ಕಾಂಚೋಡು ಜಾತ್ರೋತ್ಸವದಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಭಜನಾ ತಂಡದಿಂದ ಕುಣಿತ ಭಜನೆ ಕಾರ್ಯಕ್ರಮ

ಕಾಂಚೋಡು ಜಾತ್ರೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಇಂದು(ಫೆ.13) ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಮಕ್ಕಳ ಭಜನಾ ತಂಡದಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮದ ನಂತರ ದೇವಸ್ಥಾನದ ವತಿಯಿಂದ ಭಜನಾ ಕಾರ್ಯಕ್ರಮದಲ್ಲಿ ಭಾಗಿಗಳಾದ ವಿದ್ಯಾರ್ಥಿಗಳಿಗೆ ಹಾಗೂ ಭಜನಾ ತಂಡದ ಮುಖ್ಯಸ್ಥರಿಗೆ ಪ್ರಸಾದ ಹಾಗೂ ಸ್ಮರಣಿಕೆ ನೀಡಲಾಯಿತು.

ಪಂಬೆತ್ತಾಡಿ : ಕೆಡ್ಡಸ ಆಚರಣೆ

ಪಂಬೆತ್ತಾಡಿ ಅಮೃತಾ ಮಹಿಳಾ ಮಂಡಲ‌ ಮತ್ತು ಅಕ್ಷತಾ ಯುವತಿ ಮಂಡಲ ವತಿಯಿಂದ ಕೆಡ್ಡಸ ಆಚರಣೆ ಫೆ.12 ರಂದು ನಡೆಯಿತು. ಈ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಪಂಚಶ್ರೀ ಯುವಕ ಮಂಡಲ ಅಧ್ಯಕ್ಷ ನಾಗಪ್ಪ ಗೌಡ,ಪೂರ್ವಾಧ್ಯಕ್ಷೆ ರಥಿದೇವಿ ಜಾಕೆ,ಮಹಿಳಾ ಮಂಡಲ ಅಧ್ಯಕ್ಷೆ ಅನಿತಾ ಸುತ್ತು ಕೋಟೆ,ಯುವತಿ ಮಂಡಲ ಅಧ್ಯಕ್ಷೆ ಶ್ವೇತಾ ಪಂಜದ ಬೈಲು ಹಾಗೂ ಎಲ್ಲಾ ಸದಸ್ಯರು...
Ad Widget

ಕರ್ನಾಟಕ ಪಶುವೈದ್ಯಕೀಯ ಪರಿಷತ್ ಸದಸ್ಯರಾಗಿ ಡಾ.ನಿತಿನ್ ಪ್ರಭು ಆಯ್ಕೆ

ಕರ್ನಾಟಕ ಪಶು ವೈದ್ಯಕೀಯ ಪರಿಷತ್ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಸುಳ್ಯದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ನಿತಿನ್ ಪ್ರಭು ಅವರು ಗೆಲುವು ಸಾಧಿಸಿದ್ದಾರೆ. ರಾಜ್ಯಾದ್ಯಂತ ಸುಮಾರು 4590 ಮಂದಿ ಪಶುವೈದ್ಯಕೀಯ ಸೇವಾ ಇಲಾಖೆಯ ಪಶುವೈದ್ಯರು ಮತದಾರರಾಗಿದ್ದರು.ಪರಿಷತ್ತಿಗೆ ಒಟ್ಟು 4 ಮಂದಿ ಸದಸ್ಯರು ಆಯ್ಕೆ ಆಗಬೇಕಾಗಿತ್ತು. ಒಟ್ಟು 18 ಮಂದಿ ಸ್ಪರ್ಧಾಕಣದಲ್ಲಿದ್ದರು. ಆನ್‌ಲೈನ್ ಮೂಲಕ ನಡೆದ...

ಫೆ.12-ಫೆ.18: ಎಡಮಂಗಲ ಜಾತ್ರೋತ್ಸವ- ಧ್ವಜಾರೋಹಣದೊಂದಿಗೆ ವಾರ್ಷಿಕ ಜಾತ್ರೋತ್ಸವ ಆರಂಭ, ಬಲಿ ಉತ್ಸವ, ರಂಗಪೂಜೆ

ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.12ರಂದು(ಇಂದು) ಧ್ವಜಾರೋಹಣದೊಂದಿಗೆ ಆರಂಭಗೊಂಡಿದೆ. ಧ್ವಜಾರೋಹಣದ ಬಳಿಕ ಬಲಿ ಹೊರಟು ಉತ್ಸವ, ಶ್ರೀ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ...

ಗಡಿಕಲ್ಲು : ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ ಆಮಂತ್ರಣ ಪತ್ರಿಕೆ ಬಿಡುಗಡೆ

ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಮತ್ತು ಫೆ.16 ರಂದು ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಲಿದ್ದು, ಫೆ.11 ರಂದು ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು ಊರ ಭಕ್ತಾದಿಗಳು ಉಪಸ್ಥಿತರಿದ್ದರು. ಮೊದಲನೇ ದಿವನವಾದ ಫೆ.15 ರ ಮಂಗಳವಾರದಂದು ಪ್ರಾತಃಕಾಲ 6:00 ಗಂಟೆಗೆ ಆಗ್ನಿಕುಂಡ ಜೋಡಣೆ...

ಚಂದನವಾಹಿನಿಯ ಕವಿಗೋಷ್ಠಿಯಲ್ಲಿ ಸಂಗೀತಾ ರವಿರಾಜ್

ಚಂದನ ವಾಹಿನಿಯಲ್ಲಿ ಇಂದು ರಾತ್ರಿ 9.30 ಕ್ಕೆ ಪ್ರಸಾರವಾಗುವ ಕವಿಗೋಷ್ಠಿಯಲ್ಲಿ ಯುವ ಸಾಹಿತಿ ಸಂಗೀತಾ ರವಿರಾಜ್ ಅವರ ಕವನ ಪ್ರಸಾರವಾಗಲಿದೆ.

ಕಾಂಚೋಡು ದೇವಸ್ಥಾನದಲ್ಲಿ ದೇವರ ಬಲಿ ಉತ್ಸವ – ಫೆ.14 ರಂದು ದರ್ಶನ ಬಲಿ, ಫೆ.15 ರಂದು ಅಣ್ಣಪ್ಪಾದಿ ದೈವಗಳ ನೇಮೋತ್ಸವ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಆರಂಭವಾಗಿದ್ದು ಇಂದುಬೆಳಿಗ್ಗೆ ವಿವಿಧ ವೈದಿಕ ಕಾರ್ಯಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ಮಂಜುನಾಥ ಸ್ವಾಮಿ ಮತ್ತು ಅಮ್ಮನವರ ಬಲಿ ಉತ್ಸವ ನಡೆಯಿತು. ಫೆ.14 ರವರೆಗೆ ಕಾರ್ಯಕ್ರಮ ನಡೆಯಲಿದೆ. ಫೆ. 13ರಂದು ಬೆಳಿಗ್ಗೆ ಶ್ರೀ ಮಂಜುನಾಥ ಸ್ವಾಮಿ ಮತ್ತು ಅಮ್ಮನವರ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭೇಟಿ – ತುಲಾಭಾರ ಸೇವೆ ಸಲ್ಲಿಸಿದ ದಂಪತಿ

(ಚಿತ್ರ : ಶಾಂತಲಾ ಸುಬ್ರಹ್ಮಣ್ಯ) ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭೆ ಸದಸ್ಯರಾಗಿರುವ ಹೆಚ್‌ ಡಿ ದೇವೇಗೌಡ ಅವರು ಫೆ.12 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ತುಲಾಭಾರ ಸೇವೆಯನ್ನು ನೆರವೇರಿಸಿ, ದೇವರ ದರ್ಶನ ಪಡೆದರು. ಪತ್ನಿ ಚೆನ್ನಮ್ಮ ಅವರೊಂದಿಗೆ ಆಗಮಿಸಿದ ದೇವೇಗೌಡರನ್ನು ದೇಗುಲದ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ದೇಗುಲದ ಗೋಪುರ ಬಳಿ...

ಫೆ.18-20 : ಪೇರಡ್ಕ ಉರೂಸ್ ಸಮಾರಂಭ- ಮೂರು ದಿನಗಳ ಧಾರ್ಮಿಕ ಉಪನ್ಯಾಸ

ಪೇರಡ್ಕ ದರ್ಗಾ ಶರೀಫ್ ವಠಾರದ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಫೆ. 18 ರಿಂದ ಫೆ. 20 ವರೆಗೆ ಉರೂಸ್ ಸಮಾರಂಭ ಮತ್ತು ಮೂರು ದಿನಗಳ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಎಂ.ಜೆ.ಎಂ ಪೇರಡ್ಕದ ಗೌರವಾಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಫೆ.11 ರಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.ಮೊದಲ ದಿನ ಜುಮಾ ನಮಾಜಿನ ಬಳಿಕ ಧ್ವಜಾರೋಹಣವನ್ನು ಎಂ....

ಫೆ. 20 ರಂದು ಸಾಹಿತ್ಯ ಪರಿಷತ್ತಿನ ಪದಗ್ರಹಣ ಸಮಾರಂಭ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದ ಕುರಿತು ಫೆ.12 ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಅವರು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಫೆ.20 ರಂದು ಸುಳ್ಯದ...
Loading posts...

All posts loaded

No more posts

error: Content is protected !!