ಬಾಳಿಲ: ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿ ಮಾ.02ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ವಿಠಲ ಗೌಡ ಕಡೀರ ಭಾಗವಹಿಸಿದ್ದರು. ಅವರು ಸಮಗ್ರ ಕೃಷಿ ವಿಧಾನಗಳು, ಕೃಷಿಯಲ್ಲಿ ಸ್ವಾವಲಂಬಿ ಬದುಕು ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮುಖ್ಯಗುರುಗಳಾದ ಯಶೋಧರ ನಾರಾಲು ಸ್ವಾಗತಿಸಿದರು. ಗಣಿತ ಶಿಕ್ಷಕರಾದ ಉದಯಕುಮಾರ್ ರೈ ಎಸ್ ವಂದಿಸಿದರು. ಇಕೋ ಕ್ಲಬ್...

ದಾಖಲೆಗಳು ಬಿದ್ದುಸಿಕ್ಕಿರುತ್ತದೆ….

ಮಡಪ್ಪಾಡಿ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ ಯವರಿಗೆ ಗುತ್ತಿಗಾರು ಸಮೀಪ ಪಾನ್ ಕಾರ್ಡ್, ಎಟಿಎಂ ಹಾಗೂ ಡ್ರೈವಿಂಗ್ ಲೈಸೆನ್ಸ್ ದಾಖಲೆಗಳು ಬಿದ್ದು ಸಿಕ್ಕಿದ್ದು ಕಳೆದುಕೊಂಡವರು 9483923043 ಸಂಖ್ಯೆಯನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.
Ad Widget

ಕುಲ್ಕುಂದ : ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಾ.01 ರಂದು ವರ್ಷಂಪ್ರತಿಯಂತೆ ಮಹಾಶಿವರಾತ್ರಿಯ ಪ್ರಯುಕ್ತ ಮಹಾಮೃತ್ಯುಂಜಯ ಯಾಗ, ಶ್ರೀ ಬಸವೇಶ್ವರ ದೇವರಿಗೆ ಶತರುದ್ರಾಭಿಷೇಕ, ರಂಗಪೂಜೆ, ಮಹಾಪೂಜೆ ನಡೆಯಿತು.ಬೆಳಿಗ್ಗೆ ದೀಪಾರಾಧನೆಯೊಂದಿಗೆ ಅಹೋರಾತ್ರಿ ಭಜನಾ ಸೇವೆ ಪ್ರಾರಂಭಗೊಂಡಿತು. ಬಳಿಕ ಶ್ರೀ ಬಸವೇಶ್ವರ ದೇವರಿಗೆ ಬೆಳಿಗ್ಗಿನ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಶ್ರೀ ದೇವಸ್ಥಾನದ ಸಾಲ ತೀರುಸುವರೆ ನಿಧಿಕುಂಭ ಸಮರ್ಪಣೆ ನಡೆದು...

ಐವರ್ನಾಡು : ಕಟ್ಟಿಂಗ್ ಮೆಷಿನ್ ತಾಗಿ ಕಾರ್ಮಿಕ ಮೃತ್ಯು

ಕಟ್ಟಿಂಗ್ ಮೆಷಿನ್ ತಾಗಿ ಗಂಭೀರ ಗಾಯಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಇಂದು ಐವರ್ನಾಡಿನಿಂದ ವರದಿಯಾಗಿದೆ. ಐವರ್ನಾಡು ನಾಟಿಕೇರಿ ನಿವಾಸಿ ದಯಾನಂದ (36) ಮೃತಪಟ್ಟ ದುರ್ದೈವಿ. ಕಟ್ಟಿಂಗ್ ಮೆಷಿನ್ ತೊಡೆಯ ಭಾಗಕ್ಕೆ ತಾಗಿ ಗಂಭೀರ ಗಾಯಗೊಂಡ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಕ್ತಸ್ರಾವದಿಂದ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮಾ.06: ಅರೆಭಾಷೆ ಸಾಮಾಜಿಕ ಚಿತ್ರ “ಕೇಸ್ ಪುಸ್ಕ” ಬಿಡುಗಡೆ

ಏನೆಕಲ್ಲಿನ ಕಲಾಮಾಯೆ ಸಂಸ್ಥೆಯ ಸಾರಥ್ಯದಲ್ಲಿ ನಿರ್ಮಾಣಗೊಂಡಸುಧೀರ್ ಏನೆಕಲ್ ನಟಿಸಿ ನಿರ್ದೇಶಿಸಿರುವ ಅರೆಭಾಷೆ ಸಾಮಾಜಿಕ ಚಿತ್ರ "ಕೇಸ್ ಪುಸ್ಕ" ಮಾ. 06 ರಂದು ಸಂಜೆ 06 ಗಂಟೆಗೆ ಕನ್ನಡ ಭವನ ಅಂಬೆಟಡ್ಕ ಸುಳ್ಯ ಇಲ್ಲಿ ಬಿಡುಗಡೆಗೊಂಡು ಪ್ರದರ್ಶನ ಕಾಣಲಿದೆಸಿನಿಮಾದ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಸುಧೀರ್ ಏನೆಕಲ್ ನಿರ್ವಹಿಸಿದ್ದುಛಾಯಾಗ್ರಾಹಕರಾಗಿ ಯಕ್ಷಿತ್ ಸಿ. ಕಲ್ಲುಗುಂಡಿ, ಪುಷ್ಪರಾಜ್ ಏನೆಕಲ್. ಗೀತೆ...

ಕುಲ್ಕುಂದ :- ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನಕ್ಕೆ ಚಯರ್ ಕೊಡುಗೆ

ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಭಕ್ತರು ಸೇರಿ 25 ಚಯರ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಫೆ.28 ರಂದು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ಹಾಗೂ ಪ್ರಧಾನ ಪೂಜಾರಿ ರಾಮಚಂದ್ರ ಮಣಿಯಾಣಿ ಅವರಿಗೆ ನಾಗೇಶ್.ಎ.ವಿ ಹಾಗೂ ಗೋಪಾಲ್ ಕುಲ್ಕುಂದ ಅವರು ಚಯರ್ ಗಳನ್ನು ಹಸ್ತಾಂತರಿಸಿದರು.ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.02 ರಿಂದ 4 ರವರೆಗೆ...

ಮಂಗಳೂರು ಕ್ಯಾಂಪ್ಕೋ ಸಂಸ್ಥೆಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರ

ಕ್ಯಾಂಪ್ಕೋ ಸಂಸ್ಥೆ , ಮಂಗಳೂರು ಇದರ ವತಿಯಿಂದ "ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ" ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ದಿನಾಂಕ ಮಾ.01ರಂದು ಅಲಂಕಾರು ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು. ಕ್ಯಾಂಪ್ಕೋ ಸದಸ್ಯರಾದ ಶ್ರೀ ಅಚ್ಚುತ ಗೌಡ ಪಟ್ರಮೆ ಇವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗಾಗಿ ಕ್ಯಾಂಪ್ಕೋ ವತಿಯಿಂದ ನೀಡಲಾದ ರೂ. 1,98,500/- ಚೆಕ್ ನ್ನು...

ಮಡಿಕೇರಿ: ಅರೆಭಾಷೆ ಕಥೆ, ಕವಿತೆ ಮತ್ತು ಲಲಿತ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ಅರೆಭಾಷೆ ಕಥೆ, ಕವಿತೆ ಮತ್ತು ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಹೆಸರನ್ನು ಪ್ರಕಟಿಸಿದೆ. ಅರೆಭಾಷೆ ಕಥಾ ಸ್ಪರ್ಧೆ ವಿಜೇತರು:ಪ್ರಥಮ: ಕಥೆ ಶೀರ್ಷಿಕೆ: ಕಾಲ್ ದಾರಿಲಿ ಹೆಜ್ಜೆ ಮೂಡಿಕನ- ಕುಕ್ಕುನೂರು ರೇಷ್ಮ ಮನೋಜ್ದ್ವಿತೀಯ: ಕಥೆ ಶೀರ್ಷಿಕೆ : ಬದ್ಕಿಗೆ ಅರ್ಥ ಬಾಕನ...

ವಿನೋಬನಗರ: ವಿವೇಕಾನಂದ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ವಿನೋಬನಗರದ ವಿವೇಕಾನಂದ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಫೆಬ್ರವರಿ 28ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ್ ಮೂಡಿತ್ತಾಯರು ವಿಶೇಷವಾದ ಜ್ಞಾನ ವಿಜ್ಞಾನ, ವಿಜ್ಞಾನವೇ ಸತ್ಯ, ಭಾರತೀಯ ಋಷಿಗಳೇ ವಿಜ್ಞಾನಿಗಳು ಎಂಬುದಾಗಿ ವಿಜ್ಞಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಸಂವಾದದ ಮೂಲಕ ತಿಳಿಸಿಕೊಟ್ಟರು. ನಂತರ"ಈ ಭೂಮಿ ಹುಟ್ಟಿದ್ದು ಹೇಗೆ ಹೇಗೆ ಹೇಗೆ"? ಎಂಬ ಅಭಿನಯ...

ವಿದ್ಯಾಬೋಧಿನೀ ಪ್ರೌಢಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಅಡುಗೆ ತಯಾರಿ

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಫೆ.28ರಂದು ಅಡುಗೆ ತಯಾರಿ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ಸುಮಾರು 60 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧಾಳುಗಳಿಗೆ ಬೆಂಕಿ ಬಳಸದೆ ಒಂದು ತಿಂಡಿ ಹಾಗೂ ಪಾನೀಯ ಮತ್ತು ಬೆಂಕಿ ಬಳಸಿ ಒಂದು ತಿಂಡಿ ಹಾಗೂ ಪಾನೀಯ ತಯಾರಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ವಿದ್ಯಾರ್ಥಿಗಳು ನೀರುಳ್ಳಿ ಬಜೆ, ಪೋಡಿ,...
Loading posts...

All posts loaded

No more posts

error: Content is protected !!