ಬೆಳ್ಳಾರೆ : ಬಿಜೆಪಿಯ ಚಂದ್ರಶೇಖರ ಪನ್ನೆ, ನಮಿತಾ ಕೆ.ಎಲ್ ಗೆಲುವು

ಬೆಳ್ಳಾರೆ 4ನೇ ವಾರ್ಡ್ ನ ಬಿಜೆಪಿಯ ಚಂದ್ರಶೇಖರ ಪನ್ನೆ 323, ನಮಿತಾ ಕೆ.ಎಲ್. 283 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ‌ನಾಗೇಶ್ ತಡಗಜೆ 173, ಲಲಿತಾ ಮೂಲ್ಯ 132, ಎಸ್ ಡಿ ಪಿ ಐ ನ ನೌಪಾಲ್ 93 ಮತ ಪಡೆದು ಸೋಲು ಕಂಡರು.

ಮಂಡೆಕೋಲು: ಬಿಜೆಪಿಯ ಅನಿಲ್ ತೋಟಪ್ಪಾಡಿ, ಪ್ರತಿಮಾ ಹೆಬ್ಬಾರ್ ಗೆಲುವು

ಮಂಡೆಕೋಲು 1 ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಬಿಜೆಪಿಯ ಅನಿಲ್ ತೋಟಪ್ಪಾಡಿ 338 ಹಾಗೂ ಪ್ರತಿಮಾ ಹೆಬ್ಬಾರ್ 322 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಶುಭಕರ ಬೊಳುಗಲ್ಲು 244, ರಶ್ಮಿ ಚೇರದಮೂಲೆ 161ಮತ ಪಡೆದು ಸೋಲು ಕಂಡಿದ್ದಾರೆ.
Ad Widget

ಅಜ್ಜಾವರ : ಬಿಜೆಪಿಯ ರವಿರಾಜ್ ಕರ್ಲಪ್ಪಾಡಿ, ದಿವ್ಯ ಪಡ್ಡಂಬೈಲು ಗೆಲುವು

ಅಜ್ಜಾವರ 1ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿಗಳಾದ ರವಿರಾಜ್ ಕರ್ಲಪ್ಪಾಡಿ 327, ದಿವ್ಯ ಜಯರಾಮ ಪಡ್ಡಂಬೈಲು 270 ಮತ ಗಳಿಸಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ ನ ಮಿಥುನ್ ಕರ್ಲಪ್ಪಾಡಿ 188, ಪವಿತ್ರ ಲೋಕೇಶ್ ಮುಡೂರು 179 ಮತ ಪಡೆದು ಸೋಲು ಕಂಡರು

ಕೂತ್ಕುಂಜ : ಬಿಜೆಪಿಯ ನೇತ್ರಾವತಿ ಗೆಲುವು

ಕೂತ್ಕುಂಜ 1ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ನೇತ್ರಾವತಿ ಕಲ್ಲಾಜೆ, 310 ಮತ ಗಳಿಸಿ ವಿಜಯಿಯಾಗಿದ್ದಾರೆ. ಭವ್ಯ ಕುದ್ವ 133 ಮತ ಪಡೆದರೇ 9 ಮತ ತಿರಸ್ಕೃತ ವಾಗಿದೆ.

ಐವರ್ನಾಡು : ಪಕ್ಷೇತರ ಅಭ್ಯರ್ಥಿ ಸತೀಶ್ ಜಬಳೆ ಗೆಲುವು – ಬಿಜೆಪಿಗರಿಗೆ ಸೋಲು

ಐವರ್ನಾಡು ಗ್ರಾಮದ 5 ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿ ಸತೀಶ್ ಜಬಳೆ 223 ಮತ ಪಡೆದು ಗೆಲುವು ಸಾಧಿಸಿದ್ದಾರೆ.ಬಿಜೆಪಿ ಬೂತ್ ಸಮಿತಿ ಹಾಗೂ ಮಂಡಲ ಸಮಿತಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ಆ ಮೂಲಕ ಬಿಜೆಪಿಗರಿಗೆ ಮತದಾ ರ ಬುದ್ಧಿ ಕಲಿಸಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ – ಕಾತರದಿಂದ ಕಾಯುತ್ತಿರುವ ಅಭ್ಯರ್ಥಿಗಳು

ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳು ಕಾತರದಿಂದ ಕಾಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಎಸ್ ಐ ಹರೀಶ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸುಳ್ಯ : ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಮಧ್ಯೆ ಮಾತಿನ ಚಕಮಕಿ

ಮತ ಎಣಿಕೆ ಕೇಂದ್ರದ ಕೊಠಡಿ ಸಂಖ್ಯೆ 11 ರಲ್ಲಿ ಟೇಬಲ್ ಸಂಖ್ಯೆ 32 ರಲ್ಲಿ ದೇವಚಳ್ಳ ಮತ್ತು ಗುತ್ತಿಗಾರು ಗ್ರಾಮದ ಮತ ಎಣಿಕೆ ಗೆ ತಯಾರಿ ನಡೆಸಲಾಗಿತ್ತು. ಇಲ್ಲಿ ಮಧ್ಯೆ ಅಡ್ಡವಾಗಿ ಬಲೆ ಕಟ್ಟಿದ್ದರು. ಇದು ಅಡ್ಡ ಕಟ್ಟಿರುವುದರಿಂದ ನಮಗೆ ಸರಿಯಾಗಿ ಕಾಣುವುದಿಲ್ಲ ಎಂದು ವೆಂಕಟ್ ವಳಲಂಬೆ ಆಕ್ಷೇಪಿಸಿದ ಘಟನೆ ಹಾಗೂ ಮಧ್ಯ ಪ್ರವೇಶಿಸಿದ ತಹಶೀಲ್ದಾರ್...

ಸುಬ್ರಹ್ಮಣ್ಯ : ಎಸ್ ಎಸ್ ಪಿ ಯು ನಲ್ಲಿ ಕೋವಿಡ್ -19 ಪರೀಕ್ಷೆ

ಸರಕಾರದ ಆದೇಶದಂತೆ ಜ.1ರಿಂದ ದ್ವಿತೀಯ ಪಿಯು ಮತ್ತು ಎಸ್ಎಸ್ಎಲ್ಸಿ ತರಗತಿಗಳು ಆರಂಭವಾಗುವ ಹಿನ್ನೆಲೆಯಲ್ಲಿ ಮಂಗಳವಾರ ಸುಬ್ರಹ್ಮಣ್ಯದ ಎಸ್ಎಸ್ಪಿಯು ಕಾಲೇಜಿನಲ್ಲಿಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕೋವಿಡ್-19 ಪರೀಕ್ಷೆ ನಡೆಯಿತು. ಪ್ರಯೋಗಶಾಲಾ ತಜ್ಞರಾದ ಅಮಿತಾ ಮತ್ತು ನೀತಾ ಪರೀಕ್ಷಾ ಕಾರ್ಯ ನೆರವೇರಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂಧಿ ಹೊನ್ನಪ್ಪ ಗೌಡ ಸಹಕರಿಸಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ...

ಎಸ್ ಎಂ ಎ ಸುಳ್ಯ ರೀಜನಲ್ ಚುನಾವಣಾ ಕಾರ್ಯಾಗಾರ ಕ್ರಿಯೇಶನ್ 2020

ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸುಳ್ಯ ರೀಜನಲ್ ಇದರ ವತಿಯಿಂದ ಚುನಾವಣಾ ಕಾರ್ಯಾಗಾರ ಕ್ರಿಯೇಶನ್ 2020 ಕಾರ್ಯಕ್ರಮ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಅರೇಬಿಕ್ ಮದರಸ ಸಭಾಂಗಣದಲ್ಲಿ ಡಿ.29 ರಂದು ನಡೆಯಿತು. ಎಸ್ ಎಂ ಎ ಜಿಲ್ಲಾ ಈಸ್ಟ್ ಎಲೆಕ್ಷನ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಾದತ್ ತಂಙಳ್ ಕರುವೇಲು ಕಾರ್ಯಕ್ರಮ ಉದ್ಘಾಟಿಸಿದರು. ಗಾಂಧಿನಗರ ಮುಹ್ಯದ್ದೀನ್ ಜುಮ್ಮಾ ಮಸೀದಿ ಖತೀಬರಾದ...

ಪಂಜ : ಜಾತ್ರೋತ್ಸವ ಅಂಗವಾಗಿ ಪೂರ್ವಭಾವಿ ಸಭೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಪ್ರಯುಕ್ತ ಪೂರ್ವಭಾವಿ ಸಭೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪದ್ಮನಾಭ ರೈ ರವರ ಸಭಾ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ದೇಗುಲದ ಮಾಜಿ ಆಡಳಿತ ಅಧಿಕಾರಿಗಳಾದ ಡಾ. ದೇವಿಪ್ರಸಾದ್ ಕಾನತ್ತೂರು , ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ, ಡಾ. ಮಂಜುನಾಥ್...
Loading posts...

All posts loaded

No more posts

error: Content is protected !!