ಜಾಲ್ಸೂರು : ಧೂಮಾವತಿ ಮತ್ತು ಗುಳಿಗ ದೈವಗಳ ಪ್ರತಿಷ್ಠೆ, ದೈವಗಳ ನೇಮೋತ್ಸವ ಸಂಪನ್ನ

ಜಾಲ್ಸೂರು ಬಾಲಾಜೆಯಲ್ಲಿ ಜ.24 ರಿಂದ ಜ.26 ರವರೆಗೆ ಶ್ರೀ ಧೂಮಾವತಿ ಮತ್ತು ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ದೈವಗಳ ನೇಮೋತ್ಸವವು ಬ್ರಹ್ಮಶ್ರೀ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಅಸ್ರ ರವರ ನೇತೃತ್ವದಲ್ಲಿ 3 ದಿನಗಳ ಕಾಲ ನಡೆಯಿತು.ಮೊದಲನೇ ದಿನವಾದ ದಿನಾಂಕ 24-01-2022ನೇ ಸೋಮವಾರದಂದು ಸಂಜೆ 5:00 ಗಂಟೆಗೆ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ, ವಾಸ್ತು ಪೂಜೆ,...

ಫೆ.03: ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನ್ನಿಧ್ಯದಲ್ಲಿ ವಾರ್ಷಿಕ ಕೋಲೋತ್ಸವ

ಬೆಳ್ಳಾರೆ ಗ್ರಾಮದ ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಘಂಟೆ ತೆಂಬೆರೆಯಲ್ಲಿ ಶ್ರೀ ಕೊರಗಜ್ಜ ದೈವದ ಕೋಲೋತ್ಸವವು ಫೆ.03 ಗುರುವಾರದಂದು ನಡೆಯಲಿದೆ. ವಾರ್ಷಿಕ ಕೋಲೋತ್ಸವದ ಅಂಗವಾಗಿ ಸಂಜೆ ಗಂಟೆ 5.00ರಿಂದ ಭಜನಾ ಸಂಕೀರ್ತಣೆ, ಗಂಟೆ 6.00ಕ್ಕೆ ಕಲ್ಲುರ್ಟಿ-ಮಂತ್ರದೇವತೆ ಹಾಗೂ ಗುಳಿಗನಿಗೆ ಪರ್ವ ಮತ್ತು ಕಲ್ಲುರ್ಟಿ ದರ್ಶನ ಸೇವೆ ನಡೆಯಲಿದೆ.ಗಂಟೆ 7.00ರಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ...
Ad Widget

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ- ಮೂರುಕಲ್ಲಡ್ಕದಲ್ಲಿ ನಾಗತಂಬಿಲ ಕಾರ್ಯಕ್ರಮ

ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ, ನಂಬಿದವರಿಗೆ ಇಂಬು ಕೊಡುವ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ "ಅಯ್ಯನಕಟ್ಟೆ ಜಾತ್ರೆ" ಜ.26 ಬುಧವಾರದಂದು ಆರಂಭಗೊಂಡಿದೆ. ಈ ದಿನ ಪ್ರತಿಷ್ಟಾ ವಾರ್ಷಿಕೋತ್ಸವದ ಅಂಗವಾಗಿ ಮೂರುಕಲ್ಲಡ್ಕ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವಸ್ಥಾನದಲ್ಲಿ ನಾಗದೇವರಿಗೆ ತಂಬಿಲ ನಡೆಯಿತು. ಈ ಸಂದರ್ಭದಲ್ಲಿ ಅಯ್ಯನಕಟ್ಟೆ ಶ್ರೀ...

ಎಣ್ಮೂರು ಪ್ರೌಢಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸರಕಾರಿ ಪ್ರೌಢಶಾಲೆ ಎಣ್ಮೂರು ವತಿಯಿಂದ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಗಣರಾಜ್ಯೋತ್ಸವದ ಅಂಗವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಅಡಿಕೆ ತೋಟದಲ್ಲಿ ಶ್ರಮದಾನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಪದ್ಮನಾಭ ಗೌಡರವರು ಧ್ವಜಾರೋಹಣವನ್ನು ನೆರವೇರಿಸಿ ಶುಭಹಾರೈಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೀತಲ್ ಯು.ಕೆ ಇವರುಈ...

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ- ತಂಟೆಪ್ಪಾಡಿಯಲ್ಲಿ ತಂಬಿಲ ಸೇವೆ

ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ, ನಂಬಿದವರಿಗೆ ಇಂಬು ಕೊಡುವ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ "ಅಯ್ಯನಕಟ್ಟೆ ಜಾತ್ರೆ" ಜ.26 ಬುಧವಾರದಂದು ಆರಂಭಗೊಂಡಿದೆ. ಈ ದಿನ ಪ್ರತಿಷ್ಟಾ ವಾರ್ಷಿಕೋತ್ಸವದ ಅಂಗವಾಗಿ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ ಸಾನ್ನಿಧ್ಯದಲ್ಲಿ ವಿಶೇಷ ತಂಬಿಲ ಸೇವೆ ಹಾಗೂ ನಾಗದೇವರಿಗೆ ತಂಬಿಲ ನೆರವೇರಿಸಲಾಯಿತು....

ಸುಳ್ಯ ಶ್ರೀ ಶಾರದಾ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಆಚರಣೆ

ಸುಳ್ಯದ ಪ್ರತಿಷ್ಠಿತ ಹೆಣ್ಣು ಮಕ್ಕಳ ವಿದ್ಯಾ ಸಂಸ್ಥೆಯಾದ ಶ್ರೀ ಶಾರದಾ ಮಹಿಳಾ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ (ರಿ) ಸುಳ್ಯ ಇದರ ಅಧ್ಯಕ್ಷರಾದ ಶ್ರೀ ಧನಂಜಯ ಅಡ್ಪಂಗಾಯ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ (ರಿ) ಸುಳ್ಯ...

ಎಸ್ ಡಿ ಪಿ ಐ ವತಿಯಿಂದ ಬೆಳ್ಳಾರೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಬೆಳ್ಳಾರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ 73ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಎಸ್ ಡಿ ಪಿ ಐ ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ಸಿದ್ದೀಕ್ ಬೆಳ್ಳಾರೆ ಧ್ವಜಾರೋಹಣ ನೆರವೇರಿಸಿದರು.ಎಸ್ ಡಿ ಪಿ ಐ ಸುಳ್ಯ ವಿಧಾನಸಭಾ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಸಂದೇಶ ಬಾಷಣ‌ ಮಾಡಿದರು. ಕಾರ್ಯಕ್ರಮದಲ್ಲಿ...

“ಅಯ್ಯನಕಟ್ಟೆ ಜಾತ್ರೆ”ಗೆ ಹಸಿರು ಕಾಣಿಕೆ ಸಮರ್ಪಣೆ- ವೈಭವದ ಶೋಭಾಯಾತ್ರೆಯ ಮೂಲಕ ನಡೆದ ಹಸಿರು ಕಾಣಿಕೆ ಮೆರವಣಿಗೆ

ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ "ಅಯ್ಯನಕಟ್ಟೆ ಜಾತ್ರೆ" ಜ.26 ಬುಧವಾರದಿಂದ ಆರಂಭಗೊಳ್ಳಲಿದ್ದು, ಇಂದು(ಜ.25) ಹಸಿರು ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಭಕ್ತರಿಂದ ನೀಡಲಾದ ಹಸಿರು ಕಾಣಿಕೆಯನ್ನು ವೈಭವದ ಶೋಭಾಯಾತ್ರೆ ಮೆರವಣಿಗೆಯ ಮೂಲಕ ಬಾಳಿಲದಲ್ಲಿನ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಮಹಾದ್ವಾರದ...

ಅಯ್ಯನಕಟ್ಟೆ ಜಾತ್ರೆಯ ಕುರಿತಾದ ನೆನಪಿನ ಸಂಚಿಕೆ “ಅಯ್ಯನಕಟ್ಟೆ ಜಾತ್ರಾಂತರಂಗ” ಅಯ್ಯನಕಟ್ಟೆ ಜಾತ್ರೋತ್ಸವದಂದು ಬಿಡುಗಡೆ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನಗಳ ಜೀರ್ಣೋದ್ಧಾರ, ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಹಾಗೂ ಅಯ್ಯನಕಟ್ಟೆ ಜಾತ್ರೆಯ ಕುರಿತಾದ ಸಂಗ್ರಾಹಯೋಗ್ಯ ನೆನಪಿನ ಸಂಚಿಕೆ "ಅಯ್ಯನಕಟ್ಟೆ ಜಾತ್ರಾಂತರಂಗ" ಈ ವರ್ಷದ ಅಯ್ಯನಕಟ್ಟೆ ಜಾತ್ರೆಯ ಸಂದರ್ಭದಲ್ಲಿ ಅಧಿಕೃತವಾಗಿ ನಮ್ಮ ಕೈಸೇರಲಿದೆ. ಕೋವಿಡ್ ಕಾರಣದಿಂದ ಮುದ್ರಣಗೊಳ್ಳುವಾಗ ಸ್ವಲ್ಪ ತಡವಾಯಿತು. ನಾಡಿನ ಹೆಸರಾಂತ ಜನಪದ ಸಂಶೋಧಕರು ನೀಡಿದ ಮಾಹಿತಿಪೂರ್ಣ ಲೇಖನಗಳು,...

ಶಕ್ತಿ ಕೇಂದ್ರಗಳ ಅಭಿವೃದ್ಧಿಯಿಂದ ಧರ್ಮ ರಕ್ಷಣೆ : ರವೀಶ ತಂತ್ರಿ

ಧರ್ಮ ಉಳಿಯಬೇಕಾದರೆ ಶಕ್ತಿ ಕೇಂದ್ರಗಳು ಅಭಿವೃದ್ಧಿ ಆಗಬೇಕು. ಶಕ್ತಿ ಕೇಂದ್ರಗಳ ಆಭಿವೃದ್ಧಿಯಿಂದ ಧರ್ಮ ರಕ್ಷಣೆ ಸಾಧ್ಯ. ಅದಕ್ಕಾಗಿ ಸಮಾಜ ಒಗ್ಗಟ್ಟಾಗಿ ಇರಬೇಕು ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು. ಮಂಡೆಕೋಲು ಪೆರಜದ ಶ್ರೀ ವನ ಶಾಸ್ತಾರ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ದೈವಿಕ ಚೈತನ್ಯ ಒಂದು...
Loading posts...

All posts loaded

No more posts

error: Content is protected !!