- Sunday
- August 16th, 2026
ಭಾರತೀಯ ಜನತಾ ಪಾರ್ಟಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅ.06ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು.ಸುಬ್ರಹ್ಮಣ್ಯದ ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ಕಾರ್ಯಕರ್ತರು, ಪಕ್ಷದ ಪ್ರಮುಖರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದರು. ಬಳಿಕ ಕ್ಷೇತ್ರದಲ್ಲಿ ಶ್ರೀ ದೇವರ ದರುಶನ ಪಡೆದು, ಪ್ರಸಾದ ಸ್ವೀಕರಿಸಿದರು. ದೇವಳದ ವತಿಯಿಂದ ಅವರನ್ನು ಗೌರವಿಸಲಾಯಿತು....
ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಅ.5 ರಾತ್ರಿಯಿಂದ ನವರಾತ್ರಿ ಉತ್ಸವವು ಆರಂಭಗೊಂಡಿದ್ದು ಶ್ರೀ ಕ್ಷೇತ್ರದ ರಂಗಪೂಜೆ, ಭಕ್ತಾಧಿಗಳ ಸಾಮೂಹಿಕ ರಂಗಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಅ.6ರಂದು ಬೆಳಿಗ್ಗೆ ಶ್ರೀ ದೇವರಿಗೆ ಪೂಜೆ ನೆರವೇರಿತು. ಮಧ್ಯಾಹ್ನ ಪೂಜೆ ನಡೆದು, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ, ಕ್ಷೇತ್ರದ...
ಕಾರ್ಯನಿಮಿತ್ತ ಅ.5 ರಂದು ಸುಳ್ಯಕ್ಕೆ ಆಗಮಿಸಿದ ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರುಶನ ಪಡೆದರು. ಬಳಿಕ ಶ್ರೀ ಹೊಸಳಿಗಮ್ಮ ದೈವದ ದರುಶನ ಪಡೆದು, ಪ್ರಸಾದ ಸ್ವೀಕರಿಸಿದರು. ಬಳಿಕ ಕ್ಷೇತ್ರದಲ್ಲಿ ಅನ್ನಪ್ರಸಾದ ಸ್ವೀಕರಿಸಿದರು.ಇವರ ಜತೆಗೆ ಕಾಂಗ್ರೆಸ್ ಮುಖಂಡರಾದ ರಮಾನಾಥ ರೈ, ಮಿಥುನ್ ರೈ,...
ಮರ್ಕಂಜ ಗ್ರಾಮದ ದಾಸರಬೈಲು ಸ.ಕಿ.ಪ್ರಾ.ಶಾಲೆಯಲ್ಲಿ ಮಕ್ಕಳ ಇ- ಕಲಿಕಾ ದೃಷ್ಟಿಕೋನದಿಂದ ಆರಂಭವಾಗಿರುವ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಅ.8 ರಂದು ನಡೆಯಲಿದೆ. ಇಲ್ಲಿ ಸಂಪೂರ್ಣ ಸೌರಶಕ್ತಿಯಿಂದ ಸ್ಮಾರ್ಟ್ ಕ್ಲಾಸ್ ನಡೆಯಲಿದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಪದ್ಮನಾಭ ಎನ್.ವಿ., ಹಾಗೂ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ಆರಂತೋಡು ಗ್ರಾಮದ ಪಿಂಡಿಮನೆ ಕುಟುಂಬದ ದೈವಸ್ಥಾನದ ಬಳಿ ಜಿಲ್ಲಾ ಪಂಚಾಯತ್ ನ 2.5ಲಕ್ಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಬಿ. ಜೆ. ಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ ಅ.5 ರಂದು ಗುದ್ದಲಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆರಂತೋಡು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ಉಪಾಧ್ಯಕ್ಷೆ ಕು. ಶ್ವೇತಾ...
ನಾಲ್ಕೂರು ಗ್ರಾಮದ ದಿ.ಮೇದಪ್ಪ ಅಂಬೆಕಲ್ಲು ಅವರ ಪತ್ನಿ ಚಿನ್ನಮ್ಮ ಅಂಬೆಕಲ್ಲು ಅವರು ಅ.04 ರಂದು ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಹರ್ಷನಾಥ ಅಂಬೆಕಲ್ಲು, ಗಂಗಾಧರ ಅಂಬೆಕಲ್ಲು, ಮೂವರು ಪುತ್ರಿಯರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. (ವರದಿ :- ಉಲ್ಲಾಸ್ ಕಜ್ಜೋಡಿ)
ಆರಂತೋಡು ಗ್ರಾಮದ ಅಡ್ತಲೆ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ಅ.5 ರಂದು ನಡೆಯಿತು. ಸುಳ್ಯ ಬಿ. ಜೆ. ಪಿ. ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ನೇತೃತ್ವದಲ್ಲಿ ಬೂತ್ ಅಧ್ಯಕ್ಷರಾದ ಲೋಹಿತ್ ಮೇಲೆ ಅಡ್ತಲೆಯವರ ಮನೆಗೆ ನಾಮಫಲಕ ಅಳವಡಿಸಿ ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿ "ಕೇಂದ್ರ ಸರಕಾರದ ರಾಜ್ಯ ಸರಕಾರದ ಯೋಜನೆಗಳ ಸೌಲಭ್ಯಗಳನ್ನು ಪ್ರತಿ...
ಇಂದು ಸುಳ್ಯಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ . ಶಿವಕುಮಾರ್ ಅವರು ಬಳಿಕ ಕುಕ್ಕೆ ಸುಬ್ರಹ್ಮಣ್ಯ ಹೋಗಿ ನಂತರ ನಿಂತಿಕಲ್ಲಿನ ಎಂ.ಮಾಧವ ಗೌಡ ಕಾಮಧೇನು ಅವರ ಧರ್ಮಶ್ರೀ ಆರ್ಕೇಡ್ ನಲ್ಲಿರುವ ಮಯೂರ ಗೋಲ್ಡ್ ಫ್ಯಾಲೇಸ್ ಗೆ ಭೇಟಿ ನೀಡಿದರು. ಉದ್ಯಮಿ ಹಾಗೂ ಕಾಮಧೇನು ಗ್ರೂಪ್ಸ್ ಮಾಲಕ ಎಂ.ಮಾಧವ ಗೌಡ , ಮಯೂರ ಗೋಲ್ಡ್ ಮಾಲಕ ದೀಕ್ಷಿತ್...
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ಮಾವಿನಕಟ್ಟೆ ಎಂಬಲ್ಲಿ ಕೆನರಾ ಬ್ಯಾಂಕಿನ ಸಹಯೋಗ ದೊಂದಿಗೆ ನೂತನ ಸೇವಾ ಕೇಂದ್ರವನ್ನು ಉದ್ಘಾಟನೆಗೊಂಡಿತು . ದೇವಚಳ್ಳ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಸುಲೋಚನಾ ದೇವ ಉದ್ಘಾಟನೆ ನೆರವೇರಿಸಿದರು .ಈ ಸಂದರ್ಭ ,ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ರಾಧಾಕೃಷ್ಣ ಶ್ರೀ ಕಟೀಲ್ ,ಪಂಚಾಯತ್...
ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಮರದಲ್ಲಿ ಇದ್ದ ಬಳ್ಳಿಯೊಂದು ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕೇವಳದಲ್ಲಿ ನಡೆದಿದೆ. ಕೇವಳ ಹೂವಪ್ಪ ಗೌಡರವರು ಮಧ್ಯಾಹ್ನ ವೇಳೆ ತನ್ನ ಮನೆಯ ಎದುರಿನ ಸಣ್ಣ ಗಾತ್ರದ ಮರದ ಗೆಲ್ಲು ಕಡಿಯಲು ಹತ್ತಿದ್ದರು. ಗೆಲ್ಲು ಬೀಳುವ ಸಂದರ್ಭದಲ್ಲಿ ಮರದಲ್ಲಿದ್ದ ಹಬ್ಬಿದ್ದ ಬಳ್ಳಿಗೆ ಅವರು ಆಕಸ್ಮಿಕವಾಗಿ ಸಿಲುಕಿದರೆನ್ನಲಾಗಿದೆ....
Loading posts...
All posts loaded
No more posts
