ಐವರ್ನಾಡು : ಭಾರಿ ಮಳೆಗೆ ತಡೆಗೋಡೆ ಕುಸಿತ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ತಡೆಗೋಡೆ ಅ. 2 ರಂದು ಸುರಿದ ಭಾರಿ ಮಳೆಗೆ ಕುಸಿದಿದೆ.

ಸಂಪಾಜೆ : ನೇತಾಜಿ ಗೆಳೆಯರ ಬಳಗ ಚೆಡಾವು ಇವರ ವತಿಯಿಂದ ಗಾಂಧಿ ಜಯಂತಿ

ನೇತಾಜಿ ಗೆಳೆಯರ ಬಳಗ ಚೆಡಾವು ಸಂಪಾಜೆ ಇವರ ವತಿಯಿಂದ ಗಾಂಧಿ ಜಯಂತಿ ಆಚರಣೆಯನ್ನು ಚೆಡಾವು ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಶ್ರೀ ಮಾಚಯ್ಯ, ಸಹಾಯಕ ಉಪ ನಿರೀಕ್ಷಕರು ಸಂಪಾಜೆ ಪೊಲೀಸ್ ಹೊರ ಠಾಣೆ, ಇವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.ಪ್ರಾಸ್ತಾವಿಕವಾಗಿ ಮಾತಾನಾಡಿದ ಶ್ರೀ ಪಿ.ಎಲ್ ಸುರೇಶ್ ,ಸದಸ್ಯರು ಗ್ರಾಮ ಪಂಚಾಯತ್ ಸಂಪಾಜೆ, ಯುವಕ ಮಂಡಲದ...
Ad Widget

ಕಲ್ಮಡ್ಕ : ಗಾಂಧಿ ಜಯಂತಿ ಆಚರಣೆ

ಕಲ್ಮಡ್ಕ ಗ್ರಾಮ ಪಂಚಾಯತ್ ನಲ್ಲಿ ಅ.2 ರಂದು ಅಜಾದಿ ಕಾ ಅಮೃತ ಮಹೋತ್ಸವದ ಮತ್ತು ಗಾಂಧಿ ಜಯಂತಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹಾಜಿರಾ ಗಫೂರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತಿನ ಸ್ವಚ್ಛವಾಹಿನಿ ವಾಹನಕ್ಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕುಮಾರ್ ಕೆ. ಎಸ್ ಇವರು ಚಾಲನೆಯನ್ನು ನೀಡಿದರು....

ಹರಿಪುರ : ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ

ಹರಿಪುರದಲ್ಲಿ ಸ.ಕಿ‌.ಪ್ರಾ.ಶಾಲೆಯಲ್ಲಿ ಅ.02 ರಂದು ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ದಿನಾಚರಣೆ, ಸನ್ಮಾನ ಹಾಗೂ 2019-20ನೇ ಸಾಲಿನ 5ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಎನ್ ಎನ್ ಎಂ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಕು.ರಶ್ಮಿ.ಬಿ ಮತ್ತು ಮಾ.ವಿಕಾಸ್.ಕೆ.ಎಸ್, ಎಸ್.ಎಸ್.ಎಲ್.ಸಿ ಪರೀಕ್ಷಾ ಸಾಧಕರಾದ ಕು.ನಿಶ್ಮಿತಾ.ಕೆ.ಜಿ ಹಾಗೂ ಕು.ಸಿಂಚನಗೌರಿ, ಈ ಬಾರಿ...

ನಾಲ್ಕೂರು :- ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛತಾ ಕಾರ್ಯ

ನಾಲ್ಕೂರು ಗ್ರಾಮದ ನಡುಗಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿಯ ಸುತ್ತ ಅ.02 ರಂದು ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.ಈ ಸಂದರ್ಭದಲ್ಲಿ ಹರೀಶ್ ಕೊಯಿಲ, ವಿಜಯ ಚಾರ್ಮತ, ದಯಾನಂದ ಹುದೇರಿ, ನಿಶಿತ್ ಮೂರ್ಜೆ, ಮೇಘನ್ ಕಲ್ಲಾಜೆ, ಯತೀಶ್ ಕಲ್ಲಾಜೆ, ಅಶೋಕ್ ಕೊರಂಬಟ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. (ವರದಿ :- ಉಲ್ಲಾಸ್ ಕಜ್ಜೋಡಿ)

ಮಡಪ್ಪಾಡಿ: ಗಾಂಧೀ ಜಯಂತಿ ಆಚರಣೆ – ಕಾಲ್ನಡಿಗೆ ಜಾಥಾ, ಸ್ವಚ್ಛತಾ ಶ್ರಮದಾನ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 152ನೇ ಜನ್ಮದಿನೋತ್ಸವವನ್ನು ಅ.2ರಂದು ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು. ಇದರ ಅಂಗವಾಗಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಯಿತು. ನಂತರ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ "ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್ " ಹಾಡು ಸರ್ವರಿಂದ ಮೊಳಗಿತು. ಪ್ರಭಾರ ಮುಖ್ಯ ಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ...

ಕೊಲ್ಲಮೊಗ್ರು :- ಗ್ರಾಮಪಂಚಾಯತ್ ನಲ್ಲಿ ಗಾಂಧಿ ಜಯಂತಿ ಆಚರಣೆ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಸ್ವ-ಸಹಾಯ ಸಂಘಗಳ ಸಹಯೋಗದೊಂದಿಗೆ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಅ.02 ರಂದು ಕಾರ್ಯಕ್ರಮ ನಡೆಸಲಾಯಿತು. ಕೊಲ್ಲಮೊಗ್ರು ಗ್ರಾಮಪಂಚಾಯತ್ ಅದ್ಯಕ್ಷರಾದ ಉದಯ ಕೊಪ್ಪಡ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ದೂರದೃಷ್ಟಿ ಯೋಜನೆ...

ಮಡಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ. ರಚನೆ- ಅಧ್ಯಕ್ಷರಾಗಿ ಮಾಧವ ಎಸ್, ಉಪಾಧ್ಯಕ್ಷರಾಗಿ ಕುಸುಮಾವತಿ ನಡುಬೆಟ್ಟು ಆಯ್ಕೆ

ಇತ್ತೀಚೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ ಇಲ್ಲಿಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಮುಂದಿನ ಮೂರು ವರ್ಷಗಳ ಅವಧಿಗೆ ರಚಿಸಲಾಯಿತು. ರಚನಾ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ವಹಿಸಿದ್ದರು. ಎಸ್.ಡಿ.ಎಂ.ಸಿ ಯ ನೂತನ ಅಧ್ಯಕ್ಷರಾಗಿ ಮಾಧವ ಎಸ್, ಉಪಾಧ್ಯಕ್ಷರಾಗಿ ಕುಸುಮಾವತಿ ನಡುಬೆಟ್ಟು ಆಯ್ಕೆಯಾದರು. ಈ ಒಂದು ರಚನಾ ಸಭೆಯಲ್ಲಿ...

ಮುಳ್ಳುಬಾಗಿಲು :- ಸಂಗಮ ನವೋದಯ ಸ್ವ-ಸಹಾಯ ಸಂಘದ 18ನೇ ವರ್ಷದ ವಾರ್ಷಿಕ ಸಭೆ

ಸಂಗಮ ನವೋದಯ ಸ್ವ-ಸಹಾಯ ಸಂಘ ಮುಳ್ಳುಬಾಗಿಲು ಇದರ 18ನೇ ವರ್ಷದ ವಾರ್ಷಿಕ ಸಭೆಯನ್ನು ಸೆ.30 ರಂದು ಉಮೇಶ್ ಬಟ್ಟೋಡಿ ಅವರ ಮನೆಯಲ್ಲಿ ನಡೆಸಲಾಯಿತು.ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಜಗದೀಶ್ ಕಿಲರ್ ಕಜೆ, ಕಾರ್ಯದರ್ಶಿಯಾದ ನಾರಾಯಣ.ಪಿ ಮುಳ್ಳುಬಾಗಿಲು ಹಾಗೂ ಸಂಘದ ಸದಸ್ಯರಾದ ವೆಂಕಪ್ಪ ಗೌಡ, ವೆಂಕಟ್ರಮಣ ಗೌಡ, ಪುರುಷೋತ್ತಮ ಗೌಡ, ಗಿರಿಯಪ್ಪ ಗೌಡ, ಉಮೇಶ್ ಬಟ್ಟೋಡಿ, ಮೋಹನ್ ದಾಸ್...

ಹರಿಹರ ಪಲ್ಲತ್ತಡ್ಕ :- ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಅರಿವು ಕಾರ್ಯಕ್ರಮ

ಹರಿಹರ ಪಲ್ಲತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಸ್.ಡಿ.ಎಂ.ಸಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅ.02 ರಂದು ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ನಾಟಕ ಹಾಗೂ ಗಾಂಧಿ ನಡಿಗೆ ಕಾರ್ಯಕ್ರಮ ನಡೆಯಿತು.ಹರಿಹರ ಪಲ್ಲತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹರಿಹರ ಪಲ್ಲತ್ತಡ್ಕದ ಮುಖ್ಯ ಪೇಟೆಯವರೆಗೆ ಗಾಂಧಿ ನಡಿಗೆ,...
Loading posts...

All posts loaded

No more posts

error: Content is protected !!