸ್ ತಂಗುದಾಣ ಸ್ವಚ್ಛತೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಇವುಗಳ ಸಂಯುಕ್ತಾಶ್ರಯದಲ್ಲಿ “ಪಂಚಸಪ್ತತಿ - 75 ದಿನಗಳ ಸ್ವಚ್ಛತಾ ಅಭಿಯಾನ”ದ ಅಂಗವಾಗಿ ಸಚಿನ್ ಕ್ರೀಡಾ ಸಂಘದ ವತಿಯಿಂದ ಕಲ್ಲೇಮಠ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

ಚೊಕ್ಕಾಡಿ ಮಯೂರಿ ಯುವತಿ ಮಂಡಲದ ವತಿಯಿಂದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಬಸ್ಸು ತಂಗುದಾಣ ಸ್ವಚ್ಛತೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇದರ ವತಿಯಿಂದ "ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ 2025"  ಕಾರ್ಯಕ್ರಮದ ಅಂಗವಾಗಿ ನಾಲ್ಕನೆಯ ಸ್ವಚ್ಛತಾ  ಕಾರ್ಯಕ್ರಮವನ್ನು ದಿನಾಂಕ ನ.02 ಆದಿತ್ಯವಾರ ಚೆನ್ನಪರಿ ಬಸ್ಸು ತಂಗುದಾಣವನ್ನು ಶುಚಿಗೊಳಿಸಿ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವುದರ ಮೂಲಕ  ನಡೆಸಲಾಯಿತು.ಯುವತಿ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯೆಯರು ಭಾಗವಹಿಸಿದ್ದರು.

ಬಹುಭಾಷಾ ಕವಿಗೋಷ್ಠಿಯಲ್ಲಿ ಎಂ.ಎ.ಮುಸ್ತಫಾ ಬೆಳ್ಳಾರೆ ಕವನ ವಾಚನ

ಕಾಸರಗೋಡಿನ ಮೀಪುಗುರಿಯ ಕನ್ನಡ ಗ್ರಾಮದಲ್ಲಿ ನ-4 ರಂದು ಕನ್ನಡಗ್ರಾಮೋತ್ಸವ-2025(ಕೇರಳ- ಕರ್ನಾಟಕ ರಾಜ್ಯೋತ್ಸವ) ಇದರ ರೀತಿಗಳಿಗಾಗಿ ಬಹುಭಾಷಾ ಕವಿಗೋಷ್ಠಿಯು ಜರುಗಿತು. ಪ್ರಸಿದ್ಧ ಕವಿ ಡಾ| ಸುರೇಶ್ ನೆಗಳಗುಳಿ ಅಧ್ಯಕ್ಷತೆಯಲ್ಲಿ ಜರುಗಿದ ಈ ಕವಿಗೋಷ್ಠಿಯಲ್ಲಿ ಯುವಕವಿ ಹಾಗೂಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ ಎಂ.ಎ.ಮುಸ್ತಫಾ ಬೆಳ್ಳಾರೆಯವರು ಮಲಾಮೆ ಭಾಷೆಯಲ್ಲಿ “ಞಮಲೆ ಜೀವಿದೊ(ನಮ್ಮ ಜೀವನ)” ಎಂಬ ಶೀರ್ಷಿಕೆಯ ಕವನ ವಾಚಿಸಿದರು....

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವಾರ್ಷಿಕ ಕ್ರೀಡಾಕೂಟ “ಉಡಾನ್ 2025”

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಾರ್ಷಿಕ ಕ್ರೀಡಾಕೂಟ “ಉಡಾನ್ -2025” ನ.04 ರಿಂದ ನ.10 ರ ವರೆಗೆ ನಡೆಯಲಿದ್ದು, ಕ್ರೀಡಾಕೂಟದ ಉದ್ಘಾಟನೆಯನ್ನು ನ.04 ರಂದು ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ ಇವರು ದೀಪ ಬೆಳಗಿಸಿ ವಾರ್ಷಿಕ ಕ್ರೀಡಾ ಕೂಟದ ಲಾಂಛನವನ್ನು ಪ್ರಕಟಿಸುವುದರ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ| ರೇಣುಕಾ ಪ್ರಸಾದ್.ಕೆ.ವಿ ಹಾಗೂ ಮನೆಯವರಿಂದ ಸಮರ್ಪಣೆಯಾಗಲಿರುವ ಬೆಳ್ಳಿರಥ – ಸುಳ್ಯದಿಂದ ಸುಬ್ರಹ್ಮಣ್ಯದವರೆಗೆ ರಥ ಸಾಗಿ ಬರುವ ದಾರಿ ಹಾಗೂ ಸಮಯ ಇಲ್ಲಿದೆ…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ| ರೇಣುಕಾ ಪ್ರಸಾದ್.ಕೆ.ವಿ ಹಾಗೂ ಮನೆಯವರಿಂದ ಸಮರ್ಪಣೆಯಾಗಲಿರುವ ಬೆಳ್ಳಿ ರಥಕ್ಕೆ ಕೋಟೇಶ್ವರದಲ್ಲಿ ಪೂಜೆ ನಡೆದು ಭವ್ಯ ಮೆರವಣಿಗೆಯಲ್ಲಿ ನಿನ್ನೆ(ನ.04) ಸುಳ್ಯಕ್ಕೆ ಆಗಮಿ‌‌ಸಿದೆ.ಇಂದು(ನ.05) ಸುಳ್ಯದಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಥ ತೆರಳಲಿದ್ದು, ಸುಳ್ಯದಿಂದ ಸುಬ್ರಹ್ಮಣ್ಯದವರೆಗೆ ರಥ ಸಾಗಿ ಬರುವ ದಾರಿ ಹಾಗೂ ಸಮಯ ಈ ಕೆಳಗಿನಂತಿದೆ...ಇಂದು(ನ.05) ಬೆಳಿಗ್ಗೆ 6:30 ರಿಂದ 7:00 ರವರೆಗೆ...

ಶಿಕ್ಷಣ ಕಾಶಿ ಕುರುಂಜಿಭಾಗ್ ಗೆ ಆಗಮಿಸಿದ ಬೆಳ್ಳಿರಥ –  ಕೆ.ವಿ.ಜಿ ಸಮೂಹ ಸಂಸ್ಥೆಗಳು ಹಾಗೂ ಗಣ್ಯರಿಂದ ಸ್ವಾಗತ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ. ರೇಣುಕಾ ಪ್ರಸಾದ್ ಕೆ.ವಿ ಮತ್ತು ಮನೆಯವರಿಂದ ಸಮರ್ಪಣೆಯಾಗಲಿರುವ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ  ಪೂಜೆ ನಡೆದು ಭವ್ಯ ಮೆರವಣಿಗೆಯಲ್ಲಿ ಸುಳ್ಯಕ್ಕೆ ನಿನ್ನೆ ಆಗಮಿಸಿದೆ.ಇಂದು ಸುಳ್ಯದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ತೆರಳಲಿದ್ದು ಇದೀಗ ಕುರುಂಜಿಭಾಗ್ ಗೆ ಆಗಮಿಸಿದ್ದು, ಕೆವಿಜಿ ಅಭಿಮಾನಿಗಳು ಗಣ್ಯರು ಕಣ್ತುಂಬಿಕೊಂಡರು.

ಶಿಕ್ಷಣ ಕಾಶಿ ಕುರುಂಜಿಭಾಗ್ ಗೆ ಆಗಮಿಸಿದ ಬೆಳ್ಳಿರಥ – ಕೆ.ವಿ.ಜಿ.ಸಮೂಹ ಸಂಸ್ಥೆಗಳು ಹಾಗೂ ಗಣ್ಯರಿಂದ ಸ್ವಾಗತ

ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ. ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರಿಂದ ಸಮರ್ಪಣೆಯಾಗಲಿರುವ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ ಪೂಜೆ ನಡೆದು ಭವ್ಯ ಮೆರವಣಿಗೆಯಲ್ಲಿ ಸುಳ್ಯಕ್ಕೆ ನಿನ್ನೆ ಆಗಮಿಸಿದೆ. ಇಂದು ಸುಳ್ಯದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ತೆರಳಲಿದ್ದು ಇದೀಗ ಕುರುಂಜಿಭಾಗ್ ಗೆ ಆಗಮಿಸಿದ್ದು, ಕೆವಿಜಿ ಅಭಿಮಾನಿಗಳು ಗಣ್ಯರು ಕಣ್ತುಂಬಿಕೊಂಡರು.
Loading posts...

All posts loaded

No more posts

error: Content is protected !!