ಸುಳ್ಯ: ಜು. 1ರಂದು ರೋಟರಿ ಕ್ಲಬ್ ಪದಗ್ರಹಣ ಕಾರ್ಯಕ್ರಮ| ಸಾಧಕರಿಗೆ ಸನ್ಮಾನ ಹಾಗೂ ಸಹಾಯಧನ ವಿತರಣೆ

ಸುಳ್ಯ: ರೋಟರಿ ಕ್ಲಬ್ ಸುಳ್ಯದ 2026-27ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಜು. 1ರಂದು ಸುಳ್ಯದ ರೋಟರಿ ಕಮ್ಯೂನಿಟಿ ಹಾಲ್‌ನಲ್ಲಿ ನಡೆಯಲಿದೆ ಎಂದು ನೂತನ ಅಧ್ಯಕ್ಷೆ ಲತಾ ಮಧುಸೂಧನ್ ತಿಳಿಸಿದರು.

. . . . . . . . .

ಅವರು ಸುಳ್ಯದ ಪತ್ರಿಕಾ ಭವನದಲ್ಲಿ ಜೂ. 27ರಂದು ರೋಟರಿ ಕ್ಲಬ್ ಸುಳ್ಯ ಇದರ ವತಿಯಿಂದ ನಡೆದ ಪತ್ರಿಕಾಗೋಷ್ಟಿ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಕ್ಯಾನ್ಸರ್ ರೋಗಿಗೆ ಧನಸಹಾಯ ವಿತರಣೆ, ಶೈಕ್ಷಣಿಕ ಸಾಧಕರಿಗೆ ಅಭಿನಂದನೆ, ಪೆರುವಾಜೆಯ ನಾಟಿ ವೈದ್ಯೆ ಯಶೋಧಾ ಹಾಗೂ ಲೈನ್‌ಮ್ಯಾನ್ ಸಂತೋಷ್ ಅವರಿಗೆ ಸನ್ಮಾನ ನೆರವೇರಿಸಲಾಗುವುದು ಎಂದರು.

. . . . . . .

ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ, ಶಾಲಾ ಆವರಣಗಳಲ್ಲಿ ಹಣ್ಣಿನ ಗಿಡ ನೆಡುವ ಅಭಿಯಾನ, ಆರೋಗ್ಯ ಶಿಬಿರಗಳು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

2026- 27ನೇ ಸಾಲಿನ ಕ್ಲಬ್ ನ ಅಧ್ಯಕ್ಷರಾಗಿ ಲತಾ ಮಧುಸೂದನ್, ಕಾರ್ಯದರ್ಶಿಯಾಗಿ ಹರಿರಾಯ ಕಾಮತ್, ಲರ್ನಿಂಗ್ ಫೆಸಿಲಿಟೇಟರ್ ಆಗಿ ಜಿತೇಂದ್ರ ಎನ್.ಎ., ಕೋಶಾಧಿಕಾರಿಯಾಗಿ ನಳಿನಿ ಕಿರ್ಲಾಯ, ಉಪಾಧ್ಯಕ್ಷರಾಗಿ ಸುಧಾಕರ ಕೊಚ್ಚಿ, ಸರ್ಜೆಂಟ್ ಎಟ್ ಆರ್ಮ್ಸ್ ಆಗಿ ಮಧುಸೂದನ್ ಕೆ., ಎಕ್ಸಿಕ್ಯುಟಿವ್ ಸೆಕ್ರೆಟರಿ ಆಗಿ ಡಾ| ಹರ್ಷಿತಾ ಪುರುಷೋತ್ತಮ್, ಕ್ಲಬ್ ಮೆಂಬರ್ಶಿಪ್ ಚೇರ್ಮೆನ್ ಆಗಿ ಸನತ್ ಪೆರಿಯಡ್ಕ, ಕ್ಲಬ್ ವೊಕೇಶನಲ್ ಸರ್ವೀಸ್ ಚೇರ್ಮೆನ್ ಆಗಿ ಚಂದ್ರಶೇಖರ ಪೇರಾಲು, ಸರ್ವೀಸ್ ಪ್ರಾಜೆಕ್ಟ್ ಚೇರ್ಮನ್ ಆಗಿ ಪ್ರಭಾಕರನ್ ನಾಯರ್ ಕೆ., ಫೌಂಡೇಶನ್ ಚೇರ್ಮೆನ್ ಆಗಿ ಡಾ. ಪುರುಷೋತ್ತಮ ಕೆ.ಜಿ, ಕ್ಲಬ್ ನ್ಯೂ ಜನರೇಷನ್ ಚೇರ್ಮೆನ್ ಆಗಿ ಕಸ್ತೂರಿ ಶಂಕರ್, ಕ್ಲಬ್ ಪಬ್ಲಿಕ್ ಇಮೇಜ್ ಚೇರ್ಮೆನ್ ಆಗಿ ಡಾ. ಕೇಶವ ಪಿ.ಕೆ., ಪಲ್ಸ್ ಪೋಲಿಯೊ ಚೇರ್ಮೆನ್ ಆಗಿ ಡಾ. ಸುಧಾಕರ ಭಟ್, ನಿರ್ದೇಶಕರಾಗಿ ಮಧುರಾ ಜಗದೀಶ್, ಧನಲಕ್ಷ್ಮಿ, ಆಶಿತಾ ಕೇಶವ್, ಸತೀಶ್ ಕೆ.ಜಿ., ಮಾಧವ ಬಿ.ಟಿ., ಬುಲೆಟಿನ್ ಎಡಿಟರ್ ಆಗಿ ಅಬ್ದುಲ್ ಕಲಾಂ, ಆರ್ ಸಿಸಿ ಚೇರ್ಮೆನ್ ಆಗಿ ಪ್ರಭಾಕರನ್ ನಾಯರ್ ಸಿ.ಎಚ್, ಇಂಟರಾಕ್ಟ್ ಚೇರ್ಮೆನ್ ಆಗಿ ಪುರುಷೋತ್ತಮ ಕಿರ್ಲಾಯ, ರೋಟ್ರಾಕ್ಟ್ ಚೇರ್ಮೆನ್ ಸಿಎ ಗಣೇಶ್ ಭಟ್, ಮಹಿಳಾ ಸಬಲೀಕರಣ ಚೇರ್ಮೆನ್ ಆಗಿ ಯೋಗಿತಾ ಗೋಪಿನಾಥ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ ಪೆರಿಯಡ್ಕ, ಮಾಜಿ ಅಧ್ಯಕ್ಷ ರಾಮ್ ಮೋಹನ್ ಕೆ.ಎನ್., ಕಾರ್ಯದರ್ಶಿ ಕೆ. ಹರಿರಾಯ ಕಾಮತ್, ಸಹಾಯಕ ಗವರ್ನರ್ ಆನಂದ ಖಂಡಿಗ, ಸಿಎ ಗಣೇಶ್ ಭಟ್, ಖಜಾಂಜಿ ನಳಿನಿ ಕಿರ್ಲಾಯ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading