ಕೇಸರಿ ಶಾಲು ಧಾರ್ಮಿಕ ಸಮಾರಂಭಗಳಲ್ಲಿ ಮಾತ್ರವಿರಲಿ, ರಾಜಕೀಯದಲ್ಲಿ ಬೇಡ – ಎನ್ ಜಯಪ್ರಕಾಶ್ ರೈ

ಚೊಕ್ಕಾಡಿ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಕಾವಿ ಬಳಸಿ ಮತ ಕೇಳಿದ್ದ ವಿಚಾರದ ಕುರಿತು ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ರೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅವರು ಮಾ.12 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇಸರಿ ಶಾಲ್ ನ್ನು ಸ್ವಾರ್ಥಕ್ಕೆ ಬಳಸಬೇಡಿ. ಸಹಕಾರಿ ಸಂಘದ ಚುನಾವಣೆಯಲ್ಲಿ ಬಳಸಿದ್ದು ಸರಿಯಲ್ಲ. ಏಕೆಂದರೆ ಕಾವಿ ಮತ್ತು ಭಗವದ್ಗೀತೆ ಇವೆರಡು ಹಿಂದುತ್ವದಲ್ಲಿ ಪವಿತ್ರವಾದದ್ದು ಎಂದರು....

ಮಡಪ್ಪಾಡಿ : ವಿಶ್ವ ಮಹಿಳಾ ದಿನಾಚರಣೆ

ಮಡಪ್ಪಾಡಿ ಅಕ್ಷಯ ಸಂಜೀವಿನಿ ಜಿ.ಪಿ.ಎಲ್.ಎಫ್. ವತಿಯಿಂದ ಯುವಕ ಮಂಡಲ ಸಭಾ ಭವನದಲ್ಲಿ ವಿಶ್ವ ಮಹಿಳಾ ದಿನದ ಅಂಗವಾಗಿ ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಸಂಜೀವಿನಿ ಸಂಘದ ಮಹಿಳಾ ಸದಸ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿತ್ರದೇವ ಎಂ., ಪಂಚಾಯತ್ ಸದಸ್ಯೆ ಸುಜಾತ ,ಎನ್.ಆರ್.ಎಲ್.ಎಮ್. ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತ ,...
Ad Widget

ರಾಜ್ಯ ಮಟ್ಟದ ಕಲಾಸಿರಿ ರತ್ನ ಬಿರುದು ಮುಡಿಗೇರಿಸಿಕೊಂಡ ಸುಳ್ಯದ ಶುಭದಾ ಆರ್ ಪ್ರಕಾಶ್

ಹುಟ್ಟೂರಲ್ಲಿ ತನ್ನ ಕೋಗಿಲೆಯ ಕಂಠದಿಂದ ಮೋಡಿ ಮಾಡಿದ ಗಾಯಕಿ ಶುಭದಾ ಸರಿಗಮಪ ವೇದಿಕೆಯ ಮೂಲಕ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹಲವಾರು ಕಾರ್ಯಕ್ರಮದಲ್ಲಿ ತನ್ನ ಮಾಧುರ್ಯ ಭರಿತ ಸ್ವರದಲ್ಲಿ ಅನೇಕ ಅಭಿಮಾನಿಗಳ ಹೃದಯವನ್ನು ಗೆದ್ದ ಸುಳ್ಯದ ಶುಭದಾ ಆರ್ ಪ್ರಕಾಶ್ ಇವರಿಗೆ ಕರ್ನಾಟಕ ಜನಸ್ಪಂದನ ಟ್ರಸ್ಟ್ ಕರ್ನಾಟಕ ರಾಜ್ಯ ಸಂಸ್ಥೆ ಟೀ ದಾಸರ ಹಳ್ಳಿ ಬೆಂಗಳೂರು...

ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಸುಳ್ಯಕ್ಕೆ ಭೇಟಿ – ನೌಕರರೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮ

ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿಂದ ನೌಕರರೊಂದಿಗೆ ನೇರ ಸಂವಾದ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಮಾ.11 ರಂದು ನಡೆಯಿತು. ಕಾರ್ಯಕ್ರಮವನ್ನು ಸಿ ಎಸ್ ಷಡಾಕ್ಷರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸರಕಾರಿ...

ಕೊಲ್ಲಮೊಗ್ರ : ಶಾಲಾ ಮಕ್ಕಳಿಗೆ ವಾಟರ್ ಬಾಟಲ್ ಕೊಡುಗೆ

ಕೊಲ್ಲಮೊಗ್ರ ಬಂಗ್ಲೆಗುಡ್ಡೆ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ರುಕ್ಮಯ್ಯಗೌಡ ಡೊಡ್ಡಿಹಿತ್ಲು ಮತ್ತು ಅವರ ಪುತ್ರರಾದ ಪ್ರಸಾದ್ ಹಾಗೂ ಮಹೇಶ ರವರು ಸುಮಾರು ರೂ 17000 ಮೌಲ್ಯದ ವಾಟರ್ ಬಾಟಲ್ ಗಳನ್ನು ನೀಡಿರುತ್ತಾರೆ.

ಅಡ್ತಲೆಯಲ್ಲಿ ಬಿ.ಎಸ್. ಎನ್. ಎಲ್. ಟವರ್ ಕಾರ್ಯಾರಂಭ

ಅರಂತೋಡು ಗ್ರಾಮದ ಅಡ್ತಲೆಯಲ್ಲಿ ನಿರ್ಮಿಸಲಾಗಿದ್ದ ಬಿ ಎಸ್ ಎನ್ ಎಲ್ ಟವರ್ ಮಾ.3 ರಂದು ಕಾರ್ಯಾರಂಭ ಮಾಡಿದೆ. ಗ್ರಾಮದ ಅತೀ ಎತ್ತರದ ಪ್ರದೇಶದಲ್ಲಿರುವ ಈ ಟವರ್ ನಿಂದ ಇದುವರೆಗೂ ಸಿಗ್ನಲ್ ದೊರೆಯದಿದ್ದ ಹಲವು ಸ್ಥಳಗಳಲ್ಲಿ ಅತ್ಯುತ್ತಮ ಮತ್ತು ಅತೀ ವೇಗದ 3ಜಿ ಸಿಗ್ನಲ್ ದೊರೆಯುತ್ತಿದ್ದು ಗ್ರಾಹಕರು ಸಂತುಷ್ಟರಾಗಿದ್ದಾರೆ.ಟವರ್ ನಿರ್ಮಾಣವಾಗಿ ಹಲವು ಸಮಯ ಕಳೆದರೂ ಕಾರ್ಯಾಚರಣೆ ಆರಂಭಿಸದೆ...

ಅವಿನಾ ಕಣ್ಕಲ್ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಗೆ

ಪುತ್ತೂರಿನಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಕೇನ್ಯ ಗ್ರಾಮದ ಕಣ್ಮಲ್ ಮನೆತನದ ಆನಂದ ಗೌಡ ಚೆನ್ನಕಜೆ ಮತ್ತು ಸಾಮೆತ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರು ಶ್ರೀಮತಿ ಮೀಣಾ ಕುಮಾರಿ ದಂಪತಿಯ ಪುತ್ರಿ ಕು. ಅವಿನಾ ಉನ್ನತ ಶಿಕ್ಷಣಕ್ಕಾಗಿ ಮಾ. 10ರಂದು ಇಂಗ್ಲೆಂಡಿಗೆ ತೆರಳಿದ್ದಾರೆ. ಇವಳು ಎಲ್.ಕೆಜಿ. ಯು.ಕೆ.ಜಿ. ಯನ್ನು ಪಂಜ ಸೈನಿಕ ಶಾಲೆ, 1 ರಿಂದ 4...

ಪಂಚರಾಜ್ಯ ಚುನಾವಣಾ ಫಲಿತಾಂಶ : ಸುಳ್ಯದಲ್ಲಿ ಬಿಜೆಪಿ ವಿಜಯೋತ್ಸವ

ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವ ಹಿನ್ನಲೆಯಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಸಯಿತು. ಸುಳ್ಯ ಬಿಜೆಪಿ ಕಚೇರಿ ಮುಂಭಾಗದಲ್ಲಿ ಸಿಡಿಮದ್ದು ಸಿಡಿಸಿ, ಸಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಮಾತನಾಡಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ...

ದೇವರಹಳ್ಳಿ ಯೇನೆಕಲ್ಲು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಸುಬ್ರಮಣ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಾಜೆ ಎಂಬಲ್ಲಿ ದೇವರಹಳ್ಳಿ ಮಧುವನ-ಯೇನೆಕಲ್ಲು ರಸ್ತೆಗೆ ಪಂಚಾಯಿತ್ ಅನುದಾನದಲ್ಲಿ ನಡೆದ ರಸ್ತೆಯ ಕಾಂಕ್ರೀಟೀಕರಣವನ್ನು ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ ರಿಬ್ಬನ್ ಕತ್ತರಿಸಿ ಚಿನ್ನಪ್ಪ ಗೌಡ ಮಾಣಿಬೈಲು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಸ್ಥಳೀಯರಾದ ನಾರಾಯಣ ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು. ಪಂಚಾಯತ್ ಸದಸ್ಯ ದಿಲೀಪ್ ಉಪ್ಪಳಿಕೆ ಸ್ವಾಗತಿಸಿ, ಶ್ರೀಮತಿ...

ಹರಿಹರ ಪಲ್ಲತ್ತಡ್ಕ : ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನ ಸಾರ್ವಜನಿಕ ಗ್ರಂಥಾಲಯಕ್ಕೆ ಮಾ.08 ರಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡೆಮಿ ಸದಸ್ಯರಾದ ಕುಸುಮಾಧರ.ಎ.ಟಿ, ಪುರುಷೋತ್ತಮ ಕಿರ್ಲಾಯ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಗುಣವತಿ ಕೊಲ್ಲಂತಡ್ಕ ಹಾಗೂ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ ಇವರುಗಳು ಉಚಿತವಾಗಿ ಅರೆಭಾಷೆ ಪುಸ್ತಕಗಳನ್ನು ನೀಡಿದರು.ಈ ಸಂದರ್ಭದಲ್ಲಿ ಹರಿಹರ...
Loading posts...

All posts loaded

No more posts

error: Content is protected !!