- Tuesday
- August 18th, 2026
ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಘಂಟೆ ತೆಂಬೆರೆಯಲ್ಲಿ ಶ್ರೀ ಕೊರಗಜ್ಜ ದೈವದ ಕೋಲೋತ್ಸವವು ಫೆ.03 ಗುರುವಾರದಂದು ನಡೆಯಿತು. ವಾರ್ಷಿಕ ಕೋಲೋತ್ಸವದ ಅಂಗವಾಗಿ ಸಂಜೆ ಭಜನಾ ಸಂಕೀರ್ತಣೆ ನಡೆದು ನಂತರ ಕಲ್ಲುರ್ಟಿ-ಮಂತ್ರದೇವತೆ ಹಾಗೂ ಗುಳಿಗನಿಗೆ ಪರ್ವ ಮತ್ತು ಕಲ್ಲುರ್ಟಿ ದರ್ಶನ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಿನ್ನಿಮಜಲು ಹೇಮಂತ್...
ಎಡಮಂಗಲದ ಪಿಲಿಕುಂಜ ಸ್ಥಾನ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಮಹಾಲಿಂಗರಾಯ ಗ್ರಾಮ ದೈವ ಮತ್ತು ಅನಾದಿ ಶ್ರೀ ದೈವಗಳ ನೇಮೋತ್ಸವದ ಅಂಗವಾಗಿ ಇಂದು ಶ್ರೀ ಮಹಾಲಿಂಗರಾಯ ಮತ್ತು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು. ನೇಮೋತ್ಸವದ ಬಳಿಕ ಶ್ರೀ ದೈವಗಳ ಕೈಕಾಣಿಕೆ, ಹರಕೆ ಸೇವೆ, ದೈವಗಳ ಅನುಗ್ರಹದ ನುಡಿಯೊಂದಿಗೆ ವರ್ಷಾವಧಿ ಬೂಲ್ಯಪ್ರಸಾದ ವಿತರಣೆ ನಡೆಯಿತು....
ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮವು ಫೆ.11 ಶುಕ್ರವಾರದಂದು ಆರಂಭಗೊಳ್ಳಲಿದ್ದು, ಫೆ.14 ಸೋಮವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಫೆ.11 ಶುಕ್ರವಾರದಂದು ಸಂಜೆ ಗಂಟೆ 4.30ಕ್ಕೆ ತಂತ್ರಿಗಳವರ ಆಗಮನ, ಸಂಜೆ ಗಂಟೆ 5.00ಕ್ಕೆ ಊರ ಭಕ್ತಾದಿಗಳಿಂದ ಬಾಳಿಲದಿಂದ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ಹಸಿರು...
ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಟಿ ವಿಶ್ವನಾಥರವರು ಸಂಘಟನಾ ಕ್ಷೇತ್ರದಲ್ಲಿ ಸಾಧನೆಗೈದಿರುವ ಹಿನ್ನೆಲೆಯಲ್ಲಿ ಏಷಿಯಾ ವೇದಿಕ್ ಕಲ್ಚರಲ್ ಯುನಿವರ್ಸಿಟಿ ವತಿಯಿಂದ ಕೊಡಲ್ಪಟ್ಟ ಗೌರವ ಡಾಕ್ಟರೇಟ್ ಪದವಿ ಪಡೆಸಿದ್ದು, ಈ ಹಿನ್ನೆಲೆಯಲ್ಲಿ ಸೊಸೈಟಿಯ ಕೊಕ್ಕಡ ಶಾಖೆಯಲ್ಲಿ ಸನ್ಮಾನಿಸಲಾಯಿತು. ಸಂಘದ ಸದಸ್ಯರಾದ ನಾರಾಯಣ ಗೌಡ ಪಿ.ಕೆ, ಲಕ್ಷ್ಮೀ ಕಾಂಪ್ಲೆಕ್ಸ್ ಕೊಕ್ಕಡ...
ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರತಿಷ್ಟಾ ವಾರ್ಷಿಕೋತ್ಸವವು ಫೆ.8 ರಿಂದ ಫೆ.10 ರವರೆಗೆ ನಡೆಯಲಿದೆ. ಆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಫೆ.2 ರಂದು ಬೆಳಗ್ಗೆ ಗಂಟೆ 10.00ಕ್ಕೆ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಮಡ್ತಿಲ, ವೈದಿಕ ಮುಖ್ಯಸ್ಥರಾದ ರಾಜಾರಾಮ ರಾವ್ ಉದ್ದಂಪ್ಪಾಡಿ, ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ, ದೇವಸ್ಥಾನದ...
ಜಾತಿ ಮತ ಬೇದವಿಲ್ಲದೆ ಸರ್ವರಿಂದಲೂ ರೋಗ ಶಮನಕ್ಕಾಗಿ ನೇರ್ಚೆ ಸಮರ್ಪಿಸುವ ಅಭಯ ಕೇಂದ್ರ ಮಾಪಳಡ್ಕ ಮಖಾಂ ನಲ್ಲಿ ವರ್ಷಂ ಪ್ರತಿ ನಡೆಯುವ ಬೃಹತ್ ದಿಕ್ರ್ ನೇರ್ಚೆ ಇವತ್ತು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ. ಸಾವಿರಾರು ಕುಟುಂಬಗಳು ವರ್ಷದಲ್ಲೊಂದು ಬಾರಿ ಕೋಳಿ ಪದಾರ್ಥ ಮತ್ತು ರೊಟ್ಟಿ ನೇರ್ಚೆಯಾಗಿ ತಂದು ಝಿಕ್ರ್ ಮಜ್ಲಿಸಿನಲ್ಲಿ ಪಾಲ್ಗೊಂಡು ಅಸ್ತಮ ಇನ್ನಿತರ ಶ್ವಾಸಕೋಶದ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಿಜಿಟಲ್ ಸೇವಾ ಕೇಂದ್ರವು ಕಳಂಜದಲ್ಲಿ ಉದ್ಘಾಟನೆಯಾಗಿದ್ದು, ಡಿಜಿಟಲ್ ಸೇವಾ ಕೇಂದ್ರದ ವಿಎಲ್ಎ ಆಗಿ ಕು|ಭವಿತಾ ಬೇರಿಕೆ ನೇಮಕಗೊಂಡಿದ್ದಾರೆ. ಇವರು ಕಳಂಜ ಗ್ರಾಮದ ಬೇರಿಕೆ ಲಕ್ಷ್ಮಣ ಗೌಡ ಹಾಗೂ ಶ್ರೀಮತಿ ದಮಯಂತಿ ಇವರ ಪುತ್ರಿ.
ರೈತರ ಆದಾಯ ದ್ವಿಗುಣ ಮಾಡುವ ಉದ್ದೇಶದಿಂದ ರೈತ ಉತ್ಪಾದಕ ಸಂಸ್ಥೆ ರಚನೆಗೆ ಕೇಂದ್ರ ಸರಕಾರ ಈಗಾಗಲೇ ಕರೆಕೊಟ್ಟಂತೆ ರಚನೆಗೊಂಡ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ (ರಿ) ಪುತ್ತೂರು ಇದರ ವತಿಯಿಂದ ನಡೆಯುತ್ತಿರುವ ವಿನೂತನ ಒಪ್ಪಂದ ಆಧಾರಿತ ಜೇನು ಕೃಷಿ ಕಾರ್ಯಕ್ರಮದಲ್ಲಿ ಈಗಾಗಲೇ ಜೇನು ಕೃಷಿಯಲ್ಲಿ ತೊಡಗಿಕೊಂಡ ಅಜ್ಜಾವರ ಮಂಡೆಕೋಲು ಉತ್ಸಾಹಿ ರೈತರ ಗುಂಪಿನ ಪ್ರಥಮ ಜೇನು...
ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19ರಂದು ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಫೆ.01ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಗವದ್ಭಕ್ತರು ಉಪಸ್ಥಿತರಿದ್ದರು.
ಯುವಕ ಮಂಡಲ(ರಿ.) ಕಳಂಜ ಇದರ ಆಶ್ರಯದಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಶ್ರೀ ಹನುಮಗಿರಿ ಮೇಳದಿಂದ "ಶುಕ್ರನಂದನೆ" ಎಂಬ ಪುರಾಣ ಕಥಾ ಭಾಗದ ಯಕ್ಷಗಾನ ಬಯಲಾಟ ಇಂದು ಸಂಜೆ ಗಂಟೆ 6.00ಕ್ಕೆ ಕೋಟೆಮುಂಡುಗಾರು ಶಾಲಾ ವಠಾರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಾಭಿಮಾನಿಗಳು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
Loading posts...
All posts loaded
No more posts
